Home / ವಾರ್ತೆಗಳು / ನೆದರ್ಲ್ಯಾಂಡ್ ನಲ್ಲಿ ಮತ್ತೆ ಕುರ್ ಆನ್ ಗೆ ಅವಮಾನ: ಟರ್ಕಿ ರಾಯಭಾರ ಕಚೇರಿಯ ಎದುರು ಕುರ್ ಆನ್ ಹರಿದು ಹಾಕಿದ್ರು

ನೆದರ್ಲ್ಯಾಂಡ್ ನಲ್ಲಿ ಮತ್ತೆ ಕುರ್ ಆನ್ ಗೆ ಅವಮಾನ: ಟರ್ಕಿ ರಾಯಭಾರ ಕಚೇರಿಯ ಎದುರು ಕುರ್ ಆನ್ ಹರಿದು ಹಾಕಿದ್ರು

ನೆದರ್ಲ್ಯಾಂಡ್ ನಲ್ಲಿ ಕುರ್ ಆನ್ ನ ವಿರುದ್ಧ ಮತ್ತೆ ಪ್ರತಿಭಟನೆ ನಡೆದಿದ್ದು ತುರ್ಕಿ ರಾಯಭಾರ ಕಚೇರಿಯ ಮುಂದೆ ವ್ಯಕ್ತಿಯೋರ್ವ ಕುರಾನ್ ಅನ್ನು ಹರಿದು ಹಾಕಿರುವ ಘಟನೆ ನಡೆದಿದೆ.

ಬಲಪಂಥೀಯ ಗುಂಪಿನ ನೇತೃತ್ವ ವಹಿಸಿರುವ ಎಡ್ವಿನ್ ಎಂಬಾತ ಈ ಕೃತ್ಯ ಎಸೆಗಿದ್ದು ಈತನಿಗೆ ಇಬ್ಬರು ಸಾತ್ ನೀಡಿದ್ದಾರೆ . ನೆದರ್ ಲ್ಯಾಂಡ್ ಸರಕಾರ ಇಂತಹ ಪ್ರತಿಭಟನೆಯನ್ನು ಖಂಡಿಸಿದೆಯಾದರೂ ಇದನ್ನು ತಡೆಯುವುದಕ್ಕೆ ಕಾನೂನಾತ್ಮಕವಾಗಿ ಯಾವುದೇ ಶಕ್ತಿ ತನಗೆ ಇಲ್ಲ ಎಂದು ಹೇಳಿದೆ.

ಇದೇ ವೇಳೆ ಈತನ ಕೃತ್ಯದ ವಿರುದ್ಧ ಪ್ರತಿಭಟನೆ ಕೂಡ ನಡೆದಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ಎಡ್ವಿನ್ ಈ ಹಿಂದೆ ಜನವರಿಯಲ್ಲಿ ಪಾರ್ಲಿಮೆಂಟ್ ನ ಹೊರಗೆ ಕುರ್ ಆನ್  ಹರಿದಿದ್ದ ಮತ್ತು ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ನೆದರ್ಲ್ಯಾಂಡ್ ಕಾನೂನು ಪ್ರಕಾರ ಅವಕಾಶ ಇಲ್ಲ ಎಂದು ಹೇಳಲಾಗಿದೆ.

ಬಲಪಂಥೀಯ ರಾಜಕೀಯ ಪಕ್ಷದ ನಾಯಕರಾಗಿರುವ ಗೀಟ್ ವೈಲ್ಡರ್ ಈ ಘಟನೆಯನ್ನು ಬೆಂಬಲಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಳೆದ ಜುಲೈನಲ್ಲಿ ಸ್ವೀಡನ್ ನಲ್ಲಿ ಕುರ್ ಆನ್ ನ ಎರಡು ಪ್ರತಿಗಳಿಗೆ ಬೆಂಕಿ ಕೊಟ್ಟ ಘಟನೆ ಕೂಡ ನಡೆದಿತ್ತು

SHARE THIS POST VIA

About editor

Check Also

ಉತ್ತರಕಾಶಿಯ ಸುರಂಗದಿಂದ 41 ಕಾರ್ಮಿಕರನ್ನು ರಕ್ಷಿಸಿದ ವಕೀಲ್ ಹಸನ್ ರ ಮಾತು ಈಗ ಭಾರೀ ವೈರಲ್

ಉತ್ತರಾಖಂಡದ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಮಂದಿಯನ್ನು ಭೂಮಿಗೆ ಕನ್ನ ಕೊರೆದು ಬದುಕಿಸಿದ ದೆಹಲಿ ಕಾರ್ಮಿಕ ತಂಡದ ನಾಯಕ ವಕೀಲ್ ಹಸನ್ …

Leave a Reply

Your email address will not be published. Required fields are marked *