ಮಕ್ಕಾಕ್ಕೆ ತೆರಳಿ ಉಮ್ರಾ ನಿರ್ವಹಿಸಿ ಮರಳಿದ ನಟಿ ರಾಕಿ ಸಾವಂತ್ ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಲಭಿಸಿದೆ.
ಇಸ್ಲಾಂ ಸ್ವೀಕರಿಸಿದ ಬಳಿಕ ತನ್ನ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಿರುವ ರಾಕಿ ಸಾವಾಂತ್ ಇದೀಗ ಮಕ್ಕ ಮತ್ತು ಮದೀನಾಕ್ಕೆ ತೆರಳಿ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸಿ ಮರಳಿದ್ದಾರೆ.
ರಾಕಿ ಸಾವಂತ್ ಅವರ ಉಮ್ರಾ ಯಾತ್ರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಇದೇ ವೇಳೆ ಉಮ್ರಾ ಯಾತ್ರೆಯ ವಿವಿಧ ಚಿತ್ರ ಮತ್ತು ವಿಡಿಯೋಗಳನ್ನು ರಾಕಿ ಸಾವಂತ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.
ಮುಂಬೈ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಿದ ಕೂಡಲೇ ಭಾರಿ ಸಂಖ್ಯೆಯಲ್ಲಿ ಅವರನ್ನು ಸ್ವಾಗತಿಸುವುದಕ್ಕೆ ಅಭಿಮಾನಿಗಳು ಮತ್ತು ಆಪ್ತರು ಸೇರಿದ್ದರು. ಪುಷ್ಪ ಹಾರದ ಮೂಲಕ ಅಭಿಮಾನಿಗಳು ಸ್ವಾಗತಿಸಿದರು.