ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ
ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಬಿಡುಗಡೆಗೊಳಿಸಿದರು.
ಈ ಕೃತಿಗೆ ನಿರಂತರ ಓದಿಸಿಕೊಂಡು ಹೋಗುವ ಶಕ್ತಿಯಿದೆ. ಲೇಖಕ ಅಬೂಝೀಶಾನ್ ಒಳ್ಳೆಯ ಬರಹಗಾರ ಎಂದು ಲೇಖನಗಳಲ್ಲಿ ಗೋಚರವಾಗುತ್ತದೆ ಎಂದು ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಮ್ ಅಬ್ಬಾಸ್ ಅವರ ಅನುಪಸ್ಥಿತಿಯಲ್ಲಿ ಸಂದೇಶವನ್ನು ಓದಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್, ಉಳ್ಳಾಲ ಶಾಖೆಯ ಅಧ್ಯಕ್ಷ ಅಬ್ದುಲ್ ಕರೀಮ್,ಪ್ರವಾದಿ ಮುಹಮ್ಮದ್ (ಸ) ರ ಬಗ್ಗೆ ಸಾವಿರಾರು ಕೃತಿಗಳು ಈಗಾಗಲೇ ಲೋಕಾರ್ಪಣೆಗೊಂಡಿದೆ. ಅದಕ್ಕೆ ಒಂದು ಹೊಸ ಸೇರ್ಪಡೆಯಾಗಿದೆ ಇಂದಿನ ಈ ಹೊಸ ಕೃತಿ. ಅವರನ್ನು ಪ್ರೀತಿಸುವುದೆಂದರೆ ಅವರ ಜೀವನ ಚರ್ಯೆಯನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸುವುದಾಗಿದೆ ಎಂದರು.
ಕೋಸ್ಟಲ್ ಫ್ರೆಂಡ್ಸ್ ಅಧ್ಯಕ್ಷರಾದ ಶರೀಫ್ ಅಬ್ಬಾಸ್ ವಳಾಲ್ ಮಾತನಾಡುತ್ತಾ ಇದೊಂದು ಪ್ರವಾದಿಯ ಸ್ನೇಹದ ಮುಖದ ಅನಾವರಣಗೊಳಿಸುವ ಕೃತಿಯಾಗಿದೆ. ಇದನ್ನು ಖರೀದಿಸಿ ಲೇಖಕರನ್ನು ಪ್ರೋತ್ಸಾಹಿಸಬೇಕು. ಲೇಖಕ ಅಬೂಝೀಶಾನ್ ರ ಇನ್ನಷ್ಟು ಪುಸ್ತಕಗಳು ಹೊರಬರಲಿ ಎಂದು ಹಾರೈಸಿದರು.
ರಿಫಾ ಛೇಂಬರ್ ಆಫ್ ಕಾಮರ್ಸ್ ರಾಜ್ಯ ಕಾರ್ಯದರ್ಶಿ ಫಯಾಝ್ ಹಮೀದುಲ್ಲಾ ಪುಸ್ತಕದ ಪರಿಚಯ ಮಾಡಿಕೊಟ್ಟರು.
ಉದ್ಯಮಿಗಳಾದ ಹನೀಫ್, ಶಾಕೀರ್ ಅಹ್ಮದ್, ಪಿ.ಕೆ.ಅಮೀರ್ ಹುಸೇನ್, ಹನೀಫ್ ಮಾಸ್ಟರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಸಾಹಿತಿ ಬಿ.ಎ.ಮುಹಮ್ಮದಾಲಿ ಕಾರ್ಯಕ್ರಮ ನಿರೂಪಿಸಿದರು.