Home / ಪ್ರಶ್ನೋತ್ತರ

ಪ್ರಶ್ನೋತ್ತರ

ಪವಿತ್ರ ಕುರ್‌ಆನ್ ಹಿಂದೂ ವಿರೋಧಿಯೇ?

✍️ ಏ.ಕೆ.ಕುಕ್ಕಿಲ  ಪವಿತ್ರ ಕುರ್‌ಆನನ್ನು ಕಟಕಟೆಯಲ್ಲಿ ನಿಲ್ಲಿಸುವ ಬೆಳವಣಿಗೆಗಳು ಈ ದೇಶದಲ್ಲಿ ಆಗಾಗ ನಡೆಯುತ್ತಿರುತ್ತವೆ. `ಅದು ಹಿಂದೂ ವಿರೋಧಿ,’ `ಹಿಂದೂಗಳ ಹತ್ಯೆ ನಡೆಸುವುದಕ್ಕೆ ಕರೆ ಕೊಡುವ ಗ್ರಂಥ,’ `ಮುಸ್ಲಿಮೇತರರ ಬಗ್ಗೆ ಅಸಹಿಷ್ಣುತೆಯನ್ನು ಪ್ರತಿಪಾದಿಸುವ ಚಿಂತನೆ,’ `ಇಸ್ಲಾಮ್ ಹೊರತು ಪಡಿಸಿ ಇನ್ನಾವ ಧರ್ಮವೂ ಈ ಜಗತ್ತಿನಲ್ಲಿ ಇರಬಾರದೆಂದು ಕರೆಕೊಡುವ ವಿಚಾರಧಾರೆ..’ ಎಂಬೆಲ್ಲಾ ಆರೋಪಗಳನ್ನು ಹೊರಿಸಲಾಗುತ್ತದೆ. ಇದಕ್ಕೆ ಆಧಾರವಾಗಿ ಕೆಲವೊಂದು ವಚನಗಳನ್ನೂ ತೇಲಿಬಿಡಲಾಗುತ್ತದೆ. ಅದರಲ್ಲಿ, `ನಿಷೇಧಿತ ಮಾಸಗಳು ಕಳೆದ ಬಳಿಕ ಬಹುದೇವ ವಿಶ್ವಾಸಿಗಳನ್ನು ಸಿಕ್ಕಲ್ಲಿ …

Read More »

ಅಲ್ಲಾಹ್ ಎಂಬ ಹೆಸರು?

– ಅಲ್ಲಾಹ್ ಎಂಬ ಹೆಸರು ಹೇಗೆ ಬಂತು? ಅಲ್ಲಾಹ್ ಅಂದರೆ ದೇವರಾ? ಅವನಿಗಿರುವ ಶಕ್ತಿಯೇನು? ಮೊದಲು ಅಲ್ಲಾಹ್ ಎಂದು ಹೆಸರು ಹೇಳಿದವರು ಯಾರು? ದಯವಿಟ್ಟು ತಿಳಿಸಿರಿ. – ಅರಬರು ಆರಾಧಿಸುವ ವಸ್ತುಗಳನ್ನು ಇಲಾಹ್ ಎಂದು ಹೇಳುತ್ತಿದ್ದರು. ಇಲಾಹ್‌ನ ಅರ್ಥ ಆರಾಧ್ಯ (ದೇವರು). ಆದರೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದ, ಮಾನವನ ಹುಟ್ಟು ಸಾವುಗಳನ್ನು ನಿರ್ಣಯಿಸುವ ಓರ್ವ ಮಹಾ ದೇವನನ್ನೂ ಅವರು ನಂಬುತ್ತಿದ್ದರು. ಅವನೇ ಅಲ್ ಇಲಾಹ್ ಇದೇ ಅಲ್ ಇಲಾಹ್ ಕ್ರಮೇಣ ‘ಅಲ್ಲಾಹ್’ …

Read More »

ಸ್ವರ್ಗದಲ್ಲಿ ಪುರುಷರಿಗೆ `ಹೂರ್’ ಗಳಿರುವಂತೆ ಮಹಿಳೆಯರಿಗೇಕಿಲ್ಲ?

✍️ ಏ.ಕೆ. ಕುಕ್ಕಿಲ 1.ಮಾಧವಿ ಕುಟ್ಟಿ 2.ಇವಾನ್ ರಿಡ್ಲಿ 3.ಲಾರೆನ್ ಬೂತ್ ಒಂದುವೇಳೆ, ಪವಿತ್ರ ಕುರ್‌ಆನ್ ಮಹಿಳಾ ವಿರೋಧಿ ಮತ್ತು ಪುರುಷ ಪಕ್ಷಪಾತಿ ಎಂಬುದು ನಿಜವೇ ಆಗಿದ್ದಿದ್ದರೆ, ಈ ಮೇಲಿನ ಮೂವರೂ ಇಸ್ಲಾಮನ್ನು ಪ್ರೀತಿಸಲು ಕಾರಣವೇನು? ಮಲಯಾಳಂ ಭಾಷೆಯ ಪ್ರಸಿದ್ಧ ಸಾಹಿತಿ ಈ ಮಾಧವಿ ಕುಟ್ಟಿ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ನಿರರ್ಗಳವಾಗಿ ಬರೆಯುತ್ತಿದ್ದ ಈ ಮಾಧವಿ ಕುಟ್ಟಿಯ ಕವಿತೆಗಳಂತೂ ಬಹುಪ್ರಸಿದ್ಧ. ಕತೆಗಳೂ ಅಷ್ಟೇ, ಅತ್ಯಂತ ತೀಕ್ಷ್ಣ ಮತ್ತು ಹರಿತ. …

Read More »

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿದಾಗ ಅವರನ್ನು ದಫನ ಮಾಡುವ ವಿಚಾರದಲ್ಲಿ ತಕರಾರು ನಡೆದಿತ್ತು. ಕೆಲವರು ಅವರನ್ನು ಸುಡುಗಾಡಿನಲ್ಲಿ ಸುಡಬೇಕು ಎಂದೆಲ್ಲಾ ಹೇಳಿದರು. ಹೀಗಿರುವಾಗ ಆತ್ಮಹತ್ಯೆಯ ಬಗ್ಗೆ ಇಸ್ಲಾಮಿನ ದೃಷ್ಟಿಕೋನವೇನು? ಉತ್ತರ: ಮನುಷ್ಯನ ಜೀವನ ಹಾಗೂ ಶರೀರವು ದೈವದತ್ತವಾದುದಾಗಿದೆ. ಅದು ಮನುಷ್ಯನು ಸ್ವತಃ ಗಳಿಸಿದ್ದಲ್ಲ. ಆದ್ದರಿಂದ ಅವೆರಡನ್ನೂ ನಾಶಪಡಿಸುವ ಹಕ್ಕು ಮನುಷ್ಯರಿಗಿಲ್ಲ ಎಂಬುದೇ …

Read More »

ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. ನಿಜವೇ ?

✍️ ಏ.ಕೆ. ಕುಕ್ಕಿಲ ಕೆಲವು ಆರೋಪಗಳಿವೆ. 1. ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. 2. ಅವರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ. 3. ಅವರು ಸೌದಿಯಲ್ಲಿರುವ ಕಾಬಾಕ್ಕೆ ಮುಖ ಮಾಡಿ ನಮಾಝ್ ಮಾಡುತ್ತಾರೆ. 4. ಅವರು ವರ್ಷಂಪ್ರತಿ ಸೌದಿ ಅರೇಬಿಯಾದ ಮಕ್ಕಾಕ್ಕೆ ಹೋಗುತ್ತಾರೆ. 5. ಅವರು ಅರೇಬಿಕ್ ಭಾಷೆಯಲ್ಲಿರುವ ಗ್ರಂಥ ಪಠಿಸುತ್ತಾರೆ… ಇತ್ಯಾದಿ ಇತ್ಯಾದಿ. ಅಂದಹಾಗೆ, ಮುಸ್ಲಿಮರ ಆರಾಧನೆ, ಆಚರಣೆ, ಆಹಾರ ಕ್ರಮ, ಗ್ರಂಥ ಭಾಷೆ, ವಸ್ತ್ರ ವಿನ್ಯಾಸ ಇತ್ಯಾದಿಗಳಿಗೂ ದೇಶನಿಷ್ಠೆಗೂ ಸಂಬಂಧವನ್ನು ಕಲ್ಪಿಸುವ …

Read More »

ಮುಸ್ಲಿಮ್ ಮಹಿಳೆ ಹೊರ ಹೋಗಿ ದುಡಿಯಬಾರದೇ?

ಜಾಸಿಮುಲ್ ಮುತವ್ವ  ಮಹಿಳೆಯರು ದುಡಿದು ಸಂಪಾದಿಸುವ ಲೋಕದಲ್ಲಿ ನಾವು ಬದುಕುತ್ತಿದ್ದೇವೆ. ಮಹಿಳೆಯರ ಆರ್ಥಿಕ ಜವಾಬ್ದಾರಿಯ ಕುರಿತು ವಿವಿಧ  ಸಂಶಯಗಳು ನೆಲೆ ನಿಂತಿವೆ. ಆಕೆಯ ಸಂಪಾದನೆಯ ಹಣವನ್ನು ದಾನ ಮಾಡಬೇಕು ಅಥವಾ ಕುಟುಂಬದ ಖರ್ಚು ವೆಚ್ಚ  ಭರಿಸಬೇಕೆಂಬುದೇ ಹೆಚ್ಚಿನ ಚರ್ಚಾ ವಿಷಯವಾಗಿದೆ. ಕುರ್‌ಆನ್, ಪ್ರವಾದಿ ಚರ್ಯೆ ಮತ್ತು ವಿದ್ವಾಂಸರ ಅಭಿಪ್ರಾಯದ ಆಧಾರದಲ್ಲಿ ನಾನು ಇಲ್ಲಿ ಚರ್ಚಿಸಲು ಬಯಸುತ್ತೇನೆ. ಮಹಿಳೆಯರು ಹೊರಹೋಗಿ ದುಡಿಯುವುದರ ಬಗ್ಗೆ ಇಸ್ಲಾಮಿನ ವಿಧಿಯೇನು? ಇದರ ಪರವಾಗಿರುವವರ ಅಭಿಪ್ರಾಯವೇನೆಂದರೆ ಆಕೆ …

Read More »

ಶ್ರೀರಾಮ, ಬುದ್ಧ, ಬಸವಣ್ಣರಂತೆ ಪ್ರವಾದಿಯ(ಸ) ಚಿತ್ರ ಏಕಿಲ್ಲ?

ಏ.ಕೆ. ಕುಕ್ಕಿಲ 1. ನಿಮ್ಮ ಅಲ್ಲಾಹ್ ನೋಡಲು ಹೇಗಿದ್ದಾರೆ? ಅವರ ಚಿತ್ರ ಯಾಕಿಲ್ಲ? 2. ಪ್ರವಾದಿ ಮುಹಮ್ಮದರ ಪುತ್ಥಳಿಯಾಗಲಿ ಆಕೃತಿ ರಚನೆಯಾಗಲಿ ಯಾಕೆ ಎಲ್ಲೂ ಕಾಣಿಸುತ್ತಿಲ್ಲ? ಇಸ್ಲಾಮ್‌ನಲ್ಲಿ ಅದಕ್ಕೆ ನಿಷೇಧ ಇದೆಯೇ? ಪ್ರಶ್ನೆ ಅಸಾಧುವಲ್ಲ. ಶಿವನಿಂದ ಹಿಡಿದು ಗಣಪತಿಯವರೆಗೆ, ಶ್ರೀಕೃಷ್ಣನಿಂದ ಹಿಡಿದು ಶ್ರೀರಾಮನವರೆಗೆ, ಸರಸ್ವತಿಯಿಂದ ಹಿಡಿದು ದುರ್ಗಾ ಪರಮೇಶ್ವರಿಯವರೆಗೆ, ಮೇರಿಯಿಂದ ಹಿಡಿದು ಯೇಸುವಿನ ವರೆಗೆ ಮತ್ತು ಮಹಾವೀರ, ಬುದ್ಧ, ಬಸವ, ಗುರುನಾನಕ್, ಸಾಯಿಬಾಬಾ, ಅರಿಸ್ಟಾಟಲ್, ಆರ್ಕಿಮಿಡೀಸ್, ಅಲೆಕ್ಸಾಂಡರ್, ಬಾಬರ್, ಟಿಪ್ಪುಸುಲ್ತಾನ್, …

Read More »

ಆಹಾರ ಸೇವನೆ: ಕುರ್‌ಆನ್, ಹದೀಸ್ ಏನು ಹೇಳುತ್ತದೆ?

✍️ಇಬ್ರಾಹೀಮ್ ಶಮ್ನಾಡ್ ನಮ್ಮ ಆರೋಗ್ಯದ ಸ್ಥಿರತೆಯನ್ನು ಕಾಪಾಡಲು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ ಅದನ್ನು ಹೇಗೆ ಪಾಲಿಸಬೇಕೆಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಎಲ್ಲಾ ವಿಚಾರಗಳ ಬಗ್ಗೆಯೂ ಬಹಳ ಸ್ಪಷ್ಟವಾದ ಮಾರ್ಗದರ್ಶನ ನೀಡುವ ಇಸ್ಲಾಮ್ ಆಹಾರದ ಸೇವಿಸುವ ವಿಚಾರದ ಬಗ್ಗೆಯೂ ಕುರ್‌ಆನ್ ನಿಂದ ಮತ್ತು ಬುಖಾರಿ, ತಿರ್ಮಿದಿ, ಇಬ್ನು ಮಾಜಾ ಮುಂತಾದವರ ಆಧಾರ ಪ್ರಮಾಣಗಳಿರುವ ಹದೀಸ್ ಗ್ರಂಥಗಳಿಂದ ಆಯ್ದ ಹತ್ತು ಮಾರ್ಗದರ್ಶನಗಳನ್ನು ಇಲ್ಲಿ ನೀಡುತ್ತೇನೆ. …

Read More »

ಲೈಂಗಿಕ ಅತೃಪ್ತಿಯ ಮಹಿಳೆಯರಿಗೆ ಬಹುಪತಿತ್ವದ ಅವಕಾಶ ನೀಡಬಹುದಲ್ಲವೇ?

ಇಸ್ಲಾಮಿನಲ್ಲಿ ಪುರುಷರಿಗೆ ಬಹುಪತ್ನಿತ್ವ ಅವಕಾಶ ನೀಡಿದಂತೆ ಲೈಂಗಿಕವಾಗಿ ಅಸಂತೃಪ್ತಿ ಹೊಂದಿರುವ ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಪತಿಯನ್ನು ಹೊಂದಲು ಇಸ್ಲಾಮ್‌ನಲ್ಲಿ ಯಾಕೆ ಅವಕಾಶವಿಲ್ಲ ಎಂದು ಇಸ್ಲಾಮನ್ನು ಮಹಿಳಾ ಶೋಷಣೆಯ ಧರ್ಮ ಎಂದು ಎತ್ತಿ  ಕಟ್ಟುವವರು ಆರೋಪಿಸಿ ಪ್ರಶ್ನಿಸುತ್ತಾರೆ. ಬಹುಪತ್ನಿತ್ವಕ್ಕೆ ಅವ ಕಾಶ ನೀಡಿದ ಇಸ್ಲಾಮ್ ಬಹುಪತಿತ್ವಕ್ಕೆ ಯಾಕೆ ಅವಕಾಶ ನೀಡಿಲ್ಲ ಎಂಬುದು  ಅವರ ಪ್ರಶ್ನೆಯಾಗಿದೆ. ಬಹುಪತ್ನಿತ್ವ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ. ಆದರೆ ಬಹುಪತಿತ್ವ ಒಂದು ಸಮಸ್ಯೆ ಮಾತ್ರವಾಗಿದೆ. ಬಹುಪತ್ನಿತ್ವ ಹೊಂದಲು  ಪುರುಷರನ್ನು …

Read More »

ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ಚರ್ಚಿಸಲ್ಪಟ್ಟಿದೆ. ಹಾಗಾದರೆ ಮುಹಮ್ಮದ್ ರ ಅಜ್ಜ, ತಂದೆಯ ಧರ್ಮ ಯಾವುದು?

ಪ್ರಶ್ನೆ: ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ವಿಷಯಗಳು ಚರ್ಚಿಸಲ್ಪಟ್ಟಿದೆ. ಕಾಬಾದಲ್ಲಿ  ಮೊದಲೇ ವಿಗ್ರಹಗಳಿದ್ದಾಗ ಮುಹಮ್ಮದರ ಅಜ್ಜ, ತಂದೆ ಅವರ ಧರ್ಮ ಯಾವುದು ಎಂಬ ಬಗ್ಗೆ ಕೆಲವರಲ್ಲಿ ಪ್ರಶ್ನೆ ಮೂಡಿದೆ. ಉತ್ತರಿಸಬಹುದೇ?  ಪ್ರಥಮ ಮಾನವ, ಪ್ರಥಮ ಪ್ರವಾದಿ ಆದಮ್(ಅ)ರ ಬಳಿಕ ಭೂಮುಖದ ಪ್ರಥಮ ಐತಿಹಾಸಿಕ ಜನಾಂಗ ನೂಹರ ಜನಾಂಗವಾಗಿತ್ತು. ಮಹಾ ಪುರುಷರನ್ನು, ಸಜ್ಜನರನ್ನು ದೇವರ ಸ್ಥಾನಕ್ಕೇರಿಸಿ ಪ್ರತಿಮೆಗಳನ್ನು ಸ್ಥಾಪಿಸಿದ ಮೊದಲ ಜನಾಂಗ ನೂಹರ ಜನಾಂಗ. ಸಮಾಜದಲ್ಲಿ ಅತಿಕ್ರಮವನ್ನು ಅನುಸರಿಸಿದ ಈ …

Read More »