Home / ವಾರ್ತೆಗಳು

ವಾರ್ತೆಗಳು

ಪ್ರವಾದಿ ಇಬ್ರಾಹೀಮ್(ಅ) ಬದುಕಿಗೆ ಸಂಬಂಧಿಸಿದ ಕೃತಿಗಳು ಲಭ್ಯ…

ಕ್ರಾಂತಿಕಾರಿ ಸಮಾಜ ಸುಧಾರಕರ ಸದ್ದಡಗಿಸುವ ನಿರಂಕುಶಾವ್ಯವಸ್ಥೆಯ ಪ್ರಯತ್ನವು ಅನಾದಿ ಕಾಲದಿಂದಲೇ ನಡೆದು ಬರುತ್ತಿರುವ ಪಿಡುಗಾಗಿದೆ. ಅಂದು ಕೂಡಾ ಅದೇ ನಡೆದಿತ್ತು. ಪ್ರವಾದಿ ಇಬ್ರಾಹೀಮ್(ಅ)ರ ಕಾಲದಲ್ಲಿ ನಮ್ರೂದ್ ಎಂಬ ಒಬ್ಬ ಕ್ರೂರ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದ. ವಿಶೇಷವೇನೆಂದರೆ ಸ್ವತಃ ಇಬ್ರಾಹೀಮರ ತಂದೆಯೇ ಆ ಚಕ್ರಾಧಿಪತಿಯ ಆಸ್ಥಾನದಲ್ಲಿ ಪುರೋಹಿತರಾಗಿ ಸೇವೆ ಮಾಡುತಿದ್ದರು. ಅವರೊಬ್ಬ ಮೂರ್ತಿ ಕೆತ್ತನೆಗಳ ಶಿಲ್ಪಿ; ಮಾತ್ರವಲ್ಲ ಅವುಗಳ ದೈತ್ಯ ವ್ಯಾಪಾರಿಯಾಗಿದ್ದರು. ಪ್ರವಾದಿ ಇಬ್ರಾಹೀಮರಿಗೆ ಬಾಲ್ಯದಿಂದಲೇ ವ್ಯವಸ್ಥೆಯಲ್ಲಿ ರೂಢಾಮೂಲವಾಗಿರುವ ನಂಬಿಕೆಗಳ ಬಗ್ಗೆ …

Read More »

ಮರಗಳನ್ನು ಕಡಿಯುವುದರ ಹಾಗೂ ಸುಡುವುದರ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಮಿಕ್ ಸೆಮಿನರಿ

ಮರಗಳನ್ನು ಕಡಿಯುವುದರ ಮತ್ತು ಬೆಳೆಗಳನ್ನು ಸುಡುವುದರ ವಿರುದ್ಧ ಇಸ್ಲಾಮಿಕ್ ಸೆಮಿನರಿಯೊಂದು ಫತ್ವಾ (ಇಸ್ಲಾಂನಲ್ಲಿ ಅರ್ಹ ಕಾನೂನು ವಿದ್ವಾಂಸರು ಅಥವಾ ಮುಫ್ತಿ ನೀಡಿದ ಇಸ್ಲಾಮಿಕ್ ಕಾನೂನಿನ ಒಂದು ಅಂಶದ ಮೇಲೆ ಔಪಚಾರಿಕ ತೀರ್ಪು) ಹೊರಡಿಸಿದೆ. ಲಕ್ನೋದ ಇಸ್ಲಾಮಿಕ್ ಸೆಮಿನರಿಯು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ಭಾಗವಾಗಿ ಮರಗಳನ್ನು ಕಡಿಯಬೇಡಿ ಮತ್ತು ಬೆಳೆಗಳನ್ನು ಸುಡಬೇಡಿ ಎಂದು ಫತ್ವಾ ಹೊರಡಿಸಿದೆ. ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದ (ಐಸಿಐ) ಮೊಹಮ್ಮದ್ ತಾರಿಕ್ ಖಾನ್ ಎಂಬಾತ ತಾಪಮಾನದ …

Read More »

ಸೂರ್ಯನು ಕಅಬಾದ ನೇರ ನೆತ್ತಿಯ ಮೇಲೆ; ಹೀಗೊಂದು ಅಪರೂಪದ ಘಟನೆ ನಡೆದಿದೆ ಮಕ್ಕಾದಲ್ಲಿ..

ಮೇ 27ರ ಸೋಮವಾರ ಮಧ್ಯಾಹ್ನ ಸೂರ್ಯನು ಕಅಬಾದ ನೇರ ನೆತ್ತಿಯ ಮೇಲೆ ಕಾಣಿಸಿಕೊಂಡ ಅಪರೂಪದ ಘಟನೆ ನಡೆದಿದೆ. ಮಧ್ಯಾಹ್ನ 12 ಗಂಟೆ 18 ನಿಮಿಷದ ಸಮಯದಲ್ಲಿ ಮಸ್ಜಿದುಲ್ ಹರಾಮ್ ನಲ್ಲಿ ಮಧ್ಯಾಹ್ನದ ನಮಾಝ್ ನ ಆಜಾನ್ ವೇಳೆ ಈ ವಿಶೇಷ ಸನ್ನಿವೇಶ ಸೃಷ್ಟಿಯಾಗಿದೆ. ಈ ವರ್ಷ ಇದೇ ಮೊದಲ ಬಾರಿ ಇಂತದ್ದೊಂದು ಘಟನೆ ನಡೆದಿದೆ.. ಈ ಸಂದರ್ಭದಲ್ಲಿ ಕಾಬಾಕ್ಕೆ ನೆರಳೇ ಇರಲಿಲ್ಲ. ಸೂರ್ಯ ಕಅಬಾದ ನಡುನೆತ್ತಿಯಲ್ಲಿ 90 ಡಿಗ್ರಿಯಲ್ಲಿದ್ದ ಎಂದು …

Read More »

ರಮಝಾನ್ ಉಪವಾಸ ಆಚರಿಸುತ್ತಾ, ಸ್ಥಳದಿಂದ ಕದಲದೆ ಮಗುವಿನ ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ ಎಸಿ ಆಬೀದ್ ಗದ್ಯಾಳ

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಎಸಿ ಆಬೀದ್ ಗದ್ಯಾಳ ಅವರು ಮಗುವೊಂದು ಕೊಳವೆ ಬಾವಿಗೆ ಬಿದ್ದ ಸುದ್ದಿ ಕೇಳಿದಾಕ್ಷಣವೇ ಇಂಡಿ ತಾಲೂಕಿನ ಲಚ್ಯಾಣಕ್ಕೆ ಧಾವಿಸಿದರು. ವಿಜಯಪುರ ಅಸಿಸ್ಟೆಂಟ್ ಕಮಿಷನರ್ ಆಬೀದ್ ಗದ್ಯಾಳ ಸತತ 21 ಗಂಟೆಗಳ ಕಾಲ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳ ಬಿಟ್ಟು ಕದಲಿಲ್ಲ, ಏತನ್ಮಧ್ಯೆ ಉಪವಾಸ ವೃತ ಆಚರಿಸುತ್ತಿದ್ದ ಆಬೀದ್ ಗದ್ಯಾಳ, ಸಭೆ ಮೊಟಕುಗೊಳಿಸಿ ಸ್ಥಳಕ್ಕೆ ಧಾವಿಸಿದ ಅಲ್ಲಿಯೇ ಕೇವಲ ನೀರು ಹಾಗೂ …

Read More »

ಇಸ್ಲಾಮ್ ಸ್ವೀಕರಿಸಿದ ಅಮೆರಿಕಾದ ರಾಪರ್, ಸಂಗೀತಗಾರ ಲಿಲ್ ಜೋನ್

ಅಮೆರಿಕಾದ ರಾಪರ್ ಮತ್ತು ಸಂಗೀತಗಾರ ಲಿಲ್ ಜೋನ್ ಇಸ್ಲಾಂ ಸ್ವೀಕರಿಸಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಯೆಂಜಲಿಸ್ ನಲ್ಲಿರುವ ಕಿಂಗ್ ಪಹದ್ ಮಸೀದಿಯಲ್ಲಿ ಕಳೆದ ಶುಕ್ರವಾರ ಜುಮಾ ನಮಾಜ್ ನ ಬಳಿಕ ಇವರು ಇಸ್ಲಾಂ ಸ್ವೀಕರಿಸಿದ್ದಾರೆ. ಮಸೀದಿಯ ಇಮಾಮರು ಇವರಿಗೆ ಸತ್ಯ ವಚನ ಅಥವಾ ಕಲೀಮ ಶಹಾದ ಹೇಳಿಕೊಟ್ಟಿದ್ದಾರೆ. ಲಿಲ್ ಜೋನ್ ಎಂದೇ ಜಾಗತಿಕವಾಗಿ ಪ್ರಸಿದ್ಧವಾಗಿರುವ ಜೋನಾತನ್ ಎಚ್ ಸ್ಮಿತ್ ಅವರು ಹಿಪ್ ಹೋಪ್ ಸಂಗೀತಕ್ಕೆ ವಿಶ್ವ ಪ್ರಸಿದ್ಧರು. ಗ್ರಾಮಿ ಪುರಸ್ಕಾರದ ಸಹಿತ …

Read More »

‘ರಮಝಾನ್’ ವಿಶೇಷ ಕೊಡುಗೆ ಘೋಷಿಸಿದ ಕತರ್: ದಿನಕ್ಕೆ ಆರು ಗಂಟೆಯಷ್ಟೇ ದುಡಿಮೆಗೆ ಆದೇಶ

ಉಪವಾಸ ತಿಂಗಳಾದ ರಮಝಾನ್ ನಲ್ಲಿ ಪ್ರತಿದಿನ ಆರು ಗಂಟೆಗಳು ಮಾತ್ರ ಕೆಲಸ ಮಾಡಬೇಕು ಎಂದು ಕತಾರ್ ಆದೇಶಿಸಿದೆ. ವಾರದಲ್ಲಿ 36 ಗಂಟೆಗಿಂತ ಅಧಿಕ ಯಾರೂ ಕೆಲಸ ಮಾಡಬಾರದು ಎಂದು ಕೂಡ ಅದು ಹೇಳಿದೆ.. ಈ ಮೂಲಕ ಉಪವಾಸ ನಿರತ ಶ್ರದ್ದಾಳುಗಳ ಪ್ರಶಂಸೆಗೆ ಪಾತ್ರವಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ರಮಝಾನಿನಲ್ಲಿ ಉದ್ಯೋಗ ಸಮಯ 5 ಗಂಟೆಯಾಗಿರಲಿದೆ ಎಂದು ಆರಂಭದಲ್ಲಿ ಕತರ್ ಘೋಷಿಸಿತ್ತು. ಆದರೆ ಆ ಬಳಿಕ ಇದನ್ನು ಆರು ಗಂಟೆ …

Read More »

ಉಪವಾಸನಿರತ ಗಾಝಾ ನಿವಾಸಿಗಳ ಹಸಿವಿನ ಸಂಕಷ್ಟವನ್ನು ಅಪಹಾಸ್ಯದ ವ್ಯಂಗ್ಯಚಿತ್ರವಾಗಿಸಿದ ಫ್ರೆಂಚ್ ಪತ್ರಿಕೆ

ರಮಝಾನಿನಲ್ಲಿ ಆಹಾರ ಇಲ್ಲದೆ ಕಷ್ಟ ಪಡುತ್ತಿರುವ ಗಾಝಾದ ಜನರ ಬಗ್ಗೆ ಫ್ರೆಂಚ್ ಪತ್ರಿಕೆ ಲಿಬರೇಷನ್ ಅಪಹಾಸ್ಯದ ಕಾರ್ಟೂನ್ ಪ್ರಕಟಿಸಿದೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯಗಳ ಬಗ್ಗೆ ಕಣ್ಣು ಮುಚ್ಚಿದಂತೆ ನಟಿಸಿರುವ ಈ ಪತ್ರಿಕೆಯು ಜನರ ಸಂಕಷ್ಟವನ್ನು ಅಪಹಾಸ್ಯದ ಕಾರ್ಟೂನ್ ಗೆ ಬಳಸಿಕೊಂಡಿದೆ. ಗಾಝಾದಲ್ಲಿ ರಮ್ಜಾನ್: ಉಪವಾಸ ತಿಂಗಳ ಆರಂಭ… ಎಂಬ ಶೀರ್ಷಿಕೆಯಲ್ಲಿ ಈ ಕಾರ್ಟೂನ್ ರಚಿಸಲಾಗಿದೆ. ಕೋಕೋ ಎಂದೇ ಗುರುತಿಸಿಕೊಂಡಿರುವ ಫ್ರೆಂಚ್ ಕಾರ್ಟೂನಿಷ್ಟ್ ಕೋರಿನ್ ರಾಯ್ ಇದರ ಹಿಂದಿದ್ದಾರೆ ಎಂದು …

Read More »

‘ರಮಝಾನ್’ ಮಕ್ಕಾ-ಮದೀನದಲ್ಲಿ ಹೆಚ್ಚಿದ ಜನಸಂದಣಿ: ಮಸ್ಜಿದುಲ್ ಹರಂ ಬರುವವರಿಗೆ ಮಾಸ್ಕ್ ಕಡ್ಡಾಯ

ರಮಝಾನಿನಲ್ಲಿ ಮಕ್ಕಾ ಮತ್ತು ಮದೀನಕ್ಕೆ ಬರುವವರು ಮಾಸ್ಕ್ ಧರಿಸಬೇಕು ಎಂದು ಸೌದಿ ಸರಕಾರ ಆದೇಶಿಸಿದೆ. ಮಕ್ಕಾದ ಮಸ್ಜಿದುಲ್ ಹರಾಂಗೆ ಜನ ಸಾಗರವೇ ಹರಿದು ಬರುತ್ತಿದೆ. ಜನರನ್ನು ನಿಯಂತ್ರಿಸುವುದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಮಝಾನಿನ ಹಿನ್ನೆಲೆಯಲ್ಲಿ ಮಸ್ಜಿದುಲ್ ಹರಾಂಗೆ ಬರುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹರಂಗೆ ಬರುವವರು ಮಾಸ್ಕ್ ಧರಿಸಬೇಕು ಎಂದು ಆದೇಶಿಸಲಾಗಿದೆ. ಭಾರಿ ಜನಸಂದಣಿಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಇರುವ ಕಾರಣ ಮಾಸ್ಕ್ ಧರಿಸಲು …

Read More »

ಜಿಹಾದ್ ಎಂಬುದು ಮುಸ್ಲಿಮೇತರ ಸಮಾಜವನ್ನು ಸರ್ವನಾಶ ಮಾಡುವ ಆಯುಧ ಎಂಬುದು ಅತ್ಯಂತ ದೊಡ್ಡ ಸುಳ್ಳು: ಜಮಾಅತೆ ಇಸ್ಲಾಮೀ ಹಿಂದ್

ಇಸ್ಲಾಮೇತರ ನಂಬಿಕೆಗಳನ್ನು ಮಿಲಿಟರಿ ಬಲ ಉಪಯೋಗಿಸಿಯೋ ಅಥವಾ ಇನ್ನಾವುದಾದರೂ ದಾರಿಯ ಮೂಲಕವೋ ನಾಶ ಮಾಡುವುದಕ್ಕೆ ಇಸ್ಲಾಮ್ ಬಂದಿಲ್ಲ, ಆದರೆ ಮುಸ್ಲಿಮೇತರ ವಿದ್ವಾಂಸರು ಇಂತಹ ಸುಳ್ಳುಗಳನ್ನು ಭಾರತವೂ ಸೇರಿದಂತೆ ಜಾಗತಿಕವಾಗಿ ಹರಡಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಡಾಕ್ಟರ್ ಮೊಹಮ್ಮದ್ ರಝಿವುಲ್ ಇಸ್ಲಾಮ್ ನದ್ವಿ ಹೇಳಿದ್ದಾರೆ. ವಾಕ್ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಇಸ್ಲಾಮ್, ಹೇಗೆ ಇಸ್ಲಾಮೆತರ ನಂಬಿಕೆಗಳನ್ನು ನಾಶ ಮಾಡುವುದಕ್ಕೆ ಕರೆ ಕೊಡಲು ಸಾಧ್ಯ …

Read More »

ಕುರ್‌ಆನ್ ಸುಡುವುದು ನಿಷೇಧ: ಮಸೂದೆ ಅಂಗೀಕರಿಸಿದ ಡೆನ್ಮಾರ್ಕ್ ಸಂಸತ್

ಇಸ್ಲಾಮ್ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಮೇಲೆ ಮುಸ್ಲಿಮ್ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಡ್ಯಾನಿಶ್ ಭದ್ರತಾ ಕಳವಳಗಳನ್ನು ಹೆಚ್ಚಿಸಿದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಕುರ್‌ಆನ್ ಪ್ರತಿಗಳನ್ನು ಸುಡುವುದನ್ನು ಕಾನೂನು ಬಾಹಿರಗೊಳಿಸುವ ಮಸೂದೆಯನ್ನು ಡೆನ್ಮಾರ್ಕ್ ಸಂಸತ್ ಗುರುವಾರ ಅಂಗೀಕರಿಸಿದೆ. ಈ ವಿಷಯದ ಬಗ್ಗೆ ಡೆನ್ಮಾರ್ಕ್ ಮತ್ತು ಸ್ವೀಡನ್​​ನಲ್ಲಿ ಈ ವರ್ಷ ಸಾರ್ವಜನಿಕ ಪ್ರತಿಭಟನೆಗಳು ನಡೆದಿತ್ತು. ಅಲ್ಲಿ ಇಸ್ಲಾಮ್ ವಿರೋಧಿ ಕಾರ್ಯಕರ್ತರು ಕುರ್‌ಆನ್ ನ ಪ್ರತಿಗಳನ್ನು ಸುಟ್ಟು ಹಾಕಿದ್ದರು. ಈ ವರ್ತನೆ ಮುಸ್ಲಿಮರನ್ನು ಉದ್ರೇಕಿಸಿದ್ದು …

Read More »