Home / ಈ ಲೋಕ, ಪರಲೋಕ

ಈ ಲೋಕ, ಪರಲೋಕ

“ನೀವು ಇಹಲೊಕ ಜೀವನಕ್ಕೆ ಆದ್ಯತೆ ನೀಡುತ್ತೀರಿ. ವಸ್ತುತಃ ಪರಲೋಕವು ಹೆಚ್ಚು ಉತ್ತಮವೂ ಶಾಶ್ವತವೂ ಆಗಿದೆ.”(ಪವಿತ್ರ ಕುರ್‍ಆನ್-87:16,17)

“ಜನರು ಲೌಕಿಕ ಜೀವನದ ಬಾಹ್ಯ ಮುಖವನ್ನು ಮಾತ್ರ ತಿಳಿಯುತ್ತಾರೆ ಮತ್ತು ಪರಲೋಕದ ಕುರಿತು ಸ್ವಯಂ ಬೋಧ ಶೂನ್ಯರಾಗಿದ್ದಾರೆ. ಇವರೆಂದಾದರೂ ಸ್ವಯಂ ತಮ್ಮ ಕುರಿತಾಗಿ ವಿವೇಚಿಸಲಿಲ್ಲವೆ? ಅಲ್ಲಾಹನು ಆಕಾಶಗಳನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವುದೆಲ್ಲವನ್ನೂ ಸತ್ಯಪೂರ್ಣವಾಗಿ ಮತ್ತು ಒಂದು ನಿರ್ದಿಷ್ಟ ಕಾಲಾವಧಿಗಾಗಿಯೇ ಸೃಷ್ಟಿಸಿದ್ದಾನೆ. ಆದರೆ ಅನೇಕರು ತಮ್ಮ ಪ್ರಭುವಿನ ಭೇಟಿಯನ್ನು ನಿರಾಕರಿಸುವವರಾಗಿರುತ್ತಾರೆ.”(ಪವಿತ್ರ ಕುರ್‍ಆನ್-30:7,8)

ಈ ಲೋಕದಲ್ಲಿ ಸಂಪೂರ್ಣ ನ್ಯಾಯ ಅಸಾಧ್ಯ. ಒಬ್ಬ ವ್ಯಕ್ತಿ ಹತ್ತು ಮಂದಿಯನ್ನು ಕೊಂದ ಅವನನ್ನು ಸೆರೆಹಿಡಿಯಲಾಯಿತು ಮತ್ತು ಒಮ್ಮೆ ಅವನಿಗೆ ಗಲ್ಲು ಶಿಕ್ಷೆಯನ್ನು ನೀಡಬಹುದು. ಆದರೆ ಇದು ಪರಿಪೂರ್ಣ ನ್ಯಾಯವಾಗುವುದಿಲ್ಲ. ಅಪರಾಧಿಯನ್ನು ಹತ್ತು ಸಲ ಕೊಲ್ಲಲು ಮತ್ತು ಅವನು ಹತ್ತು ಬಾರಿ ಜೀವಂತಗೊಳಿಸಲು ಸಾಧ್ಯವಾಗಿದ್ದರೆ ಅದು ನ್ಯಾಯವಾಗಿದೆ. ಇದಲ್ಲದೆ ಸತ್ತವನನ್ನೂ ಜೀವಂತಗೊಳಿಸಿ ಅವನ ಮುಂದೆಯೇ ಅವನನ್ನು ಕೊಂದ ಅಪರಾಧಿಯ ವಧೆ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ. ಯಾಕೆಂದರೆ ಅವನು ಸಂತೃಪ್ತನಾಗುತ್ತಾನೆ ತನಗೆ ನ್ಯಾಯ ದೊರಕಿದೆಯೆಂದು. ಇದು ಪರಲೋಕದಲ್ಲಿ ನಡೆಯುವಂತಹ ಶಿಕ್ಷಾ ವಿಧಾನವಾಗಿದೆ. ಆದರೆ ಜಗತ್ತಿನಲ್ಲಿ ಇದು ಅಸಂಭವನೀಯ.

* ಒಬ್ಬ ವ್ಯಕ್ತಿ ಕಳವು ನಡೆಸಿದ್ದು ಅವನು ಸಿಕ್ಕಿಬಿದ್ದು ಸೆರೆ ಹಿಡಿಯಲಾಯಿತು. ಶಿಕ್ಷೆ ನೀಡಿ ಸೆರೆಮನೆಗೆ ತಳ್ಳಲಾಯಿತು. ಕಳ್ಳನಿಗೂ ತೊಂದರೆ ಅವನು ಜೈಲಿನಲ್ಲಿರುವ ತನಕ ಅವನ ತಾಯಿಯೂ ಮಾನಸಿಕ ನೋವನ್ನು ಅನುಭವಿಸುತ್ತಿರಬೇಕಾಗುತ್ತದೆ. ಅಪರಾಧ ಮಗ ಮಾಡಿದ್ದು, ಅದರ ಶಿಕ್ಷೆ ತಾಯಿಗೇಕೆ ಸಿಗಬೇಕು? ತಾಯಿ ಮತ್ತು ಮಗನ ನಡುವೆ ಸಹಜವಾಗಿರುವ ಭಾವನಾತ್ಮಕ ಸಂಬಂಧದಿಂದಾಗಿ ತಾಯಿ ನೋವನುಭವಿಸುತ್ತಾಳೆ. ಈ ಸಂಬಂಧವನ್ನು ಒಂದು ವೇಳೆ ಮುರಿಯುದಿದ್ದರೆ ಬಾಲ್ಯದಲ್ಲಿ ಮಕ್ಕಳ ಲಾಲನೆ ಪಾಲನೆ ಹೇಗೆ ಆಗಲು ಸಾಧ್ಯ? ಚಳಿಗಾಲದ ರಾತ್ರಿಯಲ್ಲಿ ಮೂರು ಗಂಟೆಗೆ ಮಗು ಮೂತ್ರ ಮಾಡಿ ಅತ್ತರೆ ತಾಯಿಯೆದ್ದು ಅದರ ನ್ಯಾಪ್‍ಕಿನ್ ಬದಲಿಸುತ್ತಾಳೆ. ಮಗವಿಗೆ ನ್ಯೂಮೇನಿಯಾ ಆಗಬಾರದು, ಮಗು ಸುರಕ್ಷಿತವಾಗಿರಬೇಕು ಎಂದು ಕಾಳಜಿ ವಹಿಸುತ್ತಾಳೆ. ಆದರೆ ನ್ಯಾಯದಾನಕ್ಕೆ ತಾಯಿ ಮಗನ ನಡುವೆ ಭಾವನಾತ್ಮಕ ಸಂಬಂಧಗಳಿಲ್ಲದ ಒಂದು ಜಗತ್ತು ಇರಬೇಕಾಗುತ್ತದೆ. ಅವರಿಬ್ಬರಲ್ಲಿಯೂ ಯುವತ್ವವಿದ್ದು ಶಿಕ್ಷೆಯನ್ನು ಕೇವಲ ಅಪರಾಧಿಗೆ ನೀಡುವಂತಹ ವಾತಾವರಣ ಇರಬೇಕಾಗಿದೆ. ಇದು ಈ ಲೊಕದಲ್ಲಿ ಸಾಧ್ಯವೇ?

ಒಬ್ಬ ಉತ್ತಮ ಮನುಷ್ಯನ ಉತ್ತಮ ಕಾರ್ಯಗಳಿಂದಾಗಿ ಲಕ್ಷಾಂತರ ಮಂದಿಗೆ ಪ್ರಯೋಜನ ಸಿಗುತ್ತದೆ. ಇದೆ ರೀತಿ ಒಬ್ಬ ಕೆಟ್ಟ ಮನುಷ್ಯನಿಂದಾಗಿ ಲಕ್ಷಾಂತರ ಮಂದಿಗೆ
ತೊಂದರೆಯುಂಟಾಗುತ್ತದೆ. ಈ ಕ್ಷೀಣ ಬದುಕಿನಲ್ಲಿ ಅಥವಾ ನಾಲ್ಕು ದಿನದ ಜೀವನದಲ್ಲಿ ಅವರವರ ಉತ್ತಮ ಹಾಗೂ ಕೆಟ್ಟ ಕೆಲಸ ಕಾರ್ಯಗಳಿಗೆ ಸರಿಸಮಾನವಾಗಿ ಉತ್ತಮ ಅಥವಾ ಕೆಟ್ಟ ಪ್ರತಿಫಲ ಸಿಗಲು ಸಾಧ್ಯವಿಲ್ಲ. ಹೀಗೆ ಯಾಕೆ?

* ಜಗತ್ತಿನಲ್ಲಿ ಪ್ರತೀ ಕಾರ್ಯದ ಪ್ರತಿಕ್ರಿಯೆಗಳು ವೇದ್ಯವಾಗುತ್ತವೆ. ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಹೊಡೆದು ಮೂರ್ಛೆತಪ್ಪಿತು. ಹಸಿದ ವ್ಯಕ್ತಿ ಊಟ ಮಾಡಿದ, ಅವನ ಹಸಿವು ಇಂಗಿತು. ರೋಗಿ ಔಷಧ ಸೇವಿಸಿದ, ಅವನ ರೋಗ ವಾಸಿಯಾಯಿತು. ಆದರೂ ಜಗತ್ತಿನಲ್ಲಿ ಕೆಲವು ಕೆಲಸಗಳ ಪ್ರತಿಕ್ರಿಯೆ ವೇದ್ಯವಾಗದ್ದೂ ಉಂಟು. ನೀವು ಯಾವುದಾದರೂ ಕುರುಡನನ್ನು ಮಾರ್ಗದ ದಡಕ್ಕೆ ದಾಟಿಸಿದಿರಿ. ರಸ್ತೆಯಲ್ಲಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದಿರಿ. ಸ್ವಯಂ ಹಸಿದಿದ್ದು ಹಸಿದವನಿಗೆ ಊಟ ಮಾಡಿಸಿದಿರಿ. ಇಂತಹ ಕೆಲಸಗಳಿಗೆ ಸಿಗುವ ಪ್ರತಿಕ್ರಿಯೆ ಅಥವಾ ಪ್ರತಿಫಲ ಏನಿದೆ ಜಗತ್ತಿನಲ್ಲಿ?

* ಸಂಪೂರ್ಣ ಖುಷಿಯಾಗಿರಲು ಮನುಷ್ಯನಿಗೆ ಅವನೆಲ್ಲ ಆವಶ್ಯಕತೆಗಳು ಈಡೇರಬೇಕಿದೆ. ವರ್ತಮಾನ ಮತ್ತು ಭವಿಷ್ಯದಲ್ಲಿ ಅವನಿಗೆ ಸಂರಕ್ಷಣೆ ದೊರೆಯಬೇಕು. ಅವನೆಲ್ಲ
ಸಂಬಂಧಿಕರು ಉಪಸ್ಥಿತರಿರಬೇಕು.( ನಾನು ಖುಷಿಯಾಗಿರಲು ಸಾಧ್ಯವಿಲ್ಲ ನನ್ನ ತಂದೆ ಜೀವಿಸಿರದಿದ್ದರೆ. ನನ್ನ ತಂದೆ ಖುಷಿಯಾಗಿರಲು ಸಾಧ್ಯವಿಲ್ಲ ಅವರ ತಂದೆ ಜೀವಿಸಿಲ್ಲದಿದ್ದರೆ….)ಎಲ್ಲರೂ ಆರೋಗ್ಯವಂತರಾಗಿದ್ದು ಎಲ್ಲರಲ್ಲಿಯೂ ಸಂಪತ್ತಿದ್ದು ಯಾರಿಗೂ ಅನಾರೋಗ್ಯವಿಲ್ಲದೆ ಯಾರೂ ಮುದುಕರಾಗದೆ ಯಾವುದೇ ದುರ್ಘಟನೆಗೆ ಬಲಿಯಾಗದೆ ಹೀಗೆ ಈ ಪಟ್ಟಿ ಮುಂದುವರಿಯುತ್ತದೆ. ಆದರೆ ಈ ಲೋಕದಲ್ಲಿ ಹೀಗೆ ಸಂಭವಿಸುವುದೇ ಇಲ್ಲ. ಹಾಗಿದ್ದರೆ ಮನುಷ್ಯನಿಗೆ ಲೋಕದಲ್ಲಿ ಸಂಪೂರ್ಣ ಖುಷಿ ಯಾಕೆ ಸಿಗುತ್ತಿಲ್ಲ.

* ಯೋಚಿಸಿರಿ! ಒಂದು ವೇಳೆ ಈ ಭೂಮಿಯಿಂದ ಸಕಲ ಮನುಷ್ಯರನ್ನು ಖಾಲಿ ಮಾಡಿದರೆ ಏನಾದೀತು? ಏನೂ ಆಗದು. ಸೂರ್ಯ ಉದಿಸಿ ಅದರ ತಾಪದಿಂದ ಮೋಡಗಳುಂಟಾಗಿ ಮಳೆಯಾಗಿ ಬಿಡುತ್ತದೆ. ಹೀಗೆ ಜಲಚಕ್ರ ಮುಂದುವರಿಯುತ್ತಿರುತ್ತದೆ.

* ಯೋಚಿಸಿರಿ! ಒಂದುವೇಳೆ ಈ ಜಗತ್ತಿನಲ್ಲಿ ಮನುಷ್ಯನಿದ್ದು ಸೂರ್ಯ, ಗಾಳಿ, ನೀರು ಇವುಗಳಲ್ಲಿ ಯಾವುದಾದರೊಂದನ್ನು ಇಲ್ಲಿಂದ ತೆಗೆದರೆ ಏನಾದೀತು? ಭೂಮಿಯ ಎಲ್ಲ ಜೀವಜಾಲ ನಾಶವಾದೀತು. ಇದರಿಂದ ಗೊತ್ತಾಗುವುದು ಮನುಷ್ಯ ಈ ಜೀವಜಾಲಗಳಿಂದ ಹೆಚ್ಚಿನ ಲಾಭ ಪಡೆಯುವವನಲ್ಲದೆ ಲಾಭ ಮಾಡುವವನಲ್ಲ. ಅದೇ ವೇಳೆ ಪ್ರಕೃತಿಯು ಮಾನವನಿಗೆ ಲಾಭ ಮಾಡುತ್ತಿವೆ. ಇದರಿಂದ ನಮಗೆ ಗೊತ್ತಾಗುವುದು ಭೂಮಿಯಲ್ಲಿರುವುದೆಲ್ಲವೂ ಮನುಷ್ಯನಿಗಾಗಿವೆ. ಹಾಗಿದ್ದರೆ ಮನುಷ್ಯ ಯಾವುದಕ್ಕಾಗಿದ್ದಾನೆ.

* ಒಂದು ಜೀವಂತ ಮತ್ತು ಮೃತ ಮನುಷ್ಯರಲ್ಲಿ ಅಂತರವಿದೆ. ಜೀವಂತ ಮನುಷ್ಯನ ಮೆದುಳಿನಲ್ಲಿ ವಿಚಾರಗಳು ಹುಟ್ಟುತ್ತಿರುತ್ತವೆ. ಅವು ಮಾತನಾಡುತ್ತವೆ ಚಲನವನ್ನುಂಟು ಮಾಡುತ್ತಿರುತ್ತವೆ.

ಮನೋವಿಜ್ಞಾನದ ಪ್ರಕಾರ ಮನುಷ್ಯನ ಮೆದುಲಿನಲ್ಲಿ ಎರಡು ವಿಚಾರಗಳಿರುತ್ತವೆ. ಚೇತನ ಮತ್ತು ಅಚೇತನ. ಅಚೇತನವು ಮನುಷ್ಯ ಮೆದಲಿನ ಗೋದಾಮು ಆಗಿದೆ. ಇದರಲ್ಲಿ
ಮನುಷ್ಯನ ಸಣ್ಣ ಚಿಕ್ಕ ವಿಷಯಗಳು ಜಮೆಗೊಳ್ಳುತ್ತಿರುತ್ತವೆ. ಒಬ್ಬ ಮನುಷ್ಯನು ನೆನಪಿನ ಶಕ್ತಿಕಳಕೊಂಡು ಅವನೆಲ್ಲವನ್ನೂ ಮರೆತುಬಿಟ್ಟ. ಯಾವಾಗ ಅವನ ಸ್ಮರಣ ಶಕ್ತಿ ಮರಳಿತು. ಆಗ ಅವನೆಲ್ಲವನ್ನೂ ನೆನಪಿಸಿಕೊಳ್ಳಬಲ್ಲ. ಅಥವಾ ಕೆಲವೊಮ್ಮೆ ಕನಸಿನಲ್ಲಿ ಬಾಲ್ಯದ ನೆನಪು ಮೂಡುತ್ತವೆ. ಇದರಿಂದ ಗೊತ್ತಾಗುತ್ತದೆ ಮನುಷ್ಯನ ಎಲ್ಲ ನೆನಪುಗಳೆಲ್ಲಿಯೋ ಸ್ಟಾಕ್ ಆಗುತ್ತಿದೆ. ಮತ್ತು ಅದು ನೆನಪಿಗೆ ಬರುತ್ತದೆ. ಮನುಷ್ಯನ ಸಣ್ಣ ದೊಡ್ಡ ನೆನಪುಗಳು ಅವನ ಅಚೇತನ ಮನಸಿನಲ್ಲಿ ದಾಖಲಾಗಿರುತ್ತವೆ. ಯೋಚಿಸಿರಿ, ಈ ರೆಕಾರ್ಡಿಂಗ್ ಯಾಕೆ ನಡೆಯುತ್ತಿದೆ?

ಭೌತಿಕ ವಿಜ್ಞಾನದ ಪ್ರಕಾರ ಮನುಷ್ಯನ ಧ್ವನಿಸುವ ಅಥವಾ ಅವನ ಮಾತುಕತೆಗಳಲ್ಲಿ ಕೆಲವು ಎಂದೂ ಕೊನೆಗೊಂಡಿರುವುದಿಲ್ಲ. ಬದಲಾಗಿ ಅದು ಒಂದು ಲಕ್ಷದ ಎಂಬತ್ತಾರು ಸಾವಿರ ಸೆಕೆಂಡ್‍ನ ವೇಗದಲ್ಲಿ ಗಾಳಿಯಲ್ಲಿ ಸುಳಿದಾಡುತ್ತಿರುತ್ತದೆ. ವಿಜ್ಞಾನದ ಪ್ರಗತಿಯಲ್ಲಿ ಕಳೆದು ಹೋದ ಯುಗದ ಧ್ವನಿಯನ್ನು ರೆಕಾರ್ಡ್ ಮಾಡಿಟ್ಟು ಮತ್ತೆ ಆಲಿಸಲು ಸಾಧ್ಯವಾಗಿದೆ. ಆದರೆ ಈ ಎಲ್ಲ ಧ್ವನಿಗಳು ಮಿಶ್ರಣದಂತಿದ್ದು ಈಗ ಅದನ್ನು ಪ್ರತ್ಯೇಕಿಸುವುದು ಅಸಾಧ್ಯವಾಗಿದೆ. ವಿಜ್ಞಾನ ಪ್ರಯತ್ನಿಸುತ್ತಿದೆ ಈ ಧ್ವನಿಗಳನ್ನು ಬೇರ್ಪಡಿಸಿ ಆಲಿಸಲು. ಇದರಿಂದ ಗೊತ್ತಾಗುತ್ತದೆ ಮನುಷ್ಯನ ಸಣ್ಣ ದೊಡ್ಡ ಎಲ್ಲ ಧ್ವನಿಗಳು ರೆಕಾರ್ಡ್ ಮಾಡಲಾಗುತ್ತಿದೆ. ಧ್ವನಿಯ ಈ ರೆಕಾರ್ಡಿಂಗ್ ಯಾಕೆ ಆಗುತ್ತಿದೆ?

ಮನುಷ್ಯ ಶರೀರದಿಂದ ಹಸಿರು ಅಲೆಗಳು ಹೊರಬರುತ್ತಿರುತ್ತವೆ. ಇದು ಮನುಷ್ಯನ ಪ್ರತಿಯೊಂದು ವರ್ತನೆಯನ್ನು ಮಲಗಿ, ಎದ್ದು, ಕೂತು ಹೀಗೆ ಎಲ್ಲದ್ದರ ಫೋಟೊ ತೆಗೆಯುತ್ತಿದೆ. ನವೆಂಬರ್ 1960 ರೀಡರ್ಸ್ ಡೈಜೆಸ್ಟ್ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಅಮೆರಿಕದ ಮೇಲಿನಿಂದೊಂದು ವಿಮಾನ ಸಾಗಿತ್ತು. ಎರಡು ಗಂಟೆಯ ನಂತರ ಆ ಖಾಲಿ ಜಾಗದಿಂದ ವಿಮಾನದಲ್ಲಿ ಕೂತ ಪ್ರಯಾಣಿಕ ಫೋಟೊ ತೆಗೆದಿದ್ದಾನೆ. ಆ ಕ್ಯಾಮರಾಕ್ಕೆ ಆ ಮನುಷ್ಯ ಹೋದ ಮೇಲೂ ಖಾಲಿ ಜಾಗದಿಂದ ಆ ಮನುಷ್ಯನ ಫೋಟೊ ತೆಗೆಯಲು ಸಾಧ್ಯ. ಇದನ್ನೇ ಎವಫೊರಗ್ರಾಫ್ ಎಂದು ಕರೆಯಲಾಯಿತು. ವಿಜ್ಞಾನದಲ್ಲಿ ಚರ್ಚೆ ಇರುವುದೆಂದರೆ ಯಾವ ಮನುಷ್ಯ ಹೋದ ನಂತರ ಆ ಖಾಲಿ ಜಾಗದಲ್ಲಿ ಆ ಮನುಷ್ಯನ ಫೋಟೊ ಕೆಲವು ಗಂಟೆ ಬಾಕಿಯುಳಿತ್ತದೆಯೇ ಅಥವಾ ಶಾಶ್ವತವಾಗಿ ಉಳಿಯುತ್ತಿದೆಯೇ ಎಂದಾಗಿದೆ. ಸಂಭಾವ್ಯವೆಂದರೆ ಈ ಫೋಟೊ ಶಾಶ್ವತವಾಗಿ ಉಳಿಯುತ್ತದೆ. ಈಗ ವಿಜ್ಞಾನ ಖಾಲಿ ಜಾಗದಿಂದ ಫೋಟೊ ತೆಗೆಯುವಷ್ಟು ಪ್ರಗತಿ ಹೊಂದಿಲ್ಲ. ಆದರೆ ಅದು ಸಂಭವಿಸಬಹುದು. ಇದರಿಂದ ಗೊತ್ತಾಗುತ್ತದೆ ಮನುಷ್ಯನ ಪ್ರತಿಯೊಂದೂ ಚಲನೆಗಳು ರೆಕಾರ್ಡಿಂಗ್ ಆಗುತ್ತಿದೆ. ಆದರೆ ಮನುಷ್ಯರ ಚಲನೆ ಯಾಕಾಗಿ ರೆಕಾರ್ಡಿಂಗ್ ಆಗುತ್ತಿದೆ?

ಯೋಚಿಸಿರಿ, ಮನುಷ್ಯನ ಮಾತು ಕಾರ್ಯಗಳ ಈ ರೆಕಾರ್ಡಿಂಗ್ ಯಾಕೆ ಆಗುತ್ತಿದೆ. ಯಾವುದಾದರೂ ನ್ಯಾಯಾಲಯಕ್ಕಾಗಿಯೇ? ಅಲ್ಲಿ ಇವೆಲ್ಲವನ್ನೂ ಹಾಜರುಪಡಿಸಿ ಇದರ ಆಧಾರದಲ್ಲಿ ಯಾವುದಾದರೂ ತೀರ್ಪು ಬರಲಿದೆಯೆ?

* ಮನುಷ್ಯರ ಈ ಎಲ್ಲ ಪ್ರಶ್ನೆಗಳ ಉತ್ತರವನ್ನು ಖುದ್ದು ದೇವನೇ ನೀಡಿದ್ದಾನೆ. ದೇವನು ಹೇಳಿದ್ದಾನೆ, ಮನುಷ್ಯ ಜೀವನದಲ್ಲಿ ಎರಡು ಭಾಗಳಿವೆ. ಒಂದು ಸಾವಿಗಿಂತ ಮೊದಲಿನ ಜೀವನ. ಈ ಜೀವನ ಬಹಳ ಚಿಕ್ಕದು. ತುಂಬ ಕಡಿಮೆ ಸಮಯದ್ದು. ಮತ್ತು ಪರೀಕ್ಷೆಯ ಜೀವನವಾಗಿದೆ. ಇನ್ನೊಂದು ಸಾವಿನ ನಂತರದ ಶಾಶ್ವತ ಜೀವನ. ಮೃತನಾಗುವ ಮೊದಲಿನ ಜೀವನದಲ್ಲಿ ಮಾಡಿದ ಕೆಲಸಗಳಾಧಾರದಲ್ಲಿ ಶಿಕ್ಷೆ(ನರಕ) ಅಥವಾ ಪುರಸ್ಕಾರ(ಸ್ವರ್ಗ) ಸಿಗಲಿವೆ. ಸಾವಿನ ನಂತರ ಎಂದೂ ಮುಗಿಯದಿರುವ ಶಾಶ್ವತ ಜೀವನಕ್ಕೆ ದೇವನು ಆಖಿರತ್ (ಪರಲೋಕ) ಎಂದು ಹೆಸರಿಸಿದ್ದಾನೆ. ಪರಲೋಕವನ್ನು(ಆಖಿರತ್) ನಂಬುವುದು ಮನುಷ್ಯರ ಸಕಲ ಪ್ರಶ್ನೆಗಳಿಗಿರುವ ಉತ್ತರವಾಗಿದೆ.

* ಜೀವನದ ಕಥೆ ಮರಣದೊಂದಿಗೆ ಕೊನೆಗೊಳ್ಳುವುದಿಲ್ಲ. ಟೀವಿಯಲ್ಲೊಂದು ಚಿತ್ರ ನಡೆಯುತ್ತಿದ್ದು ಅನಿರೀಕ್ಷಿತವಾಗಿ ಮಧ್ಯದಲ್ಲಿಯೇ ಚಲನ ಚಿತ್ರವನ್ನು ನಿಲ್ಲಿಸಲು ಹೇಳಿದಂತೆ. ಯಾವುದಾದರೂ ಲೇಖನವನ್ನು ಉತ್ಸುಕತೆಯಿಂದ ಓದುತ್ತಿದ್ದು ಮಧ್ಯದಲ್ಲಿ ನಿಲ್ಲಿಸಲು ಹೇಳಿದಂತೆ. ಆದರೆ ಚಲನ ಚಿತ್ರವನ್ನು ವೀಕ್ಷಿಸುವವನು ಮತ್ತು ಲೇಖನ ಓದುವವನು
ಅವುಗಳನ್ನು ಅರ್ಧದಲ್ಲಿ ಬಿಟ್ಟು ಬಿಡಲು ಸಿದ್ಧನಿರುವುದಿಲ್ಲ. ಯಾಕೆಂದರೆ ಅವನಿಗೆ ಅದರ ಕೊನೆ ಅಥವಾ ಪರಿಣಾಮವನ್ನು ಅರಿಯುವ ತವಕವಿರುತ್ತದೆ. ಅವನಿಗೆ ಅದರ ಪರಿಣಾಮ ತಿಳಿಯಬೇಕಿದೆ. ಇದೇ ರೀತಿ ಜೀವನದ ಕತೆ ನಮ್ಮ ಸಾವಿನೊಂದಿಗೆ ಮುಗಿಯುವುದಿಲ್ಲ. ಅಂದರೆ ನಮ್ಮ ಕತೆಯನ್ನು ಅಂತಿಮ ಪರಿಣಾಮದವರೆಗೆ ದೇವನು ತಲುಪಿಸುವವರೆಗೂ ಅದು ಅಪೂರ್ಣವಾದುದು ಆಗಿದೆ. ವಾಸ್ತವದಲ್ಲಿ ಪರಲೋಕ ಜೀವನವೇ ನಮ್ಮ ಕತೆಯ ಕೊನೆ(ಪರಿಣಾಮ)ಯಾಗಿದೆ.

ಮರಣಾನಂತರ ಜೀವನದ ಪರಿಕಲ್ಪನೆ ಎಲ್ಲ ಧರ್ಮಗಳಲ್ಲಿ ಕಂಡು ಬರುತ್ತವೆ. ಹಿಂದೂ ಧರ್ಮಗಳಲ್ಲಿಯೂ ಅದು ಇದೆ. ವೇದಗಳಲ್ಲಿ ಪುನರ್ಜೀವನದ ಮಾತು ಹೇಳಲಾಗಿದೆ. ಇದು ಮೃತ್ಯವಿನ ನಂತರದ ಶಾಶ್ವತ ಜೀವನವನ್ನು ಸಂಬಂಧಿಸಿರುವುದಾಗಿದೆ. ವೇದಗಳಲ್ಲಿ ಅವಗಮನ ಮತ್ತು ಪುನರ್ಜನ್ಮ ಕಂಡು ಬರುವುದಿಲ್ಲ. ಪುನರ್ಜನ್ಮ ಮತ್ತು ಅವಗಮನ ಎರಡು ಬೇರೆ ಬೇರೆ ಆಗಿದೆ. ವೇದದ ಪುನರ್ಜೀವನದ ಅರ್ಥ ಮನುಷ್ಯನಿಗೆ ತನ್ನ ಕರ್ಮದ ಪ್ರತಿಫಲಕ್ಕಾಗಿ ಮತ್ತೊಮ್ಮೆ ಹುಟ್ಟಿ ಬರಲಿಕ್ಕಿದೆ ಎಂದಾಗಿದೆ.

* ಈ ಗ್ರಹ ಅರ್ಥಾತ್ ಭೂಮಿಯಲ್ಲಿ ಹುಟ್ಟುವ ಪ್ರತಿಯೊಬ್ಬ ಮನುಷ್ಯ ವಾಪಸಾತಿಯ ಟಿಕೆಟ್‍ನೊಂದಿಗೆ ಹುಟ್ಟುತ್ತಾನೆ. ಮತ್ತು ಜೀವನ ಪೂರ್ತಿ ಅದು ಕನ್ಫರ್‍ಮೇಶನ್ ಆಗುವ ನಿರೀಕ್ಷೆಯಲ್ಲಿ ಇರುತ್ತಾನೆ. ವಾಪಸಾತಿಯ ಟಿಕೆಟ್ ಎಂಬುದಕ್ಕೆ ಇನ್ನೊಂದು ಹೆಸರು ಮೃತ್ಯು.

* ಮನುಷ್ಯನ ಸ್ಥಿತಿ ರೋಗ, ವೃದ್ಧಾಪ್ಯ, ದುರ್ಬಲನಾಗುವುದು ಈ ಪರಿಣಾಮಗಳ ಮತ್ತು ಅವಸ್ಥೆಗಳನ್ನು ಕಂಡು ಜೀವನ ದುಖಿ ಎಂದು ಭಾವಿಸುವುದು ಸರಿಯಲ್ಲ. ಇದು ಯಾವುದೇ ಮನುಷ್ಯನ ತಿಳುವಳಿಕೆ ಆಗಿದೆ. ಸರಿಯಾದದ್ದೆಂದರೆ, ರೋಗ ವೃದ್ಧಾವಸ್ಥೆ ಮತ್ತು ಮರಣ ನೀಡುವವನೇ(ದೇವನೆ)ಖುದ್ದು ಹೇಳುತ್ತಾನೆ, ಪ್ರಾಪಂಚಿಕ ಜೀವನ ಮನಷ್ಯನಿಗೆ ಒಂದು ಪರೀಕ್ಷೆ ಆಗಿದೆ. ರೋಗ ಈ ಪರೀಕ್ಷೆಯ ಒಂದು ವಿಷಯ. ವೃದ್ಧಾವಸ್ಥೆ ಈ ಪರೀಕ್ಷೆ ಮುಗಿಯುತ್ತಿರುವುದರ ಎಚ್ಚರಿಕೆಯಾಗಿದೆ. ಮತ್ತು ಮರಣ ಪರೀಕ್ಷೆ ಮುಗಿದುದರ ಘೋಷಣೆ ಆಗಿದೆ.

* ಒಂದೂವರೆ ಲಕ್ಷ ಮನುಷ್ಯರು ಪ್ರತೀ ದಿನ ಈ ಜಗತ್ತಿನಲ್ಲಿ ಸಾಯುತ್ತಿರುತ್ತಾರೆ. ಇವರೆಲ್ಲರೂ ಎಲ್ಲಿಗೆ ಹೋಗುತ್ತಿದ್ದಾರೆ? ಇದು ಬಹಿರಂಗ ಪ್ರಶ್ನೆಯಾಗಿದೆ. ಇದರ ಮುಂದೆ ಕಣ್ಣು ಮುಚ್ಚಿಕೂರುವಂತಿಲ್ಲ. ಜಗತ್ತಿನ ಯಾವ ವಿಜ್ಞಾನದಿಂದಲೂ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಕೇವಲ ಧರ್ಮ ಮಾತ್ರವೇ ಈ ಪ್ರಶ್ನೆಯ ಉತ್ತರವನ್ನು ನೀಡಬಲ್ಲುದು. ಅದರಲ್ಲೂ ಜಗತ್ತಿನಲ್ಲಿ ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಬಲ್ಲ ಧರ್ಮವೆಂದರೆ ಜೀವನ ಮರಣ ನೀಡುವವನ(ದೇವನ) ಪವಿತ್ರ ವಾಣಿಯನ್ನು ಸಂಪೂರ್ಣ ಸುರಕ್ಷಿತವಾಗಿರಿಸಿದ ಧರ್ಮವಾಗಿದೆ.

* ಪ್ರತಿಯೊಬ್ಬ ಮನುಷ್ಯ ಸಾಯುವ ಸಮಯ ಅವನ ಪರೀಕ್ಷೆ ಮುಗಿದ ಸಮಯವಾಗಿದೆಯೇ? ಪವಿತ್ರ ಕುರ್‍ಆನ್ ಹೇಳುತ್ತಿದೆ ಹೌದು ಮನುಷ್ಯನ ಸಾಯುವ ಸಮಯ ಮೊದಲೇ ನಿಗದಿತವಾಗಿದೆಯೆಂದು. “ಯಾವ ಜೀವಿಯೂ ಅಲ್ಲಾಹನ ಅನುಮತಿ ಹೊಂದದೆ ಸಾಯಲಾರದು. ಮರಣದ ಸಮಯವಂತು ಬರೆದಿಡಲ್ಪಟ್ಟಿದೆ”(ಪವಿತ್ರ ಕುರ್‍ಆನ್-3:145)
ಮರಣವನ್ನು ಪದೇ ಪದೇ ನೆನಪಿಸುವುದನ್ನು ಇಸ್ಲಾಮ್ ಇಷ್ಟಪಡುತ್ತದೆ. ಯಾಕೆಂದರೆ ಇದು ಮನುಷ್ಯನ ಮೇಲೆ ಉತ್ತಮ ಪ್ರಭಾವವನ್ನು ಉಂಟು ಮಾಡುತ್ತದೆ. ಉತ್ತಮ ಕೆಲಸ ಮಾಡುವ ದಾರಿಯಲ್ಲಿ ಉದಾಸೀನತೆ ಉಂಟಾದರೆ ಅದನ್ನು ದೂರೀಕರಿಸುತ್ತದೆ. ಮನುಷ್ಯ ಉತ್ತಮ ಕೆಲಸ ಮಾಡುವುದರಲ್ಲಿ ಅವಸರ ಪಡುತ್ತಾನೆ. ಅಪರಾಧಗಳನ್ನು ತೊರೆಯಲು ಅಥವಾ ಪಾಪ ವಿಮೋಚನೆಗೆ ಪಶ್ಚಾತ್ತಾಪ ಪಡುವುದರಲ್ಲಿಯೂ ಅವಸರಿಸುತ್ತಾನೆ. ಮತ್ತು ಮನುಷ್ಯನು ಕೆಟ್ಟ ಕಾರ್ಯಗಳನ್ನು ಮಾಡುವುದರಿಂದ ಅದು ತಡೆಯುತ್ತದೆ.

ಮರಣವನ್ನು ತಮ್ಮಿಚ್ಛೆಯಂತೆ ಅರ್ಥಾತ್ ಆತ್ಮಹತ್ಯೆ ಮಾಡುವುದನ್ನು ಇಸ್ಲಾಮ್ ನಿಷೇಧಿಸಿದೆ. ಯಾಕೆಂದರೆ ಅವನು ದೇವನಿಂದ ನಿರಾಶನಾಗಲು ಮತ್ತು ಮನುಷ್ಯನ ಕುರಿತು ದೇವನಿಗಿರುವ ಉದ್ದೇಶಕ್ಕೆ ವಿರುದ್ಧ ಕಾರ್ಯ ಮಾಡುವುದಕ್ಕೆ ಅದು ಸಮ. ಪ್ರವಾದಿ ಮುಹಮ್ಮದ್(ಸ)ರು ಹೇಳಿದ್ದಾರೆ. ನಿಮ್ಮಲ್ಲಿ ಯಾರೂ ಮರಣದ ಬಯಕೆ ಇರಿಸಿಕೊಳ್ಳದಿರಿ. ಮತ್ತು ಬೇಗನೆ ಸಾವು ಬರುವಂತೆ ಪ್ರಾರ್ಥಿಸದಿರಿ. ಯಾಕೆಂದರೆ ಮರಣ ಬಂದಾಗ ಅವನ ಕರ್ಮದ ಸರಣಿಗೆ ತಡೆ ಬೀಳುವುದು ಮತ್ತು ದೇವ(ಅವನು ತಿಳಿಸಿರುವ ವಿಧಾನ ಪ್ರಕಾರ) ವಿಶ್ವಾಸಿಯ ಆಯಸ್ಸು ಅವನ ಒಳಿತನ್ನು ಹೆಚ್ಚಿಸಲಿಕ್ಕಿರುವುದಾಗಿದೆ.(ಮುಸ್ಲಿಮ್)

ಮೇಲಿನ ಮಾತುಗಳ ಸಾರಾಂಶವೆಂದರೆ ದೇವನೊಬ್ಬನೇ ಎಂಬ ಸಿದ್ಧಾಂತವನ್ನು ಸ್ವೀಕರಿಸಬೇಕು ಎಂಬುದಾಗಿದೆ. ಅವನ ಅಸ್ತಿತ್ವ, ಗುಣ, ಅಧಿಕಾರಸತ್ತೆ ಮತ್ತು ಪ್ರಭುತ್ವವನ್ನು
ಇತರರೊಂದಿಗೆ ಭಾಗಿಧಾರಿಗೊಳಿಸಬಾರದು ಎಂಬುದಾಗಿದೆ. ಅಂತಿಮ ದೇವ ಪ್ರವಾದಿ ಮುಹಮ್ಮದ್(ಸ)ರು ದೇವಾರಾಧನೆಯ ಸಂಪೂರ್ಣ ರೀತಿಯನ್ನು ನಮಗೆ ತೋರಿಸಿದ್ದಾರೆ. ಅವರ(ಸ) ಮೇಲೆ ಅಂತಿಮ ದೇವ ಗ್ರಂಥ ಪವಿತ್ರ ಕುರ್‍ಆನ್ ಅವತೀರ್ಣವಾಯಿತು. ಅದು ಸಂಪೂರ್ಣ ಪರಿಶುದ್ಧವಾಗಿ ಸುರಕ್ಷಿತವಾಗಿದೆ. ಈ ಗ್ರಂಥ ಸಮಸ್ತ ಮಾನವ ಕುಲಕ್ಕೆ ಮಾರ್ಗದರ್ಶಿಯಾಗಿದೆ. ಈ ಪ್ರಾಪಂಚಿಕ ಜೀವನ ಮತ್ತು ಪರಲೋಕ ಜೀವನ ಸಫಲವಾಗಲು ಮತ್ತು ಮುಕ್ತಿ ದೊರಕಲು ಈ ವಾಸ್ತವಿಕತೆಯನ್ನು ಸ್ವೀಕರಿಸಬೇಕಾಗಿದೆ ಮತ್ತು ದೇವನು ತೋರಿಸಿಕೊಟ್ಟ ದಾರಿಯಲ್ಲಿ ನಾವು ನಡೆಯಬೇಕಾಗಿದೆ.

SHARE THIS POST VIA