Home / ವಾರ್ತೆಗಳು / ಮಕ್ಕಾ: ಕುರ್‌ಆನ್ ಸ್ಪರ್ಧೆಯಲ್ಲಿ 117 ರಾಷ್ಟ್ರಗಳು ಭಾಗಿ

ಮಕ್ಕಾ: ಕುರ್‌ಆನ್ ಸ್ಪರ್ಧೆಯಲ್ಲಿ 117 ರಾಷ್ಟ್ರಗಳು ಭಾಗಿ

ಮಕ್ಕಾದಲ್ಲಿ 43ನೇ ಅಂತಾರಾಷ್ಟ್ರೀಯ ಕುರ್‌ಆನ್ ಸ್ಪರ್ಧೆ ಆರಂಭವಾಗಿದೆ. ಭಾರತ ಸೇರಿದಂತೆ 117 ರಾಷ್ಟ್ರಗಳಿಂದ ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಎಂಟು ಕೋಟಿ 90 ಲಕ್ಷ ರೂಪಾಯಿ ಮೊತ್ತದ ಬಹುಮಾನವನ್ನು ಸ್ಪರ್ಧೆಯಲ್ಲಿ ವಿತರಣೆ ಮಾಡಲಾಗುವುದು ಎಂದು ಸೌದಿ ಇಸ್ಲಾಮಿಕ್ ವ್ಯವಹಾರ ಸಚಿವಾಲಯ ತಿಳಿಸಿದೆ.

ಈ ಸ್ಪರ್ಧೆ ಮಸ್ಜಿದುಲ್ ಹರಾಂನಲ್ಲಿ ನಡೆಯುತ್ತಿದೆ. 11 ದಿನಗಳ ಕಾಲ ನಡೆಯುವ ಫೈನಲ್ ರೌಂಡ್ ಸ್ಪರ್ಧೆಯು ಈಗಾಗಲೇ ಆರಂಭವಾಗಿದೆ. ಒಟ್ಟು 166 ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. ಆನ್‌ಲೈನ್ ಮೂಲಕ ನಡೆಸಲಾದ ಸ್ಪರ್ಧೆಯಲ್ಲಿ ಆಯ್ಕೆಯಾದವರನ್ನು ಇದೀಗ ಅಂತಿಮ ರೌಂಡ್‌ಗೆ ಪರಿಗಣಿಸಲಾಗಿದೆ.

ವಿಜೇತ ಸ್ಪರ್ಧಾಳುವಿಗೆ ಒಂದು ಕೋಟಿ ಹತ್ತು ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಬಹುಮಾನವಾಗಿ ನೀಡಲಾಗುವುದು. ದೊರೆ ಸಲ್ಮಾನ್ ಅವರ ಮೇಲ್ನೋಟದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಪವಿತ್ರ ಕುರ್‌ಆನಿನ ಪಾರಾಯಣ, ಕಂಠ ಪಾಠ, ವ್ಯಾಖ್ಯಾನ ಮುಂತಾದ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ.

SHARE THIS POST VIA

About editor

Check Also

ಉತ್ತರಕಾಶಿಯ ಸುರಂಗದಿಂದ 41 ಕಾರ್ಮಿಕರನ್ನು ರಕ್ಷಿಸಿದ ವಕೀಲ್ ಹಸನ್ ರ ಮಾತು ಈಗ ಭಾರೀ ವೈರಲ್

ಉತ್ತರಾಖಂಡದ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಮಂದಿಯನ್ನು ಭೂಮಿಗೆ ಕನ್ನ ಕೊರೆದು ಬದುಕಿಸಿದ ದೆಹಲಿ ಕಾರ್ಮಿಕ ತಂಡದ ನಾಯಕ ವಕೀಲ್ ಹಸನ್ …

Leave a Reply

Your email address will not be published. Required fields are marked *