Home / ಲೇಖನಗಳು / ಏಸುಕ್ರಿಸ್ತರ (ಪ್ರವಾದಿ ಈಸಾ) ಸಂದೇಶ

ಏಸುಕ್ರಿಸ್ತರ (ಪ್ರವಾದಿ ಈಸಾ) ಸಂದೇಶ

ಕ್ರಿಸ್ ಮಸ್ ಸಂದರ್ಭ ನೆನಪಾಗುವ ಮಹಾನ್ ವ್ಯಕ್ತಿತ್ವ ಏಸು ಕ್ರಿಸ್ತರು.(ಪ್ರವಾದಿ ಈಸಾ)

ಏಸು ಕ್ರಿಸ್ತರು ಸತ್ಯವನ್ನು ಹೇಳುತ್ತಿದ್ದ, ಒಳ್ಳೆಯದನ್ನು ಭೋದಿಸುತ್ತಿದ್ದ ಕಾರಣ ಆ ಕಾಲದ ದುರ್ಜನರು ಗಲ್ಲಿಯ ಪುಂಡ ಪೋಕರಿಗಳನ್ನು ಅವರ ಹಿಂದೆ ಬಿಡುತ್ತಿದ್ದರು. ಆ ಮಕ್ಕಳು ಏಸುರವರಿಗೆ ಕೀಟಲೆ ಕೊಡುತ್ತಿದ್ದರು. ಏಸುರವರು ಅವರಿಗೆ ದ್ರಾಕ್ಷಿ ಹಂಚುತ್ತಿದ್ದರು. ದ್ರಾಕ್ಷಿ ಮುಗಿಯುವ ತನಕ ಮಕ್ಕಳು ಕೀಟಲೆ ಕೊಡುತ್ತಿರಲಿಲ್ಲ. ದ್ರಾಕ್ಷಿ ಮುಗಿದಾಗ ಪುನಃ ತೊಂದರೆ ಕೊಡುತ್ತಿದ್ದರು.

ಶಿಷ್ಯರು ಹೇಳಿದರು: ನೀವು ಯಾಕೆ ತೊಂದರೆ ಕೊಡುವವರಿಗೆ ದ್ರಾಕ್ಷಿ ಕೊಡುತ್ತೀರಿ?

ಅದಕ್ಕೆ ಏಸುರವರ ಉತ್ತರ: ಒಂದು ಪಾತ್ರೆಯಲ್ಲಿ ಏನು ತುಂಬಿದೆಯೋ ಅದು ಹೊರಗೆ ಬರುತ್ತದೆ. ನನ್ನಲ್ಲಿ ಒಳಿತು ತುಂಬಿದೆ. ಅದು ಹೊರಗೆ ಬರುತ್ತದೆ. ಅವರಲ್ಲಿ ಕೆಡುಕು ತುಂಬಿದೆ. ಅದು ಹೊರಗೆ ಬರುತ್ತದೆ.

ಒಳ್ಳೆಯದನ್ನು ಮಾಡುವುದು,ಒಳ್ಳೆಯದನ್ನು ಬೋಧಿಸುವುದೇ ಧರ್ಮ (ಸ್ವಾಮಿ ವಿವೇಕಾನಂದ)

ಜನರೇ,” ಅಲ್ಲಾಹನು ನಿಮಗೆ ಸಹಾಯ ಮಾಡದ, ಪ್ರಾರ್ಥನೆ ಸ್ವೀಕರಿಸದ ಅವಸ್ಥೆ ಬರುವುದಕ್ಕಿಂತ ಮುಂಚೆ ಒಳಿತನ್ನು ಭೋದಿಸಿರಿ. ಕೆಡುಕಿನಿಂದ ತಡೆಯಿರಿ.”
“ಧರ್ಮವೆಂದರೆ ಸದುಪದೇಶ”
(ಮುಹಮ್ಮದ್ ಪೈಗಂಬರ್)

ಶಾಂತಿ ಇರಲಿ ಎಲ್ಲ ಪ್ರವಾದಿಗಳ,ಸಜ್ಜನರ ದಾಸರ ಮೇಲೆ.

✍️ ಶಮೀರ ಜಹಾನ್

 

SHARE THIS POST VIA

About editor

Check Also

ಪ್ರವಾದಿಯ(ಸ) ಹಾಸ್ಯ ಮತ್ತು ವರ್ತಮಾನ

✍️ ಅಬೂ ಝೀಶಾನ್ ನೀವು ಪ್ರವಾದಿ(ಸ)ರೊಂದಿಗೆ ಪ್ರಥಮ ಬಾರಿ ಇದ್ದಾಗ ಹಾಗೂ ಅವರು ಏನಾದರೂ ಹಾಸ್ಯ ಮಾಡಿದಾಗ ಇಷ್ಟು ಮಹಾನ್ …

Leave a Reply

Your email address will not be published. Required fields are marked *