✍️ ರೈಹಾನ. ವಿ. ಕೆ ಸಚ್ಚೇರಿಪೇಟೆ
اليوم العالمي للغة العربية
ಪವಿತ್ರ ಕುರ್ ಆನ್ ನಲ್ಲಿ ಸರ್ವಶಕ್ತನು ಅರಬೀ ಭಾಷೆ ಬಗ್ಗೆ 11 ಕಡೆಗಳಲ್ಲಿ ಪರಾಮರ್ಶೆ ಮಾಡಿರುವನು. 6 ಕಡೆಗಳಲ್ಲಿ قرآنا عربيا (ಕುರ್ ಆನ್ ಅರಬೀ ಭಾಷೆಯಲ್ಲಿದೆ) ಎಂದೂ 3 ಕಡೆಗಳಲ್ಲಿ لسانا عربيا (ಅರಬೀ ಭಾಷೆ) ಎಂದೂ 1 ಕಡೆ حكما عربيا ಅರಬೀ ಭಾಷಾ ವಿಧಿಯೆಂದೂ ಪರಾಮರ್ಶೆ ಬಂದಿರುತ್ತದೆ.
“ಅರಬಿ” ಎಂಬ ಶಬ್ದದ ಅರ್ಥ ಸುವ್ಯಕ್ತ ಎಂದಾಗಿದೆ. ವರ್ತಮಾನ ಜಗತ್ತಿನಲ್ಲಿ ಪ್ರತಿಯೊಂದು ವಿಶೇಷಗಳಿಗೂ ದಿನವನ್ನು ಕಲ್ಪಿಸುವ ಕಾಲವಾಗಿರುತ್ತದೆ. ಕೆಲವೊಂದು ನಾಶನಲ್ ಡೇ ಗಳಿಗೆ ಸೀಮಿತವಾದರೆ ಇನ್ನೂ ಕೆಲವು ಅಂತರಾಷ್ಟ್ರೀಯ ಡೇ ಗಳಾಗಿವೆ. ಈ ಡೇಗಳು ಬಂದಾಗೆಲ್ಲಾ ನಮ್ಮ ಜವಾಬ್ದಾರಿಯನ್ನು ನಮಗೆ ನೆನಪಿಸುತ್ತವೆಯಾದರೂ ಈ ಜವಾಬ್ದಾರಿಕೆಗಳು ಕೇವಲ ಆ ದಿನಗಳಿಗೆ ಮಾತ್ರ ಸೀಮಿತವಾಗಿರಬಾರದೆಂಬ ಸತ್ಯವನ್ನೂ ಕೂಡಾ ನಾವು ಮರೆಯಬಾರದು.
ಆದರೆ ಇಂತಹ ಪ್ರತ್ಯೇಕ ಡೇ ಗಳು ಕೆಲವು ವಿಷಯಗಳ ಬಗ್ಗೆ ನೆನಪಿಸಲು ಅನುಕೂಲವಾಗುತ್ತದೆ ಎಂಬ ಸತ್ಯವನ್ನೂ ಕೂಡಾ ನಾವು ಅಲ್ಲಗಳೆಯುವಂತಿಲ್ಲ.
ಈ ಡಿಸೆಂಬರ್ 18 ನ್ನು ವಿಶ್ವ ಅರಬಿಕ್ ಭಾಷಾ ದಿನ world Arabic language day
اليوم العالمي للغة العربية
ಎಂದು ವಿಶೇಷತೆ ನೀಡಿರುವುದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಏಕೆಂದರೆ ವಿಶ್ವಾಸಿ ಎಂಬ ನೆಲೆಯಲ್ಲಿ ವಿಶ್ವಾಸಿಗಳ ಜೀವ ವಾಯು (oxygen) ನಂತಿದೆ ಈ ಅರಬಿಕ್ ಭಾಷೆ. ವಿಶ್ವಾಸಿಗಳು ದೇವನೊಂದಿಗಿರುವ ಸಂಭಾಷಣೆ ಅರ್ಥಾತ್ ನಮಾಝ್, ಕುರ್ ಆನ್ ಪಾರಾಯಣ ದಿಕ್ರ್ ಅರ್ಥಾತ್ ದೇವಸ್ಮರಣೆ ತಸ್ಬೀಹ್ ಕೀರ್ತನೆ ಎಲ್ಲವೂ ಅರಬಿಕ್ ಭಾಷೆಯಲ್ಲಿದೆ. ಆದರೆ ಇದೊಂದು ಕೇವಲ ಅನುಷ್ಠಾನ ಭಾಷೆ ಮಾತ್ರವಾಗಿ ಉಳಿಯಬಾರದು.
• ಹಲವು ಭಾಷೆಗಳಿಗೆ ಧಾರಾಳ ಶಬ್ದಗಳನ್ನು ದಾನ ಮಾಡಿದ ಭಾಷೆ. ಆದ್ದರಿಂದಲೇ ಇದು ಭಾಷೆಗಳ ಮಾತೆಯೂ ಹೌದು . ام اللغات ಆಗಿದೆ.
• ಇದು ಬಲದಿಂದ ಎಡಕ್ಕೆ ಬರೆಯುವ ಭಾಷೆ. ಅಂದರೆ ಹೃದಯವು ಎಡ ಭಾಗದಲ್ಲಿ ಇರುವುದರಿಂದ ಬಲದಿಂದ ಎಡಕ್ಕೆ ಹೃದಯಕ್ಕೆ ನೀಡುವ ಭಾಷೆಯಾದ್ದರಿಂದ ಇದನ್ನು ಹೃದಯದ ಭಾಷೆ ಎಂದೂ ಕೂಡಾ ವಿಶ್ಲೇಷಿಸಲಾಗಿದೆ.
• ಆಧುನಿಕ ಯುಗದಲ್ಲಿ ಜೀವಂತವಿರುವ ಪ್ರಾಚೀನವಾದ ಒಂದು ಸೆಮಿಟಿಕ್ ಭಾಷೆಯೂ ಹೌದು.
• ಇದು 26 ದೇಶಗಳ ಔದ್ಯೋಗಿಕ ಭಾಷೆ.
• 23 ಕೋಟಿ ಮನುಷ್ಯರ ಆಡು ಭಾಷೆ.
• ವಿಶ್ವ ಇಸ್ಲಾಮೀ ಸಮೂಹದ ಧಾರ್ಮಿಕ ಭಾಷೆ.
• ವಿಶ್ವ ಭಾಷೆ ಎಂಬ ಅಂಗೀಕಾರವನ್ನು ಪಡೆದ 6 ಭಾಷೆಗಳಲ್ಲಿ ಒಂದು.
• ಟೆನಸ್ಕೂ, ಆಫ್ರಿಕನ್ ಯೂನಿಯನ್ ಹೀಗೆ ಬೃಹತ್ ಸಂಘ ಸಂಸ್ಥೆಗಳ ಅಂಗೀಕಾರವೂ ಈ ಭಾಷೆಗೆ ಇದೆ.
• ವಿಶ್ವದ ಎಲ್ಲಾ ಕಡೆ ಈ ಭಾಷೆಯನ್ನು ಆಡುವವರು ಇದ್ದಾರೆ.
• ಆಶಯ ಸಂವಹನ ಎಂಬ ನೆಲೆಯಲ್ಲಿ ಅತೀ ಹೆಚ್ಚು ವಿಖ್ಯಾತವಾಗಿದೆ ಅರಬಿಕ್ ಭಾಷೆ.
• ಇಂದು IT ರಂಗದಲ್ಲಿ Microsoft ಇದರ ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ ಅರಬಿಕ್ ಪ್ರತಿಗಳು ಈಗಾಗಲೇ ಹೊರ ಬಂದಿರುತ್ತದೆ.
• ಜ್ಞಾನ ಸಾಗರವಾದ wickipidea, Youtube ನಲ್ಲಿ ಕೂಡಾ ಅರಬಿಕ್ ಪ್ರತಿಗಳು ಅತೀ ಸುಂದರವಾಗಿ ಆವಿಷ್ಕರಿಸಲಾಗಿದೆ.
• UN ಒಳಗೊಂಡಂತೆ ಅಂತರರಾಷ್ಟ್ರೀಯ website ಗಳಲ್ಲಿ ಅರಬಿಕ್ ಪ್ರತಿಗಳು ಇರುವುದನ್ನು ನಾವು ಕಾಣಬಹುದು. BBC CNN ಮುಂತಾದ INTERNATIONAL Channel ಗಳಿಗೂ ಅರಬಿಕ್ ಪ್ರಸಾರ ವಿಭಾಗಗಳು ಇವೆ. ವಿಶ್ವದಲ್ಲಿ ಒಂದು ದೊಡ್ಡ ಮೊತ್ತದ ಜನರ ಮಾತೃ ಭಾಷೆ ಹಾಗೂ ವಾಣಿಜ್ಯ ರಂಗದಲ್ಲಿ ಅತೀ ಹೆಚ್ಚು ಊಪಯೋಗಿಸಲಾಗುತ್ತಿರುವ ಭಾಷೆಯಾಗಿ ಅರಬಿಕ್ ಭಾಷೆ ಹೆಮ್ಮೆಯನ್ನು ಪಡೆದಿದೆ.
• ಅರಬಿಯ್ಯುನ್ (عربي) ಎಂಬ ಪದದ ಅರ್ಥ ಸುವ್ಯಕ್ತ ಎಂದಾಗಿದೆ. ಈ ಭಾಷೆಯಲ್ಲಿ ಯಾವುದೇ ಅಸ್ಪಷ್ಟತೆಗಳಿಲ್ಲ. ಮತ್ತು ಪ್ರತಿಯೊಂದು ಪದಕ್ಕೂ ಅದರದ್ದೇ ಆದ ವಿಶಾಲಾರ್ಥವಿದೆ ಎಂಬುದೇ ಇದರ ವೈಶಿಷ್ಟ್ಯ. ಕೆಲವೊಮ್ಮೆ ಇದರ ಭಾಷಾಂತರ ಇತರ ಭಾಷೆಗಳಲ್ಲಿ ಕಷ್ಟಕರವೆನಿಸಿದ್ದೂ ಇದೆ. ಸುವ್ಯಕ್ತವಾದ ಶುದ್ಧ ಭಾಷಾ ಶೈಲಿ ಇದರದ್ದು.
• ಇತರ ಭಾಷೆಗಳನ್ನು ಗಮನಿಸಿದಾಗ ಕಾಲಾಂತರಗಳಲ್ಲಿ ಅದರ ಶಬ್ದಗಳು, ಅದರ ರಚನೆಗಳು ಬದಲಾಗುವುದನ್ನು ನಾವು ಕಾಣಬಹುದು. ಆದುದರಿಂದಲೇ ದೊಡ್ಡ ದೊಡ್ಡ ಕ್ಲಾಸಿಕ್ ಗ್ರಂಥಗಳ ವಾಚನವೇ ಕಷ್ಟಕರವೆನಿಸುವುದಿದೆ. ಕನ್ನಡ ಭಾಷೆಯಲ್ಲೂ ಕೂಡಾ ಹಳೆಗನ್ನಡವಿದೆ. ಸಹಜವಾಗಿ ಪ್ರತಿ ನೂರು ವರ್ಷಗಳು ಕಳೆದಾಗ ಭಾಷೆಗಳು ಪ್ರಾಚೀನವಾಗುತ್ತವೆ.
• ಆದರೆ ಹದಿನಾಲ್ಕು ಸಾವಿರ ವರ್ಷ ಕಳೆದರೂ ಕುರ್ ಆನಿನ ಅರಬಿಕ್ ಭಾಷೆಗೂ ಇವತ್ತಿನ ಅರಬಿಕ್ ಭಾಷೆಗೂ ಯಾವುದೇ ವ್ಯತ್ಯಾಸವಿಲ್ಲ. ಕುರ್ ಆನ್ ನಿನ ಭಾಷೆ ಕುರ್ ಆನ್ ನಂತೆ ಜೀವಂತವಾಗಿದೆ.
• ಇತರ ವೇದಗ್ರಂಥಗಳನ್ನು ಗಮನಿಸಿದರೆ; ಸಂಸ್ಕೃತ ವಿರಲಿ, ಹೀಬ್ರೂ ಸುರ್ಯಾನಿ ಎಂಬಿತ್ಯಾದಿ ವೇದ ಭಾಷೆಗಳು ಇಂದು ನೇಪಥ್ಯಕ್ಕೆ ಸೇರಿದ ಭಾಷೆಗಳ ಸಾಲಿಗೆ ಸೇರಿವೆ. ಯಾಕೆಂದರೆ ಜೀವನದೊಂದಿಗೆ ಈ ಭಾಷೆಗಳಿಗೆ ನೇರವಾದ ಯಾವುದೇ ಸಂಭಂಧವಿಲ್ಲ. ಕೇವಲ ಆಚಾರ ಅನುಷ್ಠಾನಗಳಲ್ಲಿ ಮಾತ್ರ ಇರಲೂ ಬಹುದು.
• ಆದರೆ ಅರಬಿಕ್ ಭಾಷೆ ಲೋಕದಲ್ಲಿ ಇಂದೂ ಜೀವಂತವಾಗಿದೆ.