ಮಕ್ಕಾದ ಮಸ್ಜಿದ್ ಹರಾಮ್ ಗೆ ಜೋಡಿಸಲಾಗಿರುವ ಎಸಿ ವ್ಯವಸ್ಥೆಯು ಜಗತ್ತಿನಲ್ಲಿ ಅತ್ಯಂತ ದೊಡ್ಡದೆಂದು ಗುರುತಿಸಲಾಗಿದೆ. 1,55,000 ಟನ್ ಸಾಮರ್ಥ್ಯದ ಈ ಎಸಿ ವ್ಯವಸ್ಥೆ ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯವಾಗಿದೆ.
ಹರಮ್ ನ ಎರಡು ಸ್ಥಳಗಳಲ್ಲಿ ಈ ಎಸಿ ವ್ಯವಸ್ಥೆ ಮಾಡಲಾಗಿದೆ. ಶಾಮಿಯ ಮತ್ತು ಅಜಿಯಾದ್ ಎಂಬ ಸ್ಥಳಗಳಲ್ಲಿ ಈ ಎಸಿಯನ್ನು ವ್ಯವಸ್ಥೆ ಗೊಳಿಸಲಾಗಿದೆ. ಈ ಮೂಲಕ 1,55,000 ಟನ್ ಸಾಮರ್ಥ್ಯದ ಏಸಿ ಕಾರ್ಯಪ್ರವೃತ್ತವಾಗಿದೆ. ಹರಮ್ ನಿಂದ ಬೇರೆ ಬೇರೆ ದೂರಗಳಲ್ಲಿ ಇದನ್ನು ವ್ಯವಸ್ಥೆಗೊಳಿಸಲಾಗಿದೆ.
ಪ್ರತಿದಿನ 9 ಬಾರಿ ಅಲ್ಟ್ರಾ ವೈಲೆಟ್ ಕಿರಣಗಳನ್ನು ಉಪಯೋಗಿಸಿ ಅಣು ಮುಕ್ತಗೊಳಿಸಿದ ಬಳಿಕ ತಂಪು ಗಾಳಿ ಹರಂಗೆ ತಲುಪುತ್ತದೆ. ಹರಂಗೆ ಭೇಟಿ ಕೊಡುವವರ ಸಂಖ್ಯೆಯನ್ನು ಪರಿಗಣಿಸಿ ತಂಪು ಗಾಳಿಯನ್ನು ಹೆಚ್ಚು ಅಥವಾ ಕಡಿಮೆಗೊಳಿಸಲಾಗುತ್ತದೆ. ಈ ವ್ಯವಸ್ಥೆಯು ಹರಮ್ ನ ಒಳಗೆ ಅತ್ಯಂತ ಸಮತೋಲಿತ ವಾತಾವರಣವನ್ನು ಉಂಟು ಮಾಡುತ್ತದೆ.