Home / ವಾರ್ತೆಗಳು (page 10)

ವಾರ್ತೆಗಳು

ಶಹಾದತ್ ಕಲಿಮ ಹೇಳಿಕೊಟ್ಟ ಡಾ.ರೇಖಾ ಕೃಷ್ಣನ್; ಶೇಮ ಯಿಸರಾಯೇಲ್ ಹೇಳಿಕೊಟ್ಟ ಫೆಲಸ್ತೀನಿನ ಇಬ್ರಾಹೀಂ ಮಾಹಿರ್: ಕೊರೋನ ಸಾವಿನ ಕೊನೆಯ ಕ್ಷಣಗಳು

ಪರಧರ್ಮ ದ್ವೇಷ ತಾರಕಕ್ಕೇರಿರುವ ಈ ಕಾಲದಲ್ಲ ಮನುಷ್ಯ ಎಷ್ಟು ಅಸಹಾಯಕ ಎನ್ನುವುದನ್ನು ಕೊರೋನ ಮಹಾರೋಗ ತೋರಿಸಿಕೊಟ್ಟಿದೆ. ಯಾರೂ ಪರಿಚಾರಕರಿಲ್ಲದೇ ಅಂತರ ಕಾಯ್ದುಕೊಳ್ಳುವ ಅಸಹಾಯಕ ಸನ್ನಿವೇಶಗಳಿವೆ. ರೋಗದಲ್ಲಿ ಸಾವು ಕೂಡ ವೇದನಾಜನಕ. ಎಲ್ಲ ಸಾವುಗಳು ನೋವು ತರುವುದೇ ಆದರೂ ಕೊರೋನ ಪೀಡಿತರ ಸಾವು ಅವರ ಕೊನೆಯ ಕ್ಷಣಗಳು ಎಂತಹ ನೋವಿನದ್ದೆಂದು ನಮಗೆ ಗೊತ್ತಿಲ್ಲ. ಸಂಬಂಧಿಕರು ಹತ್ತಿರವಿಲ್ಲದೆ ವೆಂಟಿಲೇಟರ್ ಕೋಣೆಯ ಶೀತ ವಾತಾವರಣದಲ್ಲಿ ಮಲಗಿ ಅವರು ಇಹಲೋಕ ತ್ಯಜಿಸುತ್ತಾರೆ. ಧಾರ್ಮಿಕ ಕೊನೆಯ ಕರ್ಮಗಳು …

Read More »

ಜಮ್ಮುಕಾಶ್ಮೀರದಲ್ಲಿನ ಕರ್ತವ್ಯದ ವೇಳೆ ರಮಝಾನ್‌ ಉಪವಾಸ ಕೈಗೊಂಡ ಅನುಭವ ಹಂಚಿಕೊಂಡ ಸೇನಾಧಿಕಾರಿ ಮೇ.ಜ. ಯಶ್‌ ಮೋರ್

“ಪ್ರಥಮ ಉಪವಾಸ ಕೈಗೊಂಡ ದಿನದ ಅನುಭೂತಿ ಮರೆಯಲು ಯಾವತ್ತೂ ಸಾಧ್ಯವಿಲ್ಲ” ಜಮ್ಮು ಕಾಶ್ಮೀರದಲ್ಲಿ ನೇಮಕವಾದ ಬಳಿಕ ತನ್ನ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸಿತು? ಉಪವಾಸ ವೃತ ಕೈಗೊಂಡ ಕುರಿತಾದಂತೆ ತನ್ನ ಅನುಭವಗಳನ್ನು ಭಾರತೀಯ ಸೇನೆಯ ಮೇಜರ್‌ ಜನರಲ್‌ ಆಗಿದ್ದ ಡಾ. ಯಶ್‌ ಮೋರ್‌ ರವರು scroll.in ನಲ್ಲಿ ಹಂಚಿಕೊಂಡಿದ್ದಾರೆ. “ಭಾರತೀಯ ಸೇನೆಯು 2001ರಲ್ಲಿ ನನ್ನನ್ನು ಕಾಶ್ಮೀರದಲ್ಲಿ ನೇಮಕಾತಿ ಮಾಡಿದ್ದು ನನ್ನ ಜೀವನವನ್ನೇ ಬದಲಾಯಿಸಿತು. ಅದಕ್ಕೂ ಮೊದಲು ನನ್ನ 17 …

Read More »

ಅಫ್ಘಾನ್ ಆಟಗಾರರೊಂದಿಗೆ ರಮಝಾನ್ ಉಪವಾಸ ಆಚರಿಸಿದ ವಾರ್ನರ್, ಕೇನ್ ವಿಲಿಯಮ್ಸನ್

ಹೊಸದಿಲ್ಲಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಅವರು ತಮ್ಮ ತಂಡದ ಸಹ  ಆಟಗಾರರಾದ ಅಫ್ಗಾನಿಸ್ತಾನದ ರಶೀದ್ ಖಾನ್, ಮುಹಮ್ಮದ್ ನಬಿ ಹಾಗೂ ಮುಜೀಬುರ್ರಹ್ಮಾನ್ ಜತೆಗೂಡಿ ತಮ್ಮ ಮೊದಲ ರಮಝಾನ್ ಉಪವಾಸ ಆಚರಿಸಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ರಶೀದ್ ಖಾನ್, ವಾರ್ನರ್ ಹಾಗೂ ವಿಲಿಯಮ್ಸನ್ ಅವರು ತಮ್ಮೊಂದಿಗೆ ಹೇಗೆ ಉಪವಾಸ ಆಚರಿಸಿದ್ದಾರೆಂದು ವಿವರಿಸಿದ್ದಾರೆ. ಉಪವಾಸದ ಅನುಭವ ಹೇಗಿತ್ತು ಎಂದು ರಶೀದ್ ಖಾನ್ …

Read More »

“ಜೈಲಿನಲ್ಲಿ ನನಗೆ ಕುರ್‌ ಆನ್‌ ಕೊಡುತ್ತಿಲ್ಲ”: ಅಲೆಕ್ಸಿ ನವಾಲ್ನಿ ಆರೋಪ; ಜೈಲಿನ ವಿರುದ್ಧವೇ ಕಾನೂನು ಹೋರಾಟಕ್ಕೆ ಸಿದ್ಧರಾದ ರಷ್ಯಾ ವಿಪಕ್ಷ ನಾಯಕ

ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಸದ್ಯ ಜೈಲಿನಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದು, ಈ ನಡುವೆ ಜೈಲಿನ ವಿರುದ್ಧವೇ ಕಾನೂನು ಹೋರಾಟ ನಡೆಸುವುದಾಗಿ ತಮ್ಮ ಸಾಮಾಜಿಕ ತಾಣದ ಖಾತೆಯಲ್ಲಿ ತಿಳಿಸಿದ್ದಾರೆ. ಶಿಕ್ಷೆಯ ಸಂದರ್ಭದಲ್ಲಿ ಅವರು ಮುಸ್ಲಿಮರ ಪವಿತ್ರ ಗ್ರಂಥ ಕುರ್‌ ಆನ್‌ ಅನ್ನು ಅಭ್ಯಸಿಸಲು ಮುಂದಾಗಿದ್ದು, ಆದರೆ ಜೈಲಿನ ಅಧಿಕಾರಿಗಳು ಕುರ್‌ ಆನ್‌ ನೀಡದೇ ತಡೆಹಿಡಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರು ತಮ್ಮ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ… …

Read More »

ನೀರಿಗಾಗಿ ಹಪಹಪಿಸುತ್ತಿದ್ದ ಜನರಿಗೆ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಬೋರ್ ವೆಲ್ ನಿರ್ಮಾಣ

ಬಂಟ್ವಾಳ ತಾಲೂಕಿನ ಕೊಲ್ನಾಡ್‌ ಗ್ರಾಮದ ಸೆರ್ಕಳ ಎಂಬಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ, ಸಮಾಜ ಸೇವಾ ಘಟಕದ ವತಿಯಿಂದ ಕೊಳವೆ ಬಾವಿಯೊಂದನ್ನು[Bore well] ದಾನಿಗಳ ಸಹಾಯದಿಂದ ತೋಡಿಸಿ, ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಅನುಪಮ ಮಹಿಳಾ ಮಾಸಿಕದ ವ್ಯವಸ್ಥಾಪಕರಾದ ಮುಹಮ್ಮದ್ ಮುಹ್ಸಿನ್‌ ಉದ್ಘಾಟಿಸಿ ಸಂದರ್ಭೋಚಿತ ಹಿತನುಡಿಗಳನ್ನಾಡಿದರು. ಇದರ ಪ್ರಯೋಜನವನ್ನು ಪಡೆಯುವ ಪರಿಸರದವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮುಹಮ್ಮದ್ ಕಲ್ಲಡ್ಕ, ಶಂಶೀರ್‌ ಮೆಲ್ಕಾರ್‌, ಅಬುಸ್ವಾಲಿ ಬಂಟ್ವಾಳ,ಸಿದ್ದೀಕ್ ಜಕ್ರಿಬೆಟ್ಟು ಉಪಸ್ಥಿತರಿದ್ದರು.

Read More »

ಸಿಮಿಯ 20 ವರ್ಷದ ಹಳೆಯ ಪ್ರಕರಣದಲ್ಲಿ 127 ಮುಸ್ಲಿಮರನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ

ಅಹಮದಾಬಾದ್: ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಯ ಸದಸ್ಯರಾಗಿದ್ದು ಆ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪ ಎದುರಿಸುತ್ತಿರುವ 127 ಜನರಿಗೆ ಸೂರತ್ ನ್ಯಾಯಾಲಯ ಶನಿವಾರ ಪರಿಹಾರ ನೀಡಿದೆ. 20 ವರ್ಷಗಳ ನಂತರ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ದೋಷ ಮುಕ್ತಗೊಳಿಸಿದೆ. ಎಲ್ಲರನ್ನೂ ಖುಲಾಸೆಗೊಳಿಸಿದ ನ್ಯಾಯಾಲಯವು, ಸಿಮಿಯೊಂದಿಗೆ ಭಾಗಿಯಾಗಿರುವುದಕ್ಕೆ ಯಾವುದೇ ಪುರಾವೆಗಳನ್ನು ಪ್ರಾಸಿಕ್ಯೂಷನ್ ಮಂಡಿಸಿಲ್ಲ. ಆದ್ದರಿಂದ ಆರೋಪಿಗಳನ್ನು ಅಪರಾಧಿಗಳು ಎಂದು ಹೇಳಲಾಗುವುದಿಲ್ಲ ಎಂದು ಹೇಳಿದೆ. 28 ಡಿಸೆಂಬರ್ …

Read More »

ಆಯೆಷಾ ಆತ್ಮಹತ್ಯೆ ; ವರದಕ್ಷಿಣೆಯ ಕುರಿತ ಮುಸ್ಲಿಮರ ಸಾಮೂಹಿಕ ನಿರ್ಲಕ್ಷ್ಯದ ಮೇಲೆ ಪ್ರಶ್ನೆ ಉದ್ಭವಿಸಿದೆ

ಅಹಮದಾಬಾದ್ / ಭೋಪಾಲ್ – ಫೆಬ್ರವರಿ 25 ರಂದು ಅಹಮದಾಬಾದ್ನಲ್ಲಿ ಯುವ, ವಿದ್ಯಾವಂತ, ಮುಸ್ಲಿಂ ಮಹಿಳೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದು, ಪ್ರಬಲ ಅಲ್ಪಸಂಖ್ಯಾತ ಸಮುದಾಯದಲ್ಲಿ ಆಘಾತ ತರಂಗಗಳನ್ನು ಸೃಷ್ಟಿಸಿದೆ. ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಪೊಲೀಸರು ಪರಾರಿಯಾಗಿದ್ದ ಗಂಡನನ್ನು ನೆರೆಯ ರಾಜಸ್ಥಾನದ ಪಾಲಿ ಪಟ್ಟಣದಿಂದ ತನಿಖೆಗಾಗಿ ಅವರನ್ನು ನಗರಕ್ಕೆ ಕರೆ ತಂದಿದ್ದಾರೆ. ಜುಲೈ 2018 ರಲ್ಲಿ ರಾಜಸ್ಥಾನದ ಜಲೋರ್ ಪಟ್ಟಣದಲ್ಲಿ ವಾಸಿಸುತ್ತಿದ್ದ ಆರಿಫ್ ಖಾನ್ ಅವರನ್ನು …

Read More »

ದೆಹಲಿ ದಂಗೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುತ್ತಿರುವ ಜಮಾತೆ ಇಸ್ಲಾಮಿ ಹಿಂದ್ ; ಸಚ್‌ದೇವ್ ಮತ್ತು ಸತ್ಪಾಲ್ ಸಿಂಗ್ ಮಾತು ಕೇಳಿ

ನವದೆಹಲಿ: ಈಶಾನ್ಯ ದೆಹಲಿಯ ಮೂಂಗಾ ನಗರ ಪ್ರದೇಶದ ಮುಖ್ಯ ರಸ್ತೆಯಲ್ಲಿರುವ ಪೀಠೋಪಕರಣಗಳ ಅಂಗಡಿಯನ್ನು 2020 ರ ಫೆಬ್ರವರಿ 24 ರಂದು ಉದ್ರಿಕ್ತ ಜನರ ಗುಂಪು ಬೆಂಕಿ ಕೊಟ್ಟು ಸುಟ್ಟು ಬಿಟ್ಟಿತ್ತು. ಇದರಿಂದಾಗಿ 34 ವರ್ಷದ ಗುಂಜನ್ ಸಚ್‌ದೇವ ತನ್ನೆಲ್ಲ ಸಂಪಾದನೆಯನ್ನು ಕಳೆದುಕೊಂಡಿದ್ದರು. ಅಂದಾಜು 25 ಲಕ್ಷ ರೂ. ಅವರಿಗೆ ಇದರಿಂದ ನಷ್ಟ ಸಂಭವಿಸಿತ್ತು. ಅವರು ದೆಹಲಿ ಸರ್ಕಾರದಿಂದ ಪಡೆದ 3 ಲಕ್ಷ ರೂ. ನಿಂದ ಅಂಗಡಿಯನ್ನು ರಿಪೇರಿ ಮಾಡಿದರೂ ಮತ್ತೆ …

Read More »

‘ಮಾನವ ಸಮಸ್ಯೆಗಳ ಸುಳಿಯಲ್ಲಿ’ ಕೃತಿ ಪರಿಚಯ

ಮಾನವ ಅಸ್ತಿತ್ವಕ್ಕೆ ಬಂದು ಸುಮಾರು 5 ಲಕ್ಷ ವರ್ಷಗಳಾದುವು ಎಂದು ಹೇಳಲಾಗುತ್ತದೆ. ಜಗತ್ತನ್ನು ಜಯಿಸುವ ಮಾನವನ ಶ್ರಮ ಅವಿರತವಾಗಿಯೇ ಇದೆ. ಆತ ಶಿಕ್ಷಣ, ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ಅಪೂರ್ವ ಪ್ರಗತಿಯನ್ನು ಸಾಧಿಸುವುದರ ಜೊತೆಗೆ ಆಧುನಿಕ ಆವಿಷ್ಕಾರಗಳ ಉತ್ತುಂಗಕ್ಕೂ ತಲುಪಿದ್ದಾನೆ. ಆದರೆ ಇದ್ಯಾವುದೂ ಮನುಷ್ಯನ ಸಂತೃಪ್ತ ಬದುಕಿಗೆ ಮತ್ತು ಆತನ ನೆಮ್ಮದಿಯ ನಾಳೆಗಳಿಗೆ ಪರಿಹಾರವೆಂದು ಗುರುತಿಸಲ್ಪಟ್ಟಿಲ್ಲ. ಜಗತ್ತು ಇಂದು ಏನೆಲ್ಲಾ ಪ್ರಗತಿ ಸಾಧಿಸಿದೆಯೋ, ಮನುಷ್ಯ ಕೂಡ ಅಷ್ಟೇ ಅದರ ಸುಳಿಯಲ್ಲಿ ಬಂದಿಯಾಗಿದ್ದಾನೆ. …

Read More »

ಛತ್ರಪತಿ ಶಿವಾಜಿಗೆ ಗೌರವ ಸಲ್ಲಿಸಿದ ಅಸಾದುದ್ದೀನ್ ಓವೈಸಿ ; ವಿಡಿಯೋ ನೋಡಿ

ಹೈದರಾಬಾದ್: ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮ ದಿನಾಚರಣೆಗೆ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂ) ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದರಾದ ಅಸಾಸುದ್ದೀನ್ ಓವೈಸಿ ಗೌರವ ಸಲ್ಲಿಸಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ, 17 ನೇ ಶತಮಾನದ ಮರಾಠ ರಾಜ ಬೆಳ್ಳಿಯ ಚಮಚದೊಂದಿಗೆ ಜನಿಸಿಲ್ಲ. ಅವರು ತನ್ನ ಆಳ್ವಿಕೆಯ ಉದ್ದಕ್ಕೂ ಅವನು ದುರ್ಬಲರ ಪರವಾಗಿದ್ದರು. “ದೌಲತ್ ಖಾನ್ ಶಿವಾಜಿ ಆಳ್ವಿಕೆಯಲ್ಲಿ ನೌಕಾಪಡೆಯ ಒಂದು ಭಾಗದ ಉಸ್ತುವಾರಿಯಾಗಿದ್ದರು. ಶಿವಾಜಿಯನ್ನು ಬೆಂಬಲಿಸಿ ಹೋರಾಡಿದವರು ಸಿದ್ಧಿ …

Read More »