ಮುಝಪ್ಫರ್ ನಗರ,ನ.26: ಉತ್ತರ ಪ್ರದೇಶದ ಮುಝಪ್ಫರ್ ನಗರದಲ್ಲಿ ಸಿಖ್ ವ್ಯಕ್ತಿಯೊಬ್ಬರು ಧಾರ್ಮಿಕ ಸೌಹಾರ್ದವನ್ನು ಮೆರೆದಿದ್ದಾರೆ. ಗುರುನಾನಕರ 550ನೇ ಜಯಂತಿ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸುಖ್‍ಪಾಲ್ ಸೀಂಗ್ ಬೇಡಿ ಮಸೀದಿಯೊಂದಕ್ಕೆ ಜಮೀನು ನೀಡುವುದಾಗಿ ಘೋಷಿಸಿದರು. ಮುಝಪ್ಫರ್ ನಗರ ಜಿಲ್ಲೆಯ ಪುರಕಾಜಿ ನಗರದಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ತನ್ನ ನಿರ್ಧಾರವನ್ನು ತಿಳಿಸಿದ್ದಾರೆ. ಅವರು ನಗರ ಪಂಚಾಯತ್ ಅಧ್ಯಕ್ಷ ಝಹೀರ್ ಫಾರೂಕಿಯವರ ಕೈಯಲ್ಲಿ 900 ವರ್ಗ ಫೀಟ್ ಪ್ಲಾಟಿನ ದಾಖಲೆಗಳನ್ನು ನೀಡಿದರು. ಪುರ್‍ಕಾಜಿ ನಗರದಲ್ಲಿ ಮುಸ್ಲಿಮರು …
Read More »12 ವರ್ಷದ ಫೆಲೆಸ್ತೀನ್ ಬಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಸುತ್ತಾಡಿಸಿದ ಇಸ್ರೇಲಿನ ಸೇನೆ
ಜೆರುಸಲೇಂ, ನ.25: ಇಸ್ರೇಲಿನ ಸೈನ್ಯ ಫೆಲಸ್ತೀನಿ ಬಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಸುತ್ತಾಡಿಸಿ ಕ್ರೌರ್ಯ ಮೆರೆದಿದೆ. ಇಸ್ರೇಲಿನ ಸೈನಿಕರಲ್ಲಿ ಮಕ್ಕಳ ಕುರಿತು ಕೂಡ ಕರುಣೆಯಿಲ್ಲ. ವೆಸ್ಟ್ ಬ್ಯಾಂಕ್‍ನ ಸಮೀಪದ ಅಬೂಜಲ್ಸ್‍ನಿಂದ 12 ವರ್ಷದ ಅಬ್ದುರ್ರಝಾಕ್ ಇದ್ರಿಸ್‍ನನ್ನು ಇಸ್ರೇಲ್ ಸೈನಿಕರು ವಶಕ್ಕೆ ಪಡೆದು ಅವನ ಕಣ್ಣಿಗೆ ಬಟ್ಟೆ ಕಟ್ಟಿದರು. ಹೆಬ್ರಾನ್ ನಗರಾದ್ಯಂತ ನಡೆಸಿದರು. ಅವನ ಸುತ್ತಮುತ್ತ ಆರು ಸೈನಿಕರಿದ್ದರು. ನಡೆದಾಡುತ್ತಿರುವ ದಾರಿಯಲ್ಲಿ ವಿರೋಧಿಸಿದ ಫೆಲಸ್ತೀನಿಗಳ ಮೇಲೆ ಸೈನಿಕರು ಗ್ರೆನೇಡ್‍ಗಳನ್ನು ಎಸೆಯುತ್ತಿರುವುದು ಕೂಡ …
Read More »ಬೈತುಲ್ ಮುಕದ್ದಿಸ್ ಎಂದೂ ಫೆಲಸ್ತೀನ್‍ನ ರಾಜಧಾನಿ: ಮುಹಮ್ಮದ್ ಅಬ್ಬಾಸ್
ವೆಸ್ಟ್ ಬ್ಯಾಂಕ್, ನ.25: ಅಮೆರಿಕ ಇಸ್ರೇಲ್ ಅತಿಕ್ರಮಣ ನಡೆಸಿರುವ ಸ್ಥಳದಲ್ಲಿ ಕಾಲನಿ ಕಟ್ಟುವುದನ್ನು ಬೆಂಬಲಿಸಿದ್ದು ಫೆಲಸ್ತೀನ್ ಅಧ್ಯಕ್ಷ ಅದನ್ನು ವಿರೋಧಿಸಿದ್ದಾರೆ. ಫೆಲಸ್ತೀನ್ ರಾಜಧಾನಿ ಬೈತುಲ್ ಮುಕದ್ದಿಸ್ ಆಗಿತ್ತು. ಇನ್ನೂ ಅದುವೇ ರಾಜಧಾನಿಯಾಗಿರಲಿದೆ ಎಂದು ಅಮೆರಿಕಕ್ಕೆ ಖಾರವಾಗಿ ತಿಳಿಸಿದ್ದಾರೆ. ಅಮೆರಿಕ ಏನನ್ನೇ ಹೇಳಲಿ ನಾವು ಅದನ್ನು ಒಪ್ಪಲಾರೆವು ಎಂದರು. ಕಳೆದ ಸೋಮವಾರ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪೊಂಪಿಯೊ ಇಸ್ರೇಲ್ ಕಾಲನಿ ನಿರ್ಮಿಸುವ ಕುರಿತ ಒಬಾಮ ಸರಕಾರದ ನೀತಿಯನ್ನು ನಾವು ಬದಲಿಸಿದ್ದೇವೆ …
Read More »ಮುಸ್ಲಿಮ್ ಸಂಸ್ಕ್ರತ ಪ್ರೊಫೆಸರನ್ನು ಬೆಂಬಲಿಸಿದ ಮಾಯಾವತಿ
ಲಕ್ನೊ, ನ.22: ಉತ್ತರ ಪ್ರದೇಶದ ಬನಾರಸ್ ವಿಶ್ವವಿದ್ಯಾನಿಲಯದ ಸಂಸ್ಕ್ರತ ಪ್ರೊಫೆಸರ್ ಫಿರೋಝ್ ಖಾನ್ ರ ನೇಮಕವನ್ನು ಬಿಎಸ್ಪಿ ಸುಪ್ರಿಮೊ ಮಾಯಾವತಿ ಬೆಂಬಲಿಸಿದ್ದಾರೆ. ಸರಕಾರದ ದ್ವಂದ್ವವೇ ಅನಗತ್ಯ ಗೊಂದಲಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಉಚಿತವಲ್ಲ. ಬನಾರಸ್ ಹಿಂದೂ ಯುನಿವರ್ಸಿಟಿಯ ಪಿಎಚ್‍ಡಿ ಸ್ಕಾಲರ್ ಫಿರೋಝ್ ಖಾನ್‍ರ ಕುರಿತ ವಿವಾದ ಸುಮ್ಮನೆ ಸೃಷ್ಟಿಸಲಾಗಿದೆ. ಕೆಲವರು ಶಿಕ್ಷಣವನ್ನು ಧರ್ಮ ಜಾತಿಯ ಅತಿ ರಾಜಕೀಯಕ್ಕೆ ಪೋಣಿಸಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಹಿಂದೂ ಯುನಿವರ್ಸಿಟಿಯು ಮುಸ್ಲಿಮ್ …
Read More »ಮಸೀದಿಗಳ ಧ್ವನಿ ವರ್ಧಕ ನಿಯಂತ್ರಿಸುವುದು ಉತ್ತಮ: ಸಮಸ್ತ ಅಧ್ಯಕ್ಷ
ಕೋಝಿಕ್ಕೋಡ್, ನ.21: ಮಸೀದಿಗಳ ಧ್ವನಿ ವರ್ಧಕವನ್ನು ಮಸೀದಿಯೊಳಗೆ ನಿಯಂತ್ರಿಸಿಡುವುದು ಉತ್ತಮ ಎಂದು ಸಮಸ್ತ ಅಧ್ಯಕ್ಷ ಮುಹಮ್ಮದ್ ಜೀಫ್ರಿ ತಂಙಳ್ ಹೇಳಿದರು. ಅದನ್ನು ಅದಾನ್ ಮತ್ತು ಕಡ್ಡಾಯವಾಗಿ ಕೇಳಿಸಬೇಕಾಗಿರುವುದಕ್ಕೆ ಮಾತ್ರ ಉಪಯೋಗಿಸುವುದು ಉತ್ತಮ, ಇತರರಿಗೆ ಕಷ್ಟ ಇದ್ದರೆ ಧ್ವನಿ ಕಡಿಮೆ ಮಾಡಿ ಮಸೀದಿಯೊಳಗೆ ಮಾತ್ರ ಮಿತಗೊಳಿಸಬೇಕು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಅದಾನಿಗೆ ಮಾತ್ರ ಅಲ್ಲ ಬೇರೆ ವಿಷಯಕ್ಕೂ ಬಳಸಲಾಗುತ್ತಿದೆ. ಆದರೆ ಅದು ಮುಖ್ಯವಾಗಿರುವುದು ಅದಾನ್‍ಗೆ …
Read More »ಸುನ್ನಿ ವಕ್ಫ್ ಮಂಡಳಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ
ಲಕ್ನೊ,ನ.21: ಸುನ್ನಿ ವಕ್ಫ್ ಮಂಡಳಿ ಬಾಬರಿ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ತಿಳಿಸಿದೆ. ವರದಿಯಾಗಿರುವ ಪ್ರಕಾರ ಸುನ್ನಿ ವಕ್ಫ್ ಮಂಡಳಿಯ ಅಧ್ಯಕ್ಷ ಜಾಫರ್ ಫಾರೂಕಿ ಸುದ್ದಿ ಚ್ಯಾನಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯಾವುದೇ ಮರು ಪರಿಶೀಲನಾ ಅರ್ಜಿ ಸಲ್ಲಿಸದಿರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ನಾವು ಯಾವಾಗಲು ಸುಪ್ರೀಂ ಕೋರ್ಟಿನ ತೀರ್ಪು ಸ್ವೀಕರಿಸುವೆವೆಂದು ಹೇಳುತ್ತಿದ್ದೆವು. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಜಾಫರ್ ಫಾರೂಕಿ ಹೇಳಿದ್ದಾರೆ. ಇದೇ ವೇಳೆ ಇನ್ನೋರ್ವ ಬಾಬರಿ …
Read More »ಉತ್ತರಾಖಂಡದಲ್ಲಿ ಮುಸ್ಲಿಮರಿಗೆ ತೆರೆದ ಮೊದಲ ಯೋಗ ಕೇಂದ್ರ; ನಮಾಝಿಗೂ ಅವಕಾಶವಿದೆ
ಉತ್ತರಖಂಡ,ನ.20: ವಿಶ್ವದ ಮೊದಲ ಯೋಗ ಶಿಬಿರ ನವೆಂಬರ್ 20ಕ್ಕೆ ಉತ್ತರ ಖಂಡದ ಕೇದಾರ ನಗರದ ಕಣ್ವ ಆಶ್ರಮದಲ್ಲಿ ಆಯೋಜಿಸಲಾಗಿದ್ದು ಐದು ದಿವಸಗಳ ಯೋಗವನ್ನು ಮುಖ್ಯಮಂತ್ರಿ ತ್ರಿವೇಂದ್ರ್ ಸಿಂಗ್ ರಾವತ್ ಉದ್ಘಾಟಿಸಲಿರುವರು ಎನ್ನಲಾಗಿದೆ. ಕಣ್ವಾಶ್ರಮದ ಗುರುಕುಲ ಕುಲಪತಿ ಡಾ. ಜಯಂತ್ ಯೋಗಿರಾಜ ರವಿವಾರ ಪತ್ರಕರ್ತರಿಗೆ ಈ ಯೋಗ ಶಿಬಿರದ ಮಾಹಿತಿಯನ್ನು ನೀಡಿದ್ದಾರೆ. 500ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಭಾಗವಹಿಸುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದು ನಮಾಝ್ ನಿರ್ವಹಿಸುವುದಕ್ಕೂ ಸ್ಥಳಾವಕಾಶ ನೀಡಲಾಗುವುದು ಎಂದಿದ್ದಾರೆ. …
Read More »ಪಾಕಿಸ್ತಾನ ಸರಕಾರದಿಂದ ಬಾಬ ಗುರು ನಾನಕ್ ವಿಜ್ಞಾನ ಕಾಲೇಜು
ಲಾಹೋರ್, ನ.18: ಖೈಬರ್-ಫಕ್ತೂನ್ವಾದಲ್ಲಿ ಸಿಖ್ಖರಿಗಾಗಿ ಪ್ರಥಮ ಬಾಬಾ ಗುರು ನಾನಕ್ ಸ್ಕೂಲ್ ಆಫ್ ಸೈನ್ಸ್ ಟೆಕ್ನಾಲಜಿ, ಇಂಜಿನಿಯರಿಂಗ್, ಆರ್ಟ್ ಆಂಡ್ ಮ್ಯಾಥಮೆಟಿಕ್ಸ್ ಕಾಲೇಜನ್ನು ಪಾಕಿಸ್ತಾನ ಸರಕಾರ ತೆರೆದಿದೆ. ಪೇಶಾವರದಲ್ಲಿ ಇಂತಹದೇ ಶಾಲೆಯಲ್ಲಿ ಸೋಮವಾರದಿಂದ ಪಾಠ ಆರಂಭವಾಗಲಿದೆ. ವಿಭಜನೆಯ 72 ವರ್ಷದ ನಂತರ ಪಾಕಿಸ್ತಾನ ಸರಕಾರ ಅಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಹೊಸ ಪೀಳಿಗೆಗಾಗಿ ವಿಜ್ಞಾನ, ತಂತ್ರಜ್ಞಾನ ಶಿಕ್ಷಣದ ಕೊಡುಗೆ ನೀಡುತ್ತಿದೆ. ಶ್ರೀ ಗುರುನಾನಕ್ ದೇವ್‍ಜಿ ಅವರ 550ನೇ ಜನ್ಮ ವರ್ಷದಲ್ಲಿ ಈ …
Read More »ಬಾಬರಿ ಪ್ರಕರಣ: ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಮುಸ್ಲಿಂ ಪರ್ಸನಲ್ ಲಾ ಬೋರ್ಡು ನಿರ್ಧಾರ
ಹೊಸದಿಲ್ಲಿ,ನ.17: ಅಯೋಧ್ಯೆಯ ವಿವಾದಿತ ತೀರ್ಪು ವಿರುದ್ಧ ಮುಸ್ಲಿಮರು ರಿವ್ಯೂ ಅರ್ಜಿ ದಾಖಲಿಸಲು ನಿರ್ಧರಿಸಿದ್ದು ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡು ಪ್ರಧಾನ ಕಾರ್ಯದರ್ಶಿ ಜಾಫರ್‍ಯಾಬ್ ಜೀಲಾನಿ ಅಯೋಧ್ಯೆಯ ಸುಪ್ರೀಂ ಕೋರ್ಟು ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಮಸೀದಿಯ ಬದಲಾಗಿ ಐದು ಎಕರೆ ಪಡೆಯುವ ವಿಚಾರ ನಮಗೆ ಒಪ್ಪಿಗೆಯಲ್ಲ. ನಾವು ಬೇರೆ ಜಮೀನಿಗಾಗಿ ನ್ಯಾಯಾಲಕ್ಕೆ ಹೋಗಿಲ್ಲ. ಬಾಬರಿ ಮಸೀದಿ ಇದ್ದಲ್ಲೇ ನಮಗೆ ಜಮೀನು ಬೇಕಿದೆ …
Read More »ರಾಜ್ಯ ನಿಧಿಯಿಂದ ಮದ್ರಸಕ್ಕೆ 188 ಲಕ್ಷ ರೂ. ನೆರವು: ಮಧ್ಯ ಪ್ರದೇಶ ಸರಕಾರ ನಿರ್ಧಾರ
ಇಂದೋರ್, ನ.14: ಮದ್ರಸಾಗಳಿಗೆ ಕೊಡುತ್ತಿದ್ದ ಶಾಲೆಯ ಸೌಲಭ್ಯ ಅನುದಾನ ಈ ವರ್ಷದಿಂದ ಸಿಗದಿರುವ ಹಿನ್ನೆಲೆಯಲ್ಲಿ ಮದ್ರಸಾಗಳಿಗೆ ಮಧ್ಯ ಪ್ರದೇಶ ಸರಕಾರ ರಾಜ್ಯ ನಿಧಿಯಿಂದ 188 ಲಕ್ಷ ರೂ. ಸಹಾಯ ಧನ ಮಂಜೂರು ಮಾಡಿದೆ. ಮಧ್ಯ ಪ್ರದೇಶದ ಗೆಹ್ಲೋಟ್ ಸರಕಾರದ ನಿರ್ಧಾರದಿಂದಾಗಿ ಮದ್ರಸಾಗಳ ನಿರ್ವಹಣೆಯು ಸಂಕಟದಿಂದ ಮುಕ್ತವಾಗಲಿದೆ. ಇಲ್ಲಿ ಕಲಿಯುವ ಮಕ್ಕಳಿಗೆ ಶಿಕ್ಷಣ ಮತ್ತು ಅಗತ್ಯ ಸೌಲಭ್ಯ ಲಭ್ಯಗೊಳಿಸುವುದಕ್ಕೆ ಸಹಾಯಕವಾಗಿದೆ. ಕೇಂದ್ರ ಸರಕಾರ ರಾಜಸ್ಥಾನದ ಶಾಲಾ ಶಿಕ್ಷಣ ಪರಿಷತ್ ಮೂಲಕ ಮದ್ರಸಾ …
Read More »