H R S ವತಿಯಿಂದ ನೆರೆ ಸಂತ್ರಸ್ತರಿರಾಗಿ ಈ ಹಿಂದೆ ನಡೆಸಲಾದ ಸೂಪರ್ ಮಾಕೆ೯ಟ್ ನ ಬಳಿಕ ಇದೀಗ ಸಿದ್ದಾಪುರ ಪರಿಸರದ ಕೂಲಿಕಾಮಿ೯ಕರಿಗಾಗಿ ಸ್ಥಳೀಯ ಸಂತೆಯ ದಿನದಂದು ಉಚಿತ ವೈವಿಧ್ಯಮಯ ಉಡುಪುಗಳ ಸಂತೆಯನ್ನು ಏಪ೯ಡಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಜನರು ಇದರ ಪ್ರಯೋಜನವನ್ನು ಪಡಕೊಂಡರು.
Read More »ಸಿದ್ದಾಪುರ HRS ಸ್ಟೂಡೆಂಟ್ಸ್ ವಿಂಗ್ ಗೆ ಸನ್ಮಾನ
ಸಿದ್ದಾಪುರ ಪರಿಸರದ ನೆರೆ ಸಂತ್ರಸ್ತರಿಗಾಗಿ ರಾತ್ರಿ ಹಗಲೆನ್ನದೇ ಸೇವಾ ಕಾಯ೯ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ HRS ತಂಡದೊಂದಿಗೆ ತಾವೇನೂ ಕಡಿಮೆಯಿಲ್ಲ ಎಂಬಂತೆ ಅತ್ಯಂತ ಉತ್ಸಾಹದೊಂದಿಗೆ ಕಠಿಣ ಶ್ರಮ ವಹಿಸಿ ಸೇವಾ ಕಾಯ೯ ವನ್ನು ನಿವ೯ಹಿಸಿದ ಮುಬಶಿರ್, ಹಫೀಫ್, ಅನ್ಝಿಲ್,ನಜಾದ್ ಮತ್ತು ರಿಝ್ವಾನ್ ತಂಡವನ್ನು ಸಿದ್ದಾಪುರ ರಿಲೀಫ್ ಸೆಲ್ ವತಿಯಿಂದ ಕಚೇರಿಯಲ್ಲಿ ಸನ್ಮಾನಿಸಿ ಹುರಿದುಂಬಿಸಲಾಯಿತು.
Read More »ಮನುಷ್ಯ ಸಂಬಂಧಗಳನ್ನು ಬಲಪಡಿಸಿ, ದ್ವೇಷ ಭಾವನೆಯನ್ನು ದೂರ ಸರಿಸಿ – ಮುಹಮ್ಮದ್ ಕುಂಞ
ಜಮಾಅತೆ ಇಸ್ಲಾಮಿ ಹಿಂದ್ ಲಿಂಗಸಗೂರು ವತಿಯಿಂದ ಸದ್ಭಾವನಾ ಕಾರ್ಯಕ್ರಮ ಲಿಂಗಸುಗೂರು : ಜಗತ್ತಿನ ಎಲ್ಲಾ ಧರ್ಮಗಳು ಹೇಳಿಕೊಟ್ಟ ಬಹುದೊಡ್ಡ ಸಂದೇಶ ಮಂದಹಾಸ. ನಾವು ಇದನ್ನು ಮರೆತಿದ್ದೇವೆ. ಮಂದಹಾಸ-ಮುಗುಳುನಗೆಯ ಮೂಲಕ ಮನುಷ್ಯ ಸಂಬಂಧಗಳನ್ನು ಬಲಪಡಿಸಿಕೊಳ್ಳುವ ಕಾಲ ಇದಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನ ಮಂಗಳೂರಿನ ವ್ಯವಸ್ಥಾಪಕ ಮುಹಮ್ಮದ್ ಕುಂಞ ಹೇಳಿದರು. ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸ್ಥಳೀಯ ಗಡಿಯಾರ ಚೌಕ ಬಳಿ ಭಾನುವಾರ ಸಂಜೆ …
Read More »ಕೆಕೆಎಂಎ ವತಿಯಿಂದ 140 ಮಂದಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಧನ ಸಹಾಯ ; ಏನಿದು ಯೋಜನೆ
ಮಂಗಳೂರು: ಕೆಕೆಎಂಎ (ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್) ಕರ್ನಾಟಕ ಶಾಖೆಯ ವತಿಯಿಂದ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ, ಕೆಕೆಎಂಎ ಸಂಘಟನೆಯ ಮೃತ ಸದಸ್ಯರೋರ್ವರ ಕುಟುಂಬಕ್ಕೆ ‘ಫ್ಯಾಮಿಲಿ ಬೆನೆಫಿಟ್ ಸ್ಕೀಮ್’ ಅಡಿಯಲ್ಲಿ ಸಹಾಯಹಸ್ತ ಸೇರಿದಂತೆ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ವಿವಿಧ ಸಂತ್ರಸ್ತರಿಗೆ ಚೆಕ್ ವಿತರಿಸಲಾಯಿತು. ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಕೆಕೆಎಂಯಂತಹ ಸಂಘಟನೆ ಎಲ್ಲರಿಗೂ ಸ್ಪೂರ್ತಿಯಾಗಿದೆ. …
Read More »ಡಾ. ಕಫೀಲ್ ಆರೋಪ ಮುಕ್ತ ; ಆ ಮಕ್ಕಳ ಜೀವ ಉಳಿಸಿದಕ್ಕೆ ಹೊಗಳಿದ ತನಿಖಾ ಸಂಸ್ಥೆ
ಉತ್ತರ ಪ್ರದೇಶ: ಗೋರಕ್ ಪುರದಲ್ಲಿ ಮಕ್ಕಳು ಆಮ್ಲಜನಕ ಕೊರತೆಯಿಂದಾಗಿ 63 ಮಕ್ಕಳು ಅಸುನೀಗಿದ್ದರು. ಈ ಸಂದರ್ಭದಲ್ಲಿ ಡಾ.ಕಫೀಲ್ ಬೇರೆಡೆಯಿಂದ ಆಮ್ಲಜನಕ ಪೂರೈಸಿ ಮಕ್ಕಳ ಪ್ರಾಣ ಉಳಿಸಲು ಪ್ರಮಾಣಿಕ ಪ್ರಯತ್ನ ನಡೆಸಿದ್ದರು. ರಾಜ್ಯ ಸರಕಾರ ಈ ಸಂದರ್ಭದಲ್ಲಿ ಡಾ.ಕಫೀಲ್ ಖಾನ್ ರನ್ನು ಕಟಕಟೆಯಲ್ಲಿ ನಿಲ್ಲಿಸಿ ಭ್ರಷ್ಟಾಚಾರ, ನಿರ್ಲಕ್ಷ್ಯದ ಆರೋಪದಲ್ಲಿ ಒಂಭತ್ತು ತಿಂಗಳು ಜೈಲಿನಲ್ಲಿರಿಸಿ ಸರಕಾರ ತನ್ನ ನಿರ್ಲಕ್ಷ್ಯವನ್ನು ಪ್ರಮಾಣಿಕ ಅಧಿಕಾರಿಯ ಮೇಲೆ ಹಾಕಲು ಯತ್ನಿಸಿತ್ತು. ಇದೀಗ ರಾಜ್ಯ ಸರಕಾರವೇ ನೇಮಿಸಿದ್ದ ತನಿಖಾ …
Read More »2.5 ಲಕ್ಷ ರೂಪಾಯಿ ಮೌಲ್ಯದ ಬ್ಯಾಗನ್ನು ಹಿಂದಿರುಗಿಸಿದ ಬೆಂಗಳೂರಿನ ಈ ನಿಸ್ವಾರ್ಥ ಕ್ಯಾಬ್ ಚಾಲಕ
ಬೆಂಗಳೂರು ; ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಜನರು ಒಂದಲ್ಲ ಒಂದು ರೀತಿಯಲ್ಲಿ ಕೆಲವೊಮ್ಮೆ ತಮ್ಮ ವಸ್ತುಗಳನ್ನು ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಕಳ್ಳತನವಾದರೆ, ಇನ್ನು ಕೆಲವೊಮ್ಮೆ ವಾಹನದಲ್ಲಿ ಮರೆತು ಬಿಟ್ಟು ಹೋಗುತ್ತಾರೆ. ಇಂತಹ ವಸ್ತುಗಳು ಮತ್ತೆ ಸಿಗುತ್ತದೆ ಎಂಬ ಭರವಸೆ ಹೆಚ್ಚಿನವರಿಗಿರುವುದಿಲ್ಲ. ಆದರೆ ಎಲ್ಲರೂ ಕೆಟ್ಟವರಾಗಿರುವುದಿಲ್ಲ. ಕೆಲವರು ಇತರರ ಸೊತ್ತುಗಳನ್ನು ಜೋಪಾನವಾಗಿಟ್ಟು ಅವರಿಗೆ ಮರಳಿಸುತ್ತಾರೆ. ಅಂತಹ ಓರ್ವ ಕ್ಯಾಬ್ ಡ್ರೈವರ್ ಸಾಮಾಜಿಕ ಜಾಲ ತಾಣದಲ್ಲಿ ಎಲ್ಲರ ಮನ ಗೆದ್ದಿದ್ದಾರೆ. ಸಯೂಜ್ ರವೀಂದ್ರನ್ ಎಂಬವರು …
Read More »ಅತೀ ಉದ್ದದ ಕುರ್‌ಆನ್ ಬರೆಯುವ ಮೂಲಕ ಗಿನ್ನಿಸ್ ದಾಖಲೆಗೆ ಮುಂದಾಗಿದ್ದಾರೆ ದಿಲೀಪ್
ಒಂದು ಕಿಲೋ ಮೀಟರ್ ಉದ್ದದ ಕ್ಯಾನ್ವಾಸ್‌ನಲ್ಲಿ ಕೈಬರಹದ ಕುರ್‌ಆನ್ ತಯಾರಿಸುವ ಮೂಲಕ ತನ್ನ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆಯುವ ಕನಸನ್ನು ಈಡೇರಿಸುವ ಉದ್ದೇಶದಿಂದ ಕೋಝಿಕ್ಕೋಡ್‌ನ ಮುಕ್ಕೊಮ್ ಮೂಲದ ವ್ಯಂಗ್ಯ ಚಿತ್ರಕಾರ ಎಂ. ದಿಲೀಪ್ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕಾರ್ಯಾಚರಣೆಯ ಮೊದಲ ಹಂತವಾಗಿ ದಿಲೀಪ್ 300 ಮೀಟರ್ ಉದ್ದದ ಕುರ್‌ಆನ್ ಹಸ್ತ ಪ್ರತಿಯನ್ನು ಸಿದ್ಧಪಡಿಸಿದ್ದು, ಇದನ್ನು ಶುಕ್ರವಾರ ಪತ್ರಕರ್ತರ ಸಮ್ಮುಖದಲ್ಲಿ ಸ್ವಾಮಿ ಸಂದೀಪಾನಂದ ಗಿರಿ ಬಿಡುಗಡೆಗೊಳಿಸಿದರು. “ನಾನು ಅತಿ ಹೆಚ್ಚು ಉದ್ದದ …
Read More »ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥರವರನ್ನು ಜಮಾಅತ್ ರಾಜ್ಯ ತಂಡ ಭೇಟಿ
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಗೌರವಾನ್ವಿತ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಯವರ ನೇತೃತ್ವದಲ್ಲಿ ಸೌಹಾರ್ದ ಭೇಟಿ ಮಾಡಲಾಯಿತು. ಸ್ವಾಮೀಜಿಯವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಧರ್ಮ, ಅಧ್ಯಾತ್ಮ, ಸೌಹಾರ್ದತೆಯ ವಿಷಯದಲ್ಲಿ ವಿಚಾರ ವಿನಿಮಯ ನಡೆಸಲಾಯಿತು. ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ಅದನ್ನು ಬಲಪಡಿಸುವ ಬಗ್ಗೆ ಸ್ವಾಮೀಜಿಯವರು ಸಹಮತ ವ್ಯಕ್ತಪಡಿಸಿ ಈ ಭೇಟಿಯ …
Read More »ಬಸವತತ್ವ ಮತ್ತು ಇಸ್ಲಾಮ್ ಪುಸ್ತಕ ಬಿಡುಗಡೆ
ಶ್ರೀ ಸಿದ್ಧ ಬಸವ ಕಬೀರ ಸ್ವಾಮೀಜಿಯವರು ಇಂದು ಎಸ್.ಐ.ಓ ಕರ್ನಾಟಕ ಹೊರ ತಂದ ಬಸವತತ್ವ ಮತ್ತು ಇಸ್ಲಾಮ್ ಪುಸ್ತಕವನ್ನು ಇಂದು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ನವಾಜ್, ಎಸ್.ಐ.ಓ ಕರ್ನಾಟಕದ ಕಾರ್ಯದರ್ಶಿ ಶಾಫಿ ಅವರು ಉಪಸ್ಥಿತರಿದ್ದರು.
Read More »ಕುರ್‍ಆನ್ ಮತ್ತು ಆಧುನಿಕ ವಿಜ್ಞಾನ: ಒಂದು ತುಲನಾತ್ಮಕ ಅಧ್ಯಯನ
ನಮ್ಮ ಸಮಾಜ ಬಹಳ ಮುಂದುವರಿದಿದೆ. ವಿಜ್ಞಾನವಂತೂ ದಿನ ಹೋದಂತೆ ಬೆಳೆಯುತ್ತಲೇ ಇದೆ. ಇಂದಿನ ಸಾಕಷ್ಟು ಮಂದಿ ದೇವರು, ಪವಾಡ, ಸ್ವರ್ಗ, ನರಕ ಮೊದಲಾದವುಗಳ ಮೇಲೆ ವಿಶ್ವಾಸವನ್ನಿಡದೆ, ವಿಜ್ಞಾನವೇ ಸರ್ವಸ್ವ ಎಂದು ನಂಬುತ್ತಾರೆ. ಇಂತಹ ಕಾಲದಲ್ಲಿ ನಾವು ಬದುಕುತ್ತಿರುವಾಗ ಒಂದು ಧರ್ಮದ ಬಗ್ಗೆ, ಅದರ ವಿಶೇಷತೆಯ ಬಗ್ಗೆ ವಿವರಿಸಬೇಕಾದರೆ ಆ ಧರ್ಮಗ್ರಂಥದಲ್ಲಿರುವ ವೈಜ್ಞಾನಿಕ ವಿಷಯಗಳು ಇವತ್ತಿನ ವಿಜ್ಞಾನಕ್ಕೆ ಪೂರಕವಾಗಿದೆಯೇ ಎಂಬುದಾಗಿ ಪರಿಶೀಲಿಸಬೇಕಾಗುತ್ತದೆ. ಏಕೆಂದರೆ, ಒಂದು ವೇಳೆ ಆ ಗ್ರಂಥ ನಮ್ಮ ನೈಜ …
Read More »