ಜಿದ್ದಾ| ಹಜ್ ಕರ್ಮಗಳು ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಂತೆ, ಜಿದ್ದಾ ಇಸ್ಲಾಮಿಕ್ ಬಂದರು ಪ್ರಾಧಿಕಾರದ ಹಡಗಿನ ಮೂಲಕ ಯಾತ್ರಾರ್ಥಿಗಳ ಮೊದಲ ತಂಡವು ಪವಿತ್ರ ಮಕ್ಕಾ ಪ್ರದೇಶಕ್ಕೆ ಆಗಮಿಸಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸುಡಾನ್ ನಿಂದ 245 ಯಾತ್ರಾರ್ಥಿಗಳನ್ನು ಹೊತ್ತ ಮೊದಲ ಹಡಗು ತಲುಪಿದೆ. ಹೂವುಗಳು, ಸಿಹಿ ತಿಂಡಿಗಳು ಮತ್ತು ಸಂಸಂಗಳನ್ನು ವಿತರಿಸುವ ಮೂಲಕ ಯಾತ್ರಾರ್ಥಿಗಳನ್ನು ಅಧಿಕಾರಿಗಳು ಸ್ವಾಗತಿಸಿದರು. ಈ ವರ್ಷ 11,000 ಕ್ಕೂ ಹೆಚ್ಚು ಸುಡಾನ್ …
Read More »ಮಕ್ಕಾ ಮಸ್ಜಿದುಲ್ ಹರಾಮ್ ; ಶುಕ್ರವಾರ ನಮಾಝ್ ಗೆ ಲಕ್ಷಾಂತರ ಭಾರತೀಯರು ಭಾಗಿ
ಕಳೆದ ಶುಕ್ರವಾರ ಜುಮಾ ನಮಾಝ್ ಮಾಡುವುದಕ್ಕಾಗಿ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಲಕ್ಷಕ್ಕಿಂತಲೂ ಅಧಿಕ ಭಾರತೀಯರು ಸೇರಿದ್ದರು ಎಂದು ವರದಿಯಾಗಿದೆ. ಮಕ್ಕಾದಲ್ಲಿ ಈಗ ತೀವ್ರ ಬಿಸಿಲಿದ್ದು ಈಗಾಗಲೇ ಮಕ್ಕ ಮತ್ತು ಮದೀನದಲ್ಲಿ 10 ಲಕ್ಷಕ್ಕಿಂತ ಅಧಿಕ ಮಂದಿ ಸೇರಿದ್ದಾರೆ ಎಂದು ವರದಿಯಾಗಿದೆ. 1,16,000 ಮಂದಿ ಭಾರತೀಯ ಹಜ್ ಯಾತ್ರಾರ್ಥಿಗಳು ಹರಮ್ ನ ಜುಮಾ ನಮಾಝ್ ನಲ್ಲಿ ಭಾಗಿಯಾಗಿದ್ದಾರೆ. ತೀರ ವಯಸ್ಸಾಗಿರುವ ಹಾಜಿಗಳಲ್ಲಿ ತಮ್ಮ ಹತ್ತಿರದ ಮಸೀದಿಯಲ್ಲಿ ಜುಮಾ ನಮಾಜಿನಲ್ಲಿ ಭಾಗಿಯಾಗಿ …
Read More »ಹಜ್ ಯತ್ರಾರ್ಥಿಗಳಿಗೆ ಸಿಹಿ ಸುದ್ದಿ: ಇನ್ನು ಮುಂದೆ ಲಗೇಜನ್ನು ವಿಮಾನ ನಿಲ್ದಾಣದಿಂದ ಕೊಂಡು ಹೋಗಬೇಕಿಲ್ಲ
ಜಿದ್ದಾದ ವಿಮಾನ ನಿಲ್ದಾಣದಲ್ಲಿ ಇಳಿಯುವ ಹಜ್ ಯಾತ್ರಾರ್ಥಿಗಳು ಇನ್ನು ಮುಂದೆ ತಮ್ಮ ಲಗೇಜ್ ಗಳನ್ನು ತಾವೇ ಕೊಂಡು ಹೋಗಬೇಕಿಲ್ಲ. ಹಜ್ ಮತ್ತು ಉಮ್ರಾ ಸಚಿವಾಲಯ ಮತ್ತು ಝಕಾತ್, ಟ್ಯಾಕ್ಸ್ ಅಂಡ್ ಕಸ್ಟಮ್ಸ್ ಅಥಾರಿಟಿಯ ನಡುವೆ ನಡೆದ ಒಪ್ಪಂದದ ಪ್ರಕಾರ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಜಿದ್ದ ಏರ್ಪೋರ್ಟ್ ನ ಮೂಲಕ ಬರುವ ವಿದೇಶಿ ಹಾಜಿಗಳ ಲಗೇಜ್ ಗಳನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಹಾಜಿಗಳು ತಂಗುವಲ್ಲಿಗೆ ತಲುಪಿಸಲಾಗುತ್ತಿದೆ. ಜಿದ್ದ ವಿಮಾನ ನಿಲ್ದಾಣದ ಇಂಟರ್ನ್ಯಾಷನಲ್ …
Read More »ಮದೀನಾದಲ್ಲಿರುವ ಭಾರತೀಯ ಹಜ್ ಯಾತ್ರಿಕರು ಇನ್ನು ಎಂಟು ದಿನಗಳಲ್ಲಿ ಮಕ್ಕಾಕ್ಕೆ
ಭಾರತದಿಂದ ಹಜ್ ಯಾತ್ರೆಗಾಗಿ ಈ ವರೆಗೆ ತೆರಳಿದವರು ಮದೀನಾದಲ್ಲಿ ತಂಗಿದ್ದು, ಇನ್ನು ಮುಂದೆ ಹಜ್ ಗೆ ಪ್ರಯಾಣಿಸುವವರು ನೇರವಾಗಿ ಮಕ್ಕಾದಲ್ಲಿ ತಂಗಲಿದ್ದಾರೆ. ಮದೀನಾದಲ್ಲಿ ತಂಗಿದವರು ಇನ್ನು 8 ದಿನಗಳ ಬಳಿಕ ಮಕ್ಕಕ್ಕೆ ಬರಲಿದ್ದಾರೆ. ಭಾರತದಿಂದ ಆಗಮಿಸಿದ 3416 ಮಂದಿ ಹಜ್ ಯಾತ್ರಿಕರು ಮದೀನಾದಲ್ಲಿದ್ದಾರೆ. ಇವರೆಲ್ಲ ಎಂಟು ದಿನ ಮದೀನಾದಲ್ಲಿ ದಿನ ಕಳೆದು ಮಕ್ಕಕೆ ಬರುತ್ತಾರೆ. ಈ ಸಂದರ್ಭದಲ್ಲಿ ಮಕ್ಕಾದಲ್ಲಿ 93,360 ಮಂದಿ ಬಂದಿಳಿದಿರುತ್ತಾರೆ. ಈಗಾಗಲೇ ಲಕ್ಷದ್ವೀಪದಿಂದ ಬಂದ ಹಜ್ ಯಾತ್ರಾರ್ತಿಗಳ …
Read More »ಭಾರತದಿಂದ ಹಜ್ ಯಾತ್ರೆಗಾಗಿ ಈ ವರಗೆ ಸೌದಿ ತಲುಪಿದವರ ಸಂಖ್ಯೆ 50,000 ದಾಟಿದೆ
ಭಾರತದಿಂದ ಹಜ್ ಯಾತ್ರೆಗಾಗಿ ಸೌದಿ ತಲುಪಿದವರ ಸಂಖ್ಯೆ 50,000 ವನ್ನೂ ದಾಟಿದೆ. ಕೇಂದ್ರ ಹಜ್ ಕಮಿಟಿಯ ಮೂಲಕ ಈ ವರೆಗೆ 54,643 ಮಂದಿ 185 ವಿಮಾನಗಳ ಮೂಲಕ ಸೌದಿ ಅರೇಬಿಯ ತಲುಪಿದ್ದಾರೆ ಎಂದು ವರದಿಯಾಗಿದೆ ಇವರಲ್ಲಿ 34,815 ಮಂದಿ ಮಕ್ಕಾದಲ್ಲಿ ಇಳಿದಿದ್ದಾರೆ. 21,826 ಮಂದಿ ಮದೀನಾದಲ್ಲಿ ತಂಗಿದ್ದಾರೆ. 2435 ಮಂದಿ ಕೇರಳಿಯರು ಇವರಲಿದ್ದಾರೆ. ಮಹ್ ರಂ ಅಥವಾ ಪುರುಷ ಬಂಧುಗಳ ಸಹಾಯವಿಲ್ಲದೆ ಈ ಬಾರಿ ನಾಲ್ಕು ಸಾವಿರದಷ್ಟು ಮಂದಿ ಮಹಿಳೆಯರು …
Read More »ಮಕ್ಕಾದಲ್ಲಿ ಹಜ್ಜ್ ಗೆ ಸಿದ್ಧತೆ: ಪ್ರವೇಶ ದ್ವಾರದ ಬಳಿ 50,000 ವಾಹನ ನಿಲುಗಡೆಗೆ ವ್ಯವಸ್ಥೆ
ಮಕ್ಕಾದ ಪ್ರವೇಶ ದ್ವಾರಗಳಲ್ಲಿ 5 ಪಾರ್ಕಿಂಗ್ ಕೇಂದ್ರಗಳನ್ನು ತಯಾರಿಸಲಾಗಿದೆ. ಖಾಸಗಿಯಾಗಿ ಹಜ್ ಕರ್ಮ ನಿರ್ವಹಿಸಲು ಬರುವ ಯಾತ್ರಿಕರು ಈ ಪಾರ್ಕಿಂಗ್ ಕೇಂದ್ರಗಳಲ್ಲಿ ತಮ್ಮ ವಾಹನವನ್ನು ನಿಲುಗಡೆಗೊಳಿಸಬೇಕು. ಇಲ್ಲಿಂದ ಹೊರಗೆ ಹೋಗುವುದಕ್ಕೆ ಬಸ್ ವ್ಯವಸ್ಥೆ ಇದೆ. ಹಜ್ ಸಂದರ್ಭದಲ್ಲಿ ಇಲ್ಲಿಗೆ ಬರುವ ಇತರ ವಾಹನಗಳನ್ನು ಕೂಡ ಇಲ್ಲಿಯೇ ಪಾರ್ಕಿಂಗ್ ಮಾಡಬೇಕು. ಈ ಪಾರ್ಕಿಂಗ್ ಸ್ಥಳದಲ್ಲಿ ವಿವಿಧ ಸೌಲಭ್ಯಗಳಿದ್ದು ಟಾಯ್ಲೆಟ್ ಗಳು, ಯಾತ್ರಿಕರಿಗೆ ಆರಾಮ ಮಾಡುವುದಕ್ಕೆ ಮತ್ತು ಕಾಯುವುದಕ್ಕೆ ಬೇಕಾದ ವ್ಯವಸ್ಥೆಗಳು, ಮಸೀದಿಗಳು …
Read More »‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
ಮುಸ್ಲಿಮ್ ಬರಹಗಾರರ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿವರ್ಷ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕನ್ನಡ ಕೃತಿಗೆ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದ್ದು, 2022ನೇ ಸಾಲಿನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳ ಗೊಂಡಿರುತ್ತದೆ. ಆಸಕ್ತ ಮುಸ್ಲಿಮ್ ಬರಹಗಾರರು ಕನ್ನಡದಲ್ಲಿ ಪ್ರಕಟಿತ 2022ನೇ ಸಾಲಿನ ಕೃತಿಯ ನಾಲ್ಕು ಪ್ರತಿಗಳನ್ನು ಜೂನ್ 20ರ …
Read More »ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷರಾಗಿ ಖ್ಯಾತ ವಿದ್ವಾಂಸ ಎಂ ಐ ಖಾಲಿದ್ ಸೈಫುಲ್ಲಾ ರಹ್ಮಾನಿ ಆಯ್ಕೆ
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಅಧ್ಯಕ್ಷರಾಗಿ ಮಧ್ಯಪ್ರದೇಶದ ಖ್ಯಾತ ಇಸ್ಲಾಮಿಕ್ ವಿದ್ವಾಂಸ ಚಿಂತಕ ಹಾಗೂ ಮಂಡಳಿಯ ಹಿರಿಯ ಸದಸ್ಯ ಎಂ ಐ ಖಾಲಿದ್ ಸೈಫುಲ್ಲಾ ರಹ್ಮಾನಿ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ ಮಾಹುದ ಎಂಬಲ್ಲಿ ನಡೆದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮಹಾ ಸಭೆಯಲ್ಲಿ ಐದನೇ ಅಧ್ಯಕ್ಷರಾಗಿ ಖಾಲಿದ್ ಸೈಫುಲ್ಲಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮಂಡಳಿ ಅಧ್ಯಕ್ಷರಾಗಿದ್ದ ಮೌಲಾನ ಮೊಹಮ್ಮದ್ ರಬಿ ಹಸನಿ ನದ್ವಿಯವರ ನಿಧನದ ಹಿನ್ನೆಲೆಯಲ್ಲಿ …
Read More »ಮಸಾಲೆ ಬೆರೆಸಿದ ಸ್ಟೋರಿ ಅಲ್ಲ, ಕಟ್ಟು ಕಥೆಯೂ ಅಲ್ಲ; ಇದು ನೈಜ ಕೇರಳ ಸ್ಟೋರಿ
ಕೇರಳದಲ್ಲಿ ಅದೊಂದು ಪ್ರಖ್ಯಾತ ಮನೆತನವಿದೆ. ಕೇರಳ ಬಿಡಿ, ರಾಷ್ಟ್ರ ರಾಜಕಾರಣಿಗಳೂ ಸಹ ಗೌರವ ಕೊಡುವ ಮನೆತನವದು. ಪ್ರಮುಖವಾಗಿ ಕೇರಳದಲ್ಲಿ ಜನರು ವಿಪರೀತ ಸಂಕಷ್ಟಕ್ಕೊಳಗಾದಾಗ ತಮ್ಮ ಜಾತಿ ಧರ್ಮವನ್ನು ಬದಿಗಿಟ್ಟು ಸಹಾಯ ಕೇಳಿಕೊಂಡು ಕದ ತಟ್ಟುವ ಮನೆತನವದು. ಅದುವೇ ಪಾಣಕ್ಕಾಡ್ ತಂಗಳ್ ಮನೆತನ. ಕೇರಳ ಮುಸ್ಲಿಮ್ ಲೀಗ್ ಪಕ್ಷದ ಪ್ರಮುಖ ನೇತಾರರ ಮನೆತನವೂ ಹೌದು. ಕಳೆದ ಜನವರಿ ತಿಂಗಳಿನಲ್ಲಿ ಕತಾರ್ ನಲ್ಲಿ ಕೇರಳದ ದಿವೇಶ ಲಾಲ್ ಎಂಬ ಯುವಕ ದೀರ್ಘ ಜೈಲು …
Read More »ಹಜ್ಜ್ ಮತ್ತು ಉಮ್ರಾ ಗೈಡ್
ಆರೋಗ್ಯ ಮತ್ತು ಸಂಪತ್ತು ಇರುವ ಪ್ರತಿಯೊಬ್ಬ ಮುಸ್ಲಿಮನಿಗೆ ಜೀವನದಲ್ಲೂಂದು ಬಾರಿ ಹಜ್ಜ್ ನಿರ್ವಹಿವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ. ಈ ದೇವಾಜ್ಞೆಯನ್ನು ಧಿಕ್ಕರಿಸುವವನ ಬಗ್ಗೆ ಅಲ್ಲಾಹನ ಅಭಿಶಾಪವಿದೆ ಎಂದು ಪವಿತ್ರ ಕುರ್’ಆನ್’ನಲ್ಲಿ ಸಾರಿ ಹೇಳಲಾಗಿದೆ. ಹಜ್ಜ್ ನಿರ್ಬಂಧವಾಗಿರುವ ಪ್ರತಿಯೊಬ್ಬ ಮುಸ್ಲಿಮನಿಗೂ ಆ ಬಗ್ಗೆ ಅವಶ್ಯಕವಾದ ಜ್ಞಾನವನ್ನು ಗಳಿಸುವುದು ಕಡ್ಡಾಯವಾಗಿದೆ. ಇಸ್ಲಾಮಿನ ಎಲ್ಲ ಆರಾಧನಾ ಕರ್ಮಗಳಂತೆ ಹಜ್ಜ್’ಗೆ ಕೂಡಾ ಕೆಲವು ನಿಯಮ-ನಿಬಂಧನೆಗಳು ಮತ್ತು ಆಚಾರ ಸಂಪ್ರದಾಯಗಳಿವೆ. ಅದನ್ನು ಹಜ್ಜ್ ನಿರ್ವಹಿಸುವ ಯಾತ್ರಾರ್ಥಿಗಳು ಸರಿಯಾಗಿ ಅರಿತಿರುವುದು …
Read More »