ಉತ್ತಮ ಚಾರಿತ್ರ್ಯ
ಉತ್ತಮ ಚಾರಿತ್ರ್ಯ
ಪ್ರವಾದಿವರ್ಯ(ಸ)ರು ಹೀಗೆ ಹೇಳಿರುವರು: “ನಿಮ್ಮ ಪೈಕಿ ಯಾರ ಚಾರಿತ್ರ್ಯವು ಅತ್ಯುತ್ತಮವಾಗಿದೆಯೋ ಅವರೇ ನಿಮ್ಮ ಪೈಕಿ ಅತ್ಯುತ್ತಮರು.” (ಹಝ್ರತ್ ಅಬ್ದುಲ್ಲಾ ಬಿನ್ ಅಮ್ರ್ (ರ)-ಮುಸ್ಲಿಮ್) ಪ್ರವಾದಿವರ್ಯ(ಸ)ರು ಹೀಗೆ ಹೇಳಿರುವರು: “ಸತ್ಯ ವಿಶ್ವಾಸಿಗಳಲ್ಲಿ ಯಾರ ಚಾರಿತ್ರ್ಯವು ಹೆಚ್ಚು ಉತ್ತಮವಾಗಿರುವುದೋ ಅವರು ಪೂರ್ಣ ವಿಶ್ವಾಸಿಗಳು” (ಹ.ಅಬೂಹುರೈರಃ(ರ)-ಅಬೂದಾವೂದ್)
ಹೆತ್ತವರ ಸೇವೆ
ಹೆತ್ತವರ ಸೇವೆ
ಒಮ್ಮೆ ಪ್ರವಾದಿವರ್ಯರು(ಸ),”ಅವನು ಅಪಮಾನಿತನಾಗಲಿ” ಎಂದು ಮೂರು ಬಾರಿ ಹೇಳಿದರು. ಜನರು’ಯಾರು?’ ಎಂದು ವಿಚಾರಿಸಿದರು. ಆಗ ಪ್ರವಾದಿ(ಸ) ಹೇಳಿದರು; “ತನ್ನ ತಂದೆ-ತಾಯಿಯವರನ್ನು ಅಥವಾ ಅವರ ಪೈಕಿ ಒಬ್ಬರನ್ನು ವೃದ್ಧಾಪ್ಯದ ಸ್ಥಿತಿಯಲ್ಲಿ ಕಂಡ ಬಳಿಕವೂ (ಅವರ ಸೇವೆ ಮಾಡುವ ಮೂಲಕ) ಸ್ವರ್ಗ ಪ್ರವೇಶಕ್ಕೆ ಅರ್ಹನಾಗದವನನ್ನು ನಾನು ಶಪಿಸುತ್ತಿದ್ದೇನೆ.”(ಮುಸ್ಲಿಮ್, ವರದಿ-ಅಬೂ ಹುರೈರಾ(ರ))
ತಾಯಿಯ ಹಕ್ಕು
ತಾಯಿಯ ಹಕ್ಕು
ಒಮ್ಮೆ ಓರ್ವ ವ್ಯಕ್ತಿ ಪ್ರವಾದಿವರ್ಯರೊಡನೆ(ಸ), “ಅಲ್ಲಾಹನ ಸಂದೇಶವಾಹಕರೇ! ನನ್ನ ಬಂಧುಗಳ ಪೈಕಿ ಸದ್ವರ್ತನೆಗೆ ಅತಿ ಹೆಚ್ಚು ಅರ್ಹರಾಗಿರುವವರು ಯಾರು?”ಎಂದು ವಿಚಾರಿಸಿದನು. ಅದಕ್ಕುತ್ತರವಾಗಿ ಪ್ರವಾದಿ(ಸ) ಹೇಳಿದರು: “ನಿನ್ನ ತಾಯಿ.” “ಆ ಬಳಿಕ ಯಾರು?” ಎಂದು ಆ ವ್ಯಕ್ತಿ ಕೇಳಿದನು. “ನಿನ್ನ ತಾಯಿ” ಎಂದು ಪ್ರವಾದಿ(ಸ) ಉತ್ತರಿಸಿದರು. “ಆ ಬಳಿಕ ಯಾರು?” ಎಂದು ಅವನು ವಿಚಾರಿಸಿದನು. “ನಿನ್ನ ತಾಯಿ” ಎಂದು ಪ್ರವಾದಿ(ಸ) ಹೇಳಿದರು. “ಆ ಬಳಿಕ ಯಾರು?” ಎಂದು ಆ ವ್ಯಕ್ತಿ ಮತ್ತೆ ಕೇಳಿದಾಗ ಪ್ರವಾದಿ(ಸ) ಹೇಳಿದರು: “ನಿನ್ನ ತಂದೆ.” (ಬುಖಾರಿ, ಮುಸ್ಲಿಮ್ ವರದಿ-ಅಬೂ ಹುರೈರಾ(ರ))
ಕೋಮುವಾದ
ಕೋಮುವಾದ
ನಾನು ಪ್ರವಾದಿ(ಸ)ರೊಡನೆ ಕೋಮುವಾದ ಅಂದರೇನು ? ಎಂದು ಪ್ರಶ್ನಿಸಿದೆ. ಅದಕ್ಕವರು ಹೇಳಿದರು
“ನೀನು ಅನ್ಯಾಯದ ವಿಷಯದಲ್ಲಿ ನಿನ್ನ ಜನಾಂಗಕ್ಕೆ ಸಹಾಯ ಮಾಡಿದರೆ ಅದುವೇ ಕೋಮುವಾದ.” (ವಾಯಿಲ್ ಬಿನ್ ಅಸ್ಕಅ-ಅಬೂದಾವೂದ್)
“ನೀನು ಅನ್ಯಾಯದ ವಿಷಯದಲ್ಲಿ ನಿನ್ನ ಜನಾಂಗಕ್ಕೆ ಸಹಾಯ ಮಾಡಿದರೆ ಅದುವೇ ಕೋಮುವಾದ.” (ವಾಯಿಲ್ ಬಿನ್ ಅಸ್ಕಅ-ಅಬೂದಾವೂದ್)
ಕರುಣೆ
ಕರುಣೆ
“ಯಾರು ಜನರ ಮೇಲೆ ಕರುಣೆ ತೋರುವುದಿಲ್ಲವೋ ಅವರ ಮೇಲೆ ಅಲ್ಲಾಹನು ಕರುಣೆ ತೋರುವುದಿಲ್ಲ.” (ಅಬ್ದುಲ್ಲಾ ಬಿನ್ ಅಮ್ರ್(ರ)-ಅಬೂದಾವೂದ್, ತಿರ್ಮಿದಿ))
ನಮ್ಮವನಲ್ಲ
ನಮ್ಮವನಲ್ಲ
“ಕಿರಿಯರ ಮೇಲೆ ಕರುಣೆ ತೋರದ ಹಾಗೂ ಹಿರಿಯರನ್ನು ಗೌರವಿಸದವನು ನಮ್ಮವನಲ್ಲ.”
(ಅಬ್ದುಲ್ಲಾ ಬಿನ್ ಅಮ್ರ್(ರ)-ತಿರ್ಮಿದಿ)
(ಅಬ್ದುಲ್ಲಾ ಬಿನ್ ಅಮ್ರ್(ರ)-ತಿರ್ಮಿದಿ)
ಲಂಚ
ಲಂಚ
“ಕಿರಿಯರ ಮೇಲೆ ಕರುಣೆ ತೋರದ ಹಾಗೂ ಹಿರಿಯರನ್ನು ಗೌರವಿಸದವನು ನಮ್ಮವನಲ್ಲ.”
(ಅಬ್ದುಲ್ಲಾ ಬಿನ್ ಅಮ್ರ್(ರ)-ತಿರ್ಮಿದಿ)
(ಅಬ್ದುಲ್ಲಾ ಬಿನ್ ಅಮ್ರ್(ರ)-ತಿರ್ಮಿದಿ)
ಶ್ರೀಮಂತಿಕೆ
ಶ್ರೀಮಂತಿಕೆ
“ಶ್ರೀಮಂತಿಕೆ ಎಂಬುದು ಸಂಪತ್ ಸೌಕರ್ಯಗಳ ಆಧಿಕ್ಯದ ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ
ನಿಜವಾದ ಶ್ರೀಮಂತಿಕೆ.” (ಹ. ಅಬೂಹುರೈರಾ(ರ)-ಬುಖಾರಿ, ಮುಸ್ಲಿಂ.)
ನಿಜವಾದ ಶ್ರೀಮಂತಿಕೆ.” (ಹ. ಅಬೂಹುರೈರಾ(ರ)-ಬುಖಾರಿ, ಮುಸ್ಲಿಂ.)
ಮರ್ದಿತನ ಪ್ರಾರ್ಥನೆ
ಮರ್ದಿತನ ಪ್ರಾರ್ಥನೆ
“ಮರ್ದಿತನ ಪ್ರಾರ್ಥನೆಯ ಬಗ್ಗೆ ಎಚ್ಚರಿಕೆ ವಹಿಸಿರಿ, ಅವನ ಮತ್ತು ಅಲ್ಲಾಹನ ಮಧ್ಯೆ ಯಾವುದೇ ತಡೆಯಿಲ.” (ಇಬ್ನು ಅಬ್ಬಾಸ್(ರ)-ಬುಖಾರಿ, ಮುಸ್ಲಿಮ್)
ಅಕ್ರಮಿ
ಅಕ್ರಮಿ
“ಅಕ್ರಮಿಯನ್ನು ನೋಡಿಯೂ ಜನರು ಅವನನ್ನು ತಡೆಯದಿದ್ದರೆ, ಅಲ್ಲಾಹನು ಅವರನ್ನು ಒಟ್ಟಿಗೆ ಶಿಕ್ಷಿಸುವನು.” (ಅಬೂ ದಾವೂದ್)
ಕೋಮು ಪಕ್ಷಪಾತ
ಕೋಮು ಪಕ್ಷಪಾತ
“ಕೋಮು ಪಕ್ಷಪಾತದ ಕಡೆಗೆ ಕರೆ ನೀಡುವವನು ನಮ್ಮವನಲ್ಲ. ಕೋಮು ಭಾವನೆಯೊಂದಿಗೆ ಯುದ್ಧ ಮಾಡುವವನೂ ನಮ್ಮವನಲ್ಲ. ಕೋಮು ಪಕ್ಷಪಾತದೊಂದಿಗೆ ಸಾಯುವವನೂ ನಮ್ಮವನಲ್ಲ.”
(ಜುಬೈರ್ ಬಿನ್ ಮುತ್ಇಮ್(ರ)-ಅಬೂ ದಾವೂದ್)
(ಜುಬೈರ್ ಬಿನ್ ಮುತ್ಇಮ್(ರ)-ಅಬೂ ದಾವೂದ್)
ನಾನು ಪ್ರವಾದಿ(ಸ)ರವರಲ್ಲಿ ಕೇಳಿದೆ, ನನ್ನವರನ್ನು ಪ್ರೀತಿಸುವುದು ಕೋಮು ಪಕ್ಷಪಾತವೇ? ಪ್ರವಾದಿ(ಸ) ಹೇಳಿದರು- “ಅಲ್ಲ, ಅದು ಪಕ್ಷಪಾತವಲ್ಲ. ಒಬ್ಬನು ತನ್ನವರಿಗೆ ಅವರ ಅಕ್ರಮ ಕಾರ್ಯಗಳಲ್ಲೂ ನೆರವಾಗುವುದು ಕೋಮು ಪಕ್ಷಪಾತವಾಗಿದೆ.” (ಅಬೂ ಫಸೀಲ(ರ)-ಮಿಶ್ಕಾತ್)
“ಮಿಥ್ಯ ಮತ್ತು ನಿಷಿದ್ಧ ಕಾರ್ಯಗಳಲ್ಲಿ ತಮ್ಮ ಗೋತ್ರ (ಕುಲ, ಕುಟುಂಬ, ಜನಾಂಗ)ವನ್ನು ಬೆಂಬಲಿಸುವವನ ಉದಾಹರಣೆಯು, ಬಾವಿಗೆ ಬೀಳುವ ಒಂಟೆಯ ಬಾಲ ಹಿಡಿದವನಂತಿದೆ. ಒಂಟೆಯೊಂದಿಗೆ ಅವನೂ ಬಾವಿಯಲ್ಲಿ ಬೀಳುತ್ತಾ.” (ಇಬ್ನು ಮಸ್ವೂದ್(ರ)-ಅಬೂ ದಾವುದ್)
ಬಡ್ಡಿ
ಬಡ್ಡಿ
ಪ್ರವಾದಿ(ಸ)ರು ಬಡ್ಡಿ ತಿನ್ನುವವನನ್ನೂ, ಬಡ್ಡಿ ತಿನ್ನಿಸುವವನನ್ನೂ, ಬಡ್ಡಿಗೆ ಸಾಕ್ಷಿ ನಿಲ್ಲುವ ಇಬ್ಬರನ್ನೂ ಮತ್ತು ಬಡ್ಡಿಯ ದಾಖಲೆ ಪತ್ರ ಬರೆಯುವವನನ್ನೂ ಶಪಿಸಿದ್ದಾರೆ. (ಅಬ್ದುಲ್ಲಾ ಬಿನ್ ಮಸ್ವೂದ್(ರ)- ಬುಖಾರಿ, ಮುಸ್ಲಿಮ್)
ಸಹೋದರರು
ಸಹೋದರರು
ಪ್ರವಾದಿವರ್ಯರು(ಸ)ರು, “ಎಲ್ಲ ಮಾನವರೂ ಪರಸ್ಪರ ಸಹೋದರರೆಂದು ಸಾಕ್ಷ್ಯ ನುಡಿದಿದ್ದಾರೆ, ಕೇವಲ ಮುಸ್ಲಿಮರಲ್ಲ.” (ಅಬೂ ದಾವೂದ್)
ಅಕ್ರಮ
ಅಕ್ರಮ
“ಒಬ್ಬನು ಯಾರದಾದರೂ ಗೇಣಗಲದಷ್ಟು ಭೂಮಿಯನ್ನು ಅಕ್ರಮವಾಗಿ ಕಬಳಿಸಿಕೊಂಡರೆ, ಕಿಯಾಮತ್ನಂದು ಏಳು ಭೂಮಿಗಳ ಉರುಳನ್ನು ಅವನ ಕೊರಳಿಗೆ ಹಾಕಲಾಗುವುದು.(ಸಈದ್ ಬಿನ್ ಝೈದ್(ರ)-ಬುಖಾರಿ,ಮುಸ್ಲಿಮ್)
ಸ್ವರ್ಗದ ಗಂಧ
ಸ್ವರ್ಗದ ಗಂಧ
“ಸಂರಕ್ಷಣೆಯ ವಾಗ್ದಾನ ನೀಡಲಾಗಿರುವ ಒರ್ವ ಮುಸ್ಲಿಮೇತರನನ್ನು ಕೊಂದವನು, ಸ್ವರ್ಗದ ಗಂಧವನ್ನೂ ಅನುಭವಿಸಲಾರನು. ವಸುತಃ ಅದು 40 ವರ್ಷಗಳಷ್ಟು ದೂರ ತಲುಪುತ್ತದೆ.” (ಇಬ್ನು ಉಮರ್(ರ)-ಬುಖಾರಿ)
ಸೇವಕರು
ಸೇವಕರು
“ಸೇವಕರು, ಅಲ್ಲಾಹನು ನಿಮ್ಮ ಅಧೀನಗೊಳಿಸಿರುವ ನಿಮ್ಮ ಸಹೋದರರಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಅಧೀನವಿರುವ ಸಹೋದರನಿಗೆ ತಾನು ತಿನ್ನುವುದನ್ನೇ ತಿನ್ನಿಸಬೇಕು. ತಾನು ತೊಡುವುದನ್ನೇ ತೊಡಿಸಬೇಕು. ಮತ್ತು (ನೆನಪಿರಲಿ) ಆತನಿಗೆ ಶಕ್ತಿ ಮೀರಿದ ಕೆಲಸವನ್ನು ಕೊಡಬಾರದು; ಒಂದು ವೇಳೆ ಕೊಟ್ಟರೆ ನೀವು ಆತನಿಗೆ ಸಹಾಯ ಮಾಡಲೇ ಬೇಕು.” (ಅಬೂದರ್ರ್(ರ)-ಬುಖಾರಿ, ಮುಸ್ಲಿಮ್) (ಇಬ್ನು ಉಮರ್(ರ)-ಬುಖಾರಿ)
ಹೆಣ್ಣು ಮಕ್ಕಳು
ಹೆಣ್ಣು ಮಕ್ಕಳು
“ಹೆಣ್ಣು ಮಕ್ಕಳ ಮೂಲಕ ಪರೀಕ್ಷೆಗೊಳಗಾಗಿ, ತರುವಾಯ ಅವರೊಂದಿಗೆ ಸದ್ವರ್ತನೆ ತೋರುವ ವ್ಯಕ್ತಿಯ ಪಾಲಿಗೆ ಆತನ ಹೆಣ್ಣು ಮಕ್ಕಳು ಆತನನ್ನು ನರಕದಿಂದ ರಕ್ಷಿಸುವ ಗುರಾಣಿಗಳಾಗುವರು.” (ಹ. ಆಯಿಶಾ(ರ)-ಮುಸ್ಲಿಮ್)
ಶ್ರೇಷ್ಠ ಉಡುಗೊರೆ
ಶ್ರೇಷ್ಠ ಉಡುಗೊರೆ
“ಯಾವ ತಂದೆಯೂ ತನ್ನ ಮಕ್ಕಳಿಗೆ ಅತ್ತ್ಯುತ್ತಮ ವಿದ್ಯಾಭ್ಯಾಸಕ್ಕಿಂತ ಶ್ರೇಷ್ಠ ಉಡುಗೊರೆಯನ್ನು ಕೊಟ್ಟಿಲ್ಲ.”(ತಿರ್ಮಿದಿ, ಬೈಹಕಿ )
ಸಚ್ಚರಿತ ಸ್ರೀ
ಸಚ್ಚರಿತ ಸ್ರೀ
“ಈ ಲೋಕವು ಒಂದು ಸಂಪತ್ತಾಗಿದೆ. ಮತ್ತು ಸಚ್ಚರಿತ ಸ್ರೀಯು ಈ ಲೋಕದ ಅತ್ತ್ಯುತ್ತಮ ಸಂಪತ್ತಾಗಿರುವಳು.” (ಅಬ್ದುಲ್ಲಾ ಬಿನ್ ಉಮರ್(ರ)-ಮುಸ್ಲಿಮ್ )
ನಾಲ್ಕು ವಿಷಯ
ನಾಲ್ಕು ವಿಷಯ
“ನಾಲ್ಕು ವಿಷಯಗಳ ಬಗ್ಗೆ ವಿಚಾರಣೆಗೊಳಪಡುವ ತನಕ ಯಾವ ಮನುಷ್ಯನೂ ಪುನರುತ್ಥಾನದ ದಿವಸದಂದು ಮುಂದೆ ಸಾಗಲಾರ
ಅವನ ಆಯುಷ್ಯದ ಕುರಿತು ಅದನ್ನು ಅವನು ಯಾವ ಕೆಲಸದಲ್ಲಿ ಕೊನೆಗೊಳಿಸಿದನೆಂದು.
ಅವನ ಕರ್ಮದ ಕುರಿತು, ಅವನು ಏನು ಕರ್ಮ ಮಾಡಿದನೆಂದು
ಮತ್ತು ಅವನ ಸಂಪತ್ತಿನ ಕುರಿತು, ಅದನ್ನು ಅವನು ಎಲ್ಲಿಂದ ಸಂಪಾದಿಸಿದ, ಎಲ್ಲಿ ಅದನ್ನು ವ್ಯಯಿಸಿದನೆಂದು.
ಮತ್ತು ಅವನ ಶರೀರದ ಕುರಿತು – ಅದನ್ನು ಅವನು ಯಾವ ಕೆಲಸದಲ್ಲಿ ಸವೆಯಿಸಿದನೆಂದು.” (ಅಬೂ ಬರ್ದಾ(ರ)-ತಿರ್ಮಿದಿ)
ಅವನ ಆಯುಷ್ಯದ ಕುರಿತು ಅದನ್ನು ಅವನು ಯಾವ ಕೆಲಸದಲ್ಲಿ ಕೊನೆಗೊಳಿಸಿದನೆಂದು.
ಅವನ ಕರ್ಮದ ಕುರಿತು, ಅವನು ಏನು ಕರ್ಮ ಮಾಡಿದನೆಂದು
ಮತ್ತು ಅವನ ಸಂಪತ್ತಿನ ಕುರಿತು, ಅದನ್ನು ಅವನು ಎಲ್ಲಿಂದ ಸಂಪಾದಿಸಿದ, ಎಲ್ಲಿ ಅದನ್ನು ವ್ಯಯಿಸಿದನೆಂದು.
ಮತ್ತು ಅವನ ಶರೀರದ ಕುರಿತು – ಅದನ್ನು ಅವನು ಯಾವ ಕೆಲಸದಲ್ಲಿ ಸವೆಯಿಸಿದನೆಂದು.” (ಅಬೂ ಬರ್ದಾ(ರ)-ತಿರ್ಮಿದಿ)
IslamKannada News Portal