ಏಕದೇವ ವಿಶ್ವಾಸದ ಇಸ್ಲಾಮಿ ಕಲ್ಪನೆ ?
ಏಕದೇವ ವಿಶ್ವಾಸದ ಇಸ್ಲಾಮಿ ಕಲ್ಪನೆ ?
'ಅಲ್ಲಾಹ್ 'ಮುಸ್ಲಿಮರ ದೇವರೇ?
'ಅಲ್ಲಾಹ್ 'ಮುಸ್ಲಿಮರ ದೇವರೇ?
ಇಸ್ಲಾಮಿನ ಮೂಲವಚನ ಯಾವುದು? ವಿವರಿಸಿ?
ಇಸ್ಲಾಮಿನ ಮೂಲವಚನ ಯಾವುದು? ವಿವರಿಸಿ?
ಪವಿತ್ರ ಕುರ್ಆನಿನ ಪ್ರತಿಯೊಂದು ಪುಟದಲ್ಲೂ ಮೇಲೆ ಪ್ರಸ್ತಾಪಿಸಿದ ಏಕದೇವ ಕಲ್ಪನೆಯ ವಿವರಣೆಗಳು ಬೇರೆ ಬೇರೆ ರೀತಿಯಲ್ಲಿ ಬಂದಿವೆ. ಆ ಪೈಕಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತಿದ್ದೇವೆ.
“ಹೇಳಿರಿ – ಅವನು ಅಲ್ಲಾಹನು ಏಕೈಕನು. ಅಲ್ಲಾಹನು ಸಕಲರಿಂದ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (112. 1-4)ಈ ಅಧ್ಯಾಯದಲ್ಲಿ ದೇವನಿಗೆ ಸಹಭಾಗಿಗಳಿರುವರು, ಪುತ್ರ-ಪುತ್ರಿಯರಿರುವರು ಹಾಗೂ ಅವನಿಗೆ ಮಡದಿ ಮಕ್ಕಳಿರುವರು ಎಂಬ ಕಲ್ಪನೆಗಳನ್ನು ಸ್ಪಷ್ಟವಾಗಿ ಖಂಡಿಸಲಾಗಿದೆ. ಇನ್ನೊಂದು ಕಡೆ ಪವಿತ್ರ ಕುರ್ಆನಿನಲ್ಲಿ ಏಕದೇವ ಕಲ್ಪನೆಯನ್ನು ಈ ರೀತಿ ಸ್ಪಷ್ಟಪಡಿಸಲಾಗಿದೆ.”ಅಲ್ಲಾಹನು ಚಿರಂತನು, ಸ್ವಯಂ ಜೀವಂತನು. ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆಯಾಗಲೀ ಬಾಧಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆಯಿಲ್ಲದೆ ಶಿಫಾರಸು ಮಾಡತಕ್ಕವನಾರಿದ್ದಾನೆ? ದಾಸರ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಡಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಅವನಿಗೆ ದಣೆಸುವಂಥ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವ ಶ್ರೇಷ್ಠನೂ ಆಗಿರುತ್ತಾನೆ.” (2. 255)
ಗೋರಿ ಪೂಜೆ' ಮತ್ತು ಇಸ್ಲಾಮ್?
ಗೋರಿ ಪೂಜೆ' ಮತ್ತು ಇಸ್ಲಾಮ್?
786 ಮತ್ತು ಬಾಲಚಂದ್ರ ಇಸ್ಲಾಮಿನ ಸಂಕೇತವೇ?
786 ಮತ್ತು ಬಾಲಚಂದ್ರ ಇಸ್ಲಾಮಿನ ಸಂಕೇತವೇ?
ಇಸ್ಲಾಮಿನ ಪಂಚಾಂಗವು ಚಾಂದ್ರಮಾನ ಕಾಲಗಣನೆಯನ್ನು ಅವಲಂಭಿಸಿದೆ. ಹಿಜರಿ ಶಕೆಯೂ ಚಾಂದ್ರಮಾನ ವರ್ಷವನ್ನಾಧರಿಸಿದೆ. ಹಜ್ಜ್ ಯಾತ್ರೆ ಮತ್ತು ಉಪವಾಸ ವ್ರತದಂತಹ ಪ್ರಮುಖ ಆರಾಧನಾ ಕರ್ಮಗಳು ಮತ್ತು ಇಸ್ಲಾಮಿನ ಎರಡು ಪ್ರಮುಖ ಹಬ್ಬಗಳಾದ ‘ಈದುಲ್ ಫಿತೃ’ (ರಮಝಾನ್ ಹಬ್ಬ) ಮತ್ತು ‘ಈದುಲ್ ಅಝ್ಹಾ’ (ಬಕ್ರೀದ್) ಆಚರಣೆಯೂ ಚಂದ್ರದರ್ಶನವನ್ನಾಧರಿಸಿದೆ. ಆದುದರಿಂದ ಟರ್ಕಿಯ ಖಿಲಾಫತ್ನ ಕಾಲದಲ್ಲಿ ಬಾಲಚಂದ್ರ ಮತ್ತು ನಕ್ಷತ್ರವನ್ನು ಅಲ್ಲಿಯ ರಾಷ್ಟ್ರ ಧ್ವಜದಲ್ಲಿ ಅಳವಡಿಸಲಾಯಿತು. ಅಂದಿನಿಂದ ಅನೇಕ ಮುಸ್ಲಿಮರು ಅದನ್ನು ಒಂದು ಉತ್ತಮ ಸಂಕೇತದ ರೂಪದಲ್ಲಿ ಬಳಸುತ್ತಾರೆ. ಆದರೆ ಅದಕ್ಕೂ ಯಾವುದೇ ಧಾರ್ಮಿಕ ಮಹತ್ವವಿಲ್ಲ.
ಪ್ರವಾದಿ ಮುಹಮ್ಮದ್(ಸ) ಇಸ್ಲಾಮಿನ ಸ್ಥಾಪಕರೇ?
ಪ್ರವಾದಿ ಮುಹಮ್ಮದ್(ಸ) ಇಸ್ಲಾಮಿನ ಸ್ಥಾಪಕರೇ?
ಆದರೆ ಇಸ್ಲಾಮ್ ಧರ್ಮದ ಹೆಸರೇ ಸೂಚಿಸುವಂತೆ ಅದು ಮುಹಮ್ಮದ್ರವರು(ಸ) ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಹೊಸ ಪಂಥವಾಗಲೀ ಅಲ್ಲ. ಅಂತೆಯೇ ಯಹೂದಿ ಜನಾಂಗದ ಧರ್ಮಕ್ಕೆ ಯಹೂದಿ ಪಂಥವೆಂದು ಹೆಸರಿರುವಂತೆ, ಸಿಂಧೂ ನದಿಯ ದೇಶದ ವಾಸಿಗಳು ಹಿಂದೂಗಳೆನಿಸಿಕೊಂಡಿರುವಂತೆ, ಇಸ್ಲಾಮ್ ಒಂದು ವರ್ಗ ಅಥವಾ ಪ್ರದೇಶದೊಂದಿಗೆ ಸಂಬಂಧವಿರಿಸಿಕೊಂಡ ಧರ್ಮವೂ ಅಲ್ಲ. ಅದು ಮುಹಮ್ಮದ್(ಸ) ಆವಿಷ್ಕರಿಸಿದ ಮುಹಮ್ಮದೀಯ ಧರ್ಮವಾಗಿರದೇ ಮಾನವಕುಲದ ಆದಿಪಿತ ಆದಮರಿಂದ(ಅ) ಹಿಡಿದು ಅಂತಿಮ ಪ್ರವಾದಿ ಮುಹಮ್ಮದ್ರವರ(ಸ) ವರೆಗೆ ವಿಶ್ವದ ಒಡೆಯನಿಂದ ನೇಮಿಸಲ್ಪಟ್ಟ ಎಲ್ಲ ಪ್ರವಾದಿಗಳೂ ಪ್ರತಿಪಾದಿಸಿದ ಸನಾತನವೂ ಚಿರನೂತನವೂ ಆದ ಧರ್ಮವಾಗಿದೆ. ಇಸ್ಲಾಮ್ ಎಂಬ ಪದದ ಅರ್ಥವು ಅನುಸರಣೆ, ವಿಧೇಯತೆ ಮತ್ತು ಶಾಂತಿ ಎಂದಾಗಿದೆ. ಮನುಷ್ಯನು ತನ್ನ ಸೃಷ್ಟಿಕರ್ತ, ಪಾಲಕ, ಪ್ರಭು ಮತ್ತು ಅಧಿಪತಿಯಾದ ಅಲ್ಲಾಹನಿಗೆ ಸಂಪೂರ್ಣ ವಿಧೇಯನಾಗಿ ಅವನ ಆಜ್ಞೆಗಳನ್ನು ಅನುಸರಿಸಿ ಜೀವಿಸುವ ಜೀವನ ಪದ್ಧತಿ ಎಂಬುದೇ ಆ ಪದದ ತಾತ್ಪರ್ಯ. ಹಾಗೆ ಜೀವಿಸಿದಾಗ ಅವನು ಇಹ-ಪರ ಲೋಕಗಳಲ್ಲಿ ಶಾಂತಿ ಮತ್ತು ನೆಮ್ಮದಿ ಹಾಗೂ ಮೋಕ್ಷ ಮತ್ತು ವಿಜಯವನ್ನು ಪಡೆಯುವನು.
ಅಲ್ಲಾಹನ ಬಳಿ ಸ್ವೀಕಾರ ಯೋಗ್ಯವಾದ ಧರ್ಮವು ಇದೊಂದೇ ಆಗಿದೆ ಎಂಬುದನ್ನು ಪವಿತ್ರ ಕುರ್ಆನ್ ಸ್ಪಷ್ಟಪಡಿಸಿದೆ. ಮಾತ್ರವಲ್ಲ, ಪ್ರಥಮ ಮಾನವರೂ ಪ್ರಥಮ ಪ್ರವಾದಿಯೂ ಆದ ಆದಮ್ರಿಂದ(ಅ) ಅಂತಿಮ ಪ್ರವಾದಿ ಹ. ಮುಹಮ್ಮದ್ರ(ಸ) ತನಕ ಎಲ್ಲ ಪ್ರವಾದಿಗಳು ತಂತಮ್ಮ ಜನತೆಯ ಮುಂದೆ ಇದೇ ಧರ್ಮವನ್ನು ಪ್ರತಿಪಾದಿಸಿದರು ಮತ್ತು ಅದರಂತೆ ಬದುಕಿ ತೋರಿಸಿದರು. ಈ ಧರ್ಮವು ಮನುಷ್ಯನ ಪರಲೋಕ ಮೋಕ್ಷಕ್ಕೆ ಹೇತುವಾಗುವುದು ಮಾತ್ರವಲ್ಲ ಅವನ ಇಹಲೋಕ ಜೀವನದ ಅತ್ಯುತ್ತಮ ನಿರ್ಮಾಣವೂ ಈ ಧರ್ಮದಿಂದಲೇ ಆಗುವುದು. ಅವನ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿ ಸೂಕ್ತ ಪರಿಹಾರವಿದ್ದು ಈ ಧರ್ಮ ಮಾತ್ರ ನೈಜ ಅರ್ಥದಲ್ಲಿ ಅವನನ್ನು ವಿಜಯದ ಕಡೆಗೆ ಒಯ್ಯಬಲ್ಲುದು. ಅವನಿಗೆ ಶಾಂತಿ, ಸುಭಿಕ್ಷೆ ಮತ್ತು ಕಲ್ಯಾಣವನ್ನು ನೀಡಬಲ್ಲುದು.
ಇಸ್ಲಾಮ್ ಮತ್ತು ಭಯೋತ್ಪಾದನೆ?
ಇಸ್ಲಾಮ್ ಮತ್ತು ಭಯೋತ್ಪಾದನೆ?
ಉತ್ತರ: ಇದು ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. 1492 ಮಾನವೇತಿಹಾಸದ ಅತಿ ದೊಡ್ಡ ದುರಂತದ ವರ್ಷವಾಗಿತ್ತು. ಸುದೀರ್ಘ ಶತಮಾನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ, ಕಲೆ, ಸಾಹಿತ್ಯ, ಸಾಂಸ್ಕ್ರಂತಿಕ, ನಾಗರಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಜಗತ್ತಿಗೆ ನಾಯಕತ್ವವನ್ನು ನೀಡುತ್ತಿದ್ದ ಮುಸ್ಲಿಮ್ ಸ್ಪೈನಿನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು. ಕೇವಲ ಗ್ರೆನಡಾ ನಗರವೊಂದೇ ಅವರ ಅಧೀನದಲ್ಲಿತ್ತು. ಆದರೆ 1492ರ ಜನವರಿಯಲ್ಲಿ ಅವರನ್ನು ಅಲ್ಲಿಂದ ಹೊರತಳ್ಳಿ ಸ್ಪೈನಿಯರು ಅಧಿಕಾರವನ್ನು ವಶಪಡಿಸಿಕೊಂಡಿದ್ದರು. ಸ್ಪೈನಿನ ಪತನ ಪೂರ್ಣಗೊಂಡ ಅದೇ ವರ್ಷ ಸಾಮ್ರಾಜ್ಯಶಾಹಿ ಶಕ್ತಿಗಳು ಅತಿಕ್ರಮಣವನ್ನು ಆರಂಬಿಸಿದರೆಂಬುದು ಗಮನಾರ್ಹವಾಗಿದೆ. ಕೊಲಂಬಸನು ತನ್ನ ಕಂಡು ಹಿಡಿಯುವ ಕಾರ್ಯವನ್ನು 1492ರಲ್ಲಿ ಪ್ರಾರಂಭಿಸಿದ್ದ. ಅದೇ ವರ್ಷ ಅಕ್ಟೋಬರ್ 12ಕ್ಕೆ ಆತ ಗಾನಹಾನಿ ದೀಪಕ್ಕೆ ತಲುಪಿದ.ಶಸ್ತ್ರಾಸ್ತ್ರಗಳೊಂದಿಗೆ ಹಡಗನ್ನು ಇಳಿದ ಕೊಲಂಬಸ್ ಮತ್ತು ಸಂಗಡಿಗರು ಅದಕ್ಕೂ ಮೊದಲು ಆ ನಾಡು ಸ್ಫಾನಿಶ್ ರಾಜನದ್ದಾಗಿರಬೇಕೆಂದು ಘೋಷಿಸಿದರು. ಅಲ್ಲಿನ ನಿವಾಸಿಗಳಿಗೆ ಅವರು ತಿಳಿದಿರದ ಭಾಷೆಯ ಆದೇಶವನ್ನು ಓದಿ ಹೇಳಿದರು. ಈ ಆದೇಶವನ್ನು ಅನುಸರಿಸದಿದ್ದರೆ ಅದರ ಪರಣಾಮವೇನಾಗಿರುತ್ತದೆಯೆಂದು ಕೊಲಂಬಸ್ ವಿವರಿಸಿದನು. “ನಾನು ಖಚಿತವಾಗಿ ಹೇಳುತ್ತೇನೆ. ದೇವನ ಸಹಾಯದಿಂದ ನಿಮ್ಮ ನಾಡಿಗೆ ಬಲವಂತದಿಂದ ಪ್ರವೇಶಿಸುವೆವು. ನಿಮ್ಮೊಂದಿಗೆ ಸಾಧ್ಯವಿದ್ದಂತೆ ಯುದ್ಧ ಮಾಡುತ್ತೇವೆ. ನಿಮ್ಮನ್ನು ಕ್ರೈಸ್ತ ಇಗರ್ಜಿಗೂ ರಾಜಂದಿರಿಗೂ ಹಂಚುತ್ತೇವೆ. ನಿಮ್ಮ ಮಕ್ಕಳು ಮತ್ತು ಪತ್ನಿಯರನ್ನು ಹಿಡಿದು ಗುಲಾಮರನ್ನಾಗಿ ಮಾಡುತ್ತೇವೆ. ನಿಮ್ಮ ವಸ್ತುಗಳನ್ನು ಕಿತ್ತುಕೊಳ್ಳುತ್ತೇವೆ. ನಮ್ಮಿಂದ ಸಾಧ್ಯವಿರುವ ಎಲ್ಲಾ ರೀತಿಯ ದ್ರೋಹವನ್ನು ವಿನಾಶವನ್ನು ಮಾಡುವೆವು” (ಪಾಶ್ಚಾತ್ಯೀಕರಣದ 500 ವರ್ಷಗಳು, ಐ.ಪಿ.ಎಚ್-ಪುಟ 17)
ಇದರೊಂದಿಗೆ ಯುರೋಪಿನ ಅತಿಕ್ರಮಣವು ಪ್ರಾರಂಭವಾಗಿತ್ತು. ಮುಸ್ಲಿಮ್ ಸ್ಫೈನ್ ಪತನಗೊಂಡ 6 ವರ್ಷದ ಬಳಿಕ 1498ರಲ್ಲಿ ವಾಸ್ಕೋಡಗಾಮ ಹಡಗಿನಲ್ಲಿ ಕಲ್ಲಿಕೋಟೆ ಎಂಬಲ್ಲಿ ಬಂದಿಳಿದನು. ಅಮೇರಿಕಾದಲ್ಲಿ 1492ರಲ್ಲಿ ಏಳೂವರೆಯಿಂದ ಹತ್ತು ಕೋಟಿಯವರೆಗೆ ಆದಿವಾಸಿಗಳು ವಾಸಿಸುತ್ತಿದ್ದರು. ಯುರೋಪಿನ ಅತಿಕ್ರಮಣದಿಂದಾಗಿ ಅವರಲ್ಲಿ ಶೇ 90 ರಷ್ಟು ಆದಿವಾಸಿಗಳನ್ನು ಒಂದೂವರೆ ಶತಮಾನದಲ್ಲಿ ಸ್ವಂತ ಮಣ್ಣಿಂದಲೇ ಯುರೋಪಿಯನ್ನರು ನಾಮಾವಶೇಷಗೊಳಿಸಿದರು. ಬರ್ಬರವಾದ ಸಾಮೂಹಿಕ ಕಗ್ಗೊಲೆಗಳಿಂದ ನಾಶಮಾಡಿದ ಬಳಿಕ 1776ರ ಸ್ವಾತಂತ್ರ್ಯ ಘೋಷಣೆಯೊಂದಿಗೆ ಯುರೋಪಿಯನ್ನರು ಅಮೇರಿಕವನ್ನು ವಶಪಡಿಸಿಬಿಟ್ಟಿದ್ದರು. ಸಂಪೂರ್ಣ ಅನ್ಯಾಯದ ಮತ್ತು ಅತಿಕ್ರಮಣದ ಆಧಾರದಲ್ಲಿದ್ದ ಈ ಸ್ವಾತಂತ್ರ್ಯ ಘೋಷಣೆಯ ಮೂಲಕ ಇಂದಿನ ಅಮೇರಿಕ ನೆಲೆನಿಂತಿದೆ.
1527ರಲ್ಲಿ ಪೋರ್ಚುಗೀಸರು ಬಹ್ರೈನನ್ನು ಅತಿಕ್ರಮಿಸಿ ವಶಪಡಿಸಿಕೊಂಡರು. ಆನಂತರ ಓಮನನ್ನು ಕೂಡಾ ಅಧೀನಗೊಳಿಸಿದರು. ಆದರೂ ಉಸ್ಮಾನಿಗಳು ಆ ನಾಡನ್ನು ಮರಳಿ ವಶಪಡಿಸಿಕೊಂಡರು. ಆನಂತರ ಕ್ರಿ.ಶ 1798-1801ರ ಅವಧಿಗೆ ನೆಪೋಲಿಯನ್ನನ ಫ್ರೆಂಚ್ಸೇನೆ ಈಜಿಪ್ಟ್ ನ ಅಲಕ್ಸಾಂಡ್ರಿಯಾ, ಅಕ್ಕಾ ನಗರಗಳನ್ನು ವಶಪಡಿಸಿಕೊಂಡಿತು. ಆ ಬಳಿಕ ಶತಮಾನಗಳ ಕಾಲ ಅರೇಬಿಯಾದ ಮುಸ್ಲಿಮ್ ನಾಡುಗಳು ಅತಿಕ್ರಮಿತ ಪಾಶ್ಚಾತ್ಯರ ನಾಡುಗಳಾಗಿದ್ದವು. ಫ್ರಾನ್ಸ್ ದೇಶವು 1830ರಲ್ಲಿ ಆಲ್ಜೀರಿಯಾವನ್ನೂ, 1881ರಲ್ಲಿ ಟುನೀಷ್ಯಾವನ್ನೂ 1859ರಲ್ಲಿ ಜಿಬೂಟಿಯನ್ನು, 1991ರಲ್ಲಿ ಮೌರಿತಾನಿಯಾವನ್ನೂ ಅಧೀನಗೊಳಿಸಿತು. ಇಟಲಿ 1859ರಲ್ಲಿ ಸೋಮಾಲಿಯಾವನ್ನೂ 1911ರಲ್ಲಿ ಲಿಬಿಯಾವನ್ನೂ, 1880ರಲ್ಲಿ ಎರಿತ್ರಿಯಾವನ್ನೂ ವಶಪಡಿಸಿತು. ಬ್ರಿಟನ್ 1800ರಲ್ಲಿ ಮಸ್ಕತ್, 1820ರಲ್ಲಿ ಓಮನ್ನ ಉಳಿದ ಭಾಗವನ್ನು, 1839ರಲ್ಲಿ ಏಡನನ್ನು, 1863ರಲ್ಲಿ ಬಹ್ರೈನನ್ನೂ 1878ರಲ್ಲಿ ಸೈಪ್ರಸ್ಸನ್ನೂ, 1882ರಲ್ಲಿ ಈಜಿಪ್ಟನ್ನೂ 1898ರಲ್ಲಿ ಸುಡಾನನ್ನೂ, 1899ರಲ್ಲಿ ಕುವೈಟನ್ನೂ ಅಧೀನಕ್ಕೊಳಪಡಿಸಿತು. 1916ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಜೊತೆಗೂಡಿ ಮಾಡಿಕೊಂಡ ಗುಪ್ತ ಸೆಕ್ಸಿಪಿಕೋಟ್ ಕರಾರು ಪ್ರಕಾರ ಉಸ್ಮಾನಿಯಾ ಖಿಲಾಫತ್ನ ಅದೀನದಲ್ಲಿದ್ದ ಅರಬ್ ಪಾಂತ್ಯಗಳನ್ನು ಬ್ರಿಟನ್ ಮತ್ತು ಫ್ರಾನ್ಸ್ ಹಂಚಿಕೊಡವು. ಈ ರೀತಿ ಇರಾಕ್ ಮತ್ತು ಜೋರ್ಡಾನ್, ಫೆಲೆಸ್ತೀನ್ ಮತ್ತು ಕತಾರ್, ಬ್ರಿಟನ್ಗೂ, ಸಿರಿಯಾ ಮತ್ತು ಲೆಬನಾನ್ ಫ್ರಾನ್ಸ್ ನ ಕಪಿ ಮುಷ್ಟಿಯ ಅಧೀನಗೊಂಡವು. ಮೊರೊಕ್ಕೋ ಸ್ಫೈನಿನ ಮತ್ತು ಇಂಡೋನೇಷಿಯಾ ಡಚ್ಚರ ಕಾಲನಿಗಳಾದವು. ಭಾರತ ಅಫಘಾನಿಸ್ತಾನಗಳೆಲ್ಲವೂ ಸಾಮ್ರಾಜ್ಯ ಶಕ್ತಿಗಳ ಕಪಿಮುಷ್ಟಿಗೊಳಗಿದ್ದಂತೆ.
ಕಳೆದ ಶತಮಾನ ಆದ್ಯ ಭಾಗವು ಕಳೆದು ಹೋಗುತ್ತಿದ್ದಂತೆ ಎಲ್ಲ ಪಾಶ್ಚಾತ್ಯ ಕಾಲನಿಗಳಲ್ಲಿ ಸ್ವಾತಂತ್ರ್ಯದ ಹೋರಾಟವು ಬಲವರ್ಧಿಸಿತು. ತತ್ಪರಿಣಾಮವಾಗಿ 1932ರಲ್ಲಿ ಇರಾಕ್ ಮತ್ತು 1946ರಲ್ಲಿ ಸಿರಿಯಾ, ಲೆಬನಾನ್ಗಳು, 51ರಲ್ಲಿ ಲಿಬಿಯಾ ಮತ್ತು ಓಮನ್, 52ರಲ್ಲಿ ಈಜಿಪ್ಟ್, 56ರಲ್ಲಿ ಮೊರೋಕ್ಕೋ ಸುಡಾನ್ ಮತ್ತು ಟುನೀಷ್ಯಾ, 58ರಲ್ಲಿ ಜೋರ್ಡಾನ್, 59ರಲ್ಲಿ ಮೊರಿಟಾನಿಯಾ, 60ರಲ್ಲಿ ಸೋಮಾಲಿಯಾ, 61ರಲ್ಲಿ ಕುವೈಟ್, 62ರಲ್ಲಿ ಆಲ್ಜೀರಿಯಾ, 68ರಲ್ಲಿ ಯಮನ್, 71ರಲ್ಲಿ ಕತಾರ್, ಬಹ್ರೈನ್ ಮತ್ತು ಅರಬ್ ಎಮಿರೇಟ್ಸ್ 77ರಲ್ಲಿ ಜಿಬೂಟಿಯೂ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತು. ಆದರೂ ಈ ನಾಡುಗಳಿಂದ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ ನಿರಂಕುಶಾಧಿಪತಿಗಳು ಮತ್ತು ಸ್ವೇಚ್ಛಾಧಿಪತಿಗಳಾದ ರಾಜಂದಿರು ಮತ್ತು ಚಕ್ರವರ್ತಿಗಳನ್ನು ಅಧಿಕಾರಕ್ಕೇರಿಸಿದ ನಂತರವೇ ಆ ನಾಡನ್ನು ತೊರೆದು ಹೋದರು. ಜೊತೆಯಲ್ಲಿ ಈ ನಾಡುಗಳಲ್ಲಿ ಪರಿಹರಿಸಲಾಗದ ಗಡಿ ವಿವಾದಗಳನ್ನು ಹುಟ್ಟು ಹಾಕಿದ್ದರು. ಯಮನ್ ಮತ್ತು ಸೌದಿ ಅರೇಬಿಯಾಗಳ ನಡುವೆ, ಇರಾನ್ ಮತ್ತು ಇರಾಕ್ಗಳ ನಡುವೆ, ಇರಾಕ್ ಮತ್ತು ಕುವೈಟ್ಗಳ ನಡುವೆ, ಇರಾನ್ ಮತ್ತು ಯುಎಇಗಳ ನಡುವೆ ಪರಿಹಾರವಾಗದ ವಿವಾದಗಳು ಬಾಕಿಯಾಗಿರುವುದಕ್ಕೆ ಸಾಮ್ರಾಜ್ಯಶಾಹಿ ಶಕ್ತಿಗಳು ಮಾಡಿಟ್ಟ ಕುತಂತ್ರಗಳು ಕಾರಣವಾಗಿದೆ.
ಅರೇಬಿಯನ್ ಮುಸ್ಲಿಮರು ಒಗ್ಗೂಡದಂತೆ ಇದು ತಡೆಯನ್ನು ಸೃಷ್ಟಿಸುವುದರೊಂದಿಗೆ ಪರಸ್ಪರ ಪೈಪೋಟಿ ನಡೆಸಲು ಆಸ್ಪದವಾಗುತ್ತಿವೆ. ಅಮೇರಿಕ ಮತ್ತು ಇತರ ಬಂಡವಾಳಶಾಹಿ ದೇಶಗಳಿಗೆ ಆ ನಾಡಿನ ಪೆಟ್ರೋಲ್, ಅನಿಲ ಮತ್ತು ಇತರ ಅಸಂಸ್ಕರಿತ ವಸ್ತುಗಳನ್ನು ದೋಚಲು ಅವಕಾಶ ಲಭಿಸುತ್ತಿದೆ. ಸಾಮ್ರಾಜ್ಯಶಾಹಿ ಶಕ್ತಿಗಳು ಹುಟ್ಟು ಹಾಕಿದ ವಿವಾದದ ಆಧಾರದಲ್ಲಿ ಇರಾಕ್ ಮತ್ತು ಇರಾನ್ಗಳ ನಡುವೆ ಯುದ್ಧ ನಡೆದಿತ್ತಲ್ಲವೇ. ಇದು ಅಮೇರಿಕಕ್ಕೆ ಈ ವಲಯದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶವನ್ನು ಒದಗಿಸಿತು. ಅದು ಅವರ ಉದ್ದೇಶವಾಗಿತ್ತು ಅಷ್ಟೆ. ಅರೇಬಿಯನ್ ಮುಸ್ಲಿಮ್ ದೇಶಗಳು ಸ್ವಾತಂತ್ರ್ಯವನ್ನು ಗಳಿಸಿಕೊಂಡ ನಂತರವೂ ಅಲ್ಲಿ ಪಾಶ್ಚಾತ್ಯರ ಅದೃಶ್ಯ ಸಾಮ್ರಾಜ್ಯಶಾಹಿತ್ವ, ಶೋಷಣೆ ಮತ್ತು ನಿಯಂತ್ರಣಗಳು ಇಂದಿಗೂ ನೆಲೆನಿಂತಿವೆ. ಆ ದೇಶಗಳಿಗೆ ತಮ್ಮ ನಾಡಿನ ಸಂಪನ್ಮೂಲಗಳನ್ನೇ ತಮ್ಮಿಚ್ಛೆಯಂತೆ ಉಪಯೋಗಿಸಲು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲಿನ ಆಡಳಿತಗಾರರು ಅರಿತೋ ಅರಿಯದೆಯೋ ನಿರ್ಬಂಧಕ್ಕೊಳಗಾಗಿಯೂ ಒಳಗಾಗದೆಯೂ ಪಾಶ್ಚಾತ್ಯ ಹಿತಾಸಕ್ತಿಗಳನ್ನು ಸಂರಕ್ಷಿಸಿಕೊಂಡು ಬಂದರು. ಇರಾಕ್ನ ಮೇಲೆ ಹಸ್ತಕ್ಷೇಪಿಸಲು ಅವಕಾಶ ಸಿಗುತ್ತಿದ್ದಂತೆ ಅರಬ್ ರಾಷ್ಟ್ರಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸಿತಲ್ಲದೆ ತಮ್ಮ ಸೈನಿಕರನ್ನು ಸಾಕುವ ಹೊಣೆ ಮತ್ತು ಆರ್ಥಿಕ ಹೊಣೆಯನ್ನೂ ಅವುಗಳ ಮೇಲೆಯೇ ಹೊರಿಸಿತು. ಇಂದು ಎಲ್ಲ ಅರಬ್ ನಾಡುಗಳಲ್ಲಿ ಅಮೇರಿಕ ಶಸ್ತ್ರ್ರಾಸ್ತ್ರ ದಾಸ್ತಾನು ಮತ್ತು ಸೇನಾ ನೆಲೆಗಳನ್ನು ಹೊಂದಿದೆ. ಅದನ್ನು ಕೊನೆಗೊಳಿಸಬೇಕೆನ್ನುವುದೂ ಈ ಸಾಮ್ರಾಜ್ಯಶಾಹಿ ಶೋಷಣೆಯನ್ನು ನಿಲ್ಲಿಸಬೇಕೆನ್ನುವುದನ್ನು ಪಾಶ್ಚಾತ್ಯ ನಾಡುಗಳು ಕ್ರೂರ ಪಾತಕವೆಂದು ಪರಿಗಣಿಸುತ್ತದೆ.
ಕಳೆದ ಶತಮಾನದಲ್ಲಿ ಕೊನೆ ದಶಕದ ವರೆಗೂ ಜಗತ್ತಿನಲ್ಲಿ ಬಲ ಪ್ರಯೋಗದ ಸಮತೋಲನವು ನೆಲೆಯೂರಿತ್ತು. ಆದರೆ ಸಮಾಜವಾದದ ವಿಭಾಗವು ದುರ್ಬಲಗೊಂಡು ಇತಿಹಾಸಕ್ಕೆ ಸೇರವುದರೊಂದಿಗೆ ಶೀತಲ ಯುದ್ಧ ಕೊನೆಗೊಂಡಿತು. ಜಗತ್ತು ಅಮೇರಿಕದ ನೇತೃತ್ವದಲ್ಲಿ ಏಕ ಧ್ರುವವಾಗಿ ಪರಿವರ್ತನೆಗೊಂಡಿತು. ಗಲ್ಫ್ ಯುದ್ಧದಲ್ಲಿ ಅಮೇರಿಕ ಕೂಟವು ಗೆಲ್ಲುವುದರೊಂದಿಗೆ ಅದು ಜಾಗತಿಕ ಪೋಲಿಸ್ಗಿರಿಗಿಳಿಯಿತು. ತಮ್ಮ ಹಿತಾಸಕ್ತಿಗಳಿಗೆ ಎದುರು ನಿಲ್ಲುವವರನ್ನು ಉಗ್ರವಾದಿಗಳೆಂದೂ ಭಯೋತ್ಪಾದಕರೆಂದೂ ಮುದ್ರೆಯೊತ್ತಿತು. ಅವರ ಧ್ವಂಸಕ್ಕೆ ಹೊರಟಿತು. ಆಷ್ಚತ್ರ ಕೂಟ ಕಮ್ಯುನಿಸ್ಟರ ಪತನಾನಂತರ ಇಸ್ಲಾಮನ್ನು ತಮ್ಮ ಪ್ರಥಮ ಶತ್ರುವಾಗಿ ಪರಿಗಣಿಸಿತು. ಅಮೇರಿಕಾ ಮತ್ತು ಅದರ ನೇತೃತ್ವದಲ್ಲಿರುವ ನ್ಯಾಟೋ ಈ ವಿಷಯವನ್ನು ಶಂಕಾತೀತವಾಗಿ ತಿಳಿಸಿದೆ.
ಆದುದರಿಂದ ಜಗತ್ತಿನುದ್ದಕ್ಕೂ ಇರುವ ಇಸ್ಲಾಮೀ ನವೋತ್ಥಾನ ಮತ್ತು ಮುನ್ನಡೆಯನ್ನು ದಮನಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಇಸ್ಲಾಮ್ ಮತ್ತು ಮುಸ್ಲಿಮರ ಮೇಲೆ ಧಾರ್ಮಿಕ ಮೂಲಭೂತವಾದ, ಧರ್ಮಭ್ರಾಂತಿ, ಭಯೋತ್ಪಾದನೆ, ಉಗ್ರವಾದ ಮುಂತಾದ ಪದಗಳನ್ನು ಅಡೆ ತಡೆಯಿಲ್ಲದೆ ನಿರಂತರ ಅವರು ಪ್ರಯೋಗಿಸುತ್ತಿದ್ದಾರೆ. 1993ರಲ್ಲಿ ಅಮೇರಿಕನ್ ಕಾಂಗ್ರೆಸ್ ಅಂಗೀಕರಿಸಿ ಬಿಡುಗಡೆ ಮಾಡಿ ಹೊರತಂದ ಕೇವಲ 93 ಪುಟಗಳ ‘ಹೊಸ ಜಾಗತಿಕ ಇಸ್ಲಾಮಿಸ್ಟ್ ಗಳು’ ಎಂಬ ಅಧಿಕೃತ ದಾಖಲೆಯಲ್ಲಿ 288 ಸಲ ಭಯೋತ್ಪಾದನೆ, ಭಯೋತ್ಪಾದಕರು ಎಂಬ ಪದಗಳನ್ನು ಪ್ರಯೋಗಿಸಿದ್ದಾರೆ. ಝಿಯೋನಿಸ್ಟ್ ಆಂದೋಲನದೊಂದಿಗೆ ಸಂಬಂಧವನ್ನು ಬೆಳೆಸುವ ಫಾನ್ಫೋರೆಯೆಂಟ್ಚ ಯಾಸುಫ್ ಝೋದಾನಿಸ್ಕಿ ಮುಂತಾದವರು ಪ್ರಸ್ತುತ ದಾಖಲೆಯನ್ನು ತಯಾರಿಸಿದ್ದಾರೆ.
ವಾಸ್ತವದಲ್ಲಿ ಜಗತ್ತಿನಲ್ಲಿ ಸಾಮೂಹಿಕ ಕಗ್ಗೊಲೆ ಮತ್ತು ಭಯೋತ್ಪಾದನೆಯನ್ನು ನಡೆಸುವವರು ಒಂದನೇ ಜಾಗತಿಕ ಯುದ್ಧದಲ್ಲಿ 80 ಲಕ್ಷ ಮತ್ತು ಎರಡನೇ ಜಾಗತಿಕ ಯುದ್ಧದಲ್ಲಿ 5 ಕೋಟಿ ಮತ್ತು ವಿಯೆಟ್ನಾಮ್ ಯುದ್ಧದಲ್ಲಿ ಮೂವತ್ತು ಲಕ್ಷ ಜನರು ಸತ್ತರು. ಪನಾಮ ಮತ್ತು ಗ್ವಾಟಮಾಲದಲ್ಲಿ ನಿಕರಾಗುವಾ, ಕೆಂಬೋಡಿಯಾ, ಕೊರಿಯಾ ಮತ್ತು ದಕ್ಷಿಣಾಫ್ರಿಕದಲ್ಲಿ ಲಕ್ಷಾಂತರ ಜನರ ಕಗ್ಗೊಲೆ ನಡೆಯಿತು. ಇವುಗಳಲ್ಲಿ ಇಸ್ಲಾಮಿನದ್ದಾಗಲಿ ಮುಸ್ಲಿಮರದ್ದಾಗಲಿ ಯಾವುದೇ ಪಾತ್ರವಿರಲಿಲ್ಲ. ಜಪಾನ್ ಯುದ್ಧದಿಂದ ಹಿಂದೆ ಸರಿಯಲು ಸಿದ್ಧವಾಗಿದ್ದರೂ ಹಿರೋಷಿಮ ನಾಗಸಾಕಿಗಳಲ್ಲಿ ಅಣುಬಾಂಬ್ ಹಾಕಿರುವುದು ಕ್ರೂರ ಭಯೋತ್ಪಾದಕನಾದ ಅಮೇರಿಕಾವೇ ಆಗಿದೆ. ಆ ಹೆಸರಿಗೆ ಅದು ಇಂದು ಕೂಡಾ ಅರ್ಹವಾಗಿಯೇ ಇದೆ. ತಮ್ಮ ಹಿತಾಸಕ್ತಿಗಳನ್ನು ಸ್ವೀಕರಿಸದಿರುವ ಎಲ್ಲ ದೇಶಗಳನ್ನು ಮತ್ತು ಸಮುದಾಯಗಳನ್ನು ಅದು ವಿರೋಧಿಸುತ್ತಿದೆ. ತನ್ನ ನಿಯಂತ್ರಣಕ್ಕೆ ಬಾರದ ಎಲ್ಲ ನಾಡುಗಳಲ್ಲಿ ಅದು ಭಯೋತ್ಪಾದನೆಯ ಕೃತ್ಯವನ್ನು ಮಾಡಿಸುತ್ತಿದೆ. ಅದಕ್ಕೆಂದೇ ಗುಪ್ತ ದಳವಾದ ಸಿಐಎ ಮತ್ತು ಭಯೋತ್ಪಾದನೆಯ ಚಟುವಟಿಕೆಯಲ್ಲಿ ನಿರತವಾದ ಝಿಯೋನಿಸ್ಟರನ್ನು ಅದು ಬಳಸಿಕೊಳ್ಳುತ್ತಿದೆ. ಆಂತರಿಕ ಸಮಸ್ಯೆಗಳನ್ನು ದೂರವಿರಿಸುವುದಕ್ಕೂ ಅದು ಜಗತ್ತಿನಲ್ಲಿ ಯುದ್ಧಗಳನ್ನು ಮಾಡಿಸುತ್ತಿದೆ. ಅಮೇರಿಕಾದ ರಾಜಕೀಯ ವೃತ್ತಗಳಲ್ಲಿ ನೆರೆದು ನಿಂತ ಮಿಸ್ಟರ್ ರೋಸ್ಪೊರರ್ ಹೇಳುತ್ತಾರೆ- ಆಂತರಿಕ ಪರಿಸ್ಥಿತಿ ಕೆಟ್ಟು ಹೋದಾಗ ಗಮನವನ್ನು ಬೇರೆಡೆಗೆ ಸೆಳೆಯಲು ನಾವು ಜಗತ್ತಿನಲ್ಲಿ ಸಣ್ಣ ಯುದ್ಧಗಳನ್ನು ಮಾಡಿಸುತ್ತೇವೆ. ಈ ರೀತಿ ಕಳೆದ ಒಂದು ಶತಮಾನದಲ್ಲಿ ಅಮೇರಿಕ ಜಗತ್ತಿನ 50ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಹಸ್ತಕ್ಷೇಪ ನಡೆಸಿ ಕ್ಷೋಭೆ ಮತ್ತು ಸಾಮೂಹಿಕ ಕಗ್ಗೊಲೆಗಳನ್ನು ಮಾಡಿಸಿದೆ. ಇಂತಹ ಒಂದು ಭಯೋತ್ಪಾದಕ ರಾಷ್ಟ್ರದ ಸುಳ್ಳು ಪ್ರಚಾರವು ಇಸ್ಲಾಮ್ ಮತ್ತು ಮುಸ್ಲಿಮರ ಕುರಿತು ತಪ್ಪು ಅಭಿಪ್ರಾಯಗಳು ಬೆಳೆಯುವುದಕ್ಕ್ಕೆಕಾರಣವಾಗಿದೆ.
ಎಲ್ಲ ವಿಧದ ಪ್ರಚಾರದ ಸರಕುಗಳನ್ನು ಹಸ್ತದಲ್ಲಿಟ್ಟು ಕೊಂಡಿರುವ ಅಮೇರಿಕದ ಕುಟಿಲ ತಂತ್ರಗಳು ಜಾಗತಿಕ ಜನ ಸಮುದಾಯವನ್ನು ತಪ್ಪು ದಾರಿಗೆಳೆಯುವುದರಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ವಾಸ್ತವದಲ್ಲಿ ಇಂದು ಅತಿ ಕ್ರೂರ ಭಯೋತ್ಪಾದಕ ಕೃತ್ಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೇ ನಡೆಸುತ್ತಿದೆ. ಯಾವುದಾದರೊಂದು ದೇಶದ ಪ್ರಯಾಣಿಕ ವಿಮಾನವನ್ನು ಅಪಹರಿಸಿ ಅದರಲ್ಲಿದ್ದ ಪ್ರಯಾಣಿಕರನ್ನು ಸೆರೆಯಾಳುಗಳನ್ನಾಗಿರಿಸಿದರೆ ಅಂತಹವರನ್ನು ನಾವು ಉಗ್ರವಾದಿಗಳು ಮತ್ತು ಭಯೋತ್ಪಾದಕರೆಂದು ಕರೆಯುವೆವು. ಅದು ಖಂಡಿತವಾಗಿಯೂ ಸರಿಯೇ ಆಗಿದೆ. ನಿರಪರಾಧಿಗಳಾದ ಪ್ರಯಾಣಿಕರನ್ನು ಶಾರೀರಿಕವಾಗಿಯೂ ಮಾನಸಿಕವಾಗಿಯೂ ಪೀಡಿಸುವುದು ಕ್ರೂರವೂ ಮಾನವ ವಿರೋಧಿಯೂ ಆಗಿದೆ. ಆದ್ದರಿಂದ ಅದು ಧರ್ಮ ವಿರೋಧಿಯೂ ಆಗಿದೆ. ಆದರೆ ಸದ್ದಾಮ್ ಹುಸೈನ್ ಎಂಬ ಓರ್ವ ಆಡಳಿತಗಾರನಲ್ಲಿದ್ದ ವೈರಕ್ಕಾಗಿ ಇರಾಕ್ನ ಒಂದೂ ಕಾಲು ಕೋಟಿ ಜನರನ್ನು ಕಳೆದ 11 ವರ್ಷಗಳಲ್ಲಿ ಆಹಾರ ಔಷಧಗಳನ್ನು ನೀಡದೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಬಂದಿಗಳಾಗಿಸಿರುವುದಲ್ಲದೆ, 6 ಲಕ್ಷ ಮಕ್ಕಳು ಸಹಿತ 11 ಲಕ್ಷ ಮಂದಿಯನ್ನು ಕೊಂದು ಹಾಕಿತು. ಈ ರೀತಿ ಜಗತ್ತಿನಲ್ಲಿ ಅತಿ ಕ್ರೂರಿ ಕೊಲೆಗಡುಕನಾಗಿ ಪರಿವರ್ತನೆಗೊಂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈಗ ಶಾಂತಿಯ ಕಾವಲು ಭಟನೆಂದು ಕರೆಯಲ್ಪಡುತ್ತಿರುವುದು ಎಷ್ಟೊಂದು ವಿಚಿತ್ರವೂ ವಿರೋಧಭಾಸವೂ ಆಗಿದೆ. ಅಮೇರಿಕದಲ್ಲದ ಯಾವುದೇ ಮಾನದಂಡ ಇಂದು ಲೋಕದಲ್ಲಿಲ್ಲ ಎಂಬುದೇ ಅದಕ್ಕೆ ಕಾರಣವಾಗಿದೆ.
ಮುಸ್ಲಿಮರಲ್ಲಿ ಉಗ್ರವಾದಿಗಳೋ ಅಥವಾ ಭಯೋತ್ಪಾದಕರೋ ಇಲ್ಲವೆಂದು ಇದರ ಅರ್ಥವಲ್ಲ. ಇಸ್ಲಾಮನ್ನು ಕಳಂಕಿತಗೊಳಿಸುವ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಕೆಲವರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಸ್ಲಿಮ್ ದೇಶಗಳಲ್ಲಿ ಅಂತಹ ಕೃತ್ಯಗಳು ಕಾಣಿಸಿಕೊಳ್ಳಲು ಇಲ್ಲಿನ ಸ್ವೇಚ್ಛಾಧಿಪತಿ ಆಡಳಿತಗಾರರು ಮತ್ತು ಅವರ ದೌರ್ಜನ್ಯಗಳು ಕಾರಣವಾಗಿವೆ. ಪ್ರಜಾಪ್ರಭುತ್ವದ ಶಾಂತಿಯ ಮಾರ್ಗಗಳಿಂದ ಜನರ ಅಭಿಲಾಷೆಗಳಿಗೆ ಪ್ರಾತಿನಿಧ್ಯ ನೀಡುವ ಸರಕಾರಗಳನ್ನು ಸ್ಥಾಪಿಸಲು ಮತ್ತು ಕಳೆದ ಕೆಲವು ದಶಕಗಳಿಂದ ನಡೆಸುತ್ತಾ ಬರುವ ಪ್ರಯತ್ನಗಳು ಸಾಮ್ರಾಜ್ಯಶಾಹಿ ಶಕ್ತಿಗಳ ಹಸ್ತಕ್ಷೇಪದ ಕಾರಣದಿಂದ ಸೋಲನುಭವಿಸಿದ್ದು ಜಿಗುಪ್ಸೆ ತಾಳಿದ ಯುವಕರು ಉಗ್ರವಾದಿ ನಿಲುವನ್ನು ಸ್ವೀಕರಿಸುತ್ತಿದ್ದಾರೆ. ಮುಸ್ಲಿಮ್ ಅಲ್ಪಸಂಖ್ಯಾತರಾದ ಕೆಲವು ನಾಡಿನಲ್ಲಿ ಸರಕಾರಿ ಭಯೋತ್ಪಾದನೆಗೆ ಬೇಸತ್ತು ಯುವಕರನ್ನು ಅದೇ ಮಟ್ಟದ ಪ್ರತಿ ಹೊಡೆತಕ್ಕೆ ಪ್ರೇರೇಪಿಸುತ್ತಿದೆ. ಬೆರೆಳೆಣಿಕೆಯ ಇಂತಹ ಘಟನೆಗಳನ್ನು ದೊಡ್ಡದಾಗಿ ಮಾಡಿ ತೋರಿಸಿ ಇಸ್ಲಾಮ್ನ ವಿರುದ್ಧ ಭಯೋತ್ಪಾದನೆ ಮತ್ತು ಉಗ್ರವಾದವನ್ನು ಆರೋಪಿಸಲಾಗುತ್ತಿದೆ.
ಇಸ್ಲಾಮ್ ಎಲ್ಲ ರೀತಿಯ ಭಯೋತ್ಪಾದನೆಗಳನ್ನು ವಿರೋಧಿಸುತ್ತಿದೆ. ವ್ಯಕ್ತಿ, ಸಂಘಟನೆ, ಸರಕಾರ ಮತ್ತು ವಿಶ್ವಸಂಸ್ಥೆಯ ಭಯೋತ್ಪಾನೆಯನ್ನು ಕೂಡಾ ಅದು ಎದುರಿಸುತ್ತಿದೆ. ಭಯೋತ್ಪಾದನೆ ಮತ್ತು ಉಗ್ರವಾದವನ್ನು ಅದು ನಿರಾಕರಿಸುತ್ತಿದೆ. ಅಮಾಯಕರ ಮರಣ, ಸೊತ್ತು ವಿತ್ತ ನಾಶಗಳಿಗೆ ಅವಕಾಶ ನೀಡುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಧರ್ಮ ವಿರೋಧಿಯಾಗಿದೆ. ಆ ಕಾರಣವಾಗಿ ಓರ್ವನನ್ನು ವಧಿಸುವುದು ಸಕಲ ಮಾನವರನ್ನು ವಧಿಸುವುದಕ್ಕೆ ಸಮ. ಓರ್ವರಿಗೆ ಜೀವನ ನೀಡುವುದು ಸಕಲ ಮಾನವರಿಗೆ ಜೀವನ ನೀಡುವುದಕ್ಕೆ ಸಮ ಎಂದು ಪವಿತ್ರ ಕುರ್ಆನ್ ಅಸಂದಿಗ್ಧವಾಗಿ ಘೋಷಿಸಿದೆ. (5.32)
ಆದುದರಿಂದ ವಿಶ್ವಾಸಿಗಳು ಉಗ್ರವಾದಿಗಳಾಗುವುದು, ಭಯೋತ್ಪಾದನಾ ಚಟುವಟಿಕೆ ನಡೆಸುವುದು ಎಂದೂ ಸಾಧ್ಯವಿಲ್ಲ. ಜಗತ್ತಿನಾದ್ಯಂತ ಮುಸ್ಲಿಮರು ಭಯೋತ್ಪಾದನೆ ನಡೆಸುವವರು ಎಂಬುದು ಅಮೇರಿಕಾ ಮತ್ತು ಸಂಗಡಿಗರ ಅಪಪ್ರಚಾರವಾಗಿದೆ.( ಹೆಚ್ಚಿನ ವಿವರಗಳಿಗೆ ಶಾಂತಿ ಪ್ರಕಾಶನದ ಭಯೋತ್ಪಾದನೆ ಮತ್ತು ಇಸ್ಲಾಮ್ ಹಾಗೂ ಜಿಹಾದ್ ಮತ್ತು ಭಯೋತ್ಪಾದನೆ ಎಂಬ ಕೃತಿಗಳ ಅಧ್ಯಯನವನ್ನು ನಡೆಸಿರಿ)
ಮಹಿಳೆಯೇಕೆ ಪ್ರವಾದಿಯಾಗಿಲ್ಲ?
ಮಹಿಳೆಯೇಕೆ ಪ್ರವಾದಿಯಾಗಿಲ್ಲ?
ಉತ್ತರ : ದೇವನು ಕಲಿಸಿರುವ ಜೀವನ ವ್ಯವಸ್ಥೆಯನ್ನು ಜನರಿಗೆ ಕಲಿಸುವುದು, ಆ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜನರಿಗೆ ತೋರಿಸುವುದು ಪ್ರವಾದಿಗಳ ಪ್ರಧಾನ ಹೊಣೆಗಾರಿಕೆಯಾಗಿದೆ. ಆದ್ದರಿಂದ ಆರಾಧನಾ ವಿಷಯಗಳಲ್ಲೂ ಆರ್ಥಿಕ, ಸಾಂಸ್ಕ್ರತಿಕ, ರಾಜಕೀಯ ರಂಗಗಳಲ್ಲೂ ಯುದ್ಧ ಒಪ್ಪಂದದ ವಿಷಯಗಳಲ್ಲೂ ಅವರು ಮಾನವ ಕೋಟಿಗೆ ಮಾದರಿಯಾಗಿದ್ದಾರೆ. ತಿಂಗಳಿನ ಕೆಲವು ದಿನಗಳಲ್ಲಿ ಆರಾಧನಾ ಕರ್ಮಗಳಿಗೆ ನೇತೃತ್ವ ವಹಿಸುವುದರಿಂದಲೂ, ಗರ್ಭಧಾರಣೆ, ಹೆರಿಗೆ ಮುಂತಾದ ವಿಷಯಗಳಿಂದಾಗಿ ಆಡಳಿತದಿಂದ ಅಥವಾ ನಾಯಕತ್ವದಿಂದ ಹಿಂದೆ ಸರಿಯಬೇಕಾದಂತಹ ಅನಿವಾರ್ಯತೆ ಮಹಿಳೆಯರಿಗೆ ಸಂಬಂಧಿಸಿದಂತೆ ಇದೆ. ಆದ್ದರಿಂದ ಜನರಿಗೆ ಸದಾ ಮಾರ್ಗದರ್ಶನ ನೀಡಬೇಕಾದಂತಹ ಹೊಣೆಗಾರಿಕೆಯಿಂದ ಅವಳನ್ನು ಮುಕ್ತಗೊಳಿಸಲಾಗಿದೆ. ಆದರೂ ಪ್ರವಾದಿ ಮೂಸಾರ(ಅ) ತಾಯಿಗೆ, ತನ್ನ ಜೀವನದಲ್ಲಿ ಅಳವಡಿಸಬೇಕಾದ ಸದಾಚಾರಗಳ ಕುರಿತು ದೇವರಿಂದ ನೇರವಾಗಿ ಸೂಚನೆ ನೀಡಲಾಗಿದೆ ಎಂದು ಕುರ್ಆನ್ ತಿಳಿಸಿದೆ. ಅಲ್ಲಾಹನು ಹೇಳುತ್ತಾನೆ, “ನಾವು ಮೂಸಾರ ತಾಯಿಗೆ, ‘ಇದಕ್ಕೆ ಮೊಲೆ ಹಾಲುಣಿಸು. ಮುಂದೆ ನಿನಗೆ ಇದರ ಪ್ರಾಣದ ಬಗೆಗೆ ಭಯವುಂಟಾದರೆ ಇದನ್ನು ನದಿಯಲ್ಲಿ ಹಾಕಿಬಿಡು. ನೀನು ಕೊಂಚವೂ ಭಯ ಪಡಬೇಡ. ನಾವು ಇದನ್ನು ನಿನ್ನ ಬಳಿಗೆ ಮರಳಿ ತರುವೆವು ಮತ್ತು ಇದನ್ನು ಸಂದೇಶ ವಾಹಕರಲ್ಲಿ ಸೇರಿಸುವೆವು’ ಎಂದು ಸೂಚನೆ ನೀಡಿದೆವು.” (28.7)
ಕಾಫಿರ್ ಎಂಬ ಪದ ಮತ್ತು ಅದನ್ನು ಸುತ್ತಿರುವ ವಿವಾದ?
ಕಾಫಿರ್ ಎಂಬ ಪದ ಮತ್ತು ಅದನ್ನು ಸುತ್ತಿರುವ ವಿವಾದ?
`ಕಾಫಿರ್’ ಎಂಬುದು ವ್ಯಾಪಕ ದೃಷ್ಟಿಯಲ್ಲಿ ಗುಣವಾಚಕ ಸಂಕೇತವಾಗಿದ್ದು ಇದು ಅಪಮಾನ ಭೋದಕ ಶಬ್ದವಲ್ಲ. ಇದು ಯಾರ ಕುರಿತು ಸಂಬೋಧಿಸಲಾಗಿದೆಯೆಂದರೆ ಅವರ ಮುಂದೆ ದೈವಿಕ ಶಿಕ್ಷಣಗಳನ್ನು ತಿಳಿಸಲಾಗಿತ್ತು ಮತ್ತು ಅವರು ಯಾವುದೋ ಕಾರಣದಿಂದ ಈ ಶಿಕ್ಷಣಗಳನ್ನೇ ತಪ್ಪೆಂದು ಭಾವಿಸಿದರು ಹಾಗೂ ಅವರು ಅವನ್ನೆಲ್ಲ ತಿರಸ್ಕರಿಸಿದ್ದರು. ಮಾತ್ರವಲ್ಲ, ಅವರು ಅಮುಸ್ಲಿಮರಾಗಿದ್ದರೂ ಮುಸ್ಲಿಮರೆಂದು ತಮ್ಮನ್ನು ಹೆಸರಿಸುತ್ತಿದ್ದರು. ಇಸ್ಲಾಮಿನ ಮೇಲೆ ಅವರು ನಿಷ್ಠೆ ಇರಿಸಿರಲಿಲ್ಲ. ಇಂತಹವರಿಗೂ ಕುಫ್ರ್ ಎಂಬ ಶಬ್ದ ಅನ್ವಯವಾಗುತ್ತದೆ. ಉದಾ: ದೇವನ ಸಂದೇಶ ವಾಹಕರಾದ ಪ್ರವಾದಿಯವರು(ಸ) ಹೇಳಿದರು, “ಯಾವ ಮುಸ್ಲಿಮನು ಉದ್ದೇಶಪೂರ್ವಕ ನಮಾಝ್ ತೊರೆದನೋ. ಅವನು ಕುಫ್ರ್ ಮಾಡಿದನು.” (ಹದೀಸ್) ಪವಿತ್ರ ಕುರ್ಆನ್ ಹೇಳುತ್ತದೆ, “ಅಲ್ಲಾಹನು ಅವತೀರ್ಣಗೊಳಿಸಿದ ಕಾನೂನಿನ ಪ್ರಕಾರ ತೀರ್ಮಾನ ಮಾಡದವರೇ ಸತ್ಯನಿಷೇಧಿ(ಕಾಫಿರ್)ಗಳು.” (5:44)
ಇಸ್ಲಾಮ್ನ ಅನುಯಾಯಿಯಾಗಿದ್ದು ಅಥವಾ ಹಾಗೆ ವಾದಿಸುತ್ತಿದ್ದು-ಮುಸ್ಲಿಮನೆಂದು ಹೇಳುತ್ತಿದ್ದು ಇಸ್ಲಾಮಿನಲ್ಲಿ ನಿಷ್ಠೆ ಇರಿಸದವರನ್ನು ಈ ಶಿಕ್ಷಣವು ಸಂಭೋದಿಸುತ್ತಿದೆ. ಪವಿತ್ರ ಕುರ್ಆನ್ ಇನ್ನೊಂದು ಕಡೆಯಲ್ಲಿ ಹೇಳುತ್ತದೆ, “ಯಾರು ತಾಗೂತ (ಕಾಲ್ಪನಿಕ ದೇವರು)ನ್ನು ಕುಫ್ರ್ (ನಿರಾಕರಣೆ) ಮಾಡಿದನೋ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಟ್ಟನೋ ಅಂತಹವನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿಕೊಂಡನು. (ಅವನು ಆಶ್ರಯ ಪಡೆದ) ಅಲ್ಲಾಹ್ ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.” (2:256) ಇಲ್ಲಿ ಪವಿತ್ರ ಕುರ್ಆನ್ ಕುಫ್ರ್ ಎಂಬ ಶಬ್ದಕ್ಕೆ ನಿರಾಕರಣೆ ಎಂಬ ಅರ್ಥ ನೀಡಿದೆ ಮತ್ತು ಮುಸ್ಲಿಮರಿಗೆ ತಾಗೂತನ್ನು ನಿರಾಕರಿಸಲು ಸೂಚಿಸಿದೆ.
ಕುಫ್ರ್ ಅರಬಿ ಭಾಷೆಯ ಪದವಾಗಿದೆ. ಇದರ ಅರ್ಥ ಯಾವುದೇ ವಸ್ತುವನ್ನು ಅಡಗಿಸುವುದು, ಮರೆಸುವುದು ಎಂದಾಗಿದೆ. ಇದೇ ರೀತಿ ಕುಫ್ರ್ ಗೆ ಕೃತಘ್ನತೆ, ಅಸಂತೋಷ ಎಂಬ ಅರ್ಥವೂ ಇದೆ. ಅಂದರೆ ಯಾವುದೇ ವ್ಯಕ್ತಿ ಕೃತಘ್ನತೆ ತೋರಿಸುತ್ತಾನೆ, ತನಗೆ ಉಪಕಾರ ಮಾಡಿದವನ ಉಪಕಾರವನ್ನು ಅಡಗಿಸಿಡುತ್ತಾನೆ ಮತ್ತು ಅದರ ಮೇಲೆ ಪರದೆ ಹಾಕುತ್ತಾನೆ ಎಂದಾಗುತ್ತದೆ. ಇದೇ ರೀತಿ ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನು ತನ್ನ ಸಂದೇಶವಾಹಕರನ್ನು ಭೂಮಿಗೆ ಕಳುಹಿಸಿ ತನ್ನ ದಾಸರಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಆದೇಶ ನೀಡಿದ್ದಾನೆ ಮತ್ತು ಈ ಆದೇಶದಲ್ಲಿ ವಿಶ್ವಾಸವಿರಿಸಲು ನಿರಾಕರಿಸುವುದು ಎಂಬುದು ಇನ್ನೊಂದು ಅರ್ಥವಾಗಿದೆ. ಪವಿತ್ರ ಕುರ್ಆನ್ನಲ್ಲಿ ಬೇರೆ ಅರ್ಥದಲ್ಲಿಯೂ ಈ ಪದ ಬಳಕೆಗೊಂಡಿದೆ ಮತ್ತು ಇಸ್ಲಾಮ್ನಲ್ಲಿ ಇದು ಒಂದು ಪಾರಿಭಾಷಿಕ ಶಬ್ದವಾಗಿಯೂ ಪರಿಗಣನೆ ಪಡೆದುಕೊಂಡಿದೆ.
ಒಬ್ಬ ರೈತ ಹೊಲದಲ್ಲಿ ಬೀಜವನ್ನು ಬಿತ್ತುತ್ತಾನೆ. ಅರ್ಥಾತ್ ಅದನ್ನು ಹೊರಗೆ ಕಾಣದಂತೆ ಇರಿಸುತ್ತಾನೆ. ಹಾಗಾಗಿ ರೈತನನ್ನು ಕೂಡಾ ಕಾಫಿರ್ (ಬೀಜವನ್ನು ಹೂತಿಡುವವನು) ಎಂದು ಹೇಳಲಾಗುತ್ತಿದೆ. ಕೆಲವು ಕಡೆ ಕೃತಜ್ಞತೆಗೆ ವಿರುದ್ಧ ಪದವಾಗಿ ಕೃತಘ್ನತೆಯ ಅರ್ಥದಲ್ಲಿಯೂ ಈ ಪದ ಬಳಕೆಯಾಗಿದೆ. ಹಾಗಾಗಿ ಸೃಷ್ಟಿಕರ್ತನ ಉಪಕಾರಕ್ಕೆ ಉತ್ತರವಾಗಿ ಕೃತಜ್ಞತೆಯ ಬದಲು ಕೃತಘ್ನತೆಯ ನಿಲುವು ಹೊಂದುವುದು ಕುಫ್ರ್ ಎನಿಸಿ ಕೊಳ್ಳುತ್ತಿದೆ ಮತ್ತು ಹೀಗೆ ಮಾಡುವ ವ್ಯಕ್ತಿಯೇ ಕಾಫಿರ್ ಎಂದು ಕರೆಯಲ್ಪಡುತ್ತಾನೆ.
ಪವಿತ್ರ ಕುರ್ಆನ್ ಹೇಳುತ್ತದೆ, “ಚೆನ್ನಾಗಿ ತಿಳಿದುಕೊಳ್ಳಿರಿ! ಲೌಕಿಕ ಜೀವನವು ಕೇವಲ ಒಂದು ಆಟ ವಿನೋದ, ತೋರಿಕೆಯ ವೈಭವ, ಪರಸ್ಪರರ ಮೇಲೆ ಹಿರಿಮೆ ಸಾಧಿಸುವ ಪ್ರಯತ್ನ ಮತ್ತು ಸಂಪತ್ತು ಹಾಗೂ ಸಂತಾನದ ವಿಷಯದಲ್ಲಿ ಪರಸ್ಪರರನ್ನು ವಿೂರಿ ಹೋಗುವ ಪೈಪೋಟಿ ಮಾತ್ರವಲ್ಲದೆ ಇನ್ನೇನೂ ಅಲ್ಲ. ಇದರ ಉಪಮೆ ಹೀಗಿದೆ: ಒಂದು ಮಳೆ ಬಂದೊಡನೆ ಅದರಿಂದಾಗಿ ಹುಟ್ಟುವ ಸಸ್ಯಗಳನ್ನು ಕಂಡು ಕೃಷಿಕರು ಸಂತೋಷಗೊಂಡು ತರುವಾಯ ಅದೇ ಬೆಳೆಯು ಬಲಿತಾಗ ಅದು ಹಳದಿಯಾಗಿ ಬಿಟ್ಟದ್ದನ್ನು ನೀವು ಕಾಣುತ್ತೀರಿ. ಅನಂತರ ಅದು ಹೊಟ್ಟಾಗಿ ಬಿಡುತ್ತದೆ.” (57:20) ಇಲ್ಲಿ ಪವಿತ್ರ ಕುರ್ಆನ್ ಈ ಶಬ್ದವನ್ನು `ಕುಫ್ಫಾರ್’ (ಕಾಫಿರುಗಳು) ಅಂದರೆ ಕೃಷಿಕರು ಎಂಬ ಅರ್ಥದಲ್ಲಿ ಪ್ರಯೋಗಿಸಿದೆ. ಪವಿತ್ರ ಕುರ್ಆನ್ನಲ್ಲಿ ಅಲ್ಲಾಹನು ಹೇಳುತ್ತಾನೆ, “ನೀನು ನನ್ನನ್ನು ಸ್ಮರಿಸುತ್ತಿರು. ನಾನು ನಿನ್ನನ್ನು ಸ್ಮರಿಸುವೆನು ಮತ್ತು ನನಗೆ ಕೃತಜ್ಞತೆ ತೋರಿಸುತ್ತಾ ಇರು. ನನಗೆ ಕುಫ್ರ್ (ಕೃತಘ್ನತೆ) ತೋರಿಸಬೇಡ”.
ಪವಿತ್ರ ಕುರ್ಆನ್ ಈ ವಚನದಲ್ಲಿ ಕುಫ್ರ್ ಎಂಬುದನ್ನು ಕೃತಘ್ನತೆ ಎಂಬ ಅರ್ಥದಲ್ಲಿ ಬಳಸಿದೆ. ಪವಿತ್ರ ಕುರ್ಆನ್ನಲ್ಲಿ ಎಲ್ಲ ಕಡೆಗಳಲ್ಲಿಯೂ ದೇವನು ಮತ್ತು ಅವನ ಶಿಕ್ಷಣಗಳು ಹಾಗೂ ಆದೇಶಗಳನ್ನು ನಿರಾಕರಿಸುವವರಿಗೆ ಕಾಫಿರ್ ಎಂಬ ಶಬ್ದ ಬಳಕೆಯಾಗಿದೆ. ಅಂದರೆ ಇದರ ಅರ್ಥ ಬೈಗುಳವೋ, ಅನಾದರವೋ, ತಿರಸ್ಕಾರವೋ ಎಂದಲ್ಲ. ಬದಲಾಗಿ ನಿರಾಕರಿಸುತ್ತಿರುವವರ ವಾಸ್ತವವನ್ನು ತಿಳಿಸುವುದಕ್ಕಾಗಿ ಹೀಗೆ ಈ ಪದ ಬಳಕೆಗೊಂಡಿದೆ. ಕಾಫಿರ್ ಶಬ್ದ ಹಿಂದೂ ಶಬ್ದದ ಪರ್ಯಾಯ ಶಬ್ದವಲ್ಲ. ಆದರೆ ಇಂದು ಆ ರೀತಿ ಅಪಪ್ರಚಾರ ನಡೆಸಲಾಗುತ್ತಿರುವುದು ಶುದ್ಧ ತಪ್ಪಾಗಿದೆ. ಸುಮಾರಾಗಿ ಕಾಫಿರ್ ಶಬ್ದದ ಪರ್ಯಾಯ ವಾಚಕ ಶಬ್ದವನ್ನು ನಾಸ್ತಿಕ ಎಂದು ಕರೆಯಬಹುದಾಗಿದೆ.
ಪವಿತ್ರ ಕುರ್ಆನ್ನಲ್ಲಿ ಬಹುವಂಶ ಕುಫ್ರ್ ಶಬ್ದವನ್ನು ವಿಶ್ವಾಸ (ಈಮಾನ್)ದ ನಿರಾಕರಣೆ ಎಂಬರ್ಥದಲ್ಲಿ ಪ್ರಯೋಗಿಸಲಾಗಿದೆ. ಧರ್ಮದಲ್ಲಿ ಅವಿಶ್ವಾಸ ತಾಳಿದವರ ಬಗ್ಗೆ ಪ್ರತಿಯೊಂದು ಧರ್ಮವೂ ವಿಶೇಷ ಶಬ್ದಾವಳಿಯನ್ನು ಬಳಸುತ್ತಿದೆ. ಉದಾ: ಯಾವುದೇ ವ್ಯಕ್ತಿ ಹಿಂದೂ ಕುಟುಂಬದಲ್ಲಿ ಹುಟ್ಟುತ್ತಾನೆ, ಆದರೆ ಆ ಧರ್ಮದಲ್ಲಿ ವಿಶ್ವಾಸವಿರಿಸುವುದಿಲ್ಲ ಎಂದಾದರೆ ಅಂತಹವನನ್ನು ನಾಸ್ತಿಕ ಎಂದು ಕರೆಯುತ್ತಾರೆ. ಇದೇ ರೀತಿ ಪ್ರತಿಯೊಂದು ಧರ್ಮದಲ್ಲಿ ಆ ಧರ್ಮಗಳ ಮೂಲಭೂತ ವಿಶ್ವಾಸ ಹಾಗೂ ಶಿಕ್ಷಣಗಳಲ್ಲಿ ವಿಶ್ವಾಸವಿರಿಸುವವರು ಮತ್ತು ವಿಶ್ವಾಸವಿರಿಸದವರಿಗೆ ಬೇರೆ ಬೇರೆ ವಿಶೇಷ ಶಬ್ದಗಳನ್ನು ಬಳಸಲಾಗಿದೆ. ಹಿಂದೂ ಧರ್ಮದಲ್ಲಿ ಅಂತಹವರಿಗೆ ನಾಸ್ತಿಕ, ಅನಾರ್ಯ, ಅಸಭ್ಯ, ದಸ್ಯು ಮತ್ತು ಮ್ಲೇಚ್ಛ ಎಂಬ ಶಬ್ದಗಳನ್ನು ಬಳಸಲಾಗುತ್ತಿದೆ. ಅಂದರೆ ಅವರು ಹಿಂದೂ ಧರ್ಮದ ಅನುಯಾಯಿಗಳಲ್ಲ ಎಂದರ್ಥ.
ಕುಫ್ರ್ ನ ಒಂದು ಅರ್ಥ ಒಳಿತಿನ ಮೇಲೆ ಪರದೆ ಹಾಕುವುದೆಂದಾಗಿದೆ. ಸಕಲ ಅನುಗ್ರಹಗಳನ್ನು ದೇವನು ನೀಡಿದ್ದಾನೆ. ಈ ಸತ್ಯವನ್ನು ಅಡಗಿಸಿಟ್ಟು ಅಥವಾ ಪರದೆ ಹಾಕಿ ಅನುಗ್ರಹಗಳನ್ನು ಇತರರಿಗೆ ಪೋಣಿಸುವುದು ಮತ್ತು ಅಲ್ಲಾಹನನ್ನು ಬಿಟ್ಟು ಇತರರಿಗೆ ಕೃತಜ್ಞನಾಗಿರುವುದು ಕುಫ್ರ್ ನ ವರ್ತನೆಯಾಗಿದೆ.
ಕಾಫಿರ್ ಶಬ್ದ ವಾಸ್ತವದಲ್ಲಿ “ದೈವಿಕ ಸತ್ಯ ಧರ್ಮದಲ್ಲಿ” ವಿಶ್ವಾಸ ವಿರಿಸದಿರುವವರು ಮತ್ತು ವಿಶ್ವಾಸವಿರಿಸುವವರ ಮಧ್ಯೆ ವ್ಯತ್ಯಾಸವನ್ನು ಸ್ಪಷ್ಟಪಡಿಸುವುದಕ್ಕಾಗಿ ಬಳಸಲಾಗಿದೆಯೇ ಹೊರತು ಬೈಗುಳವೋ ಅನಾದರವನ್ನೋ ವ್ಯಕ್ತಪಡಿಸುವುದಕ್ಕಾಗಿರುವುದಲ್ಲ. ಈಗ ಕಾಫಿರ್ ಶಬ್ದದಲ್ಲಿ ತಿರಸ್ಕಾರ ಮತ್ತು ಅಪಮಾನದ ಯಾವುದೇ ಮಜಲುಗಳಿಲ್ಲವೆಂದು ಸ್ಪಷ್ಟವಾಯಿತಷ್ಟೇ. ಇಲ್ಲಿ ಸೈದ್ಧಾಂತಿಕವಾದ ಸತ್ಯಧರ್ಮ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳ ನಡುವೆ ವ್ಯತ್ಯಾಸವನ್ನು ಸ್ಪಷ್ಟಪಡಿಸಲು ಈ ಪದವನ್ನು ಬಳಸಲಾಗಿದೆ. ಯಾಕೆಂದರೆ ಇಸ್ಲಾವಿೂ ಆದೇಶಗಳನ್ನು ಪಾಲಿಸುವವರು ಪಾಲಿಸದಿರುವವರ ಜೊತೆ ಬೇರೆ ಬೇರೆ ರೀತಿ ವ್ಯವ ಹರಿಸಲು ಸಾಧ್ಯವಾಗಬೇಕಾಗಿದೆ ಮತ್ತು ಇಸ್ಲಾವಿೂ ವಿಶ್ವಾಸಿಗಳನ್ನು ಅದರ ನಿಯಮಕ್ಕೆ ಬದ್ಧಗೊಳಿಸಲು ಸಾಧ್ಯವಾಗಬೇಕಾಗಿದೆ.
ಆದ್ದರಿಂದ ಇಸ್ಲಾಮ್ನ ಮೂಲ ಶಿಕ್ಷಣವು ಅದರಲ್ಲಿ ವಿಶ್ವಾಸವಿರಿಸದಿರುವ ವ್ಯಕ್ತಿಯನ್ನು ಕಾಫಿರ್ ಎಂದು ಹೇಳಿ ಅವನ ಸ್ಥಿತಿಯನ್ನು ಸ್ಪಷ್ಟಪಡಿಸಿದೆ. ಆದರೆ ಇಸ್ಲಾವಿೂ ರಾಷ್ಟ್ರ ಹಾಗೂ ಸಮಾಜದಲ್ಲಿ ಅವನ ಮೂಲಭೂತ ಹಕ್ಕುಗಳಿಗೆ ಯಾವುದೇ ಬಾಧೆಯಿಲ್ಲ ಮತ್ತು ಲೌಕಿಕ ವಿಚಾರಗಳಲ್ಲಿ ಅವನೊಂದಿಗೆ ಯಾವುದೇ ಭೇದಭಾವ ತೋರಿಸುವುದಿಲ್ಲ. ಅಲ್ಲಾಹನು ಮಾನವನನ್ನು ಎಲ್ಲಕ್ಕಿಂತಲೂ ಸುಂದರವಾದ ರೂಪ, ಬಣ್ಣಗಳಿಂದ ಸೃಷ್ಟಿಸಿದ್ದಾನೆ. ಅವನಿಗೆ ಜೀವಿಸುವುದಕ್ಕಾಗಿ ಪ್ರತಿಯೊಂದೂ ಸವಲತ್ತು ಗಳನ್ನು ನೀಡಿದ್ದಾನೆ ಮತ್ತು ಸಕಲ ಆವಶ್ಯಕತೆಗಳನ್ನು ಈಡೇರಿಸುತ್ತಾನೆ. ಈ ಎಲ್ಲ ಅನುಗ್ರಹಗಳ ಬೇಡಿಕೆಯೇ ಜನರು ಅಲ್ಲಾಹನಲ್ಲಿ ವಿಶ್ವಾಸವಿರಿಸಬೇಕು ಎಂದಾಗಿದೆ. ಯಾಕೆಂದರೆ ಅವನೇ ಜನರಿಗೆ ಅನುಗ್ರಹದಾತನಾಗಿದ್ದಾನೆ. ಇದೇ ರೀತಿ ಅಲ್ಲಾಹನ ಸಕಲ ಪ್ರವಾದಿಗಳ ಮೇಲೂ ವಿಶೇಷತಃ ಅಂತಿಮ ಪ್ರವಾದಿ ಮುಹಮ್ಮದ್ರವರ(ಸ) ಮೇಲೆಯೂ ವಿಶ್ವಾಸವಿರಿಸಬೇಕು ಮತ್ತು ಸತ್ತ ನಂತರ ಪರಲೋಕ ಎಂಬ ಶಾಶ್ವತ ಲೋಕದಲ್ಲಿ ಶಾಶ್ವತವಾಗಿ ಬದುಕಬೇಕಾಗಿದೆ ಮತ್ತು ಅಲ್ಲಿ ಪ್ರತಿಯೊಬ್ಬ ಮನುಷ್ಯನ ಉತ್ತಮ-ಕೆಟ್ಟ ಕರ್ಮಗಳ ಕುರಿತು ಪ್ರಶ್ನಿಸಲಾಗುವುದು ಎಂಬ ಬಗ್ಗೆ ವಿಶ್ವಾಸವಿರಿಸಬೇಕಾಗಿದೆ.
ಪರಿಶುದ್ಧವಾದ ರೀತಿಯಲ್ಲಿ ಅಲ್ಲಾಹನ ದಾಸ್ಯಾರಾಧನೆ ಮಾಡಬೇಕು ಮತ್ತು ಅವನ ಆದೇಶವನ್ನು ಪಾಲಿಸಬೇಕು. ಯಾರು ಅಲ್ಲಾಹನ ಅನುಗ್ರಹಗಳಿಂದ ಲಾಭ ಪಡೆದೂ ಅವನಲ್ಲಿ ವಿಶ್ವಾಸವಿರಿಸುವುದಿಲ್ಲವೋ ಅಥವಾ ಅವನ ದೇವತ್ವದೊಂದಿಗೆ ಇತರರನ್ನು ಭಾಗೀದಾರಗೊಳಿಸುತ್ತಾರೋ ಅಂತಹವರೇ ಕೃತಘ್ನರು ಮತ್ತು ಕುಫ್ರ್ (ನಿರಾಕರಣೆ) ನೀತಿ ಅನುಸರಿಸುವವರಾಗಿದ್ದಾರೆ. ಅಲ್ಲಾಹನ ಆದೇಶಗಳನ್ನು ತಿಳಿಯಬೇಕಾದರೆ ಅಲ್ಲಾಹನು ತನ್ನ ಅಂತಿಮ ಪ್ರವಾದಿ ಮುಹಮ್ಮದ್ರಿಗೆ(ಸ) ಅವತೀರ್ಣಗೊಳಿಸಿರುವ ಪವಿತ್ರ ಕುರ್ಆನನ್ನು ಅಧ್ಯಯನ ನಡೆಸಬೇಕಾಗಿದೆ. ಪವಿತ್ರ ಕುರ್ಆನ್ ಶಿಕ್ಷಣಗಳ ವ್ಯಾವಹಾರಿಕ ರೂಪಕ್ಕೆ ಉದಾಹರಣೆಯು ಪ್ರವಾದಿ ಮುಹಮ್ಮದ್ ರವರ(ಸ) ಜೀವನದಲ್ಲಿ ಸಿಗುತ್ತದೆ. ಪವಿತ್ರ ಕುರ್ಆನ್ ಹಾಗೂ ಪ್ರವಾದಿ ಚರ್ಯೆಗಳೆರಡು ಇಂದಿಗೂ ಸುರಕ್ಷಿತ ರೂಪದಲ್ಲಿದೆ. ಇದುವೇ ಅದರ ಸತ್ಯವಂತಿಕೆಗೆ ಪ್ರಮಾಣವಾಗಿದೆ.
'ಅದಾನ್' ಅಥವಾ 'ಬಾಂಗ್' ಏನಿದು ಕರೆ?
'ಅದಾನ್' ಅಥವಾ 'ಬಾಂಗ್' ಏನಿದು ಕರೆ?
ಅಲ್ಲಾಹು ಅಕ್ಬರ್
ಅಲ್ಲಾಹನೇ ಅತ್ಯಂತ ಮಹಾನನು
(ಇದನ್ನು ನಾಲ್ಕು ಬಾರಿ ಹೇಳಲಾಗುತ್ತದೆ.)
ಅಶ್ಹದು ಅಲ್ಲಾ ಇಲಾಹ ಇಲ್ಲಲ್ಲಾಹ್
ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರು ಯಾರೂ ಇಲ್ಲವೆಂದು ನಾನು ಸಾಕ್ಷ್ಯ ನುಡಿಯುತ್ತೇನೆ. (ಎರಡು ಸಲ)
ಅಶ್ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್
ಪ್ರವಾದಿ ಮುಹಮ್ಮದ್(ಸ) ಅವರು ಅಲ್ಲಾಹನ ಸಂದೇಶವಾಹಕರಾಗಿರುವರೆಂದು ನಾನು ಸಾಕ್ಷ್ಯ ನುಡಿಯುತ್ತೇನೆ. (ಎರಡು ಸಲ)
ಹಯ್ಯ ಅಲಸ್ಸಲಾಃ
ಬನ್ನಿ ನಮಾಝ್ನ ಕಡೆಗೆ
(ಎರಡು ಸಲ)
ಹಯ್ಯ ಅಲಲ್ ಫಲಾಹ್
ಬನ್ನಿ ವಿಜಯದ ಕಡೆಗೆ
(ಎರಡು ಸಲ)
ಅಲ್ಲಾಹು ಅಕ್ಬರ್
ಅಲ್ಲಾಹನೇ ಅತ್ಯಂತ ಮಹಾನನು
(ಎರಡು ಸಲ)
ಲಾ ಇಲಾಹ ಇಲ್ಲಲ್ಲಾಹ್
ಅಲ್ಲಾಹನಲ್ಲದೆ ಮತ್ತಾರೂ ಆರಾಧನೆಗೆ ಅರ್ಹರಿಲ್ಲ.
ನಿತ್ಯ ಬೆಳಿಗ್ಗೆ ಸೂರ್ಯೋದಯಕ್ಕೆ ಸುಮಾರು 80ನಿಮಿಷ ಮುಂಚೆ ದಿನದ ಪ್ರಥಮ ನಮಾಝ್ಗೆ ಕರೆ ನೀಡುವಾಗ 2 ಸಲ ಈ ಕೆಳಗಿನ ನುಡಿಯನ್ನು ಸೇರಿಸಿ ಹೇಳಲಾಗುತ್ತದೆ.
ಅಸ್ಸಲಾತು ಖೈರುಂಮಿನನ್ನೌಮ್
ನಮಾಝ್ ನಿದ್ದೆಗಿಂತ ಉತ್ತಮವಾದುದು.
(ಎರಡು ಸಲ)
ಅದಾನ್ನ ಈ ನುಡಿಗಳಿಂದ ತಿಳಿಯುವುದೇನೆಂದರೆ ಅವು ಕೇವಲ ಒಂದು ಪ್ರಾರ್ಥನೆಯ ಕರೆಯಾಗಿರದೆ ಇಸ್ಲಾಮಿನ ಮೂಲ ತತ್ವಗಳ ಸುಂದರ ಪ್ರತಿಪಾದನೆಯೂ ಆಗಿದೆ. ವಿಶ್ವದ ಸೃಷ್ಟಿಕರ್ತನೂ ಒಡೆಯನೂ ಪರಿಪಾಲಕನೂ ಅಧಿಪತಿಯೂ ಆದ ಅಲ್ಲಾಹನ ಮಹಿಮೆಯನ್ನು ಇದರಲ್ಲಿ ಕೊಂಡಾಡಲಾಗಿದೆ. ಇದು ಯಾವುದೇ ಜನಾಂಗದ ಅಥವಾ ಕೋಮಿನ ಮಹಿಮೆಯ ಘೋಷಣೆಯಲ್ಲ. ಇಡೀ ಮಾನವಕುಲದ ಸೃಷ್ಟಿಕರ್ತ ಪ್ರಭುವಿನ ಮಹಾನತೆಯ ಪ್ರಕೀರ್ತನೆಯಾಗಿದೆ.
‘ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ’ ಎಂಬ ವಚನವು ಇಸ್ಲಾಮ್ ಧರ್ಮದ ಮೂಲ ಮಂತ್ರವಾಗಿದೆ. ಮಾನವಕುಲದ ಆರಂಭದಿಂದಲೇ ಈ ಜಗತ್ತಿಗೆ ಬಂದ ಪ್ರವಾದಿಗಳೂ ಈ ಮೂಲ ಮಂತ್ರವನ್ನೇ ಪ್ರತಿಪಾದಿಸಿದ್ದರು. ಅದರ ಕಡೆಗೇ ಅವರು ತಂತಮ್ಮ ಜನತೆಯನ್ನು ಆಹ್ವಾನಿಸಿದ್ದರು. ಹಝ್ರತ್ ಮುಹಮ್ಮದ್(ಸ) ಆ ಪೈಕಿ ಕೊನೆಯವರಾಗಿದ್ದಾರೆ. ಆದ್ದರಿಂದ ಅವರ ಪ್ರವಾದಿತ್ವದ ಸಾಕ್ಷ್ಯವನ್ನೂ ಈ ಕರೆಯಲ್ಲಿ ಅಳವಡಿಸಲಾಗಿದೆ.
ಅನಂತರ ಈ ಮೂಲ ಮಂತ್ರದ ಮೇಲೆ ನಂಬಿಕೆಯಿರುವವರನ್ನು ಅಲ್ಲಾಹನ ಆರಾಧನೆಯಾದ ನಮಾಝ್ಗಾಗಿ ಕರೆದು ಅವರ ನೈಜ ಯಶಸ್ಸು ಮತ್ತು ವಿಜಯವು ಅದರಲ್ಲೇ ಅಡಕವಾಗಿದೆಯೆಂದು ಸಾರಲಾಗಿದೆ.
ಕೊನೆಗೆ ಪುನಃ ಅಲ್ಲಾಹನ ಮಹಾನತೆಯನ್ನು ಕೊಂಡಾಡಿ ಅವನ ಹೊರತು ಅನ್ಯರಾರೂ ಆರಾಧನೆಗೆ ಅರ್ಹರಲ್ಲವೆಂಬ ಪರಮ ಸತ್ಯವನ್ನು ಇನ್ನೊಮ್ಮೆ ಘೋಷಿಸಲಾಗಿದೆ.
ಈ ಅದಾನ್ ಕರೆಯ ಮಹತ್ವ ಮತ್ತು ಅರ್ಥವನ್ನು ಅರಿತ ಯಾವ ವ್ಯಕ್ತಿಯೂ ಇದನ್ನು ಆಕ್ಷೇಪಿಸಲಾರ. ಅದನ್ನು ಗೇಲಿ ಮಾಡಲಾರ.
ಸೇನೆಯು ಜನ ಸಾಮಾನ್ಯರ ಮೇಲೆ ದಾಳಿ ನಡೆಸಬಹುದೇ?
ಸೇನೆಯು ಜನ ಸಾಮಾನ್ಯರ ಮೇಲೆ ದಾಳಿ ನಡೆಸಬಹುದೇ?
ಉತ್ತರ: ಒಂದು ಇಸ್ಲಾವಿೂ ರಾಷ್ಟ್ರವು ತನ್ನ ರಾಷ್ಟ್ರದ ಹಿತರಕ್ಷಣೆಗಾಗಿ ಕೇವಲ ಸೇನೆಯೊಂದಿಗೆ ಮಾತ್ರ ಯುದ್ಧ ಮಾಡುವುದು. ಯಾಕೆಂದರೆ ವಿರೋಧಿ ರಾಷ್ಟ್ರವು ಮೇಲುಗೈ ಸಾಧಿಸಿ ಬಿಟ್ಟರೆ ಅದು ತನ್ನ ಹಿತಾಸಕ್ತಿಗೆ ತಕ್ಕಂತೆ ವರ್ತಿಸಬಹುದು. ದೇವನ ಆದೇಶಕ್ಕೆ ವಿರುದ್ಧವಾಗಿಯೂ ನಡೆಯಬಹುದು. ಆದರೆ ಇಸ್ಲಾವಿೂ ರಾಷ್ಟ್ರಕ್ಕೆ ಹಾಗೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಮುಸ್ಲಿಮ್ ಎಂದರೆ ದೇವನನ್ನು ಭಯ ಪಟ್ಟು ಜೀವಿಸುವ ಹೆಸರಾಗಿದೆ. ಯಾರಾ ದರೂ ಮುಸ್ಲಿಮನ ತಾಯಿ, ಮಕ್ಕಳ ಮೇಲೆ ಹಿಂಸೆ ದೌರ್ಜನ್ಯ ನಡೆಸಿದರೆ ಅವರ ತಾಯಿ ಮಕ್ಕಳ ಮೇಲೆ ಹಿಂಸೆ ನಡೆಸುವುದನ್ನು ಇಸ್ಲಾಮ್ ಸರ್ವಥಾ ಅನುಮತಿ ನೀಡುವುದಿಲ್ಲ ಮತ್ತು ಅದನ್ನು ಅಪರಾಧವೆಂದು ಪರಿಗಣಿ ಸುತ್ತದೆ. ಮುಸ್ಲಿಮನಾಗುವುದರ ಅರ್ಥ ಗರಿಷ್ಠ ದೌರ್ಜನ್ಯ ನಡೆದರೂ ಕೂಡಾ ಮುಸ್ಲಿಮನು ಅನ್ಯಾಯ ದೌರ್ಜನ್ಯ ನಡೆಸಲಾರನು. ಒಂದು ವೇಳೆ ಹಾಗೆ ಮಾಡಿದರೆ ಮುಸ್ಲಿಮನಿಗೂ ಜಾಹಿಲ್(ಅಜ್ಞಾನಿ)ಗೂ ಯಾವುದೇ ವ್ಯತ್ಯಾಸವಿರಲಾರದು. ಆದ್ದರಿಂದ ಎಲ್ಲ ರೀತಿಯ ಜಾಹಿಲಿಯ್ಯತನ್ನು ಪ್ರವಾದಿ(ಸ) ಕೊನೆಗೊಳಿಸಿದ್ದಾರೆ. ಒಬ್ಬನು ಅಕ್ರಮ, ಅನ್ಯಾಯ, ದೌರ್ಜನ್ಯವೆಸಗಿಸದರೆ ನಾವು ಕೂಡಾ ಹಾಗೆಯೇ ಮಾಡುವುದನ್ನು ಜಾಹಿಲಿಯ್ಯತ್ ಎಂದು ಪ್ರವಾದಿ(ಸ) ಶಿಕ್ಷಣ ನೀಡಿದ್ದಾರೆ. ಆದ್ದರಿಂದ ನಮಗೆ ಎಲ್ಲ ಪರಿಸ್ಥಿತಿಗಳಲ್ಲಿಯೂ ಅಲ್ಲಾಹನ ಕಾನೂನಿನಂತೆ ತೀರ್ಮಾನ ಕೈಗೊಳ್ಳ ಬೇಕಾಗಿದೆ. ನಾವು ಯಾವುದೇ ಅಮಾ ಯಕನ ಜೀವವನ್ನು ಹರಣ ಮಾಡ ಬಾರದು. ಇಸ್ಲಾಮಿನ ಪ್ರಕಾರ ಸೇನೆಗೆ ಹೊರತಾದವರ ಮೇಲೆ ಆಕ್ರಮಣ ನಡೆಸುವುದು ಬಹಳ ದೊಡ್ಡ ಅಪರಾಧ ವಾಗಿದೆ. ನಾಗರಿಕರ ಮೇಲೆ ಆಕ್ರಮಣ ನಡೆಸಿದ ಬಗ್ಗೆ ಕುರ್ಆನ್ ಮತ್ತು ಪ್ರವಾದಿ ಚರ್ಯೆ ಮತ್ತು ಸಹಾಬಿಗಳ ಚರಿತ್ರೆಯಲ್ಲಿ ಯಾವುದೇ ಉದಾಹರಣೆ ಯಿಲ್ಲ. ಅಬೂಬಕರ್(ರ) ಯುದ್ಧಕ್ಕೆ ಹೊರಡುವವರೊಂದಿಗೆ ನೀಡಿದ ಪ್ರಥಮ ಶಿಕ್ಷಣ, “ನಿಮ್ಮ ವಿರುದ್ಧ ಯುದ್ಧ ಮಾಡದವರೊಂದಿಗೆ ಯುದ್ಧ ಮಾಡಬಾರದು” ಎಂದಾಗಿತ್ತು. ಒಂದು ವೇಳೆ ಯಾವುದೇ ಸೇನಾ ನೆಲೆಯ ಮೇಲೆ ಆಕ್ರಮಣ ನಡೆಸಿದಾಗ, ಅನಿ ರೀಕ್ಷಿತವಾಗಿ ಅಥವಾ ತಪ್ಪಿ ಯಾವು ದಾದರೂ ನಾಗರಿಕರು ಜೀವ ಕಳೆದು ಕೊಂಡರೆ ಆ ಬಗ್ಗೆ ಕ್ಷಮೆ ಕೇಳಲಾಗುತ್ತದೆ ಮತ್ತು ಪರಿಹಾರ ನೀಡಲಾಗುತ್ತದೆ. ಕುರ್ಆನ್ ಮಾನವ ಜೀವಕ್ಕೆ ಬಹಳ ಪಾವಿತ್ರ್ಯತೆಯನ್ನು ನೀಡಿದೆ. ಒಂದು ವೇಳೆ ಕೊಲೆ ಮಾಡುವ ಉದ್ದೇಶ ಇಲ್ಲದೆ ತಪ್ಪಿ ಯಾರದಾದರೂ ಜೀವ ಹರಣವಾದರೆ ಅದಕ್ಕೆ ಎರಡು ತಿಂಗಳು ಉಪವಾಸ ಆಚರಿಸಬೇಕು. ಪರಿಹಾರ ನೀಡಬೇಕು. ಪ್ರವಾದಿಯವರು(ಸ), “ಕಅಬಾ, ಮಕ್ಕಾಕ್ಕೆ ಎಷ್ಟು ಗೌರವ ವಿದೆಯೋ ಅಷ್ಟೇ ಗೌರವ ಮಾನವ ಜೀವಕ್ಕೂ ಇದೆ” ಎಂದು ಹೇಳಿದ್ದಾರೆ. ಅದಕ್ಕೆ ಜಾತಿ ಮತ ಧರ್ಮದ ಭೇದವಿಲ್ಲ. ನಾವು ಮುಸ್ಲಿಮರಾಗಿದ್ದೇವೆ. ಇತರರು ಅನ್ಯಾಯ, ಆಕ್ರಮ, ದೌರ್ಜನ್ಯ ವೆಸಗಿದರೆ ನಾವು ಕೂಡಾ ಅದೇ ಬಣ್ಣ ತೋರಿಸುವುದು ಇಸ್ಲಾಮಿಗೆ ವಿರುದ್ಧವಾದುದಾಗಿದೆ. ಅವರು ನಮ್ಮ ಮಕ್ಕಳನ್ನು ಕಿಡ್ನಾಪ್ ಮಾಡಿದರೆ ನಾವು ಅವರ ಮಕ್ಕಳನ್ನು ಕಿಡ್ನಾಪ್ ಮಾಡು ವುದು, ಅವರು ನಮ್ಮ ಮಹಿಳೆಯ ಮೇಲೆ ದೌರ್ಜನ್ಯವೆಸಗಿದರೆ ನಾವು ಅವರ ಮಹಿಳೆಯರ ಮೇಲೆ ದೌರ್ಜನ್ಯ ವೆಸಗುವುದು ಇವೆಲ್ಲವೂ ಜಾಹಿಲಿಯ್ಯತ್ (ಅಜ್ಞಾನ) ಆಗಿದ್ದು, ಪ್ರವಾದಿ(ಸ) ವಿರೋಧಿಸಿದ ಕೃತ್ಯಗಳಾಗಿವೆ. ಅದೇ ರೀತಿ ಕೋಮು ಗಲಭೆ ಮತ್ತಿತರ ಸಂದರ್ಭಗಳಲ್ಲಿ ಅವರು ನಮ್ಮವರಿಗೆ ಹೊಡೆದರೆ ನಾವು ಅವರಿಗೆ ಹೊಡೆಯ ಬೇಕು ಎಂಬುದೂ ಜಾಹಿಲಿಯ್ಯತ್ ಪಟ್ಟಿಗೆ ಸೇರುತ್ತದೆ. ಅದೇ ಸಂದರ್ಭದಲ್ಲಿ ಅತ್ಮರಕ್ಷಣೆ ಮತ್ತು ದೌರ್ಜನ್ಯವೆಸಗು ವವರನ್ನು ಪ್ರತಿಭಟಿಸುವುದು ಹಾಗೂ ಅಮಾಯಕರನ್ನು ಗೌರವಿಸುವುದನ್ನು ಇಸ್ಲಾಮ್ ಅನುಮತಿಸುತ್ತದೆ. “ಯಾರಾ ದರೂ ತನ್ನ ಸೊತ್ತು, ಮನೆ ಮತ್ತು ಜೀವದ ರಕ್ಷಣೆಗಾಗಿ ಮಡಿದರೆ ಅವನಿಗೆ ಹುತಾತ್ಮನ ಪದವಿ ಸಿಗುತ್ತದೆ” ಎಂದು ಪ್ರವಾದಿ(ಸ) ಹೇಳಿದ್ದಾರೆ. ಆದರೆ ಇಲ್ಲಿ ಯಾವುದೇ ಅಮಾಯಕನು ಅನ್ಯಾಯ ಮತ್ತು ದೌರ್ಜನ್ಯಕ್ಕೆ ಆಸ್ಪದವಿರಬಾರದು. ಮುಸ್ಲಿಮನು ಜಾತಿ ಮತ್ತು ಧರ್ಮ ಭೇದವೆನ್ನದೆ ಮಾನವ ಜೀವದ ರಕ್ಷಕರಾಗುವ ಜವಾಬ್ದಾರಿ ಯನ್ನು ನಿರ್ವಹಿಸಬೇಕು.
ಇದ್ದತ್ ನ ಉದ್ದೇಶ?
ಇದ್ದತ್ ನ ಉದ್ದೇಶ?
ಉತ್ತರ : ಪತಿ ಮರಣ ಹೊಂದಿದ ಮಹಿಳೆಯು ಗರ್ಭಿಣಿಯಲ್ಲದಿದ್ದರೆ ನಾಲ್ಕು ತಿಂಗಳು ಹತ್ತು ದಿವಸ ಮತ್ತು ಗರ್ಭಿಣಿಯಾಗಿದ್ದರೆ ಹೆರಿಗೆಯ ವರೆಗೆ ಪುನರ್ವಿವಾಹವಾಗುವುದರಿಂದ ಮತ್ತು ಅಲಂಕಾರ ಹೊಂದುವುದರಿಂದ ದೂರ ನಿಲ್ಲುವುದನ್ನು `ಇದ್ದತ್’ ಎನ್ನುತ್ತಾರೆ.
ಕುರ್ಆನ್ ಹೇಳುತ್ತದೆ, “ನಿಮ್ಮಲ್ಲಿ ಯಾರಾದರೂ ಮೃತಪಟ್ಟರೆ ಮತ್ತು ಅವರ ಪತ್ನಿಯ ಜೀವಂತವಾಗಿದ್ದರೆ ಅವರು ನಾಲ್ಕು ತಿಂಗಳು, ಹತ್ತು ದಿನಗಳ ತನಕ ತಮ್ಮನ್ನು ತಾವೇ ತಡೆದಿರಿಸಿಕೊಳ್ಳಬೇಕು.” (ಅಲ್ ಬಕರ: 234)
ಪತಿಯೊಂದಿಗೆ ನೈಜ ಸಂಪರ್ಕ ಏರ್ಪಡುವ ಮೊದಲೇ ಪತಿಯನ್ನು ಕಳಕೊಂಡ ಸ್ತ್ರೀಯರಿಗೂ ಮರಣದ ನಂತರದ ಈ ಇದ್ದತ್ ಅನ್ವಯಿಸುತ್ತದೆ. ಆದರೆ ಗರ್ಭಿಣಿ ಸ್ತ್ರೀ ಇದಕ್ಕೆ ಹೊರತಾಗಿದ್ದಾಳೆ. ಆಕೆಯ ಇದ್ದತ್ನ ಅವಧಿ ಹೆರಿಗೆಯ ತನಕವಾಗಿದೆ. ಹೆರಿಗೆ ಪತಿಯ ನಿಧನದ ತಕ್ಷಣವಾದರೂ ಅಥವಾ ಕೆಲವು ತಿಂಗಳುಗಳ ಬಳಿಕವಾದರೂ ಸರಿಯೇ. ‘ತಮ್ಮನ್ನು ತಾವು ತಡೆದಿರಿಕೊಳ್ಳಬೇಕು’ ಎಂದರೆ ಮರುವಿವಾಹದಿಂದ ತಡೆದಿರಿಕೊಳ್ಳಬೇಕೆಂದು ಮಾತ್ರವಲ್ಲ, ತನ್ನನ್ನು ಶೃಂಗಾರದಿಂದಲೂ ತಡೆದಿರಿಸಬೇಕೆಂದೂ ಅದರಲ್ಲಿ ಸೇರಿದೆ.
ಯಾವ ಮನೆಯಲ್ಲಿ ಆಕೆಯ ಪತಿ ಮರಣ ಹೊಂದಿದ್ದರೋ ಆ ಮನೆಯಲ್ಲಿ ಇದ್ದತ್ ಆಚರಿಸಬೇಕು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದ್ದತ್ನ ಕಾಲಾವಧಿಯಲ್ಲಿ ಪುನರ್ವಿವಾಹಕ್ಕೆ ಮುಂದಾಗುವುದು ಅಥವಾ ಯಾರಾದರೂ ಅವರ ಬಳಿ ವಿವಾಹ ಸಂಬಂಧದೊಂದಿಗೆ ಸವಿೂಪಿಸುವುದು ನಿಷಿದ್ಧವಾಗಿದೆ. ಆದರೂ ವಿವಾಹ ಸಂಬಂದಗಳ ಕುರಿತು ಸೂಚಿಸುವುದರಲ್ಲಿ ವಿರೋಧವಿಲ್ಲ.
ಕುರ್ಆನ್ ಹೇಳುತ್ತದೆ, “ಇದ್ದತ್ಗಳ ಕಾಲಾವಧಿಯಲ್ಲಿ ಆ ವಿಧವೆಯರೊಂದಿಗೆ ವಿವಾಹದ ಇರಾದೆಯನ್ನು ನೀವು ಸಂಕೇತಗಳ ಮೂಲಕ ಪ್ರಕಟಗೊಳಿಸಿದರೂ ಮನಸ್ಸಿನೊಳಗೆ ಬಚ್ಚಿಟ್ಟರೂ ತಪ್ಪಿಲ್ಲ. ನಿಮ್ಮ ಮನದೊಳಗೆ ಅವರ ಯೋಚನೆ ಬಂದೇ ತೀರುವುದೆಂಬುದನ್ನು ಅಲ್ಲಾಹನು ಅರಿತಿರುತ್ತಾನೆ. ಆದರೆ ರಹಸ್ಯ ವಾಗ್ದಾನ ಮಾಡಬಾರದು. ಯಾವುದೇ ಪ್ರಸ್ತಾಪ ಮಾಡುವುದಾದರೆ ನ್ಯಾಯೋಚಿತ ರೀತಿಯಿಂದ ಮಾಡಿರಿ. ಇದ್ದತ್ ಪೂರ್ಣಗೊಳ್ಳುವ ತನಕ ವಿವಾಹ ಬಂಧನದ ನಿರ್ಧಾರ ಮಾಡಬೇಡಿರಿ.” (ಅಲ್ ಬಕರ: 235)
ಇದ್ದತ್ ಆಚರಿಸುವ ವಿಧವೆಯು ಸಿಂಗರಿಸುವುದರ ಕುರಿತು ಪ್ರವಾದಿ(ಸ) ಹೀಗೆ ಹೇಳಿರುವುದಾಗಿ ಅಬೂದಾವೂದ್ ನಸಾಯಿ ಮುಂತಾದವರು ವರದಿ ಮಾಡಿದ್ದಾರೆ, “ಅವಳು ಬಣ್ಣ ಬಣ್ಣದ ವಸ್ತ್ರ ಧರಿಸಬಾರದು. ಆಭರಣಗಳನ್ನು ಧರಿಸಬಾರದು. ಮದರಂಗಿ ಹಚ್ಚಬಾರದು. ಕಣ್ಣುಗಳಿಗೆ ಕಾಡಿಗೆ ಹಚ್ಚಬಾರದು.” ಈ ರೀತಿಯ ಹಲವು ಹದೀಸ್ಗಳಿವೆ. ಇದರಿಂದೆಲ್ಲಾ ತಿಳಿದು ಬರುವುದೇನೆಂದರೆ ಪತಿ ಮರಣ ಹೊಂದಿದ ಮಹಿಳೆಯು ಸಿಂಗರಿಸಿಕೊಂಡು ನಡೆಯಬಾರದು ಮತ್ತು ಸರಳ ವೇಷ ಭೂಷಣಗಳಲ್ಲಿ ಕಳೆಯಬೇಕು ಎಂದಾಗಿದೆ. ಇದು ಇಸ್ಲಾಮ್ ಹೇಳಿರುವ ಇದ್ದತ್ ಹಾಗೂ ದುಃಖಾಚರಣೆಯಾಗಿದೆ.
ಪುರುಷರನ್ನು ನೋಡುವ ವಿಚಾರದಲ್ಲಿ ಇತರ ಮಹಿಳೆಯರಿಗಿಂತ ಹೆಚ್ಚಿನ ನಿಯಮಗಳೇನೂ ಇದ್ದತ್ ಆಚರಿಸುವ ಮಹಿಳೆಯರಿಗಿಲ್ಲ. ಅಗತ್ಯ ಕೆಲಸಕ್ಕಾಗಿ ಹೊರಹೋಗುವುದರಲ್ಲೂ ಅಭ್ಯಂತರವಿಲ್ಲ. ಆದರೆ ರಾತ್ರಿ ಸ್ವಗೃಹದಲ್ಲೇ ಉಳಿದುಕೊಳ್ಳಬೇಕು. ಹಝ್ರತ್ ಮುಜಾಹಿದ್ರಿಂದ ವರದಿಯಾದ ಒಂದು ವಚನವು ಅದಕ್ಕಿರುವ ಪುರಾವೆಯಾಗಿದೆ:
ಉಹುದ್ ಯುದ್ಧದಲ್ಲಿ ಹಲವಾರು ಮಂದಿ ಹುತಾತ್ಮರಾಗಿದ್ದರು. ಅವರ ಪತ್ನಿಯರು ಬಂದು ಪ್ರವಾದಿಯವರೊಡನೆ(ಸ) ಹೇಳಿದರು, “ಪ್ರವಾದಿಯವರೇ(ಸ) ರಾತ್ರಿ ಕಾಲದಲ್ಲಿ ನಮಗೆ ವಿಪರೀತ ಏಕಾಂತತೆಯ ಅನುಭವವಾಗುತ್ತದೆ. ಆದ್ದರಿಂದ ನಾವು ಯಾರಾದರೊಬ್ಬರ ಮನೆಯಲ್ಲಿ ನಾವೆಲ್ಲರೂ ಉಳಿದುಕೊಳ್ಳಬಹುದೇ? ಪ್ರಭಾತವಾಗುವಾಗ ನಾವು ನಮ್ಮ ಸ್ವಗೃಹಕ್ಕೆ ಮರಳುತ್ತೇವೆ.” ಪ್ರವಾದಿಯವರು(ಸ) ಹೇಳಿದರು, “ನೀವು ನಿಮ್ಮ ಪೈಕಿ ಯಾರಾದರೊಬ್ಬರ ಮನೆಯಲ್ಲಿ ಕುಳಿತು ಮಾತನಾಡುತ್ತೀರಿ. ಆದರೆ ಮಲಗಲು ಪ್ರತಿಯೋರ್ವರೂ ತಂತಮ್ಮ ಮನೆಗೇ ಹೋಗಬೇಕು.”
ಆದರೆ ಹಜ್ಜ್ ನಂತಹ ಸುಪ್ರದಾನವೂ ಸುಧೀರ್ಘವೂ ಆದ ಯಾತ್ರೆಗಳಲ್ಲಿ ಮನೆ ತೊರೆಯುವುದರಲ್ಲೋ ಬೇರೆ ಸ್ಥಳಗಳಲ್ಲಿ ಉಳಿದುಕೊಳ್ಳವುದರಲ್ಲೋ ವಿರೋಧವಿಲ್ಲ ಎಂದು ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಸಹಾಬಿಗಳು ಹಾಗೂ ತಾಬಿಈಗಳ ಕಾಲದಲ್ಲಿ ನಡೆದ ಇಂತಹ ಘಟನೆಗಳನ್ನು ಅವರು ಅದಕ್ಕೆ ಪುರಾವೆಯಾಗಿ ನೀಡುತ್ತಾರೆ.
ಈ ಹಿನ್ನಲೆಯಲ್ಲಿ ಇದ್ದತ್ ಆಚರಿಸುವ ಉದ್ಯೋಗಸ್ಥ ಮಹಿಳೆಯು ಕೆಲಸಕ್ಕೆ ಹೋಗುವುದರಲ್ಲಿ ವಿರೋಧವಿಲ್ಲ. ಇದ್ದತ್ನ ಮಹಿಳೆಯು ಕತ್ತಲೆಯ ಕೋಣೆಯಲ್ಲಿ ಕುಳಿತುಕೊಳ್ಳಬೇಕು. ಕನ್ನಡಿ ನೋಡಬಾರದು, ಸಂಬಂಧಿಗಳಾದ ಪುರುಷರನ್ನೂ ನೋಡಬಾರದು, ತಲೆ ಬೋಳಿಸಬೇಕು ಮೊದಲಾದ ನಿಯಮಗಳು ಅಜ್ಞಾನ ಕಾಲದ ಸಂಸ್ಕ್ರತಿಗಳಿಂದ ಮುಸ್ಲಿಮ್ ಸಮುದಾಯಕ್ಕೆ ಬಂದ ಅನಾಚಾರಗಳಾಗಿವೆ. ಅವುಗಳಿಗೆ ಇಸ್ಲಾಮಿನಲ್ಲಿ ಯಾವುದೇ ಪುರಾವೆಗಳಿಲ್ಲ.
ಸಮಾಜ ದ್ರೋಹಿಗಳ ಹಿಂಬಾಲಕರು?
ಸಮಾಜ ದ್ರೋಹಿಗಳ ಹಿಂಬಾಲಕರು?
ಉತ್ತರ: ಸಮಾಜದ್ರೋಹಿ, ಧರ್ಮದ್ರೋಹಿ ನಾಯಕನನ್ನು ಪವಿತ್ರ ಕುರ್ಆನ್ ‘ತಾಗೂತ್’ (ಅತಿಕ್ರಮಿ) ಎಂದು ಕರೆಯುತ್ತದೆ. ಇದು ವಿಶಾಲಾರ್ಥದ ಪದವಾಗಿದೆ. ತನ್ನ ನ್ಯಾಯಬದ್ಧ ಮೇರೆಯನ್ನು ವಿೂರುವ ಅಂದರೆ ದಾಸ್ಯ ತನದ ಮೇರೆಯನ್ನು ವಿೂರಿ ಸ್ವತಃ ದೇವತ್ವವನ್ನು ಮೆರೆದು ಅಥವಾ ಒಡೆತನದ ಸೋಗು ತೋರಿಸಿ ದೇವನ ಸೃಷ್ಟಿಗಳಿಂದ ತನ್ನ ದಾಸ್ಯತನವನ್ನು ಮಾಡುವವ ನಾಗಿದ್ದಾನೆ. ಅಂಥವನನ್ನು ಧಿಕ್ಕರಿಸಬೇಕೆಂದು ಪವಿತ್ರ ಕುರ್ಆನ್ ವಿಶ್ವಾಸಿಗಳಿಗೆ ಕರೆ ಕೊಡುತ್ತದೆ. ಏಕೆಂದರೆ ಅವನು ಮನುಷ್ಯರನ್ನು ತಮ್ಮ ದಾಸರಾಗಿ ಮಾಡಲು ಪ್ರಯತ್ನಿಸುತ್ತಾನೆ. ಅವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಕರೆದೊಯ್ಯುತ್ತಾನೆ. ಕೊನೆಗೆ ಅದು ಅವರನ್ನು ನರಕಕ್ಕೆ ಕೊಂಡೊಯ್ಯುತ್ತದೆ. ಪವಿತ್ರ ಕುರ್ಆನ್ ಹೇಳುತ್ತದೆ: ತಾಗೂತನ್ನು ನಿರಾಕರಿಸಿ ಅಲ್ಲಾಹನಲ್ಲಿ ವಿಶ್ವಾಸವಿಟ್ಟವನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿ ಕೊಂಡನು (2:256).
ಅವರು ಇವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಎಳೆದೊಯ್ಯುತ್ತಾರೆ. ಇವರು ನರಕಾಗ್ನಿಯವರಾಗಿದ್ದು ಸದಾ ಅಲ್ಲೇ ಇರುವರು. (2:257)
ಧರ್ಮ ದ್ರೋಹಿಗಳು ಅವರನ್ನು ಅನುಸರಿಸುವವರನ್ನು ಧರ್ಮ ದ್ರೋಹಿಗಳ ನ್ನಾಗಿ ಮಾಡುತ್ತಾರೆ. ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸಿ ಇತರ ಯಾರ ಆಜ್ಞೆಯನ್ನು ಪಾಲಿಸಬಾರದೆಂದು ವಿಶ್ವಾಸಿಗಳಿಗೆ ಕಟ್ಟೆಚ್ಚರ ನೀಡಲಾಗಿದೆ. ಪ್ರವಾದಿ(ಸ) ಹೇಳಿದರು- ದೇವನ ಆಜ್ಞೋಲ್ಲಂಘನೆ ಮಾಡಿ, ಯಾರನ್ನೇ ಅನುಸರಿಸುವುದು ಧರ್ಮ ಸಮ್ಮತವಲ್ಲ.
ಪರಲೋಕದಲ್ಲಿ ದೇವಧಿಕ್ಕಾರಿಗಳನ್ನು ಅನುಸರಿಸಿ ನಡೆದವರು ತಮ್ಮ ನಾಯಕರ ಜೊತೆಯಲ್ಲಿ ನರಕದಲ್ಲಿರುವರು. ಅಲ್ಲಿ ಅವರ ಸ್ಥಿತಿಯನ್ನು ಕುರ್ಆನ್ ಈ ರೀತಿ ಚಿತ್ರೀಕರಿಸಿದೆ.
“ಅಂದು ಅವರು ಯಾವ ಮಿತ್ರನನ್ನು ಸಹಕಾರಿಯನ್ನು ಪಡೆಯಲಾರರು. ಅವರ ಮುಖಗಳು ನರಕಾಗ್ನಿಯಲ್ಲಿ ಹೊರಳಾಡಿಸಲ್ಪಡುವ ದಿನ ಅವರು, ಅಯ್ಯೋ! ನಾವು ಅಲ್ಲಾಹ್ ಮತ್ತು ಪ್ರವಾದಿಯವರನ್ನು(ಸ) ಅನುಸರಿಸುತ್ತಿದ್ದರೆ! ಎನ್ನುವರು” ಮತ್ತು ಮುಂದುವರಿದು, “ನಮ್ಮ ಪ್ರಭೂ! ನಾವು ನಮ್ಮ ಸರದಾರರನ್ನು ಹಾಗೂ ಹಿರಿಯರನ್ನು ಅನುಸರಿಸಿದೆವು. ಅವರು ನಮ್ಮನ್ನು ದಾರಿಗೆಡಿಸಿ ಬಿಟ್ಟರು. ನಮ್ಮ ಪ್ರಭೂ! ಅವರಿಗೆ ಇಮ್ಮಡಿ ಯಾತನೆ ಕೊಡು. ಅವರನ್ನೂ ಅತ್ಯುಗ್ರವಾಗಿ ಶಪಿಸು ಎಂದೂ ಹೇಳುವರು.” (ಅಲ್ ಅಹ್ಝಾದ್: 65-68)
ಆದ್ದರಿಂದ ಸಮಾಜ ದ್ರೋಹಿ, ಧರ್ಮ ದ್ರೋಹಿಗಳಾದ ನಾಯಕರನ್ನು ಅವರ ದಬ್ಬಾಳಿಕೆಗೆ, ಬೆದರಿಕೆಗೆ ಹೆದರಿಯೋ, ಅವರ ಆಮಿಷಗಳಿಗೆ ಬಲಿಯಾಗಿಯೇ ಅನುಸರಿಸುವುದು ಮಹಾ ಪಾಪವಾಗಿದೆ. ಅದರ ಅಂತಿಮ ಪರಿಣಾಮ ಬಹಳ ಕೆಟ್ಟದಾಗಿರುವುದೆಂದು ವ್ಯಕ್ತವಾಗುತ್ತದೆ.
ಮಾಟ ಮತ್ತು ಚಿಕಿತ್ಸೆ?
ಮಾಟ ಮತ್ತು ಚಿಕಿತ್ಸೆ?
ಉತ್ತರ: ಪ್ರವಾದಿ ಮುಹಮ್ಮದ್(ಸ) ಅವರ ಶಿಕ್ಷಣ ಬೋಧನೆಗಳನ್ನು ಹತ್ತಿಕ್ಕಲು ಇಸ್ಲಾಮಿನ ವಿರೋಧಿಗಳಾದ ಯಹೂದಿಯರು ಮತ್ತು ಮುಶ್ರಿಕರು ಬಹಳಷ್ಟು ಪ್ರಯತ್ನಿಸಿದರು. ಅವರ ಎಲ್ಲ ಷಡ್ಯಂತ್ರಗಳೂ ವಿಫಲವಾದಾಗ ಯಹೂದ್ಯರು ಪ್ರವಾದಿ(ಸ) ಅವರ ಮೇಲೆ ಮಾಟ ಮಾಡಿದರು. ಇದರ ಪ್ರಭಾವವು ಪ್ರವಾದಿ(ಸ) ಅವರ ಮೇಲೆ ಗೋಚರಿಸ ತೊಡಗಿತು. ಈ ಪ್ರಭಾವವು ಒಂದು ವರ್ಷದವರೆಗೆ ಮುಂದುವರಿಯಿತು. ಆ ಅವಸ್ಥೆಯಲ್ಲಿ ಪ್ರವಾದಿಯವರ(ಸ) ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಮಾರ್ಪಟುಗಳುಂಟಾಗಿತ್ತು. ಅವರು ಯಾವುದಾದರೊಂದು ಕೆಲಸವನ್ನು ಮಾಡಿದ್ದೇನೆಂದು ಭಾವಿಸುತ್ತಿದ್ದರು. ಆದರೆ ಅದನ್ನು ಮಾಡಿರುತ್ತಿರಲಿಲ್ಲ. ಕೆಲವು ಪತ್ನಿಯರ ಬಳಿಗೆ ಹೋಗಿ ಬಂದಿದ್ದೇನೆಂದು ಭಾವಿಸುತ್ತಿದ್ದರು. ಆದರೆ ಹಾಗೆ ಹೋಗುತ್ತಿರಲಿಲ್ಲ. ಅವರ ಶರೀರದಲ್ಲಿ ಬಳಲಿಕೆಯಿರುತ್ತಿತ್ತು. ಆದರೆ ಅವೆಲ್ಲದರ ಹೊರತಾಗಿಯೂ ಅವರ ನೈಜ ಕರ್ತವ್ಯ (ಸಂದೇಶ ಪ್ರಚಾರ)ದಲ್ಲಿ ಎಂದೂ ಕೊರೆತೆಯುಂಟಾಗಿರಲಿಲ್ಲ. ಈ ಕುರಿತು ಇತಿಹಾಸದಲ್ಲಿ ಪ್ರವಾದಿ(ಸ) ಅವರ ವೈರಿಗಳಿಂದಲೂ ಯಾವುದೇ ಉಲ್ಲೇಖವಿಲ್ಲ. ಒಂದು ವೇಳೆ ಪ್ರವಾದಿವರ್ಯರಿಂದ(ಸ) ಅದರಲ್ಲೂ ಲೋಪವುಂಟಾಗುತ್ತಿದ್ದರೆ ಪ್ರವಾದಿತ್ವದ ನಿರಾಕರಣೆಗೆ ಅಂದೊಂದೇ ಘಟನೆ ಸಾಕಾಗುತ್ತಿತ್ತು. ಇನ್ನು ಪ್ರವಾದಿವರ್ಯರ(ಸ) ಮೇಲೆ ಮಾಟ ಮಾಡಿದ್ದು ಅವರಿಗೆ ತಿಳಿದಿತ್ತೇ ಎಂಬ ಪ್ರಶ್ನೆ. ಪ್ರವಾದಿವರ್ಯರಿಗೆ(ಸ) ಮಾಟ ಮಾಡಲಾಗಿತ್ತೆಂದು ಮಾಟದ ಪ್ರಭಾವ ಸಂಪೂರ್ಣವುಂಟಾಗಿ ಒಂದು ವರ್ಷ ದಾಟಿದಾಗಲಷ್ಟೇ ಇಬ್ಬರು ದೇವಚರರ ಮೂಲಕ ಅವರಿಗೆ ತಿಳಿಸಲಾಗಿತ್ತೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಯಾರು ಮಾಟ ಮಾಡಿದ್ದಾರೆಂದು ಅವರಿಗೆ ತಿಳಿಸಲಾಯಿತು. ಆದ್ದರಿಂದ ಅಪರಾಧಿಯ ಪತ್ತೆಯೂ ಆಯಿತು. ಆದರೆ ಪ್ರವಾದಿವರ್ಯರು(ಸ) ಅಪರಾಧಿಯ ವಿರುದ್ಧ ಪ್ರತೀಕಾರವೆಸಗಲಿಲ್ಲ. ಏಕೆಂದರೆ ತಮ್ಮ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿದವರೊಂದಿಗೆ ಅವರು ಎಂದೂ ಪ್ರತಿಕಾರವೆಸಗುತ್ತಿರಲಿಲ್ಲ.
ಪ್ರವಾದಿ(ಸ) ಅವರಂತಹ ಉನ್ನತ ವ್ಯಕ್ತಿಗೆ ಮಾಟ ಮಾಡಲಾಗಿದೆಯೆಂದು ತಿಳಿಯದಾದಾಗ ನಮ್ಮಂತಹ ಸಾಮಾನ್ಯ ವ್ಯಕ್ತಿಗಳಿಗೆ ಅದನ್ನು ಗುರುತಿಸಲು ಸಾಧ್ಯವಿಲ್ಲವೆಂದು ವ್ಯಕ್ತವಾಗುತ್ತದೆ. ಒಂದು ವೇಳೆ ಹಾಗೇನಾದರೂ ಸಂದೇಹವುಂಟಾದರೆ ಪವಿತ್ರ ಕುರ್ಆನಿನ ಕೊನೆಯ ಎರಡು ಸೂರಾಃಗಳಾದ `ಮುಆವ್ವಿದತೈನ್’ ಓದುತ್ತಾ ಇದ್ದರೆ ಸಾಕು. ಪ್ರವಾದಿ(ಸ) ರಾತ್ರಿ ಮಲಗುವುದಕ್ಕಿಂತ ಮುಂಚೆ ಈ ಸೂರಾಃಗಳನ್ನು ಓದಿ ಕೈಗಳಿಗೆ ಊದಿ ಇಡೀ ಶರೀರಗಳ ಮೇಲೆ ಸವರುತ್ತಿದ್ದರು ಎಂದು ಹದೀಸ್ಗಳಿಂದ ತಿಳಿದು ಬರುತ್ತದೆ. ಒಂದು ವೇಳೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಏನಾದರೂ ತೊಂದರೆ ಇದ್ದರೆ ಅದಕ್ಕೆ ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮಾಟ ಮಾಡಲಾಗಿದೆಯೆಂಬ ಸಂದೇಹದಿಂದ ಜ್ಯೋತಿಷಿಗಳನ್ನು ಸವಿೂಪಿಸುವುದು ಅವರು ಕೊಟ್ಟ ಮಾಹಿತಿ ಪ್ರಕಾರ ಯಾರ ಮೇಲಾದರೂ ಹಗೆತನವಿಟ್ಟುಕೊಳ್ಳುವುದು ಇತ್ಯಾದಿ ಅಪಕೃತ್ಯಗಳನ್ನು ಮಾಡುವುದು ಸರಿಯಲ್ಲ. ಮಾಟ ಮಾಡುವುದು ಮಾನವನನ್ನು ವಿನಾಶಕ್ಕೂಯ್ಯಬಲ್ಲ ಏಳು ಮಹಾ ಪಾಪಗಳ ಪೈಕಿ ಒಂದಾಗಿದೆ. ಅದೇ ರೀತಿ ಮಾಟಗಾರನನ್ನು- ಮಾಟ ಮಾಡಲು ಅಥವಾ ಬಿಡಿಸಲು- ಸವಿೂಪಿಸುವುದು ಸತ್ಯವಿಶ್ವಾಸಕ್ಕೆ ವಿರುದ್ಧವಾದ ಕಾರ್ಯಗಳಾಗಿವೆ. ಪ್ರವಾದಿ(ಸ) ಹೀಗೆ ಹೇಳಿದ್ದಾರೆ. “ತನ್ನ ಸಮುದಾಯದ ಎಪ್ಪತ್ತು ಸಾವಿರ ಮಂದಿಯನ್ನು ವಿಚಾರಣೆವಿಲ್ಲದೆ ಸ್ವರ್ಗಕ್ಕೆ ಕಳಿಸಲಾಗುವುದು. ಅವರಲ್ಲಿ ಮಾಟಗಾರರ ಬಳಿಗೆ ಹೋಗದವರೂ ಸೇರಿದ್ದಾರೆ.”
ವಾಸ್ತು ದೋಷ?
ವಾಸ್ತು ದೋಷ?
ಉತ್ತರ: ವಾಸ್ತು ದೋಷವೆಂಬುದು ಮಿಥ್ಯ ಕಲ್ಪನೆಯಾಗಿದೆ. ಅದಕ್ಕೆ ಇಸ್ಲಾಮಿನಲ್ಲಿ ಯಾವುದೇ ಸ್ಥಾನವಿಲ್ಲ. ಮನೆ, ಕಛೇರಿ ಅಥವಾ ಅಂಗಡಿಯ ವಿನ್ಯಾಸ ಬದಲಾವಣೆಯಿಂದ ರೋಗ ಬಾಧಿಸುವುದೋ ವ್ಯಾಪಾರದಲ್ಲಿ ನಷ್ಟವಾಗುವುದೋ ನಿವಾರಣೆಯಾಗುವುದಿಲ್ಲ. ಇಸ್ಲಾಮೀನ ಪ್ರಕಾರ, ರೋಗಬಾಧಿಸುವುದು ಮತ್ತು ವ್ಯಾಪಾರ, ಕೃಷಿ ಇತ್ಯಾದಿಗಳಲ್ಲಿ ನಷ್ಟ ಸಂಭವಿಸುವುದು ಅಥವಾ ಇನ್ನಿತರ ಯಾವುದೇ ಸಂಕಷ್ಟಗಳು ಮನುಷ್ಯನಿಗೆ ಬಾಧಿಸುವುದು ವಿಧಿಲಿಖಿತ ಪ್ರಕಾರವಾಗಿದೆ. ಅಂದರೆ ಅವೆಲ್ಲವೂ ಅಲ್ಲಾಹನಿಂದ ಪೂರ್ವನಿರ್ಧರಿತವಾಗಿರುತ್ತದೆ. ಅವೆಲ್ಲ ಮನುಷ್ಯನ ಪರೀಕ್ಷಾರ್ಥವಾಗಿ ಅಲ್ಲಾಹನು ಕಳುಹಿಸುತ್ತಾನೆ. ಬಂಧ ಸಂಕಷ್ಟಗಳು ಅಥವಾ ಇನ್ನು ಬರಬಹುದಾದ ಯಾವುದೇ ವಿಪತ್ತು ಅಥವಾ ಸಂಕಷ್ಟ ಅಲ್ಲಾಹನ ವತಿಯಿಂದ ಮಾತ್ರ ಬರುತ್ತದೆ ಎಂಬ ದೃಢ ನಂಬಿಕೆ ಹೊಂದಿದರೆ ಅವನು ಜೀವನದ ಪರೀಕ್ಷೆಯಲ್ಲಿ ಸಫಲನಾಗುವನು. ಮಾತ್ರವಲ್ಲ, ಸತ್ಯದ ಹಾದಿಯಲ್ಲಿ ಅಚಲವಾಗಿ ನಿಲ್ಲಲು ಅವನಿಗೆ ಅದು ಸ್ಫೂರ್ತಿ ನೀಡುತ್ತದೆ. ಪವಿತ್ರ ಕುರ್ಆನ್ ಹೇಳುತ್ತದೆ, “ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನ ಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಂದ ಖಂಡಿತ ನಿಮ್ಮನ್ನು ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ. ಅಂತಹವರ ಮೇಲೆ ವಿಪತ್ತೇನಾದರೂ ಎರಗಿದಾಗ ಅವರು, `ನಿಶ್ಚಯವಾಗಿಯೂ ನಾವು ಅಲ್ಲಾಹನವರು ಮತ್ತು ಅಲ್ಲಾಹನಡೆಗೆ ನಮಗೆ ಮರಳಲಿಕ್ಕಿದೆ’ಯೆನ್ನುವರು. ಅವರ ಮೇಲೆ ಅವರ ಪ್ರಭುವಿನ ಮಹಾ ಅನುಗ್ರಹಗಳಿರುವುವು. ಅವನ ಕಾರುಣ್ಯವು ಅವರನ್ನು ಅಚ್ಛಾದಿಸುವುದು ಮತ್ತು ಇಂತಹವರೇ ಸನ್ಮಾರ್ಗ ಹೊಂದಿದವರಾಗಿರುತ್ತಾರೆ.” (2: 155-157)
ಆದ್ದರಿಂದ ಅಲ್ಲಾಹನ ವಿಧಿಯ ಮೇಲೆ ಅಚಂಚಲ ವಿಶ್ವಾಸವಿರಿಸುವುದೇ ವಿಶ್ವಾಸಿಗಳಿಗಿರುವ ಸರಿಯಾದ ನಿಲುವು. ಮಳೆಯ ಕುರಿತು ಅಲ್ಲಾಹನು ಹೇಳುತ್ತಾನೆ, “ಮಳೆಯನ್ನು ಸುರಿಸುವವರು ನಾವು” (56: 68-69) ಆದರೆ ಮಳೆ ಬರುವುದು ಇಂತಿಂತಹ ಕಾರಣಗಳಿಂದ ಎಂದು ನಂಬಿದರೆ ಅಥವಾ ಹೇಳಿದರೆ ಅವನು `ಶಿರ್ಕ್’ ಮಾಡಿದನು ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಶಿರ್ಕ್ ಅಥವಾ ಬಹುದೇವಾರಾಧನೆ ಮಹಾ ಪಾಪವಾಗಿದೆಯಷ್ಟೆ. ಅದು ಇದಕ್ಕೂ ಅನ್ವಯಿಸುತ್ತದೆ. ಆದ್ದರಿಂದ ವಾಸ್ತುವನ್ನು ಬದಲಾಯಿಸುವುದರಿಂದ ವಿಧಿ ಬದಲಾಗುವುದಿಲ್ಲವೆಂಬುದನ್ನು ತಿಳಿದಿರಬೇಕು. ವಿಧಿ ಬದಲಾಗಬೇಕಾದರೆ ಅಲ್ಲಾಹನೊಂದಿಗೆ ಸನ್ಮನಸ್ಸಿನಿಂದ ಪ್ರಾರ್ಥಿಸಬೇಕು. ರೋಗ ಬಾಧಿಸಿದರೂ ವ್ಯಾಪಾರದಲ್ಲಿ ನಷ್ಟ ಸಂಭವಿಸಿದರೂ ಅಥವಾ ಇನ್ಯಾವುದೇ ಸಂಕಷ್ಟ ಬಂದರೂ ಅಲ್ಲಾಹನಲ್ಲೇ ಪ್ರಾರ್ಥಿಸಬೇಕು. ಅವನಿಚ್ಛಿಸಿದರೆ ಸಂಕಷ್ಟದ ಪರಿಸ್ಥಿತಿಯನ್ನು ಬದಲಾಯಿಸುವನು.
ವರದಕ್ಷಿಣೆ ನಿಷಿದ್ಧ ಯಾಕೆ?
ವರದಕ್ಷಿಣೆ ನಿಷಿದ್ಧ ಯಾಕೆ?
ಮುಸ್ಲಿಮೇತರರಿಗೆ ಸಲಾಮ್ ಹೇಳಬಹುದೇ?
ಮುಸ್ಲಿಮೇತರರಿಗೆ ಸಲಾಮ್ ಹೇಳಬಹುದೇ?
ಉತ್ತರ: ‘ಅಸ್ಸಲಾಮು ಅಲೈಕುಂ’ ಎಂಬು ವುದು ಮುಸ್ಲಿಮ್-ಮುಸ್ಲಿಮೇತರ ಎಂಬ ಬೇಧ ಭಾವವಿಲ್ಲದೆ ಪ್ರಯೋಗಿಸಬಹುದಾದ ವಾಕ್ಯವಾಗಿದೆ. ಇಮಾಮ್ ಬುಖಾರಿ ಹಾಗೂ ಮುಸ್ಲಿಮ್ ವರದಿ ಮಾಡಿರುವ ಹದೀಸಿನಲ್ಲಿ ಹೀಗೆ ಕಾಣಬಹುದು. “ಅಲ್ಲಾಹನು ಆದಮರನ್ನು(ಅ) ಸೃಷ್ಟಿಸಿದ ಬಳಿಕ ಹೀಗೆ ಹೇಳಿದನು- ತಾವು ಆ ಗುಂಪಿನ ಬಳಿಗೆ ಹೋಗಿರಿ. ಅಲ್ಲಿ ಮಲಕ್ಗಳ ಒಂದು ಗುಂಪು ಇದೆ. ಅವರು ನಿಮ್ಮನ್ನು ಅಭಿನಂಧಿಸುವುದನ್ನು ಆಲಿಸಿರಿ. ನಿಮ್ಮ ಹಾಗೂ ನಿಮ್ಮ ಸಂತತಿಗಳ ಅಭಿನಂದನೆಯು ಅದುವೇ ಆಗಿದೆ. ಹಾಗೆ ಅವರು ‘ಅಸ್ಸಲಾಮು ಅಲೈಕುಂ’ ಎಂದು ಹೇಳಿದರು. ಅಸ್ಸಲಾಮು ಅಲೈಕ ವರಹ್ಮತುಲ್ಲಾಹಿ ಎಂದು ಅವರು ಪ್ರತಿಯಾಗಿ ಅಭಿನಂಧಿಸಿದರು.” (ಬುಖಾರಿ, ಮುಸ್ಲಿಂ)
ಇದರಿಂದ ತಿಳಿದು ಬರುವುದೇನೆಂದರೆ ಅಲ್ಲಾಹನು ಆದಮರಿಗೂ(ಅ) ಅವರ ಸಂತತಿಗಳಿಗೂ ಅಭಿನಂದನೆಯ ವಾಕ್ಯವಾಗಿ ಕಲಿಸಿದ್ದು ಅಸ್ಸಲಾಮು ಅಲೈಕುಂ ಎಂದಾಗಿದೆ. ಆದಮರ ಸಂತತಿಗಳು ಎಂದು ಹದೀಸ್ನಲ್ಲಿ ಹೇಳಲಾಗಿದೆ. ಮನುಷ್ಯರೆಲ್ಲರೂ ಆದಮರ ಸಂತತಿಗಳಾಗಿದ್ದಾರೆ.
ಕುರ್ಆನಿನಲ್ಲೂ ನಮಗೆ ವಿಭಿನ್ನ ಅಭಿನಂದನಾ ರೀತಿಗಳನ್ನು ಕಾಣಲು ಸಾಧ್ಯವಿಲ್ಲ. ಉದಾ: “ಸತ್ಯ ವಿಶ್ವಾಸಿಗಳೇ, ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಒಪ್ಪಿಗೆ ಪಡೆಯದೆ ಹಾಗೂ ಮನೆಯವರಿಗೆ ಸಲಾಮ್ ಹೇಳದೆ ಪ್ರವೇಶಿಸಬೇಡಿ. ಈ ಕ್ರಮವು ನಿಮ್ಮ ಮಟ್ಟಿಗೆ ಉತ್ತಮ. ನೀವು ಇದನ್ನು ಗಮನದಲ್ಲಿರಿಸುವಿರೆಂದು ನಿರೀಕ್ಷಿಸಲಾಗಿದೆ.” (ಅನ್ನೂರ್: 27)
“ಸಂದೇಶವಾಹಕರೇ, ಇವರನ್ನು ಮನ್ನಿಸಿರಿ ಮತ್ತು ನಿಮಗೆ ಸಲಾಮ್ (ಶಾಂತಿ) ಎಂದು ಹೇಳಿರಿ. ಸದ್ಯವೇ ಇವರಿಗೆ ತಿಳಿದು ಬರುವುದು.” (ಅಝುಖ್ರುಫ್: 89)
“ಆಗ ಇಬ್ರಾಹೀಮರು, `ತಮಗೆ ಸಲಾಮ್, ತಮ್ಮನ್ನು ಕ್ಷಮಿಸಲಿಕ್ಕಾಗಿ ನಾನು ನನ್ನ ಪ್ರಭುವಿನೊಡನೆ ಪ್ರಾರ್ಥಿಸುವೆನು. ನನ್ನ ಪ್ರಭು ನನ್ನ ಮೇಲೆ ಅತ್ಯಧಿಕ ಕೃಪೆಯುಳ್ಳವನು’ ಎಂದರು.” (ಮರ್ಯಮ್: 47)
ಮುಸ್ಲಿಮೇತರರಿಗೂ ಸಲಾಮ್ ಹೇಳಬಹುದು ಎಂದು ಪ್ರಸಿದ್ಧ ಸಹಾಬಿಗಳಾದ ಇಬ್ನು ಅಬ್ಬಾಸ್, ಇಬ್ನು ಮಸ್ಊದ್, ಅಬೂ ಉಮಾಮ(ರ) ಮೊದಲಾದವರು ಅಭಿಪ್ರಾಯ ಪಟ್ಟಿದ್ದಾರೆ. ಸಹಾಬಿಗಳ ಕಾಲಾನಂತರ ಬಂದ ಖಲೀಫಾ ಉಮರ್ ಬಿನ್ ಅಬ್ದುಲ್ ಅಝಿಝ್, ಸುಫ್ಯಾನ್ ಬಿನ್ ಉಯೈನ, ಶಅïಬಿ, ಔಝಾಈ, ತ್ವಬ್ರಿ ಮುಂತಾದವರೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.
ಯಹೂದಿ-ಕ್ರೈಸ್ತರಿಗೆ ಸಲಾಮ್ ಹೇಳುವುದನ್ನು ವಿರೋಧಿಸಿದ ಹದೀಸ್ ಗಳನ್ನು ಪರಿಶೀಲಿಸಿದರೆ ಅದು ಯುದ್ಧದ ಸಂದರ್ಭಗಳಿಗೆ ಮಾತ್ರ ಸೀಮಿತವಾದ ಪ್ರತ್ಯೇಕ ವಿಧಿಗಳೆಂದು ತಿಳಿದು ಬರುತ್ತದೆ. “ನಾಳೆ ಅವರನ್ನು ಎದುರಿಸಲು ಹೋಗಲಿದ್ದೇವೆ. ಆದ್ದರಿಂದ ಅವರೊಂದಿಗೆ ಸಲಾಮ್ನಿಂದ ಆರಂಭಿಸಬೇಡಿ” ಎಂದು ಒಂದು ವರದಿಯಲ್ಲಿ ಕಾಣಬಹುದು. ಬೇರೆ ಶೈಲಿಯಲ್ಲೂ ಈ ಇಂಗಿತವು ಪ್ರಕಟಗೊಂಡಿದೆ. ಇಂತಹ ಹದೀಸ್ಗಳ ಪೂರ್ಣ ರೂಪವನ್ನು ನೋಡುವುದಾದರೆ, ಯಹೂದಿಯರು ಕೈಗೊಂಡ ಇಸ್ಲಾಮ್ ವಿರೋಧಿ ಧೋರಣೆಗಳ ಹಿನ್ನೆಲೆಯಲ್ಲಿ ಅಂತಹ ಸಲಹೆ ನೀಡಲಾಗಿದೆ ಎಂದು ತಿಳಿದು ಬರುವುದು.
ಒಟ್ಟಿನಲ್ಲಿ ಶತ್ರುಗಳಲ್ಲದೆ ಯಾರೇ ಆದರೂ ಅವರಿಗೆ ಸಲಾಮ್ ಹೇಳುವುದಕ್ಕೂ ಅದನ್ನು ಮರಳಿಸುವುದಕ್ಕೂ ವಿರೋಧವಿಲ್ಲ ಎಂಬ ಅಭಿಪ್ರಾಯವು ಹೆಚ್ಚು ಸ್ವೀಕಾರಾರ್ಹ ಎಂದು ಭಾಸವಾಗುತ್ತದೆ. ಪ್ರವಾದಿ(ಸ) ಹೀಗೆ ಕಲಿಸಿದ್ದಾರೆ, “ನೀನು ಪರಿಚಿತರೊಂದಿಗೂ ಅಪರಿಚಿತರೊಂದಿಗೂ ಸಲಾಮ್ ಹೇಳು.”
ಇಮಾಮ್ ಕುರ್ತುಬಿ ತನ್ನ ಕುರ್ಆನ್ ವ್ಯಾಖ್ಯಾನ ಗ್ರಂಥದಲ್ಲಿ ಈ ವಿಷಯವನ್ನು ಚರ್ಚಿಸಿದ್ದಾರೆ. ಇಮಾಮ್ ಸುಫ್ಯಾನ್ ಬಿನ್ ಉಯೈನರೊಂದಿಗೆ ಓರ್ವ ವ್ಯಕ್ತಿ ಕೇಳಿದರು, “ಸತ್ಯನಿಷೇಧಿಗಳಿಗೆ ಸಲಾಮ್ ಹೇಳಬಹುದೇ?” “ಹೌದು, ಹೇಳಬಹುದು.” ಅವರು ಉತ್ತರಿಸಿದರು. ಬಳಿಕ ಮುಮ್ತಹಿನ ಅಧ್ಯಾಯದ ನಾಲ್ಕನೇ ಸೂಕ್ತವನ್ನು ಪುರಾವೆಯಾಗಿ ಓದಿದರು. ಮಾತ್ರವಲ್ಲ, ಇಬ್ರಾಹೀಮರಲ್ಲಿ(ಅ) ನಮ್ಮ ಉತ್ತಮ ಮಾದರಿ ಇದೆ ಎಂಬ ಸೂಕ್ತವನ್ನು ಉದ್ಧರಿಸಿ, ಇಬ್ರಾಹೀಮ್(ಅ) ತನ್ನ ತಂದೆಯೊಂದಿಗೆ `ಸಲಾಮುನ್ ಅಲೈಕ’ ಎಂದು ಹೇಳಿದ ಭಾಗವನ್ನೂ ಅವರು ತೋರಿಸಿದರು. ಈ ನಿಲುವು ಸರಿ ಎಂದು ಇಮಾಮ್ ತ್ವಬ್ರೀ ಒತ್ತು ನೀಡಿ ಹೇಳಿದ್ದಾರೆ. ಗತ ಕಾಲದ ಮಹಾನ್ ವ್ಯಕ್ತಿಗಳಲ್ಲಿ ಇತರ ಧರ್ಮೀಯರಿಗೆ ಸಲಾಮ್ ಹೇಳಿದವರೂ ಹೇಳದವರೂ ಇದ್ದರು ಎಂದು ಇಮಾಮ್ ಔಝಾಈ ಹೇಳಿದ್ದನ್ನು ಕುರ್ತುಬಿ ಉದ್ಧರಿಸಿದ್ದಾರೆ.
ಒಟ್ಟಿಗೆ ಆಡಿ, ಕಲಿತು, ಬೆರೆತು, ಒಟ್ಟಿಗೆ ದುಡಿದು ಪರಸ್ಪರ ಗೌರವದೊಂದಿಗೆ ಬದುಕುವವರು ಯಾವುದೇ ಧರ್ಮಿಯರಾಗಿದ್ದರೂ ಅವರಿಗೆ ಆದಮರ(ಅ) ಸಂತತಿಗೆ ಅಲ್ಲಾಹನು ಕಲಿಸಿದ ಶಾಂತಿಯ ಹಾಗೂ ಸಾಮಾಧಾನದ ಹಾರೈಕೆ ಅರ್ಪಿಸಬೇಕು ಎಂಬುದು ಇಸ್ಲಾಮಿನ ಬಯಕೆಯಾಗಿದೆ.
ದೇವನು ನ್ಯಾಯವಂತನೇ?
ದೇವನು ನ್ಯಾಯವಂತನೇ?
ಉತ್ತರ: ಇದು ಬಹಳ ಪ್ರಸಕ್ತವೂ ನ್ಯಾಯಪೂರ್ಣವಾದ ಪ್ರಶ್ನೆಯಾಗಿದೆ. ಆದರೆ ಸ್ವಲ್ಪ ಆಳವಾಗಿ ಚಿಂತಿಸಿದರೆ ಇದು ಅಪ್ರಸ್ತುತವೆಂಬ ಅರಿವಾಗುತ್ತದೆ. ಈ ಪ್ರಶ್ನೆಯನ್ನೇ ಸ್ವಲ್ಪ ದೀರ್ಘಗೊಳಿಸುವುದಾದರೆ ನಮ್ಮಲ್ಲಿ ಹಲವಾರು ಸಂಶಯಗಳಿವೆ. ನನ್ನನ್ನು ಆರು ಅಡಿ ಉದ್ದದ ವ್ಯಕ್ತಿಯನ್ನಾಗಿ ಏಕ ಮಾಡಲಿಲ್ಲವೆಂದು ಗಿಡ್ಡ ವ್ಯಕ್ತಿಯು ಕೇಳಬಹುದು. ಕಪ್ಪು ಮೈಬಣ್ಣದವನು ನಾನು ಯಾಕೆ ಬಿಳಿಯವನಾಗಿಲ್ಲವೆಂದು ಪ್ರಶ್ನಿಸಬಹುದು. ತನ್ನನ್ನು ಸುಂದರಗೊಳಿಸಿಲ್ಲವೇಕೆಂದು ಕುರೂಪಿಯೂ, ಪ್ರತಿಭಾವಂತನಾಗಿ ಮಾಡಲಿಲ್ಲವೆಂದು ಸಾಮಾನ್ಯ ಬುದ್ದಿಯುಳ್ಳವನೂ ಕೇಳಬಹುದು. ಉತ್ತಮ ಹವಾಮಾನ ಇರುವ ಸ್ಥಳದಲ್ಲಿ ಹುಟ್ಟಿಸಲಿಲ್ಲವೇಕೆಂದು ಮರುಭೂಮಿಯ ನಿವಾಸಿಯೂ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿಸಲಿಲ್ಲವೇಕೆಂದು ಬಡವನೂ, ರಾಜನಾಗಿ ಮಾಡಲಿಲ್ಲವೆಂದು ಜನಸಾಮಾನ್ಯನೂ, ಇಪ್ಪತ್ತೊಂದನೇ ಶತಮಾನದಲ್ಲಿ ಜೀವನ ಸಿಗಲಿಲ್ಲವೆಂದು ಹತ್ತನೇಯ ಶತಮಾನದವನ ಪ್ರಶ್ನೆಯೂ ಎಲ್ಲವೂ ಪ್ರಸಕ್ತ ಹಾಗೂ ನ್ಯಾಯಯುತವೇ ಆಗಿದೆ. ಇವುಗಳನ್ನು ಅವರವರ ದೃಷ್ಟಿಕೋನದಿಂದ ನೋಡುವಾಗ ಇದು ಬಹಳ ದೊಡ್ಡ ಅನ್ಯಾಯವಾಗಿದೆ. ಮಹಿಳೆಯರು ಹೀಗೆ ಪ್ರಶ್ನಿಸಬಹುದು- ನಾನೇ ಗರ್ಭಧರಿಸಿ ಕಷ್ಟಪಟ್ಟು ನೋವನುಭವಿಸಿ ಹೆತ್ತು, ಮಗುವಿಗೆ ಸ್ತನಪಾನ ಮಾಡಿಸಬೇಕು. ನನ್ನ ಗಂಡನಿಗೆ ಅಂತಹ ಕಷ್ಟವೇನೂ ಇಲ್ಲವಲ್ಲ, ಆದ್ದರಿಂದ ತನ್ನನ್ನು ಗಂಡಾಗಿ ಸೃಷ್ಟಿಸಲಿಲ್ಲವೇಕೆಂದು ತಗಾದೆ ತಗೆಯಬಹುದು. ತನ್ನೊಂದಿಗೆ ಅನ್ಯಾಯವಾಗಿದೆಯಂದು ಸಮರ್ಥಿಸಬಹುದು.
ಮನುಷ್ಯರ ನಡುವೆ ವ್ಯತ್ಯಾಸಗಳಿಲ್ಲದಿರುವುದೇ ನ್ಯಾಯವೆನ್ನುವುದಾದರೆ ಎಲ್ಲರೂ ಒಂದೇ ಭೂ ಪ್ರದೇಶದಲ್ಲಿ ಒಂದೇ ಕಾಲ, ಕುಟುಂಬ, ಒಂದೇ ತಂದೆ-ತಾಯಿಗಳ ಮಕ್ಕಳಾಗಿ, ಸಮಾನ ಬುದ್ಧಿವಂತಿಕೆ, ಒಂದೇ ರೀತಿಯ ರೂಪ, ದೇಹ, ಲಿಂಗ ಅಥವಾ ಒಂದೇ ರೀತಿಯ ಆರೋಗ್ಯದಿಂದ ಹುಟ್ಟುವ ಮತ್ತು ಸಾಯುವ ಪರಿಸ್ಥಿತಿ ಇರುತ್ತಿತ್ತು. ಇದು ಅಸಾಧ್ಯ ಮತ್ತು ಅಪ್ರಾಯೋಗಿಕವೆಂದು ಎಲ್ಲರಿಗೂ ಅರ್ಥವಾಗುತ್ತದೆ. ಆದ್ದರಿಂದ ಎಲ್ಲದರಲ್ಲಿಯೂ ವೈವಿಧ್ಯತೆಯು ಮಾನವ ಕುಲದ ಅಸ್ತಿತ್ವಕ್ಕೆ ಅನಿವಾರ್ಯವಾಗಿದೆ.
ಮಾನವ ಜೀವನವು ಮರಣದೊಂದಿಗೆ ಕೊನೆಗೊಳ್ಳುವುದೆಂದಿದ್ದರೆ ಅನ್ಯಾಯದ ಕುರಿತಾದ ಪ್ರಶ್ನೆಗಳು ಸರಿಯಾಗಿದೆ. ಅಂತಾದರೆ ಜನನದಿಂದ ಮರಣದವರೆಗೆ ಜೀವನವು ಎಲ್ಲರಿಗೂ ಸಮಾನವಾಗಿ ಆಸ್ವಾದಿಸಲು ದೊರೆಯಬೇಕು. ಆದರೆ ನ್ಯಾಯವಂತನಾದ ದೇವನು ಮರಣದೊಂದಿಗೆ ನಮ್ಮ ಜೀವನವನ್ನು ಕೊನೆಗೊಳಿಸುವುದಿಲ್ಲ . ಇಹಲೋಕವು ಕರ್ಮ ಮಾಡುವ ಜೀವನವಾಗಿದೆ. ವಿಚಾರಣೆ, ವಿಧಿ, ಕರ್ಮಫಲ ಎಲ್ಲಾ ಮರಣದ ಬಳಿಕ ಪರಲೋಕದಲ್ಲಿ ಲಭಿಸುವುದು. ಪ್ರತಿಯೊಬ್ಬರಿಗೂ ಅವರಿಗೆ ನೀಡಲಾಗಿರುವ ಸಾಮರ್ಥ್ಯಕ್ಕೆ ಅನುಗುಣವಾಗಿ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ.
ಶ್ರೀಮಂತನಿಗಿರುವ ಜವಾಬ್ದಾರಿ ಬಡವನಿಗಿಲ್ಲ. ವಿದ್ವಾಂಸನ ಹೊಣೆಗಾರಿಕೆ ಸಾಮಾನ್ಯ ವ್ಯಕ್ತಿಗಿಲ್ಲ. ಪ್ರತಿಭಾನ್ವಿತ ವ್ಯಕ್ತಿಯ ಕರ್ತವ್ಯ ಸಾಮಾನ್ಯ ಬುದ್ದಿವಂತನಿಗಿಲ್ಲ. ಮಂದ ಬುದ್ದಿಯವನಿಗೆ ಸ್ವಲ್ಪವೂ ಹೊಣೆಗಾರಿಕೆಯಿಲ್ಲ. ಅಂಗವಿಕಲನಿಗೆ ಆರೋಗ್ಯವಂತನಿಗಿಂತ ಕಡಿಮೆ ಹೊಣೆಗಾರಿಕೆಯಿದೆ. ಈ ಹೊಣೆಗಾರಿಕೆಗಳ ನಿರ್ವಹಣೆಯು ಜೀವನದ ಸೋಲು-ಗೆಲುವಿನ ಮಾನದಂಡವಾಗಿದೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಗಳನ್ನು ಹೇಗೆ ವಿನಿಯೋಗಿಸಿದರೆಂಬುದನ್ನು ಪರಿಗಣಿಸಲಾಗುವುದು. ನಂತರ, ಅದೇ ಆಧಾರದಲ್ಲಿ ಮರಣದ ಬಳಿಕ ಪುಣ್ಯ-ಶಿಕ್ಷೆಗಳು ನಿರ್ಧಾರವಾಗುತ್ತದೆ. ಆದ್ದರಿಂದ ಮರಣಾನಂತರ ಪರಲೋಕವಿಲ್ಲದಿದ್ದರೆ ಮಾತ್ರ ಭೂಮಿಯಲ್ಲಿ ಮಾನವನ ನಡುವಿನ ವ್ಯತ್ಯಾಸಗಳು ಅನ್ಯಾಯವೆನಿಸುತ್ತದೆ. ಶಾಶ್ವತವಾದ ಪರಲೋಕ ನಿಷೇಧಿಸಲಾಗದ ವಾಸ್ತವವಾದುದರಿಂದ ದೇವನು ಮಾಡಿರುವಂತಹ ವೈವಿಧ್ಯತೆಗಳು, ವ್ಯತ್ಯಾಸಗಳು ಖಂಡಿತ ನ್ಯಾಯಕ್ಕೆ ವಿರುದ್ಧವಾಗುವುದಿಲ್ಲ.
ತನಗೆ ದೇವನು ನೀಡಿದ ಅನುಗ್ರಹಗಳನ್ನು ಸ್ಮರಿಸಿ, ಅಂಗವಿಕಲರೊಂದಿಗೂ, ದರಿದ್ರರೊಂದಿಗೂ ಅನುಕಂಪ ತೋರಿ, ಪರಸ್ಪರ ಪ್ರೀತಿಸಿ, ಸಹಾಯ ಸಹಕಾರಗಳನ್ನು ನೀಡಿ, ಉದಾರತೆಯಿಂದ ವರ್ತಿಸಿದ್ದಾರೋ ಎಂಬ ಆಧಾರದಲ್ಲಿ ಮರಣದ ಬಳಿಕದ ಜೀವನದ ಶಿಕ್ಷೆ-ರಕ್ಷೆ-ಪ್ರತಿಫಲವು ದೊರೆಯುವುದು.
ಆದರೆ ದೇವನನ್ನು ಹಾಗೂ ಪರಲೋಕವನ್ನು ನಿಷೇಧಿಸುವ ನಾಸ್ತಿಕರು ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಅಸಾಧ್ಯ. ಪ್ರಪಂಚಕ್ಕೆ ಸಮಗ್ರ ವ್ಯವಸ್ಥೆಯನ್ನು ಕಲ್ಪಿಸಿದ ಪ್ರಕೃತಿಯು ಮಾನವರೊಂದಿಗೆ ನ್ಯಾಯ ತೋರದಿರಲು ಕಾರಣವೇನು? ಪ್ರಕೃತಿಯಿಂದಾದ ಈ ಅನ್ಯಾಯಕ್ಕೆ ಯಾವ ಪರಿಹಾರವನ್ನು ಅವರು ಸೂಚಿಸುತ್ತಾರೆ. ಇವುಗಳಿಗೆ ನಾಸ್ತಿಕರು ಹಾಗೂ ಧರ್ಮಧಿಕ್ಕಾರಿಗಳು ಉತ್ತರಿಸಬೇಕು.
IslamKannada News Portal