Home / Uncategorized / ಜೈಪುರ ಬಾಂಬ್ ಸ್ಫೋಟ ಆರೋಪಿ ಶಹಬಾಜ್ 12 ವರ್ಷ ಜೈಲಿನಲ್ಲಿದ್ದರು; ಈಗ ನಿರಪರಾಧಿ ಎಂದ ನ್ಯಾಯಾಲಯ

ಜೈಪುರ ಬಾಂಬ್ ಸ್ಫೋಟ ಆರೋಪಿ ಶಹಬಾಜ್ 12 ವರ್ಷ ಜೈಲಿನಲ್ಲಿದ್ದರು; ಈಗ ನಿರಪರಾಧಿ ಎಂದ ನ್ಯಾಯಾಲಯ

 

 

ಜೈಪುರ: ನಿರಪರಾಧಿಯಾಗಿದ್ದರೂ 12 ವರ್ಷ ಮತ್ತು ಆರು ತಿಂಗಳು ಜೈಲಿನಲ್ಲಿ ಕಳೆದ ಶಹಬಾಜ್ ರವರು ಜೈಪುರ ಕೇಂದ್ರ ಕಾರಾಗೃಹದಿಂದ 2021 ಮಾರ್ಚ್ 1 ರಂದು ರಾತ್ರಿ 10 ಗಂಟೆಗೆ ಬಿಡುಗಡೆಗೊಂಡರು. ಆಗಸ್ಟ್ 25, 2008 ರಂದು ಜೈಪುರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಉತ್ತರ ಪ್ರದೇಶದ ಭಾದೋಹಿ ನಿವಾಸಿ ಶಹಬಾಜ್ ಅವರನ್ನು ಬಂಧಿಸಲಾಗಿತ್ತು.

13 ಮೇ 2008 ರಂದು ರಾಜಸ್ಥಾನದ ರಾಜಧಾನಿಯಾದ ಜೈಪುರದಲ್ಲಿ 8 ವಿವಿಧ ಸ್ಥಳಗಳಲ್ಲಿ ಬಾಂಬ್ ಸ್ಫೋಟದಿಂದ ಇಡೀ ನಗರವು ನಡುಗಿತು. ಈ ಭಯೋತ್ಪಾದಕ ಘಟನೆಯಲ್ಲಿ 71 ಜನರು ಸಾವನ್ನಪ್ಪಿದರು ಮತ್ತು ಸುಮಾರು 176 ಜನರು ಗಾಯಗೊಂಡಿದ್ದರು. ಜೈಪುರ ಸ್ಫೋಟ ಪ್ರಕರಣದಲ್ಲಿ ಎಟಿಎಸ್ 11 ಜನರನ್ನು ಹೆಸರಿಸಿದೆ.

indiatomorrow ಜೊತೆ ಮಾತನಾಡಿದ ಶಹಬಾಜ್ ಅವರ ತಂದೆ ಮುಮ್ತಾಜ್ ಅಹ್ಮದ್, “ನನ್ನ ಮಗನಿಗೆ ಅನ್ಯಾಯವಾಗಿದೆ. ನಿರಪರಾಧಿಯಾಗಿದ್ದರೂ 12 ವರ್ಷ ಮತ್ತು ಆರು ತಿಂಗಳು ಜೈಲಿನಲ್ಲಿ ಕಳೆದನು. ಕಳೆದು ಹೋದ ಈ ಅಮೂಲ್ಯ ವರ್ಷಗಳಿಗೆ ಯಾರು ಬೆಲೆ ನೀಡುತ್ತಾರೆ?” ಎಂದು ಹೇಳಿದರು.

ಜೈಪುರದಲ್ಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶಹಬಾಜ್ ಅಹ್ಮದ್ ಅವರನ್ನು 2008 ರ ಆಗಸ್ಟ್ 25 ರಂದು ಲಕ್ನೋದಿಂದ ಜೈಪುರ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ 8 ಪ್ರಕರಣಗಳಲ್ಲಿ 2019 ರ ಡಿಸೆಂಬರ್ 18 ರಂದು ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಜೈಪುರದಿಂದ ಶಹಬಾಜ್ ಅವರನ್ನು ಖುಲಾಸೆಗೊಳಿಸಲಾಗಿದೆ.

2019 ರ ಡಿಸೆಂಬರ್‌ನಲ್ಲಿ,8 ಪ್ರಕರಣಗಳಲ್ಲಿ ಖುಲಾಸೆ ಗೊಂಡು ಮನೆಗೆ ಹೋಗುವ ಸಮಯ ಬಂದಾಗ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ್ ಪೊಲೀಸರ ಎಟಿಎಸ್ ಸೆಲ್ ಅವರನ್ನು 25 ಡಿಸೆಂಬರ್ 2019 ರಂದು ಬಂಧಿಸಿತು. ಇದರಿಂದಾಗಿ ಶಹಬಾಜ್ ಬಿಡುಗಡೆಯನ್ನು ಮುಂದೂಡಲಾಯಿತು.

ಈ ಒಂಬತ್ತನೇ ಪ್ರಕರಣದ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್‌ನ ಏಕ ಪೀಠದ ನ್ಯಾಯಾಧೀಶ ಪಂಕಜ್ ಭಂಡಾರಿ, ಶಹಬಾಜ್ ಇಷ್ಟು ದಿನ ಜೈಲಿನಲ್ಲಿದ್ದಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದರು. ಈ ಎಫ್‌ಐಆರ್ ಹಿಂದಿನ 8 ಪ್ರಕರಣಗಳಿಗೆ ಹೋಲುತ್ತದೆ, ಇದರಲ್ಲಿ ಶಹಬಾಜ್‌ನನ್ನು ಖುಲಾಸೆಗೊಳಿಸಲಾಗಿದೆ, ಈ ಒಂಬತ್ತನೇ ಪ್ರಕರಣದಲ್ಲೂ ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ ಎಂದು ನ್ಯಾಯಾಧೀಶರು ಪರಿಗಣಿಸಿದ್ದಾರೆ. ಒಂಬತ್ತನೇ ಪ್ರಕರಣದಲ್ಲಿ ಜಾಮೀನು ಪಡೆದ ನಂತರ, ಶಹಬಾಜ್ ಅವರನ್ನು ಜೈಪುರ ಕೇಂದ್ರ ಕಾರಾಗೃಹದಿಂದ 2021 ರ ಮಾರ್ಚ್ 1 ರಂದು ರಾತ್ರಿ 10 ಗಂಟೆಗೆ ಬಿಡುಗಡೆ ಮಾಡಲಾಯಿತು.

ಶಹಬಾಜ್ ಅಹ್ಮದ್ ವಿರುದ್ಧ ಇನ್ನೂ 2 ಪ್ರಕರಣಗಳಿವೆ. ಶಹಬಾಜ್ ಜೈಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪವಿದೆ. ಇದರಲ್ಲಿ, ಸುಬಾಮ್ 2021 ರ ಜನವರಿ 8 ರಂದು ಜಾಮೀನು ನೀಡಿತು. ಸರಕಾರದ ವಿರುದ್ಧ ಮೊಕದ್ದಮೆ ಹೂಡಿ ನಮಗೇನು ಸಿಗಲಿಕ್ಕಿದೆ. ಎಲ್ಲಾ ಪ್ರಕರಣಗಳು ಕೂಡ ಶೀಘ್ರದಲ್ಲೇ ಮುಗಿಯಬೇಕೆಂದು ನಾವು ಬಯಸುತ್ತೇವೆ. ಇಲ್ಲಿಯವರೆಗೆ, ಈ ನ್ಯಾಯಾಲಯಗಳ ಪ್ರಕರಣಗಳಿಗಾಗಿ ಸುಮಾರು 10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಶಹಬಾಜ್ ಹೇಳಿದರು.

ರಾಜಸ್ಥಾನದ ಜಮಾತೆ-ಇ-ಇಸ್ಲಾಮಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಮುಹಮ್ಮದ್ ಇಕ್ಬಾಲ್ ಸಿದ್ದಿಕಿ ಇಂಡಿಯಾ ಟುಡೆಗೆ ಮಾತನಾಡುತ್ತಾ, “ಶಹಬಾಜ್ ನಿರಪರಾಧಿ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಇಂದು ಆ ವಿಷಯ ಸಾಬೀತಾಗಿದೆ. 8 ಪ್ರಕರಣಗಳಲ್ಲಿ ಖುಲಾಸೆಗೊಂಡ ನಂತರ 9 ನೇ ಪ್ರಕರಣದಲ್ಲಿ ಮತ್ತೆ ಬಂಧಿಸಲಾಯಿತು. ಆ ಒಂಬತ್ತನೇ ಪ್ರಕರಣದಲ್ಲಿ ಶಹಬಾಜ್‌ಗೆ ಜಾಮೀನು ದೊರೆತಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು, ಈಗ ಅವರು ತಮ್ಮ ಕುಟುಂಬದೊಂದಿಗೆ ಆರಾಮವಾಗಿ ಬದುಕಲು ಸಾಧ್ಯವಾಗುತ್ತದೆ” ಎಂದರು.

ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಘದ (ಎಪಿಸಿಆರ್) ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಮ್ಮಿಲ್ ಹುಸೇನ್ ರಿಜ್ವಿ ಮಾತನಾಡುತ್ತಾ, “ಮಾಜಿ ಎಪಿಸಿಆರ್ ಅಧ್ಯಕ್ಷರೂ ವಕೀಲರೂ ಆದ ಫಾರೂಕ್ ಅವರೇ ಈ ಪ್ರಕರಣವನ್ನು ಪರಿಶೀಲಿಸುತ್ತಿದ್ದರು. ನಮ್ಮೆಲ್ಲರ ಪ್ರಯತ್ನದಿಂದಾಗಿ, ಇಂದು ಶಹಬಾಜ್ ಜೈಲಿನಿಂದ ಹೊರಬಂದು ಬಿಡುಗಡೆಯಾಗಿದ್ದು ನಮಗೆ ತುಂಬಾ ಸಂತೋಷವಾಗಿದೆ. ಈಗಲೂ, ಜೈಲಿನಲ್ಲಿ ಸುಳ್ಳು ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿರುವ ಮುಗ್ಧ ಜನರು, ಎಪಿಸಿಆರ್ ಸಹ ಅವರೆಲ್ಲರನ್ನೂ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದೆ. ಎಂದರು.

“ಶಹಬಾಜ್ ಅಹ್ಮದ್ ಅವರಿಗೆ ಅಂತಿಮವಾಗಿ ರಾಜಸ್ಥಾನ ಹೈಕೋರ್ಟ್ ಜಾಮೀನು ನೀಡಿರುವುದಕ್ಕೆ ನಮಗೆ ಸಂತೋಷವಾಗಿದೆ” ಪಿಯುಸಿಎಲ್ ರಾಜಸ್ಥಾನದ ರಾಜ್ಯ ಅಧ್ಯಕ್ಷ ಕಾವ್ಯಾ ಶ್ರೀವಾಸ್ತವ ಹೇಳಿದ

SHARE THIS POST VIA

About editor

Check Also

ಮುಂದಿನ ಜೀವನ

ಇಸ್ಲಾಮ್ ಧರ್ಮವು ಏಕದೇವ ವಿಶ್ವಾಸ, ಪ್ರವಾದಿತ್ವ ಮತ್ತು ಪರಲೋಕ ಎಂಬ ಮೂರು ಮೂಲಭೂತ ವಿಶ್ವಾಸಗಳಲ್ಲಿ ನೆಲೆ ನಿಂತಿದೆ. ಪರಲೋಕದ ಕುರಿತು …