Home / editor

editor

ಶಾಂತಿ ಪ್ರಕಾಶನದ ನವೀಕೃತ ಆ್ಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯ

ಮಂಗಳೂರು: ಕರ್ನಾಟಕದ ಹೆಸರಾಂತ ಪ್ರಕಾಶನ ಸಂಸ್ಥೆಯಾದ ಶಾಂತಿ ಪ್ರಕಾಶನದ ನವೀಕೃತ ಮೊಬೈಲ್ ಆ್ಯಪ್ ಇದೀಗ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಶಾಂತಿ ಪ್ರಕಾಶನ ಪ್ರಕಟಿಸಿರುವ ವಿವಿಧ ಕೃತಿಗಳ ಸಂಕ್ಷಿಪ್ತ ಪರಿಚಯ, ಪುಸ್ತಕಗಳ ಮುಖಬೆಲೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಆ್ಯಪ್‌ನಲ್ಲಿ ಸುಲಭವಾಗಿ ವೀಕ್ಷಿಸಬಹುದಾಗಿದೆ. ಅಲ್ಲದೆ, ಆಸಕ್ತರು ತಮಗೆ ಬೇಕಾದ ಪುಸ್ತಕಗಳನ್ನು ಆ್ಯಪ್ ಮೂಲಕವೇ ಖರೀದಿಸುವ ಸೌಲಭ್ಯವೂ ಲಭ್ಯವಿದೆ. ಶಾಂತಿ ಪ್ರಕಾಶನದ ಕೃತಿಗಳನ್ನು ಓದುಗರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ಉದ್ದೇಶದಿಂದ ನವೀಕರಿಸಲಾಗಿರುವ ಈ ಆ್ಯಪ್ …

Read More »

ಇಸ್ಲಾಮ್: ಆದಿಮಾನವನಿಂದ ಅಂತಿಮ ಪ್ರವಾದಿಯವರೆಗೆ ಸಾಗಿ ಬಂದ ದೈವಿಕ ನಿರಂತರತೆ

✍️ ಅಬೂ ಕುತುಬ್ ಸಾಮಾನ್ಯವಾಗಿ ಜನರು ಚರ್ಚಿಸುವಾ ಇಸ್ಲಾಮ್ ಧರ್ಮದ ಉಗಮವನ್ನು ಕ್ರಿಸ್ತಶಕ ಏಳನೇ ಶತಮಾನಕ್ಕೆ, ಅಂದರೆ ಪ್ರವಾದಿ ಮುಹಮ್ಮದ್(ಸ) ಅವರ ಕಾಲಕ್ಕೆ ಸೀಮಿತಗೊಳಿಸಿ ನೋಡುವ ಕ್ರಮವೊಂದು ರೂಢಿಯಲ್ಲಿದೆ. ಆದರೆ, ಇಸ್ಲಾಮಿನ ಮೂಲ ತತ್ವಜ್ಞಾನ ಮತ್ತು ಕುರ್‌ಆನ್‌ನ ಅಧ್ಯಯನವು ನಮಗೆ ಭಿನ್ನವಾದ, ವಿಶಾಲವಾದ ಚಿತ್ರಣವನ್ನು ನೀಡುತ್ತದೆ. ಇಸ್ಲಾಮ್ ಎನ್ನುವುದು ಕೇವಲ 1400 ವರ್ಷಗಳ ಹಿಂದೆ ಹುಟ್ಟಿದ ಹೊಸ ಧರ್ಮವಲ್ಲ. ಬದಲಿಗೆ ಅದು ಮಾನವಕುಲದ ಸೃಷ್ಟಿಯ ಮೊದಲ ಕ್ಷಣದಿಂದಲೇ ಆರಂಭವಾದ ಒಂದು …

Read More »

ಪ್ರವಾದಿ ಮುಹಮ್ಮದ್‌ರ ಮಾತುಗಳನ್ನು ಅರೇಬಿಕ್‌ನಲ್ಲೇ ಉಲ್ಲೇಖಿಸಿದ ಕಿಂಗ್ ಚಾರ್ಲ್ಸ್; ವಿಂಡ್ಸರ್ ಕ್ಯಾಸಲ್‌ನಲ್ಲಿ ಅಪರೂಪದ ಕ್ಷಣ!

ಮಸ್ಕತ್/ಲಂಡನ್: ಒಮಾನ್ ಜನರ ಉದಾತ್ತ ಗುಣ ಮತ್ತು ಶಾಂತಿಯುತ ವಾತಾವರಣವನ್ನು ಶ್ಲಾಘಿಸಲು ಬ್ರಿಟನ್ ರಾಜ ಚಾರ್ಲ್ಸ್ ಅವರು ಪ್ರವಾದಿ ಮುಹಮ್ಮದ್ ಅವರ ವಚನವನ್ನು ಉಲ್ಲೇಖಿಸಿದ್ದಾರೆ. ಯುುಕೆಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಒಮಾನ್ ದೊರೆ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರು ವಿಂಡ್ಸರ್ ಕ್ಯಾಸಲ್‌ನಲ್ಲಿ ಆಯೋಜಿಸಿದ್ದ ಅಧಿಕೃತ ಔತಣಕೂಟದಲ್ಲಿ ರಾಜ ಚಾರ್ಲ್ಸ್ ಅಪರೂಪದ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ, ರಾಜ ಚಾರ್ಲ್ಸ್ ಪ್ರವಾದಿ ಮುಹಮ್ಮದ್ ಅವರ ನುಡಿಗಳನ್ನು ಅರೇಬಿಕ್ ಭಾಷೆಯಲ್ಲೇ ಉಲ್ಲೇಖಿಸಿದರು. …

Read More »

ಅಲ್ಲಾಹನನ್ನು ಅಥವಾ ದೇವರನ್ನು ಯಾರು ಸೃಷ್ಟಿಸಿದರು?” ಈ ಪ್ರಶ್ನೆ ತಪ್ಪೇ?

“ದೇವರಿಗೆ ಸೃಷ್ಟಿಕರ್ತ ಇಲ್ಲದಿದ್ದರೆ, ಅದರ ಅಸ್ತಿತ್ವ ಹೇಗೆ ಸಾಧ್ಯ? ಹಾಗಾದರೆ ಅಲ್ಲಾಹನನ್ನು ಯಾರು ಸೃಷ್ಟಿಸಿದರು?” ಮೊದಲ ನೋಟಕ್ಕೆ ಇದು ತಾರ್ಕಿಕ ಪ್ರಶ್ನೆಯಂತೆ ಕಾಣಬಹುದು. ಆದರೆ ಸ್ವಲ್ಪ ಆಳವಾಗಿ ಯೋಚಿಸಿದರೆ, ಈ ಪ್ರಶ್ನೆಯಲ್ಲೇ ಒಂದು ಮೂಲಭೂತ ದೋಷವಿದೆ. ಮೊದಲನೆಯದಾಗಿ, ಮನುಷ್ಯ ತನ್ನ ಅಸ್ತಿತ್ವದಲ್ಲಿಯೇ ಅತ್ಯಂತ ಸೀಮಿತ ಜೀವಿ. ತನ್ನ ಜನ್ಮವನ್ನು ತಾನೇ ಆಯ್ಕೆ ಮಾಡಿಲ್ಲ. ಯಾವ ದೇಶದಲ್ಲಿ, ಯಾವ ಕುಟುಂಬದಲ್ಲಿ, ಯಾವ ಕಾಲದಲ್ಲಿ ಹುಟ್ಟಬೇಕು ಎಂಬ ನಿರ್ಧಾರ ಅವನದಲ್ಲ. ತನ್ನ ಮರಣದ …

Read More »

ಏಕೆ ಒಬ್ಬನೇ ದೇವರು? – ಒಂದು ವೈಚಾರಿಕ ಪ್ರಶ್ನೆ

ಏಕೆ ಒಬ್ಬನೇ ದೇವರು ಅಥವಾ ಅಲ್ಲಾಹ್? ಒಬ್ಬನೇ ಸೃಷ್ಟಿಕರ್ತ ಇರಬೇಕೆಂದು ಇಸ್ಲಾಂ ಏಕೆ ಒತ್ತಿ ಹೇಳುತ್ತದೆ? ಇದು ಕೇವಲ ಧಾರ್ಮಿಕ ನಂಬಿಕೆಯೇ, ಅಥವಾ ತಾರ್ಕಿಕ ಮತ್ತು ವೈಚಾರಿಕ ನೆಲೆಯೂ ಇದಕ್ಕಿದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು ಒಂದು ಸರಳ ತತ್ವವನ್ನು ಗಮನಿಸೋಣ. ಯಾವುದೇ ವ್ಯವಸ್ಥೆಯ ಏಕತೆ ಅದರ ಕೇಂದ್ರ ನಿಯಂತ್ರಣದ ಏಕತೆಯ ಮೇಲೆ ನಿಂತಿರುತ್ತದೆ. ಒಂದು ದೇಶಕ್ಕೆ ಎರಡು ಸಂವಿಧಾನಗಳಿದ್ದರೆ ಆಡಳಿತದಲ್ಲಿ ಗೊಂದಲ ಉಂಟಾಗುತ್ತದೆ. ಒಂದು ಸಂಸ್ಥೆಗೆ ಸಮಾನ …

Read More »

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು ಆಧಾರಿತವಾಗಿ ವಿಂಗಡಿಸುತ್ತಿದ್ದರು. ಪ್ರವಾದಿ ಮುಹಮ್ಮದ್ ಜನಿಸಿದ್ದು ಕುರೈಶ್ ಬುಡಕಟ್ಟಿನಲ್ಲಿ. ಆ ಕಾಲದಲ್ಲಿ ಅದು ಪ್ರಭಾವಿ ಮತ್ತು ಸರ್ವಮಾನ್ಯ ಬುಡಕಟ್ಟಾಗಿತ್ತು. ಆದರೆ ಪ್ರವಾದಿ ಮುಹಮ್ಮದರು ಈ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ನಿರ್ಧರಿಸಿದರು. ಮನುಷ್ಯರೆಲ್ಲ ಆದಮ್ ಮತ್ತು ಹವ್ವಾ ಎಂಬ ಒಂದೇ ತಂದೆ ತಾಯಿಯ ಮಕ್ಕಳು ಎಂದು ಘೋಷಿಸಿದರು. ಈ ಘೋಷಣೆಗೆ …

Read More »

ವೈವಿಧ್ಯತೆಯನ್ನು ಗೌರವಿಸಿದ, ಸಂಸ್ಕೃತಿಯನ್ನು ಅಪ್ಪಿಕೊಂಡ ಪ್ರವಾದಿ(ಸ) ಮಾದರಿ

✍️ ಶೌಕತ್‌ ಅಲಿ ಮಾಜಿ ರಾಜ್ಯಾಧ್ಯಕ್ಷರು, ಎಸ್‌.ಐ.ಓ ಕರ್ನಾಟಕ ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಚರಿತ್ರೆಯನ್ನು ಕೇವಲ ಧಾರ್ಮಿಕ ವಿಧಿ-ವಿಧಾನಗಳ ವಿವರಣೆಯಾಗಿ ಅಥವಾ ಕೆಲವು ಐತಿಹಾಸಿಕ ಘಟನೆಗಳ ಸರಣಿಯಾಗಿ ನೋಡುವುದು ಅದರ ವಿಶಾಲತೆಯನ್ನು ಸೀಮಿತಗೊಳಿಸುವಂತಾಗುತ್ತದೆ. ಸೀರತ್‌ ಒಂದು ಸಮಗ್ರ ಜೀವನದರ್ಶನ. ಮನುಷ್ಯನ ನಂಬಿಕೆ, ನೈತಿಕತೆ, ಕುಟುಂಬ, ಸಮಾಜ, ಆರ್ಥಿಕತೆ, ರಾಜಕೀಯ, ಜ್ಞಾನ, ಕಲೆ, ಭಾಷೆ, ಸಂಸ್ಕೃತಿ ಮತ್ತು ಪರಸ್ಪರ ಸಂಬಂಧಗಳ ಕುರಿತು ಅದು ನೀಡುವ ಮಾರ್ಗದರ್ಶನ ಅಪಾರವಾಗಿದೆ. ವಿಶೇಷವಾಗಿ ಸಾಂಸ್ಕೃತಿಕ …

Read More »

ಅರ್ಥಶಾಸ್ತ್ರಜ್ಞನಾಗಿ ಪ್ರವಾದಿ ಮುಹಮ್ಮದ್‌(ಸ)

✍️ ಡಾ. ಸೈಯದ್‌ ಖಾಝಿಮ್‌ ಬೆಂಗಳೂರು ಸಹ ಕಾರ್ಯದರ್ಶಿಗಳು, ಜ.ಇ. ಹಿಂದ್‌ ಕರ್ನಾಟಕ ಪ್ರವಾದಿ ಮುಹಮ್ಮದ್(ಸ) ಅವರನ್ನು ಸಾಮಾನ್ಯವಾಗಿ ಒಬ್ಬ ಆಧ್ಯಾತ್ಮಿಕ ಮಾರ್ಗದರ್ಶಕ, ಶಿಕ್ಷಕ, ಸುಧಾರಕ, ರಾಜನೀತಿಜ್ಞ ಹಾಗೂ ನಾಯಕನ ರೂಪದಲ್ಲಿ ಹೆಚ್ಚಾಗಿ ಸ್ಮರಿಸಲಾಗುತ್ತದೆ. ಆದಾಗ್ಯೂ, ಆರ್ಥಿಕ ರಂಗಕ್ಕೆ ಅವರು ನೀಡಿದ ಕೊಡುಗೆಯು ಕೂಡ ಅತ್ಯಂತ ಮಹತ್ವಪೂರ್ಣವಾದುದಾಗಿದೆ. ಅವರು ಅರ್ಥಶಾಸ್ತ್ರದ ಯಾವುದೇ ಅಧಿಕೃತ ಪಠ್ಯಪುಸ್ತಕವನ್ನು ರಚಿಸಲಿಲ್ಲ; ಬದಲಿಗೆ, ತಮ್ಮ ಬೋಧನೆಗಳ ಮೂಲಕ ಹಾಗೂ ಮದೀನಾದಲ್ಲಿ ಅವರು ರೂಪಿಸಿದ ಸಮಾಜದ ಮುಖಾಂತರ, …

Read More »

ನನ್ನ ಪ್ರವಾದಿ(ಸ ) ಹೀಗೆ ಹೇಳಿದ್ದರು:

1. ಹೆತ್ತವರಿಗೆ ಛೆ ಎಂದೂ ಹೇಳಬಾರದು. ಹೆತ್ತವರ ದುಃಖಕ್ಕೆ ಕಾರಣವಾಗುವ ಮಕ್ಕಳು ಸ್ವರ್ಗ ಪ್ರವೇಶಿಸುವುದಿಲ್ಲ. 2. ಯಾವ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಲಾಲಿಸಿ ಪೋಷಿಸಿ ಸದಾಚಾರದಿಂದ ಬೆಳೆಸುತ್ತಾರೋ ಅವರಿಗೆ ಸ್ವರ್ಗವಿದೆ. 3. ಪತ್ನಿ ಗಾಜಿನಂತೆ. ಆಕೆಯೊಂದಿಗೆ ಒರಟಾಗಿ ನಡೆದುಕೊಳ್ಳಬೇಡಿ. 4. ಅನಾಥ ಮಗುವಿನ ಮುಂದೆ ನಿಮ್ಮ ಮಕ್ಕಳನ್ನ ಮುದ್ದಿಸಬೇಡಿ. 5. ಮಧ್ಯಪಾನ ಸಹಿತ ಎಲ್ಲ ಅಮಲು ಪದಾರ್ಥಗಳೂ ನಿಷಿದ್ಧವಾಗಿದೆ. 6. ಬಡ್ಡಿ ವ್ಯವಹಾರ ಮಾಡಬೇಡಿ. ಅದಕ್ಕೆ ಸಾಕ್ಷಿ ನಿಲ್ಲಬೇಡಿ. …

Read More »

ಕಾಲದ ಪ್ರಶ್ನೆ ಮತ್ತು ಪ್ರವಾದಿ ಮುಹಮ್ಮದ್(ಸ) ಎಂಬ ಉತ್ತರ

✍️ ಎ.ಕೆ.ಕುಕ್ಕಿಲ ಸಕಾರಾತ್ಮಕ ಅಥವಾ ನಕಾರಾತ್ಮಕ- ಎರಡೂ ರೀತಿಯಲ್ಲಿ ನಮ್ಮ ನಡುವೆ ಸದಾ ಚರ್ಚೆಯಲ್ಲಿರುವ ಏಕೈಕ ವ್ಯಕ್ತಿ ಪ್ರವಾದಿ ಮುಹಮ್ಮದ್(ಸ). ಇದಕ್ಕಿರುವ ಹಲವು ಕಾರಣಗಳ ಪೈಕಿ ಒಂದು ಕಾರಣ ಏನೆಂದರೆ, ಕ್ಷಿಪ್ರಗತಿಯಲ್ಲಿ ಅವರಿಗೆ ಸಿಕ್ಕಿರುವ ಮಹಾ ಯಶಸ್ಸು. 40ನೇ ಪ್ರಾಯದಲ್ಲಿ ಅವರು ತನ್ನನ್ನು ತಾನು ಪ್ರವಾದಿ ಎಂದು ಘೋಷಿಸಿಕೊಂಡರು ಮತ್ತು ತತ್ವ ಪ್ರತಿಪಾದಕರಾದರು. ಇದಾಗಿ ಕೇವಲ 23 ವರ್ಷಗಳೊಳಗೆ ತಾನು ಪ್ರತಿಪಾದಿಸಿದ ತತ್ವದಂತೆಯೇ ಬದುಕಬಲ್ಲ ಸಮಾಜವೊಂದನ್ನು ಸಾಧಿಸಿ ತೋರಿಸಿದರು. ಕೇವಲ …

Read More »