ಮಿಸ್ಬಾ ತರೀಕೆರೆ ಹವ್ಯಾಸಿ ಬರಹಗಾರ್ತಿ ಅಲ್ಲಾಹನ ಪ್ರಿಯ ಅತಿಥಿಯ ಆಗಮನಕ್ಕಾಗಿ ನಾವು ವರ್ಷವಿಡೀ ಕಾತರದಿಂದ ಕಾಯುತ್ತೇವೆ. ಅತಿಥಿಯ ಆಗಮನವು ನಮ್ಮ ಸಂಪೂರ್ಣ ಜೀವನ ಶೈಲಿಯನ್ನೇ ಬದಲಾಯಿಸುತ್ತದೆ. ಉಳಿದ ತಿಂಗಳುಗಳಲ್ಲಿ ಅಲ್ಲಾಹನ ಆದೇಶಗಳನ್ನು ಸಂಪೂರ್ಣ ಶ್ರದ್ಧೆಯೊಂದಿಗೆ ಪಾಲಿಸಲು ನಮಗೆ ತರಬೇತಿ ನೀಡುವ ಸಮೃದ್ಧ ತಿಂಗಳು ರಮಝಾನ್ ಆಗಿದೆ. ಅಲ್ಲಾಹನ ಅತ್ಯಧಿಕ ಅನುಗ್ರಹಗಳು ವರ್ಷಿಸುವ ಸಮೃದ್ಧ ತಿಂಗಳಾಗಿದೆ. ಕುರ್ಆನ್ ಪಾರಾಯಣ, ತರಾವೀಹ್ ನಮಾಝ್, ಝಕಾತ್, ಫಿತ್ರ್ ಝಕಾತ್, ಇಅïತಿಕಾಫ್, ಹೆಚ್ಚೆಚ್ಚು ದಾನ-ಧರ್ಮ ಮಾಡುವುದು …
Read More »ಬದ್ರ್ ಯುದ್ಧ ಮತ್ತು ಭಾರತದ ಪ್ರಜೆಗಳಾದ ನಾವು ಕಲಿಯಬೇಕಾದ ಪಾಠ
ಬದ್ರ್ ಯುದ್ಧ ಎಂಬುದು ಹಿಂದು ಮುಸ್ಲಿಮರ ಮಧ್ಯೆ ನಡೆದ ಯುದ್ದವಲ್ಲ. ಭಾರತದ ಪ್ರಜೆಗಳಾಗಿ ಇಂದು ಎಲ್ಲರೂ ಸಂವಿಧಾನಕ್ಕೆ ಬದ್ದರಾಗಿರುವರು. ದೇಶ ರಕ್ಷಣೆಗಾಗಿ ಗಡಿಯಲ್ಲಿ ಎಲ್ಲ ಧರ್ಮೀಯರೂ ಇದ್ದಾರೆ. ಅನ್ಯ ದೇಶದವರು ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ ಅದರ ವಿರುದ್ಧ ದೇಶವಾಸಿಗಳು ಒಗ್ಗಟ್ಟಾಗಿ ಪ್ರತಿರೋಧಿಸುವುದು ಪ್ರವಾದಿಯವರ ಮಾದರಿಯಾಗಿದೆ. ತಾಯ್ನಾಡು ಮಕ್ಕಾದಲ್ಲಿ ತನ್ನ ಅನುಯಾಯಿಗಳಿಗೆ ತನ್ನವರಿಂದಲೇ ಕಿರುಕುಳವಾದಾಗ ಒಮ್ಮೆಯೂ ಪ್ರವಾದಿ ಪ್ರತಿರೋಧಕ್ಕೆ ಸಜ್ಜಾಗಲಿಲ್ಲ. ಪ್ರವಾದಿಯವರಿಂದಲೂ ಸಂಗಾತಿಗಳಿಂದಲೂ ಮಕ್ಕಾದಲ್ಲಿ ಒಂದು ತೊಟ್ಟು ರಕ್ತ …
Read More »ಜೀವಮಾನದಲ್ಲಿ ಒಮ್ಮೆ `ಕುರ್ಆನ್’ ಅರ್ಥಸಹಿತ ಓದಿ..
@ ಶಹನಾಝ್ ಎಂ. (ಲೇಖಕಿ, ಸಂಪಾದಕಿ ಅನುಪಮ ಮಾಸಿಕ) ಈ ಜಗತ್ತಿನಲ್ಲಿರುವ ಮುಸ್ಲಿಮರೆಲ್ಲರೂ ಪವಿತ್ರ ಗ್ರಂಥ ಕುರ್ಆನನ್ನು ಖಂಡಿತಾ ಓದುತ್ತಾರೆ. ತಮ್ಮ ಧರ್ಮ ಗ್ರಂಥವನ್ನು ಗೌರವಿಸುತ್ತಾರೆ. ದಿನಾಲೂ ಓದುವವರೂ ಇದ್ದಾರೆ. ತಿಂಗಳಿ ಗೊಮ್ಮೆ ಓದುವವರೂ ಇದ್ದಾರೆ. ವರ್ಷಕ್ಕೆ ಒಮ್ಮೆ (ರಮಝಾನ್ ತಿಂಗಳಲ್ಲಿ) ತೆರೆದು ಓದುವವರೂ ಇದ್ದಾರೆ. ನೂರು ಬಾರಿ ಈ ಗ್ರಂಥವನ್ನು ಓದಿದರೂ ನಿಮಗೆ ಅರಬೀ ಭಾಷೆಯ ಜ್ಞಾನ ಇಲ್ಲದಿದ್ದರೆ ಅದರಲ್ಲಿ ಏನು ಹೇಳಲಾಗಿದೆ ಎಂಬ ಸತ್ಯದಿಂದ ನೀವು ವಂಚಿತರಾಗುವಿರಿ. …
Read More »ರಮಝಾನ್ ಮತ್ತು ಮಹಿಳೆ
ರಮಝಾನ್ ತಿಂಗಳಿಗೆ ಹೆಣ್ಣು-ಗಂಡು ಎಂಬ ಬೇಧವಿಲ್ಲ. ಗಂಡು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಉಪವಾಸ ಇರುತ್ತಾನೋ ಮತ್ತು ಏನೆಲ್ಲ ಷರತ್ತುಗಳನ್ನು ಪಾಲಿಸುತ್ತಾನೋ ಅವೆಲ್ಲವೂ ಹೆಣ್ಣಿಗೂ ಅನ್ವಯವಾಗುತ್ತದೆ. ಆದರೆ ಗಂಡಿಗಿಲ್ಲದ ಒಂದೆರಡು ರಿಯಾಯಿತಿಗಳು ಹೆಣ್ಣಿಗಿವೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಝರಿತರಾಗುವ ಮುಟ್ಟಿನ ಅವಧಿಯಲ್ಲಿ ಆಕೆ ಉಪವಾಸ ಆಚರಿಸಬೇಕಿಲ್ಲ. ಗರ್ಭಿಣಿಯರಿಗೂ ಮತ್ತು ಎದೆಹಾಲು ಕೊಡುವ ತಾಯಂದಿರಿಗೂ ರಿಯಾಯಿತಿಗಳಿವೆ. ಹಾಗೆಯೇ, ಐದು ಹೊತ್ತಿನ ನಮಾಝ್ ಗಾಗಿ ಮಸೀದಿಗೆ ಹೋಗುವುದು ಗಂಡಿನ ಪಾಲಿಗೆ ಕಡ್ಡಾಯ. ಆದರೆ …
Read More »ಕ್ಷಮಾ ಗುಣ
@ ಅಬೂ ಝೀಶಾನ್ ಇಸ್ಲಾಮೀ ಇತಿಹಾಸದಲ್ಲಿ ಹೆಚ್ಚಿನ ಶ್ರೇಷ್ಠ ಇಮಾಮರುಗಳಿಗೆ ಆಯಾ ಕಾಲದಲ್ಲಿ ಅನೇಕ ಶತ್ರುಗಳಿರುತ್ತಿದ್ದರು. ಶೈಖುಲ್ ಇಸ್ಲಾಮ್ ಇಬ್ನು ತೈಮಿಯರಿಗೆ ಅನೇಕ ಶತ್ರುಗಳಿದ್ದರು. ಅವರಲ್ಲಿ ಒಬ್ಬರಂತೂ ಶೈಖ್ರಿಗೆ ಬಹಳ ಕೀಟಲೆ ಕೊಡುತ್ತಿದ್ದರು. ಅವರು ಕೂಡಾ ವಿದ್ವಾಂಸರಾಗಿದ್ದರು. ಇಬ್ನು ತೈಮಿಯರ ವಿರುದ್ಧ ಅನೇಕ ಅಪಪ್ರಚಾರವನ್ನು ಮಾಡಿದ್ದರು. ಒಂದು ದಿನ ಅವರ ನಿಧನರಾದರು. ಆಗ ಒಬ್ಬ ಶಿಷ್ಯ ಓಡಿ ಬಂದು ಶೈಖ್ರೊಂದಿಗೆ ಹೇಳಿದರು, “ತಮಗೆ ಶುಭವಾರ್ತೆ, ಸಂತೋಷ ಪಡಿರಿ. ತಮ್ಮ ಅತಿ …
Read More »ಉಮ್ರಾ: ರಮಝಾನ್ ಮೊದಲ 20 ದಿನಗಳಿಗೆ ವೀಸಾ ಅನುಮತಿ
ಸೌದಿ ಅರೇಬಿಯಾ: ರಮಝಾನ್ ತಿಂಗಳಲ್ಲಿ ಉಮ್ರಾ ನಿರ್ವಹಿಸಲು ಬಯಸುವವರಿಗೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಪರವಾನಿಗೆ ನೀಡಿದೆ. ನುಸುಕ್ ಮತ್ತು ತವಕಲ್ನಾ ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಉಮ್ರಾ ಬುಕಿಂಗ್ ಮಾಡಬೇಕಾಗಿದೆ. ರಮಝಾನಿನ ಮೊದಲ 20 ದಿವಸಗಳಿಗೆ ಬುಕಿಂಗ್ ಸೌಲಭ್ಯವನ್ನು ಇದೀಗ ಆರಂಭಿಸಲಾಗಿದೆ. ಕೊನೆಯ 10 ದಿನಗಳಿಗೆ ಬುಕಿಂಗ್ ಸೌಲಭ್ಯವನ್ನು ನಂತರ ಆರಂಭಿಸಲಾಗುವುದು. ಉಮ್ರಾ ವೀಸಾಗಳ ಜೊತೆಗೆ ಇತರ ವೀಸಾಗಳ ಮೂಲಕ ಸೌದಿಗೆ ಆಗಮಿಸುವವರಿಗೂ ಉಮ್ರಾ ನಿರ್ವಹಿಸುವುದಕ್ಕೆ ಈ ಬಾರಿ …
Read More »ವ್ಯವಸ್ಥೆಯನ್ನು ಬಲಗೊಳಿಸುವುದು ರಾಜಕೀಯ ಪಕ್ಷಗಳ ಆದ್ಯತೆಯಾಗಲಿ: ಎಸ್.ಐ.ಓ
ಮಂಗಳೂರು: 2023ರ ಈ ಬಾರಿಯ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ-ಯುವಜನರ ಬೇಡಿಕೆಯ ವಿಚಾರಗಳನ್ನು ಸೇರಿಸಲು ಮತ್ತು ಈ ಹಕ್ಕೊತ್ತಾಯಗಳೇ ಯುವಜನರ ಮತಗಳನ್ನು ನಿರ್ಣಯಿಸುವಂತೆ ಜನಾಭಿಪ್ರಾಯ ಮೂಡಿಸಲು ಎಸ್.ಐ.ಓ ಕರ್ನಾಟಕವು ಶಿಕ್ಷಣದ ಮೂಲಭಾಗಿದಾರರೊಂದಿಗೆ ಸಮಾಲೋಚಿಸಿ “ವಿದ್ಯಾರ್ಥಿ ಪ್ರಣಾಳಿಕೆ”ಯನ್ನು ತಯಾರುಗೊಳಿಸಿದ್ದು, ಪಕ್ಷಗಳು ಈ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮತ್ತು ಬದ್ಧತೆಯನ್ನು ಖಚಿತಪಡಿಸಬೇಕು ಎಂದು ಎಸ್.ಐ.ಓ ದಕ್ಷಿಣ ಕನ್ನಡ ಆಗ್ರಹಿಸಿದೆ. ಶಾಲಾ ಪೂರ್ವ ಶಿಕ್ಷಣದ …
Read More »ಬಟ್ಟೆಯ ಬಣ್ಣವೂ ಧರ್ಮ ಜಿಜ್ಞಾಸೆಗೊಳಪಡುವ ದೇಶದಲ್ಲಿ ಅತ್ಯಾಚಾರವೇಕೆ ಧರ್ಮ ವಿರೋಧಿಯಾಗುವುದಿಲ್ಲ?
ಸಿನಿಮಾದಲ್ಲಿ ನಟಿಯೋರ್ವರು ಧರಿಸಿದ ಬಟ್ಟೆಯ ಬಣ್ಣದಿಂದಾಗಿ ಧರ್ಮಕ್ಕೆ ಅವಮಾನವಾಗಿದೆಯೆಂದು ಪ್ರತಿಭಟನೆ ನಡೆಸುವ, ಕೇಸು ದಾಖಲಿಸುವ ಮತ್ತು ಸಿನಿಮಾದ ಬಹಿಷ್ಕಾರಕ್ಕೆ ಕರೆ ಕೊಡುವ ದೇಶದಲ್ಲಿ; ಅತ್ಯಾಚಾರದ ವಿರುದ್ಧ ಇಂಥ ಆಕ್ರೋಶಗಳು ವ್ಯಕ್ತವಾಗಿರುವುದು ಬಹಳ ಕಡಿಮೆ. ಅಲ್ಲೊಂದು ಇಲ್ಲೊಂದು ವಿಶೇಷ ಪ್ರಕರಣಗಳಲ್ಲಿ ಗಮನಾರ್ಹ ಪ್ರತಿಭಟನೆ ನಡೆದಿರುವುದನ್ನು ಬಿಟ್ಟರೆ ಉಳಿದಂತೆ ಗಾಢ ಮೌನವೊಂದು ಸಾಮಾಜಿಕವಾಗಿ ನೆಲೆಸಿದೆ. ಸಿನಿಮಾ ಎಂಬುದು ಪೂರ್ಣವಾಗಿ ದೃಶ್ಯ ವೈಭವ. ಅಲ್ಲಿ ಕತೆಯನ್ನು ಅಭಿನಯಿಸಲಾಗುತ್ತದೆಯೇ ಹೊರತು ವಾಸ್ತವವಾಗಿ ಅವು ನಡೆದಿರುವುದಿಲ್ಲ. ಸಿನಿಮಾದಲ್ಲಿ …
Read More »ರಮಝಾನಿನ ಪೂರ್ವಸಿದ್ಧತೆಯ ಮಾಸ ಶಅಬಾನ್
@ ಸಲೀಮ್ ಬೋಳಂಗಡಿ ಶಅಬಾನ್ ಮಾಸ ಆಗತವಾಗಿದೆ. ಇದು ಹಿಜರಿ ಶಕೆಯ ಎಂಟನೇಯ ತಿಂಗಳು. ಈ ತಿಂಗಳಾಂತ್ಯವಾದ ಕೂಡಲೇ ರಮಝಾನ್ ತಿಂಗಳ ಉದಯವಾಗುತ್ತದೆ. ಈ ಮಾಸವು ಪವಿತ್ರ ರಮಝಾನಿನ ಪೂರ್ವ ತಯಾರಿಯ ಮಾಸವಾಗಿದೆ ಎಂಬುದು ಹಲವು ವಿದ್ವಾಂಸರ ಅಭಿಮತವಾಗಿದೆ. ಯಾವ ರೀತಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಪೂರ್ವಸಿದ್ಧತೆ ನಡೆಸುತ್ತಾರೆಯೇ ಅದೇ ರೀತಿ ರಮಝಾನ್ ತಿಂಗಳಲ್ಲಿ ಆರಾಧನೆ ವೃತಾನುಷ್ಠಾನದಲ್ಲಿ ತಲ್ಲೀನರಾಗಲು ಶಅಬಾನ್ನಲ್ಲಿ ಪೂರ್ವ ತಯಾರಿ ನಡೆಸಬೇಕು. ಈ ತಿಂಗಳಲ್ಲಿಯೇ ಕುರ್ಆನ್ ಪಾರಾಯಣದಲ್ಲಿ …
Read More »ಅಸೂಯೆಯಿಂದ ದೂರವಿರಿ
ಅಲ್ಲಾಹನು ಭೂಮಿಯ ಮೇಲೆ ಎಲ್ಲರಿಗೂ ವಿವಿಧ ರೀತಿಯ ಅನುಗ್ರಹಗಳನ್ನು ನೀಡಿರುವನು. ಎಲ್ಲರಿಗೂ ಒಂದೇ ರೀತಿಯ ಎಲ್ಲಾ ಅನುಗ್ರಹಗಳು ಸಿಗಬೇಕೆಂದಿಲ್ಲ. ಯಾರಿಗೆ ಏನು ನೀಡಬೇಕೆಂಬುದು ಅಲ್ಲಾಹನ ತೀರ್ಮಾನವಾಗಿದೆ. ಇನ್ನೊಬ್ಬರಲ್ಲಿರುವ ಎಲ್ಲಾ ಅನುಗ್ರಹಗಳು ನಮಗೆ ಸಿಗಬೇಕೆಂದು ಬಯಸುವುದು ಅತಿಯಾಸೆಯಾಗಿದೆ. ಈ ಅತಿಯಾಸೆಯು ಮುಂದುವರೆಯುತ್ತಾ ಮನಸ್ಸಿನಲ್ಲಿ ಅಸೂಯೆಯಾಗಿ ಮಾರ್ಪಡುತ್ತದೆ. ಅಸೂಯೆಯು ಸತ್ಯ ವಿಶ್ವಾಸದ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಭಾವನಾತ್ಮಕ ರೋಗವಾಗಿದೆ. ಮನಸ್ಸಿನಲ್ಲಿ ಸತ್ಯ ವಿಶ್ವಾಸ ಮತ್ತು ಅಸೂಯೆ ಒಂದುಗೂಡಲು ಸಾಧ್ಯವಿಲ್ಲ. ಅಲ್ಲಾಹನು ನಮಗೆ …
Read More »
IslamKannada News Portal