– ಶೈಖ್ ಮುಹಮ್ಮದ್ ಕಾರಕುನ್ನು ನಮ್ಮ ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಮಾದಕ ವ್ಯಸನಿಗಳ ಬಗ್ಗೆ ಎಲ್ಲರೂ ಪ್ರಜ್ಞಾವಂತರಾಗಬೇಕಾಗಿದೆ. ಶಿಕ್ಷಣ ಕೇಂದ್ರಗಳಲ್ಲಿ ಹುಡುಗರು ಹುಡುಗಿಯರು ಹಾಗೂ ಸಮಾಜದ ಯುವ ಜನಾಂಗವು ಈ ಮಾದಕ ಪಿಡುಗಿನ ದಾಸರಾಗುತ್ತಿದ್ದಾರೆ. ಆದರೂ ಈ ಬಗ್ಗೆ ಸಮಾಜವು ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ ಎಂಬುದು ಕಳವಳಕಾರಿ ಹಾಗೂ ಅಪಾಯಕಾರಿಯಾಗಿದೆ. ಸಮಾಜದಲ್ಲಿರುವ ಎಲ್ಲಾ ಜನರೂ ಒಂದಾಗಿ ಈ ಪಿಡುಗಿನ ವಿರುದ್ದ ಹೋರಾಡಿದರೆ ಮಾತ್ರ ಯಶಸ್ಸು ಕಾಣಬಹುದು. ಮಾದಕ ವಸ್ತುಗಳು ವ್ಯಾಪಕವಾಗುವುದನ್ನು ತಡೆಯಲು ಕೆಲವೊಂದು …
Read More »ನಿಮ್ಮಲ್ಲಿಲ್ಲದ ಒಳಿತುಗಳನ್ನು ಮಕ್ಕಳಿಂದ ನಿರೀಕ್ಷಿಸುತ್ತೀರಾ?
@ ಖದೀಜ ನುಸ್ರತ್ ಮನೆಯಲ್ಲಿ ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಸುದೃಢವಾದ ಸಂಬಂಧವು ಸುಭಧ್ರ ಕುಟುಂಬದ ಅಡಿಪಾಯವಾಗಿರುತ್ತದೆ. ಪೋಷಕರು ಮಕ್ಕಳೊಂದಿಗೆ ವರ್ತಿಸುವ ರೀತಿ ಅವರ ಸ್ವಭಾವ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಮಕ್ಕಳು ಹೆತ್ತವರು ಹೇಳಿದ ಮಾತನ್ನು ಕೇಳುವುದಿಲ್ಲ, ಹಠ ಸ್ವಭಾವ, ಕಲಿಕೆಯಲ್ಲಿ ಏಕಾಗ್ರತೆ ಇಲ್ಲ, ಅಕ್ರಮ ಮನೋಭಾವ, ಪ್ರೇಮಜಾಲದಲ್ಲಿ ಸಿಲುಕುವುದು, ಹೆತ್ತವರನ್ನು ಗೌರವಿಸುವುದಿಲ್ಲ ಎಂಬುದು ಹೆಚ್ಚಿನ ಹೆತ್ತವರಿಂದ ಕೇಳಿ ಬರುವ ದೂರು ಆಗಿರುತ್ತದೆ. …
Read More »ಮೃತರಿಗೆ ಪುಣ್ಯ ತಲುಪುವುದೆ?
ಪ್ರಶ್ನೆ: ನನ್ನ ಈ ಪ್ರಶ್ನೆಗೆ ಕುರ್ಆನ್-ಹದೀಸ್ನ ಬೆಳಕಿನಲ್ಲಿ ಉತ್ತರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಕುರ್ಆನ್ ಓದಿ, ಅದರ ಪುಣ್ಯ ಮೃತರಿಗೆ ಸಿಗಲೆಂದು ಪ್ರಾರ್ಥಿಸಬಹುದೇ? ಹಾಗೆ ಪ್ರಾರ್ಥಿಸಿದರೆ ಅದರ ಪುಣ್ಯ ಅವರಿಗೆ ಸಿಗುವುದೇ? ಬಡವರಿಗೆ ಅಥವಾ ಕುಟುಂಬ ಮಿತ್ರಾದಿಗಳಿಗೆ ಊಟಕೊಟ್ಟು ಅದರ ಪುಣ್ಯ ಮೃತರಿಗೆ ಸಿಗಲೆಂದು ಪ್ರಾರ್ಥಿಸಿದರೆ ಅದು ಅವರಿಗೆ ಸಿಗುವುದೇ? ಹಣ ಅಥವಾ ಬಟ್ಟೆ ದಾನ ನೀಡಿ ಅದರ ಪುಣ್ಯವನ್ನು ಮೃತರಿಗೆ ಸಿಗಲೆಂದು ಪ್ರಾರ್ಥಿಸಿದರೆ ಅವರಿಗೆ ಅದರ ಪುಣ್ಯ ಸಿಗುವುದೇ? ಉತ್ತರ: ಈ …
Read More »ಹಾಸ್ಯವನ್ನು ಅನುಭವಿಸುತ್ತಿದ್ದ ಪ್ರವಾದಿ(ಸ)
@ ಶಹೀದ್ ಪ್ರವಾದಿ ಮುಹಮ್ಮದ್(ಸ) ನಗುತ್ತಿದ್ದರು. ಈ ಜಗತ್ತಿಗೆ ಬಂದ ಎಲ್ಲಾ ಪ್ರವಾದಿಗಳೂ ನಗುತ್ತಿದ್ದರು. ಅವರ ನಗು ಮತ್ತು ಅಳುವಿನಲ್ಲಿ ಪಾಠವಿರುತಿತ್ತು. ಪ್ರವಾದಿವರ್ಯರ(ಸ) ಪಾವನ ಬದುಕಿನಲ್ಲಿ ಒಳಿತಿನ ಬೆಳದಿಂಗಳ ಹಲವಾರು ಘಟನೆಗಳನ್ನು ಕಾಣಬಹುದು. ಪ್ರವಾದಿವರ್ಯರು(ಸ) ಯಾವಾಗಲೂ ಪ್ರಸನ್ನವದನರಾಗಿರುತ್ತಿದ್ದರು. ತನ್ನನ್ನು ಸಮೀಪಿಸುವ ಎಲ್ಲರಿಗೂ ಅದನ್ನು ಪಸರಿಸುತ್ತಿದ್ದರು. ಪ್ರವಾದಿವರ್ಯರ(ಸ) ಸನ್ನಿಧಿಯಲ್ಲಿ ತಮ್ಮ ಎಲ್ಲಾ ದುಖ ದುಮ್ಮಾನಗಳನ್ನು ಮರೆತು ಉಲ್ಲಾಸಭರಿತರಾಗಿ ಆ ರಸನಿಮಿಷಗಳನ್ನು ಜನರು ಕಳೆಯುತ್ತಿದ್ದರು. ಪ್ರವಾದಿವರ್ಯರು(ಸ) ಹಾಸ್ಯ ಮಾತನ್ನಾಡುವಾಗ ಒಮ್ಮೆ ಅಬೂ ಹುರೈರಾ …
Read More »ಸಮಯವನ್ನು ಹಾಳು ಮಾಡಬೇಡಿರಿ
@ ಅಬೂ ಝೀಶಾನ್ ಹ. ಹಸನ್ ಬಸರಿ(ರ) ಒಮ್ಮೆ ಒಂದು ಜನಾಝಾದೊಂದಿಗೆ ಹೋಗುತ್ತಿರುವಾಗ ತನ್ನ ಪಕ್ಕದಲ್ಲಿದ್ದ ಒಬ್ಬನೊಂದಿಗೆ ಕೇಳಿದರು, “ಈ ಮರಣ ಹೊಂದಿದವನ ಸ್ಥಳದಲ್ಲಿ ನೀನು ಮಲಗಿದ್ದಿದ್ದರೆ ಏನನ್ನು ಇಚ್ಛಿಸುತ್ತಿದ್ದೆ.” ಆತ, “ಒಳ್ಳೆಯ ಕಾರ್ಯಗಳನ್ನು ಮಾಡಲು ಇನ್ನೂ ಸ್ವಲ್ಪ ಸಮಯ ಸಿಕ್ಕಿದ್ದರೆ ಒಳ್ಳೆಯದಿತ್ತು ಎಂದು ಇಚ್ಛಿಸುತ್ತಿದ್ದೆ” ಎಂದು ಉತ್ತರಿಸುತ್ತಾನೆ. ಆಗ ಹಸನ್ ಬಸರಿ(ರ) ಹೇಳುತ್ತಾರೆ, “ಹಾಗಾದರೆ ನೀನು ಮರಣ ಹೊಂದಿ ಅಲ್ಲಿ ಮಲಗಿದ್ದೆ ಹಾಗೂ ಅಲ್ಲಾಹನು ನಿನಗೆ ಸ್ವಲ್ಪ ಕಾಲಾವಕಾಶ …
Read More »ಪಾಪ ಮತ್ತು ತೌಬಾ?
ಪ್ರಶ್ನೆ: ನನ್ನಿಂದ ತಪ್ಪುಗಳು ಸಂಭವಿಸುತ್ತವೆ. ನಾನು ಅಲ್ಲಾಹನಲ್ಲಿ ಕ್ಷಮೆ ಯಾಚಿಸಿ ಮುಂದೆ ತಪ್ಪುಗಳಾಗಬಾರದೆಂದು ದೃಢ ನಿಶ್ಚಯ ಮಾಡುತ್ತೇನೆ. ಆದರೆ ಅದು ಕೆಲವೇ ದಿನಗಳ ಮಟ್ಟಿಗೆ ಇರುತ್ತದೆ. ಪುನಃ ಪಾಪಗಳನ್ನು ಮಾಡಿ ಬಿಡುತ್ತೇನೆ. ಪಾಪ ಮಾಡಿದ ನಂತರ ಪುನಃ ತೌಬಾ ಮಾಡುತ್ತೇನೆ. ಆದರೆ ಅನಂತರವೂ ಪದೇ ಪದೇ ಈ ರೀತಿ ಸಂಭವಿಸುತ್ತಿರುತ್ತದೆ. ಪಾಪಗಳನ್ನು ಮಾಡದೆ ತಕ್ವಾದಲ್ಲಿ ಸ್ಥಿರವಾಗಿರಲು ನಾನೇನು ಮಾಡಬೇಕು? ಒಮ್ಮೆ ತೌಬಾ ಮಾಡಿದ ನಂತರ ಪುನಃ ತಪ್ಪು ಮಾಡಿದರೆ ಹಿಂದಿನ …
Read More »ಪ್ರವಾದಿ ಪೂರ್ವ ಇತಿಹಾಸ ಮತ್ತು ವಾಸ್ತವ
@ ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ ಪ್ರವಾದಿ ಈಸಾ(ಅ)ರ ಕಾಲದ ನಂತರ ಒಂದು ಸುದೀರ್ಘ ಅವಧಿಯವರೆಗೆ ಪ್ರವಾದಿಗಳ ಆಗಮನವಾಗಿರಲಿಲ್ಲ. ಅರೇಬ್ಯನ್ ಪ್ರಾಂತ್ಯದಲ್ಲಿ ಜನರು ಪ್ರವಾದಿ ಹ. ಇಬ್ರಾಹಿಮ್(ಅ) ಮತ್ತು ಹ. ಇಸ್ಮಾಯಿಲ್(ಅ)ರ ಮೇಲೆ ಅಪಾರ ಗೌರವವನ್ನಿಟ್ಟುಕೊಂಡಿದ್ದರು. ‘ಕಅಬ’ ಭವನದ ನಿರ್ಮಾತೃರು ಎಂಬ ವಿಶೇಷ ಪ್ರೀತಿ ಅವರ ಮೇಲೆ ಇತ್ತು. ಆದರೆ, ಅವರು ಬೋಧಿಸಿದ ಏಕ ದೇವೋಪಾಸನೆಯ ತತ್ವವನ್ನು ಜನರು ಎಳ್ಳಷ್ಟೂ ಪಾಲಿಸುತ್ತಿರಲಿಲ್ಲ. ಮೂಢನಂಬಿಕೆ ಮತ್ತು ಮೂಢಾಚಾರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಕಅಬ ಭವನದ …
Read More »ಕುಟುಂಬಕ್ಕೆ ಕಂಟಕವಾಗುವ ಸಂಶಯ ರೋಗ
@ ಡಾ| ಉಮರ್ ಎಫ್. ಶಿಕ್ಷಣದಲ್ಲಿ ಬಹಳ ಪ್ರಗತಿ ಸಾಧಿಸಿರುವ ಈ ಕಾಲದಲ್ಲಿ ಮೂಢನಂಬಿಕೆಗಳಿಗೆ ಬರವಿಲ್ಲ. ಆದ್ದರಿಂದಲೇ ಹಲವು ಮಾನಸಿಕ ರೋಗಗಳನ್ನೂ ಮಾನಸಿಕ ಸಮಸ್ಯೆಗಳನ್ನೂ ಪಿಶಾಚಿಯ ಬಾಧೆ ಎಂದೂ ಮಾಟದ ಫಲವೆಂದೂ ನಂಬುವವರಿದ್ದಾರೆ. ಇಂತಹ ರೋಗಗಳ ಸ್ಪೆಶಲಿಸ್ಟ್ ಗಳೆಂಬಂತೆ ಫೋಸು ಕೊಡುತ್ತಿರುವ ನಕಲಿ ಸ್ವಾಮಿ ಹಾಗೂ ಬಾಬಾಗಳ ಮೊರೆ ಹೋಗುವ ಜಾಯಮಾನವು ವ್ಯಾಪಕವಾಗುತ್ತಿದೆ. ನೂಹಾಳ ಘಟನೆಯು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ನೂಹಾಳಿಗೆ ಒಂದು ವರ್ಷದಿಂದೀಚೆಗೆ ತನ್ನ ಪತಿ ನಿಸಾರ್ನ ಮೇಲೆ …
Read More »ಕೊನೆಯ ಬಸ್ಸು
@ ಪಿ.ಎಂ.ಎ. ಗಫೂರ್ ಓರ್ವ ಪುಟ್ಟ ಬಾಲಕಿಯ ಮುಂದೆ ಎರಡು ವಸ್ತುಗಳನ್ನು ಇಟ್ಟು ನೋಡಿ. ಒಂದು ಆಕೆ ಅತಿ ಹೆಚ್ಚು ಇಷ್ಟಪಡುವ ಚಾಕ್ಲೆಟ್, ಎರಡನೆಯದ್ದು ಎರಡು ಸಾವಿರ ರೂಪಾಯಿ ನೋಟು. ಇದರಲ್ಲಿ ಯಾವುದಾದರೊಂದನ್ನು ಆರಿಸಿ ತೆಗೆಯಲು ಹೇಳಿರಿ. ಆಕೆ ಓಡಿ ಬಂದು ಆ ಚಾಕ್ಲೆಟ್ ತೆಗೆಯುತ್ತಾಳೆ. ನಂತರ ಅದರ ಸೊಗಸಾದ ಹೊರ ಕವಚವನ್ನು ಬಿಚ್ಚಿ ತೆಗೆದು ತಿನ್ನಲಾರಂಭಿಸುತ್ತಾಳೆ. ಆ ನೋಟನ್ನು ತೆಗೆದುಕೊಂಡು ಹೋಗಿ ಚಾಕ್ಲೆಟ್ ಖರೀದಿಸಲು ಸ್ವಲ್ಪ ಸಮಯ ಬೇಕಾಗುವುದು. …
Read More »ಬದುಕಿನ ಭಾಗವಾಗಬೇಕಿರುವ ಕಿಯಾಮುಲ್ಲೈಲ್
@ ಜಮಾಲ್ ಇರಿಂಗಲ್ ಪವಿತ್ರ ಕುರ್ಆನ್ನಲ್ಲಿ ಹಲವೆಡೆಗಳಲ್ಲಿ ರಾತ್ರಿಯ ಕುರಿತು ವಿವರಿಸಲಾಗಿದೆ. ರಾತ್ರಿಯನ್ನು ಶಾಂತಿ ಮತ್ತು ವಿಶ್ರಾಂತಿಯ ಸಮಯವೆಂದು ಅದು ಪರಿಚಯ ಮಾಡುತ್ತದೆ. ನಿಮ್ಮ ನಿದ್ರೆ ಯನ್ನು ವಿಶ್ರಾಂತಿಯ ಸಾಧನವಾಗಿ ಮಾಡಿರುವುದು- ರಾತ್ರಿಯನ್ನು ಮರೆಮಾಡುವ ಸಾಧನವಾಗಿ ಮಾಡಿರುವುದು ಹಗಲನ್ನು ಉಪ ಜೀವನವನ್ನರಸುವ ಸಮಯವಾಗಿಯೂ ಮಾಡ ಲಾಗಿದೆ. (ಪವಿತ್ರ ಕುರ್ಆನ್ 78: 9-11) ರಾತ್ರಿಯಲ್ಲೇ ಹಲವೊಮ್ಮೆ ಮನುಷ್ಯನಿಗೆ ಪೈಶಾಚಿಕ ಚಿಂತೆಗಳು ಮೂಡುತ್ತವೆ. ಕೊಲೆ ದರೋಡೆ ಇನ್ನಿತರ ಅನೈತಿಕ ಕೃತ್ಯಗಳು ಹೆಚ್ಚಾಗಿ ರಾತ್ರಿಯಲ್ಲೇ …
Read More »
IslamKannada News Portal