Home / editor (page 40)

editor

ಮುಹರ್ರಮ್ ಏನು ಏನಲ್ಲ?

ಸಬೀಹಾ ಫಾತಿಮಾ  ಚಾಂದ್ರಮಾನ ಕ್ಯಾಲೆಂಡರ್ ಅಥವಾ ಹಿಜರಿ ಕ್ಯಾಲೆಂಡರಿನ ಪ್ರಥಮ ತಿಂಗಳ ಹೆಸರೇ ಮುಹರ್ರಮ್. ಬಹುಧರ್ಮೀಯ, ಬಹು ಸಂಸ್ಕೃತಿಯ ಭವ್ಯ ಭಾರತದಲ್ಲಿ ಬಾಳಿ ಬದುಕುತ್ತಿರುವವರಲ್ಲಿ ಮುಹರ್ರಮ್ ಎಂಬುದು ಮುಸ್ಲಿಮರ ಒಂದು ಹಬ್ಬ ಎಂಬ ನಂಬಿಕೆ ಪ್ರಚಲಿತವಾಗಿದೆ. ಆದರೆ ಇಸ್ಲಾಮಿನಲ್ಲಿ ಕೇವಲ ಎರಡೇ ಹಬ್ಬಗಳು. ಚಾಂದ್ರಮಾನ ಕ್ಯಾಲೆಂಡರಿನ 9ನೇ ತಿಂಗಳು ರಮಝಾನ್ ನ ಉಪವಾಸ ಮುಗಿಸಿ 10ನೇ ತಿಂಗಳ ಆರಂಭ ಶವ್ವಾಲ್ ತಿಂಗಳ ಒಂದರಂದು ಆಚರಿಸುವ ಈದುಲ್ ಫಿತ್ರ್ ಮತ್ತು ಅದರ …

Read More »

ಮುಹರ್ರಮ್ ಏನು ವಿಶೇಷ?

@ ಏ.ಕೆ. ಕುಕ್ಕಿಲ ಮುಹರ್ರಮ್ ಎಂಬುದು ಇಸ್ಲಾಮಿಕ್ ಕ್ಯಾಲೆಂಡರ್ ನ ಮೊದಲ ತಿಂಗಳು. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಚಲನೆಯನ್ನು ಆಧರಿಸಿ ರಚಿಸಲಾಗಿದ್ದರೆ ನಾವು ಸಾಮಾನ್ಯವಾಗಿ ಉಪಯೋಗಿಸುವ ಜನವರಿ-ಫೆಬ್ರವರಿ ಎಂಬ ಕ್ಯಾಲೆಂಡರ್ ಸೂರ್ಯನ ಚಲನೆಯನ್ನು ಆಧರಿಸಿ ರಚಿಸಿದ್ದಾಗಿದೆ. ಪ್ರವಾದಿ ಮುಹಮ್ಮದರು ಮಕ್ಕಾದಲ್ಲಿ 13 ವರ್ಷಗಳ ಕಾಲ ತನ್ನ ವಿಚಾರಧಾರೆಯನ್ನು ಪ್ರತಿಪಾದಿಸಿ ಕೊನೆಗೆ ಮದೀನಾಕ್ಕೆ ವಲಸೆ ಹೋಗುತ್ತಾರೆ. ಈ ವಲಸೆಯಿಂದ ಇಸ್ಲಾಮಿಕ್ ಕ್ಯಾಲೆಂಡರ್ ನ ದಿನಾಂಕ ಆರಂಭವಾಗುತ್ತದೆ. ಅದಕ್ಕೆ ಹಿಜರಿ ಶಕೆ ಎಂದು …

Read More »

ಪವಿತ್ರ ಕುರ್‌ಆನ್: ಸಂದೇಹದ ಸುತ್ತ…

@ ಏ.ಕೆ. ಕುಕ್ಕಿಲ 1. ಝೈದ್ ಬಿನ್ ಸಾಬಿತ್ 2. ಅಬ್ದುಲ್ಲಾ ಬಿನ್ ಝುಬೈರ್ 3. ಸಈದ್ ಬಿನ್ ಆಸ್ 4. ಅಬ್ದುರ‍್ರಹ್ಮಾನ್ ಬಿನ್ ಹಾರಿಸ್ ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದೆ. ಈ ಮೇಲಿನ ಹೆಸರುಗಳು ನನ್ನ ಅಧ್ಯಯನ ಪಟ್ಟಿಯಲ್ಲೂ ಇತ್ತು. ಇದಕ್ಕೆ ಒಂದು ಕಾರಣವೂ ಇದೆ- ಹಿರಿಯ ಸಾಹಿತಿಯೊಬ್ಬರು ಪವಿತ್ರ ಕುರ್‌ಆನಿನ ಕ್ರೋಢೀಕರಣದ ಕುರಿತಂತೆ ಕೆಲವು ಪ್ರಶ್ನೆಗಳನ್ನು ಈ ಹಿಂದೆ ಎತ್ತಿದ್ದರು- ‘ಕುರ್‌ಆನನ್ನು ಕ್ರೋಢೀಕರಿಸಿದ್ದು ಮೂರನೇ ಖಲೀಫ ಉಸ್ಮಾನ್ ಬಿನ್ …

Read More »

ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ದೃಷ್ಟಿಯಲ್ಲಿ ಪ್ರವಾದಿ ಮುಹಮ್ಮದ್(ಸ)

ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷರು, ಭಾರತ ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು  ಪ್ರವಾದಿ ಮುಹಮ್ಮದ್‌ರು(ಸ) ಅಲ್ಲಾಹನಿಂದ ಅವತೀರ್ಣವಾದ `ಸತ್ಯದ ಸಂದೇಶವನ್ನು ಸಾರುತ್ತಿರುವ ಸಂದರ್ಭದಲ್ಲಿ ಅವರಿಗೆ ಸತ್ಯನಿಷೇಧಿಗಳಿಂದ ತುಂಬಾ ವಿರೋಧಗಳು ಎದುರಾದುವು. ಅವರ(ಸ) ಪ್ರಾಣಕ್ಕೂ ಅಪಾಯ ಒದಗಿತ್ತು. ಸಾಕಷ್ಟು ಬಗೆಯ ಹಿಂಸೆಗಳನ್ನು ಆ ಸತ್ಯನಿಷೇಧಿಗಳು ಪ್ರವಾದಿಯವರಿಗೆ(ಸ) ಕೊಟ್ಟರು. ಧನ, ಕನಕ, ಸಾಮ್ರಾಜ್ಯ, ಹೆಣ್ಣು- ಇವೆಲ್ಲವುಗಳ ಆಮಿಷವನ್ನೊಡ್ಡಿದ್ದರು. ಆದರೆ ಸತ್ಯಪಥವನ್ನು ಕ್ರಮಿಸುವಲ್ಲಿ, ಸತ್ಯವನ್ನು ಸಾರಿ ಹೇಳುವಲ್ಲಿ ಪ್ರವಾದಿಯವರು(ಸ) ಇಂತಹ ಯಾವುದೇ ಆಶೆ, …

Read More »

ಆಧುನಿಕ ಮಾನವನಿಗೆ 6ನೇ ಶತಮಾನದ ಧರ್ಮವೇ?

ಪ್ರವಾದಿಗಳು ಧರ್ಮದ ಸ್ಥಾಪಕರಲ್ಲ: ಯೇಸು ದೇವಪುತ್ರನೆಂದು ಕ್ರೈಸ್ತರು, ಮುಹಮ್ಮದ್ ಅಂತಿಮ ಪ್ರವಾದಿಯೆಂದು ನೀವೂ ವಾದಿಸುತ್ತೀರಿ? ಇದು ತಮ್ಮ ಧರ್ಮ ಸಂಸ್ಥಾಪಕರನ್ನು ಮಹಾನ್ ವ್ಯಕ್ತಿಗಳಾಗಿಸುವ ಒಂದು ಅವಕಾಶವಾದವಲ್ಲವೇ? ಇಸ್ಲಾಮ್ ಮತ್ತು ಮುಸ್ಲಿಮ್‌ ರ ಕುರಿತು ಇರುವ ಗಂಭೀರವಾದ ತಪ್ಪುಕಲ್ಪನೆಗಳೇ ಇಂತಹ ಪ್ರಶ್ನೆಗಳಿಗೆ ಕಾರಣ. ಮುಹಮ್ಮದ್(ಸ) ನಮ್ಮೆಲ್ಲರ ಪ್ರವಾದಿಯಾಗಿದ್ದಾರೆ. ಅವರು ಯಾವುದೇ ಧರ್ಮಿಯರ, ಸಮುದಾಯಕ್ಕೆ ಸೀಮಿತವಾದ ಪ್ರವಾದಿಯಲ್ಲ, ಸಕಲ ಲೋಕದ ಮಾನವ ಕುಲಕ್ಕಾಗಿ ನಿಯೋಜಿತರಾದ ಪ್ರವಾದಿಯಗಿದ್ದಾರೆ. ಅವರ ಕುರಿತು ಪವಿತ್ರ ಕುರ್ ಆನ್ …

Read More »

ಜಿಝಿಯಾ ?

ಜಿಝಿಯಾ (ರಕ್ಷಣಾ ತೆರಿಗೆ) ಎಂಬುದು ಜಗತ್ತಿನಲ್ಲಿ ಅತ್ಯಧಿಕ ತಪ್ಪು ತಿಳಿಯಲ್ಪಟ್ಟ ಇಸ್ಲಾಮಿ ಪಾರಿಭಾಷಿಕ ಪದವಾಗಿದೆ. ಅದನ್ನು ಇಸ್ಲಾಮಿ ರಾಷ್ಟ್ರಗಳಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರೊಂದಿಗಿರುವ ಪಕ್ಷಪಾತ ಮತ್ತು ಅವರನ್ನು ದ್ವಿತೀಯ ದರ್ಜೆಯ ಪೌರರೆಂದು ಪರಿಗಣಿಸುವ ಮನೋಭಾವದ ಸಂಕೇತವೆಂದೂ ಆಕ್ಷೇಪಿಸಲಾಗುತ್ತಿದೆ. ಮುಸ್ಲಿಮೇತರ ಪ್ರಜೆಗಳಿಗೆ ವಿಧಿಸಲಾಗುವ ಈ ತೆರಿಗೆಯ ಹಿನ್ನೆಲೆಯನ್ನು ಸರಿಯಾಗಿ ಗ್ರಹಿಸದಿರುವುದೇ ಈ ತಪ್ಪು ತಿಳುವಳಿಕೆ ಮತ್ತು ಟೀಕೆಗಳಿಗೆ ಕಾರಣವಾಗಿದೆ. ಇಸ್ಲಾಮಿ ರಾಷ್ಟ್ರವು ಮುಸ್ಲಿಮೇತರ ಪೌರರಿಗೆ ಈ ಕಂದಾಯವನ್ನು ವಿಧಿಸುವುದಕ್ಕೆ ಎರಡು ಪ್ರಮುಖ …

Read More »

ಧರ್ಮ ಯಾವುದಾದರೇನು? ಮನುಷ್ಯ ಒಳ್ಳೆಯವನಾದರೆ ಸಾಲದೇ ?

ಧರ್ಮವು ದೇವನದ್ದಾಗಿದ್ದರೆ ವಿಶ್ವದಲ್ಲಿ ವಿವಿಧ ಧರ್ಮಗಳು ಇರಲು ಕಾರಣವೇನು? ವಿವಿಧ ದೇಶಗಳಿಗೆ ಹಾಗೂ ಕಾಲಗಳಿಗೆ ದೇವನು ಬೇರೆ ಬೇರೆ ಧರ್ಮವನ್ನು ನೀಡಿದ್ದಾನೆಯೇ? ಹಾಗಿದ್ದರೆ ವಿವಿಧ ಧರ್ಮಗಳ ನಡುವೆ ಭಿನ್ನತೆಯೂ ವಿರೋಧಾಭಾಸವೂ ಕಂಡು ಬರಲು ಕಾರಣವೇನು? ಮಾನವಕುಲಕ್ಕೆ ಸರ್ವಶಕ್ತನಾದ ದೇವನು ನೀಡಿರುವ ಜೀವನ ವ್ಯವಸ್ಥೆಯನ್ನು ಧರ್ಮ ಎನ್ನಲಾಗುತ್ತದೆ. ಮನುಷ್ಯನೆಂದರೆ ಯಾರು? ಏನು? ಎಲ್ಲಿಂದ ಬಂದಿದ್ದಾನೆ? ಎಲ್ಲಿಗೆ ಹೋಗಲಿದ್ದಾನೆ? ನಮ್ಮ ಜೀವನ ಯಾವ ರೀತಿ ಇರಬೇಕೆಂದೂ, ಮರಣಾನಂತರ ನಮ್ಮ ಅವಸ್ಥೆಯೇನೆಂದು ಧರ್ಮವು ಮನುಷ್ಯನಿಗೆ …

Read More »

ಪ್ರಾಣಿಬಲಿ ಇಬ್ರಾಹೀಮ್(ಅ) ಸಂಪ್ರದಾಯ

ಸತ್ಯಹರಿಶ್ಚಂದ್ರನ ಸತ್ಯವನ್ನು ಪರೀಕ್ಷಿಸುವ ವಿವಿಧ ಘಟ್ಟಗಳಲ್ಲಿ ಹೆಂಡತಿಯನ್ನು ಬಲಿಕೊಡುವ ಸಂದರ್ಭವಿದೆ. ಎಲ್ಲದರಲ್ಲೂ ಸತ್ಯಹರಿಶ್ಚಂದ್ರ ವಿಜಯಿಯಾಗುತ್ತಾರೆ. ಪ್ರವಾದಿ ಇಬ್ರಾಹೀಮರು ಸೂರ್ಯ, ಚಂದ್ರ,ನಕ್ಷತ್ರಗಳು ಅಸ್ತಮಿಸುವುದನ್ನು ಕಂಡು ಅಸ್ತಮಿಸುವುದು ದೇವರಾಗಿರಲು ಸಾಧ್ಯವಿಲ್ಲ ಎನ್ನುತ್ತಾ ಇವೆಲ್ಲದರ ಸೃಷ್ಟಿಕರ್ತನೇ ನನ್ನ ಸೃಷ್ಟಿಕರ್ತ. ನಾನು ಕೇವಲ ಭೂಮ್ಯಾಕಾಶಗಳ ಸೃಷ್ಟಿಕರ್ತನೆಡೆಗೆ ನನ್ನ ಮುಖವನ್ನು ತಿರುಗಿಸಿದೆ ಎಂದು ಘೋಷಿಸಿದಾಗ ಜೀವನದುದ್ದಕ್ಕೂ ಪರೀಕ್ಷೆ ಎದುರಾಗುತ್ತದೆ. ಸರ್ವಾಧಿಕಾರಿ ರಾಜ ನಮ್ರೂದನು ಬೆಂಕಿಗೆ ಹಾಕುತ್ತಾನೆ. ಕೊನೆಯ ಪರೀಕ್ಷೆ ಮಗನನ್ನು ಬಲಿ ನೀಡುವುದು. ಇಬ್ರಾಹೀಮರು ಯಶಸ್ವಿಯಾಗುತ್ತಾರೆ. ವಾಸ್ತವದಲ್ಲಿ …

Read More »

ಕೃತಜ್ಞ ಹೃದಯ : ಸತ್ಯವಿಶ್ವಾಸದ ಲಕ್ಷಣ

ಇಹಲೋಕದಲ್ಲಿ ಅಲ್ಲಾಹನು ಮನುಷ್ಯನಿಗೆ ನೀಡಿದ ಅನುಗ್ರಹಗಳನ್ನು ಎಣಿಸಲು ಅಸಾಧ್ಯ. ಅದರಲ್ಲಿ ನಮಗೆ ಅರಿತಿರುವ, ಅರಿಯದೆ ಇರುವ ಅದೇಷ್ಟೋ ಅನುಗ್ರಹಗಳಿವೆ. ನಾವು ಪ್ರಾರ್ಥಿಸಿಯೂ, ಪ್ರಾರ್ಥಿಸದೆಯೇ ಲಭಿಸಿದ ಎಷ್ಟೋ ಅನುಗ್ರಹಗಳಿವೆ. ಅವುಗಳನ್ನು ನೀವು ಎಂದಾದರೊಮ್ಮೆ ಶಾಂತವಾದ ಮನಸ್ಸಿನಿಂದ ಚಿಂತಿಸಿ ನೋಡಿದ್ದಿರಾ? ಉತ್ತಮ ಕುಟುಂಬ, ಶರೀರದ ಅಂಗಾಂಗಗಳು, ದೃಷ್ಟಿ, ಶ್ರವಣ, ಮೆದುಳು, ಮನಸ್ಸು , ಮಾತನಾಡುವ, ಆಲೋಚನೆ ಮಾಡುವ ಸಾಮರ್ಥ್ಯ, ಸಂಪತ್ತು, ಉತ್ತಮ ಆಹಾರ, ನೀರು, ಗಾಳಿ, ಮಣ್ಣು, ಬೆಂಕಿ, ಸಸ್ಯಗಳು, ಖನಿಜ ವಸ್ತುಗಳು, …

Read More »

ಹಜ್ಜ್ ಕ್ಯಾಂಪ್‌ನಲ್ಲಿ ಕೇಳಿಬಂದ ಪ್ರಶ್ನೆಗಳು ಮತ್ತು ಉತ್ತರಗಳು

ಹೈದರಲಿ ಶಾಂತಪುರ ? ಹಜ್ಜ್ ಗೆ ಹಣವನ್ನು ಕಟ್ಟುವ ಸಂದರ್ಭದಲ್ಲಿ ನಾನು ನನ್ನ ಕಝಿನ್‌ನ ಬಳಿಯಿಂದ ಸ್ವಲ್ಪ ಮೊತ್ತ ಹಣವನ್ನು ಸಾಲವಾಗಿ ಪಡೆದಿದ್ದೆ. ನಾನು ಪಡೆದದ್ದಕ್ಕಿಂತ ಹೆಚ್ಚು ಮೊತ್ತ ಕೆಲವು ಪಾಲುದಾರಿಕೆಯ ವ್ಯಾಪಾರಕ್ಕೆ ಹಾಕಿದ್ದೇನೆ. ಆ ಮೊತ್ತವನ್ನು ಬೇಗನೇ ಹಿಂದೆಪಡೆಯಲು ಸಾಧ್ಯವಿಲ್ಲದ ಕಾರಣ ಕಝಿನ್ ಬಳಿ ಸಾಲ ಪಡೆದಿದ್ದೆ. ಆ ವಿಷಯವನ್ನು ಅವನಿಗೆ ತಿಳಿಸಿದ್ದೇನೆ. ನನ್ನ ಸಾಲದ ಜವಾಬ್ದಾರಿಯನ್ನು ನನ್ನ ಮಗನಿಗೆ ವಹಿಸಿದ್ದೇನೆ. ಈ ವರ್ಷದ ಕೊನೆಯಲ್ಲಿ ಹಜ್ಜ್ ಕಳೆದು …

Read More »