“ನೀವಿನ್ನು ಸ್ವತಂತ್ರರು. ನಾವು ನಿಮ್ಮನ್ನು ಕ್ಷಮಿಸಿದ್ದೇವೆ. ನೀವು ನಿಮ್ಮ ಧರ್ಮವನ್ನು ಆಚರಿಸಲು ಸರ್ವ ಸ್ವತ೦ತ್ರರು.” ಮಾನವತೆಯನ್ನು ಶಾಂತಿಯನ್ನು ಮತ್ತು ಏಕದೇವ ವಿಶ್ವಾಸವನ್ನು ಬೋಧಿಸಿದ ಕಾರಣಕ್ಕಾಗಿ ತನ್ನನ್ನು ಮತ್ತು ತನ್ನ ಅನುಯಾಯಿಗಳನ್ನು ಹದಿಮೂರು ವರ್ಷಗಳ ಕಾಲ ಅಮಾನವೀಯವಾಗಿ ಹಿಂಸಿಸಿದ, ಕ್ರೂರ ದಿಗ್ಬಂಧನಕ್ಕೊಳಪಡಿಸಿದ ಅಂತಿಮವಾಗಿ ತಾಯ್ನಾಡು ತೊರೆದು ಹೋಗುವಂತಹ ಸನ್ನಿವೇಶ ನಿರ್ಮಿಸಿದ ಒಂದು ಸಮೂಹಕ್ಕೆ ಪ್ರವಾದಿಯವರು(ಸ) ನೀಡಿದ ಅಭಯದ ವಾಗ್ದಾನಗಳೇ ಈ ಮೇಲಿನ ವಾಕ್ಯಗಳು. ಇಂತಹ ಅಭಯ ನೀಡಿದ್ದಾದರೂ ಯಾವಾಗ… ಮುಸ್ಲಿಮ್ ಸೇನೆಯು …
Read More »ನೆರೆಹೊರೆಯವರೊಂದಿಗೆ ಸದ್ವರ್ತನೆಯಲ್ಲಿ ಧರ್ಮಬೇಧಕ್ಕೆ ಆಸ್ಪದವಿಲ್ಲ
ಪ್ರವಾದಿ ಮುಹಮ್ಮದ್ (ಸ)ರು ಇಸ್ಲಾಮ್ ಧರ್ಮದ ಸ್ಥಾಪಕರೆಂದು ಹೇಳಲಾಗುತ್ತದೆ. ಮುಹಮ್ಮದ್ (ಸ)ರು ಇಸ್ಲಾಮ್ ಧರ್ಮದ ಸ್ಥಾಪಕರಲ್ಲ. ಹಿಂದೆ ಬಂದ ಎಲ್ಲ ಪ್ರವಾದಿಗಳಂತೆ ಇಸ್ಲಾಮ್ ಧರ್ಮದ ಬೋಧಕರಾಗಿದ್ದಾರೆ. ನೆರೆಹೊರೆಯವರಿಗೆ ಸಂಬಂಧಿಸಿದ ಅವರ ಬೋಧನೆಗಳನ್ನು ನಾವು ಪಾಲಿಸಿದರೆ ಸ್ವರ್ಗ ಗಳಿಸಲು ಸಾಧ್ಯವಾಗಬಹುದು. ಓರ್ವ ಮಹಿಳೆ ಐಚ್ಚಿಕ ಆರಾಧನೆಗಳಲ್ಲಿ ಅಷ್ಟೇನೂ ಆಸಕ್ತಿಯಿಲ್ಲ. ಅದರೆ ತನ್ನ ನೆರೆಹೊರೆಯವರಿಗೆ ಗಿಣ್ಣುಗಳ ತುಂಡುಗಳನ್ನು ಹಂಚುತ್ತಾಳೆ ಎಂದು ಹೇಳಿದಾಗ ಆ ಮಹಿಳೆ ಸ್ವರ್ಗಕ್ಕೆ ಹೋಗುತ್ತಾಳೆ ಎಂದು ಪ್ರವಾದಿ (ಸ ) …
Read More »ಆಯುಧ ಬಲದಿಂದ ಧರ್ಮ ಪ್ರಚಾರ
ಭಾರತದಲ್ಲಿ ಮುಸ್ಲಿಮರಾದ ನೀವು ಅಲ್ಪಸಂಖ್ಯಾತರಾಗಿರುವುದರಿಂದ ನಮ್ಮೊಂದಿಗೆ ಜಿಹಾದ್ ನಡೆಸಲಿಲ್ಲವಲ್ಲವೇ? ಇಸ್ಲಾಮ್ ಕಾಫಿರರ ವಿರುದ್ಧ ಜಿಹಾದ್ ನಡೆಸಬೇಕೆಂದು ಆದೇಶಿಸುತ್ತದಲ್ಲವೇ? ಭಾರತದಲ್ಲಿ ಮುಸ್ಲಿಮರು ಜಿಹಾದ್ ನಡೆಸುತ್ತಿಲ್ಲವೆಂಬ ಭಾವನೆ ಸರಿಯಲ್ಲ ಏಕೆಂದರೆ ಪ್ರತಿಯೊಬ್ಬ ಮುಸಲ್ಮಾನನ ಮೇಲೂ ಜಿಹಾದ್ ಕಡ್ಡಾಯವಾಗಿದೆ. ಆದರಿಂದ ದೂರಸರಿಯಲು ಯಾರಿಗೂ ಅನುಮತಿಯಿಲ್ಲ. ನರಕದಿಂದ ಮುಕ್ತಿಗೆ ಮತ್ತು ಸ್ವರ್ಗ ಪ್ರವೇಶಕ್ಕೆ ಅದು ಅನಿವಾರ್ಯವಾಗಿದೆ. ಪವಿತ್ರ ಕುರ್ ಆನ್ ಹೇಳುತ್ತದೆ: ‘ಸತ್ಯವಿಶ್ವಾಸಿಗಳೇ, ನಿಮ್ಮನ್ನು ವೇದನಾಯುಕ್ತ ಯಾತನೆಯಿಂದ ರಕ್ಷಿಸುವಂತಹ ಒಂದು ವ್ಯಾಪಾರವನ್ನು ನಾವು ನಿಮಗೆ ತೋರಿಸಿ …
Read More »ಯುದ್ಧ ಪ್ರಿಯರ ನಡುವೆ ಬದುಕಿದ ಯುದ್ಧ ವಿರೋಧಿ ಪ್ರವಾದಿ
ಭಿನ್ನಾಭಿಪ್ರಾಯಗಳು ಮನುಷ್ಯನ ಸಹಜ ಪ್ರಕೃತಿ. ಮಾತು ಕಲಿಯುವಾಗಲೇ ಮನುಷ್ಯನ ಈ ಗುಣ ಪ್ರಕಟವಾಗುತ್ತದೆ. ನಾನು ಇಷ್ಟಪಟ್ಟದ್ದನ್ನು ನನ್ನ ಮಕ್ಕಳು ಇಷ್ಟಪಡಬೇಕೆಂದಿಲ್ಲ. ಹಾಗೆಯೇ ಮನುಷ್ಯನ ಸಾಮಾಜಿಕ ರಂಗ,ರಾಜಕೀಯ ರಂಗದಲ್ಲಿಯೂ ಈ ಭಿನ್ನತೆ ಕಂಡು ಬರುತ್ತದೆ. ಅಭಿಪ್ರಾಯಗಳನ್ನು ಗೌರವಿಸಬೇಕು. ಭಿನ್ನಾಭಿಪ್ರಾಯಗಳು ಜಗಳಕ್ಕೆ ಕಾರಣವಾಗಬಾರದು. ಕುಟುಂಬದ ಸಮಸ್ಯೆಯೇ ಇರಲಿ, ದೇಶದ ಸಮಸ್ಯೆಯೇ ಇರಲಿ, ಒಂದೇ ಸಮೂಹವೇ ಆಗಿರಲಿ, ಎರಡು ಭಿನ್ನ ಸಮೂಹವೇ ಆಗಿರಲಿ ಪರಸ್ಪರ ಸಮಾಲೋಚಿಸಿ ಒಂದು ನಿರ್ಧಾರಕ್ಕೆ ಬಂದರೆ ಆ ನಿರ್ಧಾರದಲ್ಲಿ ದೇವನ …
Read More »ಗುಲಾಮಗಿರಿಯನ್ನು ನಿಷೇಧಿಸದಿರಲು ಕಾರಣವೇನು?
ಇಸ್ಲಾಮ್ ಗುಲಾಮತನವನ್ನು ನಿಷೇಧಿಸಿಲ್ಲವೆಂದು ನಾನು ಭಾವಿಸಿದ್ದೇನೆ. ಹಾಗಿದ್ದರೆ ಸಮಾನತೆ ಹಾಗೂ ನ್ಯಾಯದ ಕುರಿತು ಮಾತನಾಡಲು ಇಸ್ಲಾಮಿಗೆ ಯಾವ ಅಧಿಕಾರವಿದೆ? ಮನುಷ್ಯರೆಲ್ಲಾ ಒಂದೇ ದೇವನ ಸೃಷ್ಟಿಗಳೆಂದು, ಒಂದೇ ತಂದೆ ತಾಯಿಯ ಮಕ್ಕಳೆಂದು ಇಸ್ಲಾಮ್ ಕಲಿಸುತ್ತದೆ. ಆದ್ದರಿಂದ ಅವರ ನಡುವೆ ಭೇದಭಾವ ಸಲ್ಲದೆಂದು ಅದು ಆಜ್ಞಾಪಿಸುತ್ತದೆ, ‘ಮನುಷ್ಯರೇ, ನಿಮ್ಮನ್ನು ಒಂದು ಗಂಡು ಮತ್ತು ಹೆಣ್ಣಿನಿಂದ ಸೃಷ್ಟಿಸಲಾಗಿದೆ. ನಿಮ್ಮನ್ನು ಕುಲಗೋತ್ರಗಳಾಗಿಯೂ, ಸಮುದಾಯಗಳಾಗಿಯೂ ವಿಂಗಡಿಸಿರುವುದು ನೀವು ಪರಸ್ಪರ ಪರಿಚಯ ಪಡುವ ಸಲುವಾಗಿ ಮಾತ್ರ.’ (ಪವಿತ್ರ ಕುರ್ಆನ್ …
Read More »ಕುರ್ಆನ್ ವಚನಗಳಲ್ಲಿ ವಿರೋಧಾಭಾಸವೇ?
ಎಲ್ಲಾ ಕಾರ್ಯಗಳು ದೇವವಿಧಿಗೆ ಅನುಗುಣವಾಗಿ ನಡೆಯುತ್ತದೆಂದು ಹೇಳುವ ಕುರ್ಆನ್ ವಚನಗಳು ಮತ್ತು ಮನುಷ್ಯನ ಕರ್ಮಗಳಿಗೆ ಅನುಗುಣವಾದ ಫಲ ಉಂಟಾಗುವುದೆಂದು ಸ್ಪಷ್ಟಪಡಿಸುವ ಹಲವಾರು ವಚನಗಳನ್ನು ಇಲ್ಲಿ ಉಲ್ಲೇಖಿಸಲಾಯಿತು. ವಿಧಿವಿಶ್ವಾಸದ ಕುರಿತು ಕುರ್ಆನ್ ವಚನದಲ್ಲಿರುವ ವಿರೋಧಾಭಾಸವನ್ನು ಇದು ಸ್ಪಷ್ಟಪಡಿಸುತ್ತದೆಯಲ್ಲವೇ? ವಿಧಿವಿಶ್ವಾಸಕ್ಕೆ ಸಂಬಂಧಿಸಿದ ಕುರ್ಆನ್ ವಚನಗಳಲ್ಲಿ ಸ್ವಲ್ಪವೂ ವಿರೋಧಾಭಾಸವಿಲ್ಲ. ಮಾತ್ರವಲ್ಲ ಅವುಗಳು ಪರಸ್ಪರ ವ್ಯಾಖ್ಯಾನಿಸಲು ವಿವರಿಸಲು ಪೂರಕವಾಗಿದೆ. ಒಂದು ಉದಾಹರಣೆಯ ಮೂಲಕ ಇದು ಸ್ಪಷ್ಟಪಡಿಸಬಹುದು. ಸುಂದರವಾಗಿ ನಿರ್ಮಿಸಿದ ಉನ್ನತ ದರ್ಜೆಯ, ಶಿಸ್ತುಬದ್ಧವಾಗಿ ನಡೆಸಲ್ಪಡುತ್ತಿರುವ ಒಂದು …
Read More »ವಿಧಿ ವಿಶ್ವಾಸ-ಭೌತಿಕವಾದಿಗಳು ಮತ್ತು ಇಸ್ಲಾಮ್
ದೇವನು ಸರ್ವಶಕ್ತ ಹಾಗೂ ಸರ್ವಜ್ಞನಾಗಿದ್ದಾನಲ್ಲವೇ? ಹೀಗಿರುವಾಗ ಲೋಕದ ಮನುಷ್ಯರು ಯಾವ ರೀತಿಯವರೆಂದೂ, ಹೇಗೆ ಬದುಕುವರೆಂದೂ ಸೃಷ್ಟಿಕರ್ತನಿಗೆ ಮೊದಲೇ ತಿಳಿದಿದೆ. ದಿವ್ಯಜ್ಞಾನದಲ್ಲಿ ತಪ್ಪು ಸಂಭವಿಸುವುದು ಅಸಾಧ್ಯವಾದುದರಿಂದ ದೇವನ ತೀರ್ಮಾನದಲ್ಲಿ ಸ್ವಲ್ಪವೂ ಬದಲಾವಣೆ ಸಾಧ್ಯವಿಲ್ಲವೆಂದು ಇದರ ಅರ್ಥವಲ್ಲವೇ? ದೇವವಿಧಿಗನುಗುಣವಾಗಿ ಮನುಷ್ಯ ಸಾಗಬೇಕಾದುದರಿಂದ ಮನುಷ್ಯನಿಗೆ ಸ್ವಾತಂತ್ರ್ಯ ಎಲ್ಲಿದೆ? ದೇವವಿಧಿಗೆ ನಿರ್ಬಂಧಿತನಾಗಿ ಆತ ಮಾಡುವ ಕರ್ಮಗಳ ಹೆಸರಿನಲ್ಲಿ ಶಿಕ್ಷೆ ನೀಡುವುದು ಎಷ್ಟು ಸರಿ? ಆಸ್ತಿಕರು ಹಾಗು ನಾಸ್ತಿಕರು ನಿರಂತರವಾಗಿ ಈ ವಿಷಯದಲ್ಲಿ ಸಂಶಯ ವ್ಯಕ್ತಪಡಿಸುತ್ತಲೇ ಇರುತ್ತಾರೆ. …
Read More »ನೀರಿನಲ್ಲಿ ಮುಳುಗಿದ್ದ ಹಳೆಯ ಐತಿಹಾಸಿಕ ಮಸೀದಿಯೊಂದು ಬಿಹಾರದಲ್ಲಿ ಪ್ರತ್ಯಕ್ಷ
ಬಿಹಾರದ ನವಾಡ ಜಿಲ್ಲೆಯಲ್ಲಿ ಬೆರಗುಗೊಳಿಸುವ ಅಂಶವೊಂದು ವರದಿಯಾಗಿದೆ. ದಶಕಗಳಿಂದ ಅಣೆಕಟ್ಟಿನ ನೀರಿನಲ್ಲಿ ಮುಳುಗಿದ್ದ ಹಳೆಯ ಐತಿಹಾಸಿಕ ಮಸೀದಿಯೊಂದು ನೀರು ಖಾಲಿಯಾದ ಬಳಿಕ ಪ್ರತ್ಯಕ್ಷವಾಗಿದೆ. ರಾಜೌಲಿ ಬ್ಲಾಕ್ನಲ್ಲಿರುವ ಪುಲ್ವಾರಿಯಾ ಅಣೆಕಟ್ಟಿನಲ್ಲಿ ದಶಕಗಳಿಂದ ನೀರಿನಲ್ಲಿ ಮುಳುಗಿದ್ದ ಹಳೆಯ ಮಸೀದಿಯೊಂದು ಈಗ ಸಂಪೂರ್ಣವಾಗಿ ಗೋಚರಿಸಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮದ ಮುಸ್ಲಿಮರು ಸೇರಿ ಆಸಕ್ತರು ತಂಡೋಪತಂಡಗಳಾಗಿ ಭೇಟಿ ನೀಡುತ್ತಿದ್ದಾರೆ. ದಶಕಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಮಸೀದಿ ಕಟ್ಟಡ ಸಂಪೂರ್ಣ ಸುರಕ್ಷಿತವಾಗಿದೆ. ನೆಲದಿಂದ …
Read More »ದೇವನು ಕಅಬಾದಲ್ಲಿದ್ದಾನೆಯೇ?
ಮುಸ್ಲಿಮ್ರು, ನಮಾಝ್ ನಿರ್ವಹಿಸುವಾಗ ಕಅಬಾದ ಕಡೆಗೆ ಮುಖ ಮಾಡಲು ಕಾರಣವೇನು? ದೇವನು ಕಅಬಾದಲ್ಲಿರುವನೇ? ಅಥವಾ ಕಅಬಾವು ದೇವನ ಪ್ರತೀಕವೇ? ಪ್ರತಿಷ್ಠಾಪನೆಯೇ ? ಇಸ್ಲಾಮಿ ದೃಷ್ಟಿಕೋನದಂತೆ ದೇವನು ಯಾವುದೋ ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ. ದೇವನಿಗೆ ಪ್ರತಿಮೆಗಳೂ ಪ್ರತಿಷ್ಠಾಪನೆಯೋ ಇಲ್ಲ. ”ಪೂರ್ವ ಪಶ್ಚಿಮಗಳೆಲ್ಲವೂ ಅಲ್ಲಾಹನವು. ನೀವೆತ್ತ ಮುಖ ಮಾಡಿದರೂ ಅಲ್ಲಿ ಅಲ್ಲಾಹನ ಮುಖವಿದೆ. ನಿಶ್ಚಯವಾಗಿಯೂ ಅಲ್ಲಾಹನು ಬಹುವಿಶಾಲನೂ ಅಭಿಜ್ಞನೂ ಆಗಿರುತ್ತಾನೆ.” (ಪವಿತ್ರ ಕುರ್ ಆನ್ 2:115) ‘ಭೂಮಿ-ಆಕಾಶಗಳ ಪ್ರತಿಯೊಂದು ವಸ್ತುವಿನ ಜ್ಞಾನವು ಅಲ್ಲಾಹನಿಗೆ …
Read More »ಪ್ರವಾದಿ ಮುಹಮ್ಮದ್ರನ್ನು(ಸ) ನೀವೆಷ್ಟು ತಿಳಿದುಕೊಂಡಿದ್ದೀರಿ?
ಏ.ಕೆ. ಕುಕ್ಕಿಲ ಎರಡು ಘಟನೆಗಳು ಇತ್ತೀಚೆಗೆ ರಾಜ್ಯದ ಗಂಗೊಳ್ಳಿಯಲ್ಲಿ ನಡೆದ ಸಭೆಯಲ್ಲಿ ಪ್ರವಾದಿ(ಸ)ರನ್ನು ನಿಂದಿಸಲಾಯಿತು. ಬಹುತೇಕ ಇದೇ ಸಮಯದಲ್ಲಿ ಕಾರು ಅಪಘಾತದಲ್ಲಿ ಓರ್ವ ಕಾರ್ಟೂನಿಸ್ಟ್ ರ ಸಾವು ಸಂಭವಿಸಿತು. ಕೆಲವು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಸಂಭ್ರಮದಿಂದ ಹಂಚಿಕೊಂಡರು. ಈ ಕಾರ್ಟೂನಿಸ್ಟ್ ರ ಹೆಸರು ಲರ್ಸ್ ವಿಲ್ಕ್ ಇವರು ಸ್ವೀಡನ್ನಿನವರು. ಪ್ರವಾದಿ ಮುಹಮ್ಮದ್ರನ್ನು(ಸ) ಇರಿಯುವ ಮತ್ತು ಅಪಮಾನಿಸುವ ರೀತಿಯಲ್ಲಿ ಇವರು ಕಾರ್ಟೂನ್ ಬಿಡಿಸಿದ್ದರು. ಅಂದಹಾಗೆ, ಇವೆರಡೂ ನಮ್ಮ ನಡುವೆ ನಡೆಯುತ್ತಿರುವ …
Read More »
IslamKannada News Portal