Home / editor (page 70)

editor

ಪ್ರಕೃತಿ ಸಂರಕ್ಷಣೆ ಇಸ್ಲಾಮೀ ಶಿಕ್ಷಣದ ಬೆಳಕಿನಲ್ಲಿ

ಪ್ರಕೃತಿಯ ಸಂರಕ್ಷಣೆ ಎಂಬುದು ಈ ಕಾಲದ ಅತಿದೊಡ್ಡ ಸವಾಲಾಗಿದೆ. ಬೆಳೆಯುತ್ತಿರುವ ಆಧುನಿಕತೆ ಇಂಡಸ್ಟ್ರಿಯಲ್ ಕೈಗಾರಿಕಾ ಕ್ರಾಂತಿ, ಆಧುನಿಕ ನಗರಗಳ ಬೆಳವಣಿಗೆ ಅಥವಾ urbanisation ನಿಂದ ಪ್ರಕೃತಿ ಸಂರಕ್ಷಣೆ ಇನ್ನಷ್ಟು ಸಂಕೀರ್ಣ ಆಗುತ್ತಿದೆ. ಇಸ್ಲಾಂ ಧರ್ಮ ಅಂದರೆ ಜಗತ್ತಿಗೆ ಬಂದ ಎಲ್ಲಾ ಪ್ರವಾದಿಗಳು ಪ್ರಕೃತಿ ಸ್ವಭಾವಕ್ಕೆ ಅನುಪಮ ಮಾದರಿಯಾಗಿದ್ದರು. ಅಲ್ಲಾಹನ ಪ್ರವಾದಿ ಮುಹಮ್ಮದ್ (ಸ) ರ ಒಂದು ಹದೀಸ್ ಬಹಳ ಪ್ರಭಾವ ಪೂರ್ಣವಾಗಿದೆ. “ನಾಳೆ ಕಿಯಾಮತ್ ಆಗುವುದಿದ್ದರೆ ಇಂದು ನಿನಗೆ ಸಾಧ್ಯವಾದರೆ …

Read More »

ದೇವನು ನ್ಯಾಯವಂತನೇ?

‘ದೇವನನ್ನು ನ್ಯಾಯಪಾಲಕನೆಂದು ಹೇಳಲಾಗುತ್ತದೆ. ಆದರೆ, ಮನುಷ್ಯರಲ್ಲಿ ಕೆಲವರು ಅಂಗವಿಕಲರೂ ಹಾಗೂ ಇನ್ನು ಕೆಲವರು ಮಂದ ಬುದ್ದಿಯವರೂ ಇದ್ದಾರೆ. ಇದು ದೇವನು ತನ್ನ ಸೃಷ್ಟಿಯೊಂದಿಗೆ ಮಾಡಿದ ದೊಡ್ಡ ಅನ್ಯಾಯವಲ್ಲವೇ? ಇದು ಬಹಳ ಪ್ರಸಕ್ತವೂ ನ್ಯಾಯಪೂರ್ಣವಾದ ಪ್ರಶ್ನೆಯಾಗಿದೆ. ಆದರೆ ಸ್ವಲ್ಪ ಆಳವಾಗಿ ಚಿಂತಿಸಿದರೆ ಇದು ಅಪ್ರಸ್ತುತವೆಂಬ ಅರಿವಾಗುತ್ತದೆ. ಈ ಪ್ರಶ್ನೆಯನ್ನೇ ಸ್ವಲ್ಪ ದೀರ್ಘಗೊಳಿಸುವುದಾದರೆ ನಮ್ಮಲ್ಲಿ ಹಲವಾರು ಸಂಶಯಗಳಿವೆ. ನನ್ನನ್ನು ಆರು ಅಡಿ ಉದ್ದದ ವ್ಯಕ್ತಿಯನ್ನಾಗಿ ಏಕ ಮಾಡಲಿಲ್ಲವೆಂದು ಗಿಡ್ಡ ವ್ಯಕ್ತಿಯು ಕೇಳಬಹುದು. ಕಪ್ಪು …

Read More »

ಇಸ್ಲಾಮ್ ಬಡ್ಡಿಯನ್ನು ನಿಷೇಧಿಸಿರುವುದೇಕೆ?

ಸಾಲ ಕೊಟ್ಟವನು ಸಾಲ ಪಡೆದವನಿಂದ ಒಂದು ನಿಶ್ಚಿತ ದರದಲ್ಲಿ ವಸೂಲು ಮಾಡುವ ಹೆಚ್ಚಿನ ಹಣಕ್ಕೆ ಬಡ್ಡಿ ಎನ್ನುತ್ತಾರೆ. ಇಸ್ಲಾಮ್ ಬಡ್ಡಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಪ್ರವಾದಿ ಮುಹಮ್ಮದ್‍ರವರ(ಸ) ಕಾಲದಲ್ಲಿ ಬಡ್ಡಿಯ ವ್ಯವಹಾರಗಳು ಈ ಕೆಳಗಿನ ರೂಪದಲ್ಲಿ ಜಾರಿಯಲ್ಲಿದ್ದವು. ಅರ್ಥ ವ್ಯಾಪ್ತಿ 1. ಒಂದು ವಸ್ತುವನ್ನು ಒಬ್ಬನು ಇನ್ನೊಬ್ಬನಿಗೆ ಸಾಲ ಕೊಡುತ್ತಿದ್ದ. ಸಾಲ ಮರುಪಾವತಿಗೆ ಒಂದು ಕಾಲಾವಧಿಯನ್ನು ನಿರ್ಣಯಿಸಲಾಗುತ್ತಿತ್ತು. ಆ ಕಾಲಾವಧಿಯಲ್ಲಿ ಸಾಲ ಮರುಪಾವತಿಯಾಗದಿದ್ದಾಗ ಅವನಿಗೆ ಮತ್ತಷ್ಟು ಅವಧಿಯನ್ನು ಕೊಟ್ಟು ಆ ವಸ್ತುವಿನ …

Read More »

ಕುರ್‍ಆನ್ ಬಯಸುವ ಮಾನವ – ನಿಷೇಧಗಳ ಕುರಿತು ದೈವಿಕ ನಿಯಮ

ಮೂಲ: ಅಬೂ ಯಹ್ಯಾ  ಟಿ ಅನುವಾದ: ಅಬೂ ಆಫಿಯಾ ಓ ಆದಮರ ಸಂತತಿಯವರೇ, ಉಪಾಸನೆಯ ಎಲ್ಲ ಸಂದರ್ಭಗಳಲ್ಲೂ ನಿಮ್ಮ ‘ಅಲಂಕಾರ’ಗಳಿಂದ ಭೂಷಿತರಾಗಿರಿ. ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ಮೀರಬೇಡಿರಿ. ಅಲ್ಲಾಹನು ಮಿತಿ ಮೀರುವವರ ನ್ನು ಮೆಚ್ಚುವುದಿಲ್ಲ. ಓ ಪೈಗಂಬರರೇ, ಅವರೊಡನೆ ಕೇಳಿರಿ, “ಅಲ್ಲಾಹನು ತನ್ನ ದಾಸರಿಗಾಗಿ, ಹೊರ ತೆಗೆದಿರುವ ವಸ್ತ್ರ ಭೂಷಣಗಳನ್ನೂ ಶುದ್ಧ ಆಹಾರ ಸಾಮಗ್ರಿಗಳನ್ನೂ ನಿಷಿದ್ಧಗೊಳಿಸಿದವನಾರು?” ಹೇಳಿರಿ, “ಇವೆಲ್ಲ  ವಸ್ತುಗಳೂ ಇಹಜೀವನದಲ್ಲೂ ಸತ್ಯವಿಶ್ವಾಸಿಗಳಿಗಾಗಿರುತ್ತವೆ ಮತ್ತು ಪುನರುತ್ಥಾನ ದಿನದಲ್ಲಂತೂ ಇವು …

Read More »

ಜೋಪಡಿಗೆ ಹೊಸ ರೂಪ ಕೊಟ್ಟ ಜಮಾಅತೆ ಇಸ್ಲಾಮೀ!

ಸಮಾಜ ಸೇವಾ ಘಟಕ, ಜಮಾ‌ಅತೆ‌ ಇಸ್ಲಾಮೀ ಹಿಂದ್‌ ಮಂಗಳೂರು ನಗರ ಶಾಖೆಯ ವತಿಯಿಂದ, ಕಸ್ಬಾಬೆಂಗರೆ ಎಂಬಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜೋಪಡಿಯಲ್ಲಿ ಬದುಕು ಸವೆಸುತ್ತಿದ್ದ, ಐದು ಮಕ್ಕಳಿರುವ ಬಡ ದಂಪತಿಗಳ ಕುಟುಂಬಕ್ಕೆ ದಾನಿಗಳ ನೆರವಿನಿಂದ ಅವಶ್ಯಕ ಸವಲತ್ತುಗಳುಳ್ಳ ಚೆಂದದ ಮನೆಯೊಂದನ್ನು ನಿರ್ಮಿಸಿ ಕೊಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ನಗರ ಶಾಖೆಯ ಸಮಾಜ ಸೇವಾ ಘಟಕದ ಸಂಚಾಲಕರಾದ ಜ| ಅಬ್ದುಲ್ ಗಫೂರ್‌ ಕುಳಾಯಿಯವರು ಮನೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮನೆಯ ಗಾತ್ರಕ್ಕಿಂತ …

Read More »

‘ನನ್ನ ಪ್ರೀತಿಯ ಧರ್ಮ’ ಕೃತಿ ಪರಿಚಯ

ತಮಿಳುನಾಡಿನ ಅಣ್ಣಾ ಡಿಎಂಕೆ ಪಕ್ಷದ ಶ್ರೀ ಅಡಿಯಾರ್ ಅವರು ಪತ್ರಿಕಾ ರಂಗ, ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿದಲ್ಲಿ ಅತ್ಯಂತ ಪ್ರಭಾವಿ ಮತ್ತು ವಿಶೇಷ ವ್ಯಕ್ತಿಯಾಗಿದ್ದವರು . ಬಾಲ್ಯದಿಂದಲೇ ಅವರಿಗೆ ಮುಸ್ಲಿಮರ ಜೊತೆ ಉತ್ತಮ ನಂಟಿತ್ತು. ಈ ಸ್ನೇಹ ಸಹವಾಸವೇ ಮುಂದೆ ಅವರಿಗೆ ಇಸ್ಲಾಮನ್ನು ಅರಿಯುವ ಸದವಕಾಶವನ್ನು ಒದಗಿಸಿತ್ತು. ತುರ್ತುಪರಿಸ್ಥಿತಿಯ ಸಂದರ್ಭ ಮೀಸಾ ಕಾಯ್ದೆಯನ್ವಯ ಬಂದಿಸಲ್ಪಟ್ಟಿದ್ದ ಶ್ರೀ ಅಡಿಯಾರ್ ಅವರಿಗೆ ಇಸ್ಲಾಮ್ ಧರ್ಮದ ಅಧ್ಯಯನ ನಡೆಸುವ ಸಂದರ್ಭವಕಾಶವು ಒದಗಿ ಬಂತು, ಒಂದೂವರೆ …

Read More »

ಹಿರಿಯ ಸಾಮಾಜಿಕ ಕಾರ್ಯಕರ್ತ, ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್ ನಿಧನ

ಹೊಸದಿಲ್ಲಿ ಸೆ.11: ಹಿರಿಯ ಸಾಮಾಜಿಕ ಕಾರ್ಯಕರ್ತ, ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್(80) ಅವರು ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ. Swamiji, Agniveshji a true ascetic wth Values of Truth, Non Discrimination Passed left us 6.55 p.m. todayBelieving in Non Violence, Human Rights …

Read More »

ದೇವ ಭಯ ಮತ್ತು ಚಾರಿತ್ರ್ಯ ನಿರ್ಮಾಣ

ಝಹೀರ್ ಲಲಿತ್‍ಪುರಿ ಚಾರಿತ್ರ್ಯವಿಲ್ಲದಿರುವುದು ಮಾನವ ಸಮಾಜದಲ್ಲಿ ಕಳಂಕವಾಗಿದೆ. ಮಾನವತೆಗೆ ಚಾರಿತ್ರ್ಯವಂತ ಜನರ ಆವಶ್ಯಕತೆಯಿದೆ. ಪ್ರಚಲಿತ ಸಮಾಜದಲ್ಲಿ ಹೆಚ್ಚಳವಾಗಿರುವ ಅನೈತಿಕತೆ, ಭ್ರಷ್ಟಾಚಾರ, ಅನಾಚಾರ, ದುರಾಚಾರ ಮತ್ತು ವ್ಯಭಿಚಾರ ಚಾರಿತ್ರ್ಯಹೀನತೆಯ ತತ್ವವಾಗಿದೆ. ಇದಕ್ಕೆ ಮೂಲ ಕಾರಣ ಮನುಷ್ಯರಲ್ಲಿ ದೇವಭಯದ ಕೊರತೆ ಇರುವುದು. ಇಂದು ಸಾಮಾನ್ಯ ನೆಲೆಯಲ್ಲಿ ಎಲ್ಲರಲ್ಲಿಯೂ ಅವರ ಯಾವುದೇ ತಪ್ಪುಗಳಿಗೆ ಶಿಕ್ಷೆ ನೀಡುವವರಿಲ್ಲ ಎಂಬ ಅಭಿಪ್ರಾಯ ದಟ್ಟವಾಗಿದೆ. ಇವರ ಈ ಅಂಧವಿಶ್ವಾಸವು ಅವರನ್ನು ತಮ್ಮ ಪಾಪಗಳಿಂದ ತಡೆಯದೆ ಅದನ್ನೆಸಗಲು ಉತ್ತೇಜನ ಸಿಕ್ಕಿರುವಂತೆ …

Read More »

ಇಸ್ಲಾಮ್‍ನಲ್ಲಿ ಅಹಿಂಸೆ

ಧರ್ಮದ ಹುಟ್ಟು ಮನುಷ್ಯನನ್ನು ಕೆಡುಕಿನಿಂದ ತಪ್ಪಿಸಿ ಒಳಿತಿನೆಡೆಗೆ ಕರೆತರುವುದಕ್ಕಾಗಿದೆ. ಅವನನ್ನು ಸಾತ್ವಿಕನಾಗಿ ಮಾಡುವುದಾಗಿದೆ. ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದಕ್ಕಾಗಿದೆ. ಆದ್ದರಿಂಧ ಈ ವಿಚಾರದಲ್ಲಿ ಸಕಲ ಧರ್ಮಗಳ ಮೂಲಭೂತ ಸಿದ್ಧಾಂತ ಹೆಚ್ಚು ಕಮ್ಮಿ ಒಂದೇ ತೆರನಾಗಿದೆ. ಯಾವುದೇ ಧರ್ಮ ಕಳ್ಳತನ ಮಾಡಲು, ಸುಳ್ಳು ಹೇಳಲು, ಇತರರನ್ನು ಅವಮಾನಿಸಲು, ಕಷ್ಟ ಕೊಡಲು, ಕೆಡುಕು ಮಾಡಲು, ಅತ್ಯಾಚಾರವೆಸಗಲು ಅನುಮತಿಸುವುದಿಲ್ಲ. ಪ್ರತಿಯೊಂದು ಧರ್ಮದಲ್ಲಿ ಪ್ರೀತಿ, ವಿಶ್ವಾಸ, ಅಹಿಂಸೆ, ದಯೆ, ಮಮತೆ, ಸ್ನೇಹ, ಒಳಿತು, ಸಹಾನುಭೂತಿ, ಸಹಕಾರ ಸದ್ವತ್ತಿ …

Read More »

ಲಿಬರಲಿಸಂನ ಜೀವನ ವ್ಯಾಖ್ಯಾನ ಮತ್ತು ಇಸ್ಲಾಮ್

@ ಅಫೀದ ಅಹ್ಮದ್ ಸಂತೋಷದಿಂದ ಜೀವನದ ಮಾಧುರ್ಯವನ್ನು ಆಸ್ವಾಧಿಸುವವರು ಯಾರಿದ್ದಾರೆ? ಜೀವನದ ಪ್ರತೀ ನಿಮಿಷವನ್ನೂ ನನಗಾಗಿ ಸೃಷ್ಟಿಕರ್ತನು ನೀಡಿರುವನು ಎಂಬ ಭರವಸೆಯುಳ್ಳವನು? ಸೃಷ್ಟಿಕರ್ತನ ವಿಧಿ ಬರಹ ಮಾತ್ರ ಜೀವನದಲ್ಲಿ ನಡೆಯುವುದು ಎಂದು ಭಾವಿಸಿ ಜಗದೇಕ ಸೃಷ್ಟಿಕರ್ತನನ್ನು ಮನಸಾರೆ ಪ್ರೀತಿಸಿದವನು? ಈ ಭರವಸೆಯೇ ಜೀವನದ ಸೌಂದರ್ಯವಾಗಿದೆ. ಇತಿಹಾಸದಲ್ಲಿ ಇಂತಹ ಭರವಸೆಯ ಜೀವನದ ವ್ಯಕ್ತಿಯೋರ್ವರಿದ್ದಾರೆ. ತಂದೆಯನ್ನು ಕಾಣದ, ಬಾಲ್ಯದಲ್ಲಿಯೇ ತಾಯಿಯನ್ನು ಕಳಕೊಂಡ, ಒಡಹುಟ್ಟಿದವರ ವಾತ್ಸಲ್ಯ ದೊರೆಯದ, ಪ್ರೀತಿ ಪಾತ್ರ ಪತ್ನಿಯು ಅಕಾಲ ಮರಣಗೊಂಡಾಗಲೂ ಪ್ರವಾದಿ ಮುಹಮ್ಮದ್(ಸ) ಈ …

Read More »