Home / editor (page 68)

editor

ವೃದ್ಧಾಪ್ಯ ‌ಎಂಬ ದುರ್ಬಲ ಅವಸ್ಥೆ

ವೃದ್ಧಾಪ್ಯ‌ ಎಂಬುದು ಬಹಳ ದುರ್ಬಲ ಅವಸ್ಥೆ. ಇತ್ತೀಚೆಗೆ ಒಂದು ವೃದ್ಧಾಶ್ಮಕ್ಕೆ ಭೇಟಿ ನೀಡಿದಾಗ ಅಸಹಾಯಕತೆ ಕಂಡು ಕಣ್ಣು ಮಂಜಾಗಿತ್ತು. ಮನುಷ್ಯ ಬಹಳ ದುರ್ಬಲ ಎಂದು ತಿಳಿಯಲು ಅದುವೇ ಸಾಕು. ಪುಟ್ಟ ಮಗು ದುರ್ಬಲ. ಆದರೆ ಅದಕ್ಕೆ ಆರೈಕೆ ಮಾಡಲು ತಾಯಿ, ತಂದೆ ಇರುತ್ತದೆ. ಅದರ ಮಲಮೂತ್ರ ತೆಗೆಯಲು ಯಾವುದೇ ಕಷ್ಟ ಇಲ್ಲ…ಆದರೆ ವೃದ್ಧಾಪ್ಯದಲ್ಲಿ ಅದು ಬಹಳ ಕಷ್ಟ… ಆದ್ದರಿಂದಲೇ ಕುರಾನ್ ಹೇಳಿತು, ಅಧ್ಯಾಯ 17: ಬನೀ ಇಸ್ರಾಈಲ್ ಸೂಕ್ತ : …

Read More »

ಇನ್ನು ಮಾನವೀಯತೆಗಾಗಿ ದೇವನ ಮಾರ್ಗದಲ್ಲಿ ಜೀವಿಸುವೆ: ನಟನೆಗೆ ಅಂತ್ಯ ಹಾಡಿದ ಬಾಲಿವುಡ್ ನಟಿ ಸನಾ ಖಾನ್

ಹೊಸದಿಲ್ಲಿ,ಅ.9: ನಟನೆ, ಮಾಡೆಲಿಂಗ್ ನಿಲ್ಲಿಸಿದ್ದೇನೆ. ಇನ್ನು ದೇವನ ದಾರಿಯಲ್ಲಿ ಜೀವಿಸಬೇಕಾಗಿದೆ ಎಂದು ಬಾಲಿವುಡ್ ನಟಿ ಸನಾ ಖಾನ್ ಘೊಷಿಸಿದ್ದಾರೆ. ಬಿಗ್‍ಬಾಸ್‍ನ ಮಾಜಿ ಸ್ಪರ್ಧಿ ತನ್ನ ಮನಃಪರಿವರ್ತನೆಯನ್ನು ಇನ್‌ಸ್ಟಾಗ್ರಾಮ್‍ನಲ್ಲಿ ತಿಳಿಸಿದ್ದಾರೆ. ಮಾನವೀಯತೆಗಾಗಿ, ಸೃಷ್ಟಿಕರ್ತನ ಆದೇಶಗಳನ್ನು ಅನುಸರಿಸಿ ತನ್ನ ಹೊಸ ಜೀವನ ಇರಲಿದೆ ಎಂದು ಸನಾ ಹೇಳಿದರು. ಮನರಂಜನೆ ಉದ್ಯಮ ತನಗೆ ಸಂಪತ್ತು, ಜನಪ್ರಿಯತೆಯನ್ನು ಒದಗಿಸಿಕೊಟ್ಟಿದ್ದರೂ ಅದರಾಚೆಗೆ ಮನುಷ್ಯ ಭೂಮಿಗೆ ಬಂದುದರ ನಿಜವಾದ ಕಾರಣವನ್ನು ಅರ್ಥಮಾಡಿಕೊಂಡು ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ನಟಿ …

Read More »

ಆಕ್ಷೇಪಗಳ ವಾಸ್ತವಿಕತೆ

ಪವಿತ್ರ ಕುರ್‌ಆನ್ ಅಥವಾ ಇಸ್ಲಾಮಿನ ಯಾವುದೇ ವಿಷಯವು ಯಾರಿಗಾದರೂ ಅರ್ಥವಾಗದಿದ್ದರೆ ಮತ್ತು ಅರ್ಥ ಮಾಡಿಕೊಳ್ಳುವ ಸಲುವಾಗಿ ಯಾರಾದರೂ ಆ ಬಗ್ಗೆ ಪ್ರಶ್ನೆ ಅಥವಾ ಆಕ್ಷೇಪವೆತ್ತಿದರೆ, ಅದರಿಂದೇನೂ ತೊಂದರೆಯಿಲ್ಲ. ಆದರೆ ಸಾಮಾನ್ಯವಾಗಿ ಪವಿತ್ರ ಕುರ್‌ಆನಿನ ಮೇಲಾಗುತ್ತಿರುವ ಆಕ್ಷೇಪಗಳು ವಸ್ತುತಃ ಆಕ್ಷೇಪಕರ ಅಧ್ಯಯನ ಅಥವಾ ಸಂಶೋಧನೆಯ ಪರಿಣಾಮವಾಗಿರುವುದಿಲ್ಲ. ಬದಲಾಗಿ, ಇಸ್ಲಾಮ್ ಮತ್ತು ಮುಸ್ಲಿಮರನ್ನು ಅವಮಾನಿಸಲು ಕುರ್‌ಆನಿನ ವಚನಗಳನ್ನು ಮನ ಬಂದಂತ ವ್ಯಾಖ್ಯಾನಿಸಲಾಗುತ್ತದೆ ಮತ್ತು ಕೆಲವೆಡೆಯಂತೂ ಅನುವಾದವನ್ನೇ ತಪ್ಪಾಗಿ ನೀಡಲಾಗುತ್ತದೆ. ವಚನಗಳನ್ನು ಅವುಗಳ ಹಿನ್ನೆಲೆ, …

Read More »

ಪುಣ್ಯ ಕರ್ಮಗಳನ್ನು ತಾತ್ಸಾರವಾಗಿ ಕಾಣದಿರಿ

@ ಪಿ.ಎಂ.ಎಂ. ಗಫೂರ್ ನಮ್ಮದು ಕ್ಷಣಿಕ ಕಾಲದಲ್ಲಿ ಮುಗಿಯುವಂತಹ ಜೀವನವಾಗಿದೆ. ಯಾವಾಗ ಹೇಗೆ ಎಂಬ ಬಗ್ಗೆ, ನಮ್ಮ ಮರಳುವಿಕೆ ಹೇಗೆ ಎಂಬ ಬಗ್ಗೆ ಖಾತ್ರಿಯಿರದಿದ್ದರೂ ಖಂಡಿತವಾಗಿಯೂ ಒಮ್ಮೆ  ಹೋಗಲೇಬೇಕು. ಎಲ್ಲಾ ಸಂತೋಷಗಳಿಗೆ ವಿದಾಯ ಹೇಳಿ ಸುಖಲೋಲುಪತೆಯನ್ನು ತೊರೆದು ಎಲ್ಲ ನಿಕಟ ಸಂಬಂಧಗಳನ್ನು ಕಡಿದು ಕೊಂಡು ನಾವು ಹೋಗಲೇಬೇಕು. ಇಷ್ಟು  ಕ್ಷಣಿಕವಾದ ಜೀವನದಲ್ಲಿ ನಮ್ಮ ಮುಂದೆ ಸಣ್ಣ ಸಮಯ ಮಾತ್ರ ಇರುವುದು ಸೆಕೆಂಡುಗಳು… ನಿಮಿಷಗಳು… ಉತ್ತಮ ಕಾರ್ಯಗಳನ್ನು ಮಾತ್ರ ಮಾಡಿರಿ. ಮಾಡುವ …

Read More »

ದೊಡ್ಡ ಹಕ್ಕಿಯ ಯೋಚನೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ತೀವ್ರ ಬಿರುಗಾಳಿ ಬೀಸಿದಾಗ ದುರ್ಬಲ ರೆಕ್ಕೆಯ ಸಣ್ಣ ಹಕ್ಕಿಗಳು ಆ ಬಿರುಗಾಳಿಗೆ ಸಿಲುಕುತ್ತವೆ. ಆದರೆ ದೊಡ್ಡ ಹಕ್ಕಿಗಳು ತಮ್ಮ ಬಲವಾದ ರೆಕ್ಕೆಗಳಿಂದ ಮೇಲೆ ಮೇಲೆ ಹಾರಿ ಅಪಾಯದಿಂದ ಪಾರಾಗುತ್ತವೆ. ಈ ಘಟನೆಯ ಬೆಳಕಿನಲ್ಲಿ ಆಂಗ್ಲ ಭಾಷೆಯಲ್ಲಿ ಒಂದು ಉಪಮೆ ಹುಟ್ಟಿಕೊಂಡಿದೆ. The big bird of the Storm(ಬಿರುಗಾಳಿಯ ದೊಡ್ಡ ಹಕ್ಕಿ). ಕಠಿಣ ಪರಿಸ್ಥಿತಿಯ ಸುಳಿಯನ್ನು ಗೆದ್ದು ಹೊರಬರುವಲ್ಲಿ ಯಶಸ್ವಿಯಾದವರಿಗೆ ಈ ಉಪಮೆಯನ್ನು …

Read More »

ಯಾರೂ ಕೆಡವದ ಮಸೀದಿ?

ಪ್ರಮೋದ್ ಪಿ. (ಲೇಖಕರು, ಸುಪ್ರೀಂ ಕೋರ್ಟಿನ ವಕೀಲರು) ಬಾಬರಿ ಮಸೀದಿ ಕೆಡವಿದ್ದರಲ್ಲಿ ಕ್ರಿಮಿನಲ್ ಸಂಚು ಇಲ್ಲ, ಅದಕ್ಕೆ ಸಾಕ್ಷಿಗಳು ಕೂಡ ಇಲ್ಲ ಎಂದು  ಕೋರ್ಟು ಆ ಪ್ರಕರಣದ ಎಲ್ಲ ಆರೋಪಿಗಳನ್ನು ಆರೋಪ ಮುಕ್ತಗೊಳಿಸಿದೆ. ಅದೊಂದು ಅಪರಾಧಿ ಕೃತ್ಯವಾಗಿ ಕಾನೂನು ವ್ಯವಸ್ಥೆ ಮತ್ತು ಸರಕಾರ ಪರಿಗಣಿಸಿಲ್ಲ. ಇಷ್ಟು ಸಹಜವಾದುದು ಆಗಿ  ಭಾರತದ ಪೌರ-ರಾಜಕೀಯ ಸಮೂಹದಲ್ಲಿ ರಾಜಕೀಯ ಮತ್ತು ಸಿದ್ಧಾಂತ ಬದಲಾಗಿ ಬಿಟ್ಟಿದೆ. 1992 ಡಿಸೆಂಬರ್ 6ಕ್ಕೆ ಬಾಬರಿ ಮಸೀದಿ ಕೆಡವಲ್ಪಟ್ಟಾಗ ಅದರೆಡೆಗೆ …

Read More »

ಹಲೋ ದೇವನೆಲ್ಲಿದ್ದಾನೆ?

@ ಟಿ.ಎಂ.ವಿ. ಪ್ರತಿಯೊಂದು ಪ್ರಕೃತಿ ದುರಂತಗಳು ಸಂಭವಿಸುವಾಗಲೂ `ಹಲೋ, ದೇವನೆಲ್ಲಿದ್ದಾನೆ?’ ಎಂದು ನಾಸ್ತಿಕವಾದಿಗಳು ಕೇಳುವುದಿದೆ. ಇಲ್ಲದಿದ್ದರೆ ನೀವು ಹೇಳುವಂತಹ ಈ ದೇವ ಎಷ್ಟೊಂದು ಕ್ರೂರಿ ಎಂಬ ರೀತಿಯ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಕೋವಿಡ್- 19 ಆಗಮನದಿಂದ ಆರಾಧನಾಲಯಗಳು ಮುಚ್ಚಲ್ಪಟ್ಟಾಗ ದೇವನು ಪರಾಜಯಗೊಂಡ ಎಂದು ಒಪ್ಪಿಕೊಂಡು ವಿಜ್ಞಾನದ ವಿಜಯ ಪತಾಕೆ ಹಾರಿಸಲ್ಪಟ್ಟಿತು ಎಂದೂ ನಾಸ್ತಿಕವಾದಿಗಳು ಹೇಳುತ್ತಾರೆ. ಪ್ರಕೃತಿಯನ್ನು ವಿಶ್ವಾಸಿಗಳು ದೇವನೆಂದು ಬದಲಾಯಿಸಿ ಕರೆಯುತ್ತಾರೆ ಎಂಬ ವಿಚಾರಗಳಿಂದ ಈ ರೀತಿಯ ವಾದವು ಉಂಟಾಗುತ್ತದೆ. ಪ್ರಕೃತಿಯಲ್ಲಿ …

Read More »

ಸಿರಿವಂತಿಕೆ

-ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಜಗದ್ವಿಖ್ಯಾತ ಉದ್ಯಮಿಯಾದ ಅರಿಸ್ಟಾಟಲ್ ಓನಾಸೀಸ್‍ನ ಏಕೈಕ ಪುತ್ರಿ ಕ್ರಿಸ್ಟೀನಾ. ತಂದೆ ಮತ್ತು ಸೋದರ ಅಲೆಕ್ಸಾಂಡರ್ ತೀರಿಕೊಂಡ ಬಳಿಕ ಆಕೆ ಶತಕೋಟಿ ಡಾಲರ್‍ ಗೆ ಏಕೈಕ ವಾರಸುದಾರಳಾದಳು. ಆಕೆ ನಾಲ್ಕು ಸಲ ವಿವಾಹವಾದಳು. ಎಲ್ಲವೂ ವಿಚ್ಛೇದನದಲ್ಲಿ ಕೊನೆಗೊಂಡವು. ತಿಯರಿ ರೂಸಲ್‍ನ ದಾಂಪತ್ಯದಲ್ಲಿ ಏಕೈಕ ಪುತ್ರ ಅಧೀನ ಜನಿಸಿದನು. ಅಂದು ಆಕೆ ತನ್ನ ಗರ್ಭ ರಕ್ಷಣೆಗೆ 17ಲಕ್ಷ ವ್ಯಯಿಸಿದ್ದಳು. ಆದರೂ ಮಗು ಹುಟ್ಟಿದಾಗಲೇ ಕಾಮಾಲೆ ರೋಗ ಪೀಡಿತವಾಗಿತ್ತು. ಅಗಾಧ …

Read More »

ಕುಫ್ರ್, ಕಾಫಿರ್ ಮತ್ತು ಜಿಹಾದ್

ಇವು ಅತ್ಯಧಿಕ ಅಪಾರ್ಥಕ್ಕೆ ಗುರಿಯಾದ ಪದಗಳಾಗಿವೆ. ಕಾಫಿರ್ ಎಂಬ ಪದವು ಕುಫ್ರ್ ಎಂಬ ಮೂಲ ಪದದಿಂದ ಹುಟ್ಟಿದೆ. ‘ಕುಫ್ರ್’ ಎಂಬ ಪದಕ್ಕೆ ಅನೇಕ ಅರ್ಥಗಳಿವೆ. ನಿಘಂಟಿನ ಪ್ರಕಾರ ಆ ಅರಬಿ ಪದದ ಅರ್ಥ ‘ಬಚ್ಚಿಡುವುದು’ ಎಂದಾಗಿದೆ. ರಾತ್ರಿಯನ್ನು ‘ಕಾಫಿರ್’ ಎನ್ನುತ್ತಾರೆ. ಏಕೆಂದರೆ ಅದು ಎಲ್ಲವನ್ನೂ ಮರೆಸುತ್ತದೆ. ದಟ್ಟ ಮೋಡವನ್ನೂ ‘ಕಾಫಿರ್’ ಎನ್ನಲಾಗುತ್ತದೆ. ರೈತನು ಬೀಜವನ್ನು ನೆಲದಲ್ಲಿ ಬಚ್ಚಿಡುವುದರಿಂದ ಅವನನ್ನು ‘ಕಾಫಿರ್’ ಎನ್ನಲಾಗುತ್ತದೆ. ‘ಕುಫ್ರ್’ನ ಇನ್ನೊಂದು ಅರ್ಥ ಕೃತಘ್ನತೆಯಾಗಿದೆ. ಏಕೆಂದರೆ ಕೃತಘ್ನನಾದವನು …

Read More »

ಇಸ್ಲಾಮ್ ಮತ್ತು ಪರೋಕ್ಷ ಜ್ಞಾನ

ಲೋಕದಲ್ಲಿ ಯಾರಿಗೂ ತಮ್ಮ ಭಾವೀ ಜೀವನದ ಕುರಿತು ಜ್ಞಾನವಿಲ್ಲವೆಂದು ಪೀಠಿಕೆಯಲ್ಲಿ ತಿಳಿಸಿದ್ದೀರಿ. ಆದರೆ ಜನನ ವೇಳೆಯ ನಕ್ಷತ್ರಗಳ ಆಧಾರದಲ್ಲಿ ಜಾತಕ ಫಲಗಳು ಹೇಳಲಾಗುತ್ತದೆ. ಪ್ರಮುಖ ಜ್ಯೋತಿಷಿಗಳ ಜಾತಕಗಳು ಹಲವೊಮ್ಮೆ ಸತ್ಯವಾಗುತ್ತದೆ. ಇದರ ಕುರಿತು ನೀವೇನು ಹೇಳುವಿರಿ? ನಮ್ಮ ಜನ್ಮ ದಿನಾಂಕ, ವೇಳೆ, ರಾಶಿ ಹಾಗೂ ನಕ್ಷತ್ರಗಳ ಆಧಾರದಲ್ಲಿ ಭವಿಷ್ಯದ ವಿವರಗಳನ್ನು ತಿಳಿಯಬಹುದೆಂಬ ಭಾವನೆ ನಮ್ಮ ಸಮಾಜದಲ್ಲಿದೆ. ನಮ್ಮಲ್ಲಿ ದಿನಂಪ್ರತಿ ಸಾವಿರಾರು ಸಂಖ್ಯೆಗಳಲ್ಲಿ ಮಾರಾಟವಾಗುವ ಹಲವು ಪತ್ರಿಕೆಗಳು ಈ ವಾರ ನಮಗೇನು …

Read More »