Home / ಲೇಖನಗಳು / ವೃದ್ಧಾಪ್ಯ ‌ಎಂಬ ದುರ್ಬಲ ಅವಸ್ಥೆ

ವೃದ್ಧಾಪ್ಯ ‌ಎಂಬ ದುರ್ಬಲ ಅವಸ್ಥೆ

ವೃದ್ಧಾಪ್ಯ‌ ಎಂಬುದು ಬಹಳ ದುರ್ಬಲ ಅವಸ್ಥೆ. ಇತ್ತೀಚೆಗೆ ಒಂದು ವೃದ್ಧಾಶ್ಮಕ್ಕೆ ಭೇಟಿ ನೀಡಿದಾಗ ಅಸಹಾಯಕತೆ ಕಂಡು ಕಣ್ಣು ಮಂಜಾಗಿತ್ತು. ಮನುಷ್ಯ ಬಹಳ ದುರ್ಬಲ ಎಂದು ತಿಳಿಯಲು ಅದುವೇ ಸಾಕು. ಪುಟ್ಟ ಮಗು ದುರ್ಬಲ. ಆದರೆ ಅದಕ್ಕೆ ಆರೈಕೆ ಮಾಡಲು ತಾಯಿ, ತಂದೆ ಇರುತ್ತದೆ. ಅದರ ಮಲಮೂತ್ರ ತೆಗೆಯಲು ಯಾವುದೇ ಕಷ್ಟ ಇಲ್ಲ…ಆದರೆ ವೃದ್ಧಾಪ್ಯದಲ್ಲಿ ಅದು ಬಹಳ ಕಷ್ಟ…
ಆದ್ದರಿಂದಲೇ ಕುರಾನ್ ಹೇಳಿತು,
ಅಧ್ಯಾಯ 17: ಬನೀ ಇಸ್ರಾಈಲ್
ಸೂಕ್ತ : 23
وَقَضَىٰ رَبُّكَ أَلَّا تَعْبُدُوا إِلَّا إِيَّاهُ وَبِالْوَالِدَيْنِ إِحْسَانًا ۚ إِمَّا يَبْلُغَنَّ عِنْدَكَ الْكِبَرَ أَحَدُهُمَا أَوْ كِلَاهُمَا فَلَا تَقُلْ لَهُمَا أُفٍّ وَلَا تَنْهَرْهُمَا وَقُلْ لَهُمَا قَوْلًا كَرِيمًا
ನಿಮ್ಮ ಪ್ರಭು (ಹೀಗೆ) ಆಜ್ಞೆ ಕೊಟ್ಟಿರುವನು; ನೀವು ಕೇವಲ ಅವನೊಬ್ಬನ ಹೊರತು ಇನ್ನಾರ ದಾಸ್ಯ-ಆರಾಧನೆಯನ್ನೂ ಮಾಡಬಾರದು. ಮಾತಾಪಿತರೊಡನೆ ಅತ್ಯುತ್ತಮವಾಗಿ ಸೌಜನ್ಯದಿಂದ ವರ್ತಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ, ಅವರ ಮುಂದೆ “ಛೆ” ಎನ್ನದಿರಿ ಮತ್ತು ಅವರನ್ನು ಜರೆಯಬೇಡಿರಿ. ಅವರೊಂದಿಗೆ ಗೌರವ ಪೂರ್ವಕವಾಗಿ ಮಾತನಾಡಿರಿ.(ಕುರಾನ್)
ಹೀಗೆ ಹಲವು ಕಡೆಗಳಲ್ಲಿ ಆಜ್ಞೆ ಕೊಡಲಾಗಿದೆ. ಮನುಷ್ಯ ನ ಪಾದ ಅತ್ಯಂತ ಕೆಳಗೆ ಇರುತ್ತದೆ… ತಾಯಿಯ ಪಾದದ ಅಡಿಯಲ್ಲಿ ಸ್ವರ್ಗ ಇದೆ ಎಂದು ಪ್ರವಾದಿ (ಸ) ಹೇಳಿದರು. ಅಂದರೆ ತಾಯಿಯ ಹೃದಯಕ್ಕೆ ಎಷ್ಟೊಂದು ಸ್ಥಾನ ಇರಬಹುದು…
ವೃದ್ಧಾಶ್ರಮದ ಮ್ಯಾನೇಜರ್ ಹೇಳಿದರು, ನಿಮ್ಮಲ್ಲಿ ಎಷ್ಟೇ ಬಡವರಾದರೂ ಶ್ರೀಮಂತರಾದರೂ ಹೆತ್ತವರನ್ನು ಸಾಕುತ್ತಾರೆ. ವೃದ್ಧಾಶ್ರಮಕ್ಕೆ ಹಾಕುವುದೇ ಇಲ್ಲ..ಎಲ್ಲೋ ಸಾವಿರದಲ್ಲಿ ಒಂದೆರಡು ಕೇಸು ಸಿಗುತ್ತದೆ ಅಂದರು (ನಿಜ ಅಂಕಿ ಅಂಶ ತಿಳಿದಿಲ್ಲ). ಆದರೂ ಹೆತ್ತವರಿಗೆ ಎಲ್ಲಾ ಧರ್ಮದಲ್ಲಿ ಬಹಳ ಮಹತ್ವ ಕೊಡಲಾಗಿದೆ.
ಇಂತಹ ಮೌಲ್ಯಗಳೇ ಧರ್ಮ ಆಗಿದೆ. ಕುಟುಂಬ ಎಂಬುದು ಧಾರ್ಮಿಕ ಸಂಸ್ಥೆ ಎಂದರೆ ಇದೇ ಮೌಲ್ಯ ಆಗಿದೆ. ದುರ್ಬಲ ಮನುಷ್ಯನಿಗೆ ಈ ಮೌಲ್ಯಗಳೇ ಆಸರೆ. ಮೌಲ್ಯಗಳಿಲ್ಲದ ಆರಾಧನೆ, ಭಕ್ತಿ ಎಲ್ಲವೂ ಶೂನ್ಯ.. ಅದು ಈ ಮೌಲ್ಯಗಳನ್ನು ನೆನಪಿಸುವ ದಾರಿ ಮಾತ್ರ…
– ಅಬೂಕುತುಬ್
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …