Home / ಲೇಖನಗಳು

ಲೇಖನಗಳು

ಮುಸ್ಲಿಮ್ ಜನಸಂಖ್ಯೆ: ಪ್ರಧಾನಿಯ ಹೇಳಿಕೆ ಮತ್ತು ವಾಸ್ತವ

✍️ ಏ.ಕೆ. ಕುಕ್ಕಿಲ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜಸ್ತಾನದ ಚುನಾವಣಾ ಭಾಷಣದಲ್ಲಿ ಅವರು ಹೇಳಿರುವ ಈ ಮಾತು ನಿಜವೇ? ಸರ್ಕಾರವೇ ಒದಗಿಸಿರುವ ಮಾಹಿತಿಗಳು ಏನನ್ನುತ್ತವೆ? ಈ ಅಭಿಪ್ರಾಯವನ್ನು ವಿಶ್ಲೇಷಣೆಗೆ ಒಳಪಡಿಸುವುದಕ್ಕಿಂತ ಮೊದಲು, ಈ ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾದಲ್ಲಿ 2021 ಅಕ್ಟೋಬರ್ 16ರಂದು ಪ್ರಕಟವಾದ ಬರಹವನ್ನು ಓದುವುದು ಉತ್ತಮ. ಅಂಕಿ-ಅಂಶಗಳ ಆಧಾರಿತವಾಗಿ ಬರೆಯಲಾದ ಆ ಬರಹದ …

Read More »

ಮಗಳು ಫಾತಿಮಾರ(ರ) ಬಗ್ಗೆ ಪ್ರವಾದಿಯ(ಸ) ನಿಲುವು ಮತ್ತು ವರ್ತಮಾನ

✍️ ಇಲ್ಯಾಸ್ ಮೌಲವಿ ಪ್ರವಾದಿ ಮುಹಮ್ಮದ್(ಸ) ಮತ್ತು ಖದೀಜಾ ದಂಪತಿಗಳ ಪುತ್ರಿ ಫಾತಿಮಾ(ರ) ಇತಿಹಾಸದ ಪ್ರಮುಖ ಮಾದರೀ ಮಹಿಳೆಯಾಗಿದ್ದಾರೆ. ಪ್ರವಾದಿವರ್ಯರಿಂದ(ಸ) ತರಬೇತಿಯ ಅನುಗ್ರಹ ಪಡೆದ ಮಾದರೀ ಮಹಿಳೆ. ಇಸ್ಲಾಮನ್ನು ಅಪ್ಪಿ ಹಿಡಿದ ಶ್ರೇಷ್ಟ ಮಾತೆ ಖದೀಜಾ(ರ)ರ ಮಾದರೀ ಪುತ್ರಿ. ತನ್ನ ಮಾತೆಯಿಂದ ಶೈಶವಾವಸ್ಥೆಯಿಂದ ಹಿಡಿದು ಬಾಲ್ಯ ಎಲ್ಲವನ್ನೂ ಅನುಭವಿಸಿದರು. ಅದರ ಪ್ರತೀ ನಾಡಿ ಮಿಡಿತವನ್ನು ಆವಾಹಿಸಿಕೊಂಡ ಮಹಿಳೆ. ಮಾತೆಯ ಮರಣದ ಬಳಿಕ ಹಲವು ಕಹಿ ಅನುಭವಗಳಿಗೆ ಗುರಿಯಾಗಬೇಕಾಯಿತು. ತಂದೆಯಾದ ಪ್ರವಾದಿವರ್ಯರು(ಸ) …

Read More »

ವಿವಾಹ ವಿಚ್ಛೇದನಕ್ಕೂ ಇಸ್ಲಾಮ್ ಗೌರವ ನೀಡಿದೆ

✍️ ಪಿ. ರುಕ್ಸಾನಾ ಮಗಳೇ, “ಆತ ತಲಾಕ್ ಹೇಳಿದನಲ್ಲವೇ? ಆಕೆ ಈಗ ಎಲ್ಲಿದ್ದಾಳೆ?” ಈ ಪ್ರಶ್ನೆಗೆ ಆಕೆಯ ಎಂದಿನ ಸಾಮಾನ್ಯ ಉತ್ತರ ಹೀಗಿತ್ತು. “ಆಕೆ ತನ್ನ ಮನೆಯಲ್ಲಿದ್ದಾಳೆ. ಆತ ತನ್ನ ಮನೆಯಲ್ಲಿದ್ದಾನೆ.” ವಿವಾಹವೆಂಬ ದೃಢವಾದ ಬಿಡಿಸಲಾಗದ ಬಂಧವೆಂಬಂತೆ ವಿವಾಹ ವಿಚ್ಚೇದನಕ್ಕೂ ಇಸ್ಲಾಮ್ ಬಹಳ ಗೌರವ ನೀಡಿದೆ. ತಲಾಕ್ ಹೇಳಲ್ಪಟ್ಟ ಮಹಿಳೆಯನ್ನು ಮನೆಯಿಂದ ಹೊರ ಹಾಕಬಾರದು ಅಥವಾ ಆಕೆಯೇ ಸ್ವತಃ ಹೊರ ಹೋಗದೆ ಸಂಗಾತಿಯ ಜೊತೆ ಇರಬೇಕು. ಇದು ಇಸ್ಲಾಮ್ `ಇದ್ದತ್’ …

Read More »

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ ವಿಧಿಗಳನ್ನು ಫತ್ವಾ ಎನ್ನಲಾಗುತ್ತದೆ. ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿ ಸ್ಪಷ್ಟವಾದ ಉತ್ತರ ಅಥವಾ ಅಭಿಪ್ರಾಯ ಇಲ್ಲದಿರುವ ಸಂದರ್ಭದಲ್ಲಿ ಫತ್ವಾಗಳ ಅನಿವಾರ್ಯತೆ ಎದುರಾಗುತ್ತದೆ. ಫತ್ವಾವನ್ನು ನೀಡುವುದು’ಎಂಬುದು ಬಹಳ ಜವಾಬ್ದಾರಿಯುತವಾಗಿ ಮಾಡಬೇಕಾದ ಗೌರವಾರ್ಹವಾದ ಕರ್ತವ್ಯವೆಂದು ಮುಸ್ಲಿಮ್ ಜಗತ್ತು ಪರಿಗಣಿಸುತ್ತದೆ. ಪಾಶಾತ್ಯ ಜಗತ್ತು ‘ಫತ್ವಾ’ ಎಂಬ ಪದವನ್ನು ಮಾಧ್ಯಮಗಳಲ್ಲಿ ಉಪಯೋಗಿಸಲಾರಂಭಿಸಿದ್ದು ಮತ್ತು …

Read More »

ಶುಚಿತ್ವಕ್ಕೆ ಇಸ್ಲಾಮ್ ಕೊಡುವ ಮಹತ್ವ ಏನು?

✍️ ಖಾಲಿದ್ ಮೂಸಾ ನದ್ವಿ ಮಾನಸಿಕ ಶುಚಿತ್ವಕ್ಕೆ ಮಹತ್ವ ನೀಡುವ ಇಸ್ಲಾಮ್ ದೈಹಿಕ ಶುಚಿತ್ವಕ್ಕೂ ಮಹತ್ವ ನೀಡುತ್ತದೆ. ದೇಹ, ಉಡುಪು, ವಾಹನ, ಮನೆ, ಪಾದರಕ್ಷೆಗಳು ಹೀಗೆ ಎಲ್ಲವನ್ನೂ ಶುಚಿಯಾಗಿಡಬೇಕೆಂದು ಇಸ್ಲಾಮ್ ಬಯಸುತ್ತದೆ. ಬಾಹ್ಯ ಶುಚಿತ್ವದ ಕುರಿತು ಪ್ರವಾದಿ(ಸ)ರವರ ಮಾತುಗಳು ಸುಪ್ರಸಿದ್ಧವಾಗಿವೆ. ಶುಚಿತ್ವ ಈಮಾನಿನ ಅರ್ಧಾಂಶವಾಗಿದೆ ಎಂಬುದು ಆ ಮಹತ್ತರವಾದ ವಚನವಾಗಿದೆ. ಮನೆಯ ಸುತ್ತಮುತ್ತಲೂ ಶುಚಿತ್ವ ಪಾಲಿಸಿರಿ. ಮಾಲಿನ್ಯ ನೀಗಿಸಿರಿ. ಹಲ್ಲುಜ್ಜಿರಿ. ಉಗುರು ಕತ್ತರಿಸಿರಿ. ಬಟ್ಟೆಯನ್ನು ತೊಳೆಯಿರಿ, ಸ್ನಾನ ಮಾಡಿರಿ. ಗಡ್ಡ …

Read More »

ಧಾರ್ಮಿಕ ಹಬ್ಬಗಳು ಬಡತನದ ನಿರ್ಮೂಲನೆಗಾಗಿರಲಿ…

✍️ ಆಮಿರ್ ಅಶ್ಅರೀ, ಬನ್ನೂರು ಪವಿತ್ರ ಶವ್ವಾಲ್ ತಿಂಗಳ ಮೊದಲನೆಯ ದಿನ ‘ಈದುಲ್ ಫಿತ್ರ್’ ಹಬ್ಬದ ಆಚರಣೆ ಮತ್ತು ನಮಾಝ್ ನಿರ್ವಹಿಸಲು ಪವಿತ್ರ ಮಸೀದಿಯತ್ತ ಪ್ರವಾದಿ ಪೈಗಂಬರರು ನಡೆದುಕೊಂಡು ಹೋಗಬೇಕಾದರೆ, ದಾರಿಯಲ್ಲಿದ್ದ ಮೈದಾನದಲ್ಲಿ ಬೃಹತ್ ಸಂಖ್ಯೆಯ ಮಕ್ಕಳು ತಂಡೋಪತಂಡವಾಗಿ ಆಟವಾಡುತ್ತಿರುವುದನ್ನು ಗಮನಿಸಿದರು. ನಲಿದಾಡುತ್ತಾ, ಕುಣಿದಾಡುತ್ತ ಆಟವಾಡುವ ಮಕ್ಕಳು ಒಂದು ಕಡೆಯಾದರೆ, ಮೈದಾನದ ಮತ್ತೊಂದು ಬದಿಯಲ್ಲಿ ಪುಟ್ಟ ಬಾಲಕನೊಬ್ಬ ಏಕಾಂತ,ನಿಸ್ಸಹಕನಾಗಿ ಕುಳಿತುಕೊಂಡಿರುವುದು ಅವರ ಗಮನ ಸೆಳೆಯಿತು. ಸದಾ ಸಮಯ ಮಕ್ಕಳೊಂದಿಗೆ ಸಮಯ ಕಳೆಯುವ …

Read More »

ಉಪವಾಸಿಗರ ಸಮಾಗಮ ಈದುಲ್ ಫಿತ್ರ್

✍️ ಹಾಶಿಂ ಬನ್ನೂರು ಜಗತ್ತಿನ ಮುಸ್ಲಿಂ ಬಾಂಧವರು ಇಂದು ಸಡಗರದಿಂದ ಸಂಭ್ರಮಿಸುವ ಸಮಯ. ರಂಝಾನ್ ಒಂದು ತಿಂಗಳ ಕಾಲ ನಿರಂತರ ಕೆಡುಕುಗಳಿಂದ ದೂರ ಉಳಿದು ಉಪವಾಸವಿದ್ದು, ಸಹರಿ , ಇಫ್ತಾರ್, ವಿಶೇಷ ನಮಾಝ್, ಪ್ರಾರ್ಥನೆ ಮತ್ತು ದಾನ ಧರ್ಮ ಮುಂತಾದ ಪುಣ್ಯ ಕಾರ್ಯಗಳನ್ನು ಪೂರೈಸಿ ಪವಿತ್ರ ರಮಝಾನ್ ತಿಂಗಳ ದಿನಗಳಲ್ಲಿ ಆರಾಧನೆಯಲ್ಲಿ ತಲ್ಲೀನರಾಗಿ ಧನ್ಯರಾಗುವ ಮೂಲಕ ಮುಸ್ಲಿಂ ಬಾಂಧವರು ದೇವರ ಪ್ರೀತಿಗೆ ಕರುಣೆಗೆ ಪಾತ್ರರಾಗುವ ಕ್ಷಣ. ಮುಸ್ಲಿಮರ ವಿಶೇಷ ಎರಡು …

Read More »

ಈದ್‌ನ ಉದ್ದೇಶ ಏನು?

✍️ ಏ.ಕೆ. ಕುಕ್ಕಿಲ   ‘ನಾವೇಕೆ ಹಬ್ಬ ಆಚರಿಸಬೇಕು..’ ಎಂಬ ಪ್ರಶ್ನೆಯನ್ನು ಈ ಹಿಂದೆ ‘ಯಾಹೂ’ವಿನಲ್ಲಿ ಕೇಳಲಾಗಿತ್ತು. ಸುಮಾರು 420 ಮಂದಿ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ವಿಶೇಷ ಏನೆಂದರೆ, ಹೆಚ್ಚಿನೆಲ್ಲ ಅಭಿಪ್ರಾಯಗಳ ಆಶಯದಲ್ಲಿ ವಿಪರೀತ ಅನ್ನಬಹುದಾದ ವ್ಯತ್ಯಾಸ ಇರಲಿಲ್ಲ. 1.ನಮ್ಮಿಂದ ದೂರ ಇರುವ ಸಂಬಂಧಿಕರನ್ನು ಭೇಟಿಯಾಗುವುದಕ್ಕೆ ಹಬ್ಬಗಳು ಅವಕಾಶ ಮಾಡಿಕೊಡುತ್ತವೆ. 2.ವೈರಿಗಳಿಗೂ ಕೂಡ ವಿಶ್ ಮಾಡುವ ಸಂದರ್ಭವನ್ನು ಹಬ್ಬಗಳು ಒದಗಿಸಿಕೊಡುತ್ತವೆ. 3.ಸಾಕಷ್ಟು ಪ್ರೇಮ ( Love) ಪ್ರಕರಣಗಳು …

Read More »

ಉಪವಾಸದ ವಚನಗಳ ನಡುವೆ ಪ್ರಾರ್ಥನೆಯ ವಚನ ಏಕಿದೆ?

ಏ.ಕೆ. ಕುಕ್ಕಿಲ ಪವಿತ್ರ ಕುರ್‌ಆನಿನ 185 ವಚನದಲ್ಲಿ ರಮಝಾನ್ ಮತ್ತು ಉಪವಾಸದ ಬಗ್ಗೆ ಹೇಳಿರುವ ಅಲ್ಲಾಹನು 186ನೇ ವಚನದಲ್ಲಿ ಪ್ರಾರ್ಥನೆಯ ಬಗ್ಗೆ ಹೇಳಿದ್ದಾನೆ. ಈ ಎರಡೂ ವಚನಗಳು ಹೀಗಿವೆ: 1. ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಪಣಗಳನ್ನೊಳಗೊಂಡಿರುವ `ಕುರ್‌ಆನ್’ ಅವತೀರ್ಣಗೊಂಡ ತಿಂಗಳು `ರಮಝಾನ್’ ಆಗಿರುತ್ತದೆ. ಆದುದರಿಂದ ಯಾವನಾದರೂ ಈ ತಿಂಗಳನ್ನು ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು. ಯಾವನಾದರೂ ರೋಗಿಯಾಗಿದ್ದರೆ …

Read More »

ಝಕಾತ್ ಕೊಡದ ಶ್ರೀಮಂತ ಮುಸಲ್ಮಾನರೊಂದಿಗೆ ಯುದ್ಧ ಘೋಷಣೆ

ಮದೀನಾದಲ್ಲಿ ಬೈತುಲ್ ಮಾಲ್ (ಸಾರ್ವಜ‌ನಿಕ ಬೊಕ್ಕಸ) ವ್ಯವಸ್ಥೆ ಇತ್ತು. ಪ್ರವಾದಿಯವರು ನಿಧನರಾದ ಬಳಿಕ ಖಲೀಫರಾದವರು ಅಬೂಬಕ್ಕರ್ ಸಿದ್ದೀಕ್. ಮುಸಲ್ಮಾನರ ಝಕಾತ್ ನ ಹಣ ಬೈತುಲ್ ಮಾಲ್ (ಸಾರ್ವಜನಿಕ ಬೊಕ್ಕಸ)ಗೆ ಹೋಗುತ್ತಿತ್ತು. ಝಕಾತ್ ಕೊಡದ ಸಿರಿವಂತ ಮುಸಲ್ಮಾನರ ವಿರುದ್ಧ ಯುದ್ಧ ಸಾರುವೆನು ಎಂದು ಖಲೀಫ ಅಬೂಬಕ್ಕರ್ ರವರು ಹೇಳಿದ್ದರು. ಇದರಿಂದ ಝಕಾತ್ ಎಷ್ಟು ಮಹತ್ವದ ವಿಷಯ ಎಂಬುದು ಅರ್ಥವಾಗುತ್ತದೆ. ಮದೀನಾದಲ್ಲಿ ಝಕಾತ್ ನ ಹಣ ಧರ್ಮ ಬೇಧವಿಲ್ಲದೆ ಅರ್ಹರಿಗೆ ನೀಡಲಾಗುತ್ತಿತ್ತು. ನಮ್ಮ …

Read More »