Home / ಲೇಖನಗಳು / ಝಕಾತ್ ಕೊಡದ ಶ್ರೀಮಂತ ಮುಸಲ್ಮಾನರೊಂದಿಗೆ ಯುದ್ಧ ಘೋಷಣೆ

ಝಕಾತ್ ಕೊಡದ ಶ್ರೀಮಂತ ಮುಸಲ್ಮಾನರೊಂದಿಗೆ ಯುದ್ಧ ಘೋಷಣೆ

ಮದೀನಾದಲ್ಲಿ ಬೈತುಲ್ ಮಾಲ್ (ಸಾರ್ವಜ‌ನಿಕ ಬೊಕ್ಕಸ) ವ್ಯವಸ್ಥೆ ಇತ್ತು.

ಪ್ರವಾದಿಯವರು ನಿಧನರಾದ ಬಳಿಕ ಖಲೀಫರಾದವರು ಅಬೂಬಕ್ಕರ್ ಸಿದ್ದೀಕ್. ಮುಸಲ್ಮಾನರ ಝಕಾತ್ ನ ಹಣ ಬೈತುಲ್ ಮಾಲ್ (ಸಾರ್ವಜನಿಕ ಬೊಕ್ಕಸ)ಗೆ ಹೋಗುತ್ತಿತ್ತು.

ಝಕಾತ್ ಕೊಡದ ಸಿರಿವಂತ ಮುಸಲ್ಮಾನರ ವಿರುದ್ಧ ಯುದ್ಧ ಸಾರುವೆನು ಎಂದು ಖಲೀಫ ಅಬೂಬಕ್ಕರ್ ರವರು ಹೇಳಿದ್ದರು.

ಇದರಿಂದ ಝಕಾತ್ ಎಷ್ಟು ಮಹತ್ವದ ವಿಷಯ ಎಂಬುದು ಅರ್ಥವಾಗುತ್ತದೆ.

ಮದೀನಾದಲ್ಲಿ ಝಕಾತ್ ನ ಹಣ ಧರ್ಮ ಬೇಧವಿಲ್ಲದೆ ಅರ್ಹರಿಗೆ ನೀಡಲಾಗುತ್ತಿತ್ತು.

ನಮ್ಮ ದೇಶದಲ್ಲಿ ತೆರಿಗೆಯ ವ್ಯವಸ್ಥೆ ಇದೆ. ತೆರಿಗೆಯ ಹೊರತಾಗಿಯೂ ಮುಸಲ್ಮಾನರು ಆರಾಧನೆ ಎಂಬ ನೆಲೆಯಲ್ಲಿ ನೀಡುವ ಝಕಾತ್ ಧರ್ಮ ಭೇದವಿಲ್ಲದೆ ಅರ್ಹರಿಗೆ ತಲುಪುತ್ತದೆ. ಝಕಾತ್ ನಮಾಝಿನ ಹಾಗೆಯೇ ಆರಾಧನೆಯಾಗಿದೆ.

ಇಸ್ಲಾಮಿನ ಆರಾಧನಾ ಕರ್ಮಗಳಿಂದ ಪ್ರಯೋಜನವೇ ಹೊರತು ದೇಶಕ್ಕೆ ನಷ್ಟವಿಲ್ಲ.

ಝಕಾತ್ ನೀಡುವವರು ಪ್ರತಿಫಲವನ್ನು ಅಲ್ಲಾಹನಿಂದ ನಿರೀಕ್ಷಿಸುತ್ತಾರೆಯೇ ವಿನಃ ಜನರಿಂದ ಅಲ್ಲ ಎಂಬುದೇ ಸತ್ಯ.

ಮುಸ್ಲಿಮ್ ಮಹಿಳೆಯರು ಚಿನ್ನಕ್ಕೂ ಝಕಾತ್ ಕೊಡುವರು. ಸಾರ್ವಜನಿಕ ಬಾವಿ, ಅನಾಥರು, ನಿರ್ಗತಿಕರಿಗೆ,ಬಡವರಿಗೆ ಉದ್ಯೋಗಕ್ಕೆ ಸಹಾಯ, ರೋಗಿಗಳಿಗೆ ನೆರವು, ಸಾಲಸಂದಾಯಕ್ಕೆ ಖರ್ಚುಮಾಡಲಾಗುವುದು.

(ಶಾಂತಿ ಇರಲಿ ಎಲ್ಲ ಪ್ರವಾದಿಗಳ, ಸಜ್ಜನರ ಮೇಲೆ)

✍️ ಶಮೀರ ಜಹಾನ್

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *