Home / ಲೇಖನಗಳು (page 2)

ಲೇಖನಗಳು

ಬದ್ರ್ ಸಂದೇಶ ಮತ್ತು ರಮಝಾನ್ ತಿಂಗಳು

ಬದ್ರ್ ಯುದ್ದ ನಡೆದದ್ದು ರಮಝಾನ್ ತಿಂಗಳಿನಲ್ಲಾಗಿತ್ತು. ಮಕ್ಕಾದಲ್ಲಿಯೂ ಅಲ್ಲ. ಮದೀನಾದಲ್ಲಿಯೂ ಅಲ್ಲ. ಮಕ್ಕಳು, ಮಹಿಳೆಯರು ಸಾರ್ವಜನಿಕ ಆಸ್ತಿಪಾಸ್ತಿ, ಪ್ರಕೃತಿ ಸಂಪನ್ಮೂಲ ಸುರಕ್ಷಿತವಾಗಿತ್ತು. ಮಕ್ಕಾದಲ್ಲಿ ಪ್ರವಾದಿಯವರು 53 ವರ್ಷವಿದ್ದರು. ಪ್ರವಾದಿಯವರಿಂದ ಆಗಲೀ ಅನುಯಾಯಿಗಳಿಂದ ಆಗಲೀ ಯಾವುದೇ ರೀತಿಯ ರಕ್ತಪಾತವಾಗಲೀ, ಯುದ್ಧವಾಗಲೀ ಸಂಭವಿಸಿರಲಿಲ್ಲ. ಪ್ರವಾದಿಯವರ ಸಂರಕ್ಷಕರಾಗಿದ್ದ ಬಹುದೇವಾರಾಧಕರ ಸರದಾರ ಪ್ರವಾದಿಯ ಪಿತೃ ಸಹೋದರ ಅಬೂತಾಲಿಬ್ ಮರಣ ಹೊಂದಿದಾಗ ಕುರೈಶ್ ಸರದಾರರಿಗೆ ಬಲ ಬಂದಂತಾಗುತ್ತದೆ. ಕೆಲವು ಉನ್ನತ ಸರದಾರರು ಸಮಾಲೋಚಿಸಿ ಪ್ರವಾದಿಯವನ್ನು ಸಂರಕ್ಷಿಸಲು ಇನ್ನು …

Read More »

ಬದ್ರ್: ವಿಜಯದ ಕಾರಣಗಳು

✍️ಡಾ| ಯೂಸುಫುಲ್ ಕರ್ಝಾವಿ ವಿಶ್ವಾಸಿ ಸಮೂಹವು ಬದ್ರ‍್ ನ ಘಟನೆಯನ್ನು ಸ್ಮರಿಸುವುದೇಕೆ? ಆ ಘಟನೆಯ ಕುರಿತು ಅವರಿಗೆ ಇಷ್ಟೊಂದು ಆಸಕ್ತಿಯೇಕೆ? ಕುರ್‌ಆನ್ ಅದರ ಬಗ್ಗೆ ತೋರಿದ ಆಸಕ್ತಿಯೇ ಅದರ ಮೊದಲ ಕಾರಣ. ಬದ್ರ್ ಯುದ್ಧವು ಪ್ರವಾದಿಯವರ(ಸ) ಜೀವನದ ಪ್ರಮುಖ ದಿಕ್ಸೂಚಿಯಾಗಿತ್ತಷ್ಟೇ. ಬದ್ರ್ ಯುದ್ಧದ ಬಳಿಕ ಕುರ್‌ಆನ್‌ನ ಅಲ್‌ಅನ್ಫಾಲ್ ಎಂಬ ಅಧ್ಯಾಯ ಅವತೀರ್ಣವಾಯಿತು. ಕುರ್‌ಆನ್‌ನಲ್ಲಿ ಬದ್ರ‍್ ನ ಪ್ರಸ್ತಾಪವಿದೆ. ಆ ಬಳಿಕ ಪ್ರವಾದಿಯವರ(ಸ) ಸೇನಾ ಕಾರ್ಯಾಚರಣೆಗಳಲ್ಲಿ ಹುನೈನ್ ಯುದ್ಧವನ್ನು ಮಾತ್ರ ಕುರ್‌ಆನ್ …

Read More »

ಪವಿತ್ರ ಕುರ್‌ಆನ್ ಹಿಂದೂ ವಿರೋಧಿಯೇ?

✍️ ಏ.ಕೆ.ಕುಕ್ಕಿಲ  ಪವಿತ್ರ ಕುರ್‌ಆನನ್ನು ಕಟಕಟೆಯಲ್ಲಿ ನಿಲ್ಲಿಸುವ ಬೆಳವಣಿಗೆಗಳು ಈ ದೇಶದಲ್ಲಿ ಆಗಾಗ ನಡೆಯುತ್ತಿರುತ್ತವೆ. `ಅದು ಹಿಂದೂ ವಿರೋಧಿ,’ `ಹಿಂದೂಗಳ ಹತ್ಯೆ ನಡೆಸುವುದಕ್ಕೆ ಕರೆ ಕೊಡುವ ಗ್ರಂಥ,’ `ಮುಸ್ಲಿಮೇತರರ ಬಗ್ಗೆ ಅಸಹಿಷ್ಣುತೆಯನ್ನು ಪ್ರತಿಪಾದಿಸುವ ಚಿಂತನೆ,’ `ಇಸ್ಲಾಮ್ ಹೊರತು ಪಡಿಸಿ ಇನ್ನಾವ ಧರ್ಮವೂ ಈ ಜಗತ್ತಿನಲ್ಲಿ ಇರಬಾರದೆಂದು ಕರೆಕೊಡುವ ವಿಚಾರಧಾರೆ..’ ಎಂಬೆಲ್ಲಾ ಆರೋಪಗಳನ್ನು ಹೊರಿಸಲಾಗುತ್ತದೆ. ಇದಕ್ಕೆ ಆಧಾರವಾಗಿ ಕೆಲವೊಂದು ವಚನಗಳನ್ನೂ ತೇಲಿಬಿಡಲಾಗುತ್ತದೆ. ಅದರಲ್ಲಿ, `ನಿಷೇಧಿತ ಮಾಸಗಳು ಕಳೆದ ಬಳಿಕ ಬಹುದೇವ ವಿಶ್ವಾಸಿಗಳನ್ನು ಸಿಕ್ಕಲ್ಲಿ …

Read More »

ಕುರ್‌ಆನ್ ಅರಿಯುವಲ್ಲಿ ಮುಸ್ಲಿಮರ ಮತ್ತು ಮುಸ್ಲಿಮೇತರರ ತಪ್ಪುಗಳು..

✍️ಮುಷ್ತಾಕ್ ಹೆನ್ನಾಬೈಲ್ ಸಾಹಿತಿ ಮತ್ತು ಉದ್ಯಮಿ ಪವಿತ್ರ ಕುರ್‌ಆನನ್ನು ಮನುಕುಲದ ಗ್ರಂಥವೆಂದು ಭಾವಿಸದೆ ಬರೀ ಮುಸ್ಲಿಮರ ಗ್ರಂಥವೆಂಬಂತೆ ಅದು ಸೀಮಿತಗೊಳಿಸಿ ಕೊಂಡಿರುವುದು ಮುಸ್ಲಿಮರ ಮೊದಲ ತಪ್ಪು. ಮುಸ್ಲಿಮೇತರರು ಕುರ್‌ಆನ್ ಬಗ್ಗೆ ಆರೋಪ ಮಾಡಿದಾಗ ಅಥವಾ ಪ್ರಶ್ನೆ, ಅನುಮಾನ, ವಿವರಣೆಗಳನ್ನು ಕೇಳಿದಾಗ ಸೂಕ್ತವಾಗಿ ಗ್ರಂಥದ ಸೂಕ್ತಗಳನ್ನು ವಿವರಿಸುವಷ್ಟು ಪ್ರಾಥಮಿಕ ಜ್ಞಾನವೂ ಬಹುತೇಕರಿಗೆ ಇಲ್ಲದೇ ಇರುವುದು ಮುಸ್ಲಿಮರ ಎರಡನೆಯ ತಪ್ಪು. ಸ್ಥಳೀಯ ಭಾಷೆ ಮತ್ತು ಸಾಹಿತ್ಯದ ಸ್ವರೂಪದಲ್ಲಿ ಕುರ್ ಆನನ್ನು ಪ್ರಸಾರ ಮಾಡದೆ …

Read More »

ಉಪವಾಸ ವ್ರತ: ಸೃಷ್ಟಿಕರ್ತನ ಸಾಮಿಪ್ಯ ಗಳಿಸುವ ಉಪಾಧಿ!

✍️ ಮುಹಮ್ಮದ್ ಅಶ್ರಫ್ ನಮ್ಮ ಜೀವನವು ಮಂಜುಗಡ್ಡೆಯಂತೆ ಕರಗುತ್ತಿದೆ. ಈ ಕ್ಷಣಗಳು ನಿಮಿಷಗಳಾಗಿ, ನಿಮಿಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ, ದಿನಗಳು-ವಾರಗಳು-ತಿಂಗಳು ಹೀಗೆ ವರ್ಷಗಳು ಉರುಳಿದಂತೆಲ್ಲ ಕರಗುವ ಈ ಜೀವನದ ಅಂತ್ಯವು ಯಾವಾಗ ಆಗುವುದೆಂದು ಹೇಳಲಿಕ್ಕಾಗದು. ನಮ್ಮ ಜೀವನದ ಬಗ್ಗೆ ಯಾವುದೇ ಭರವಸೆ ಇಲ್ಲ. ನಿನ್ನೆ-ಮೊನ್ನೆ ತಾನೇ ರಮಝಾನ್ ಕಳೆದು ಹೋಗಿತ್ತು ಎಂದು ನಮಗೆ ಭಾಸವಾಗುತ್ತಿದೆ. ಹೌದು, ರಮಝಾನ್ ತನ್ನ ಎಲ್ಲ ಸಮೃದ್ಧಿ, ಶ್ರೇಷ್ಠ ಪುಣ್ಯ ಫಲಗಳನ್ನು ಹೊತ್ತು ಮತ್ತೊಮ್ಮೆ ಆಗತವಾಗಿದೆ. …

Read More »

ರಮಧಾನ್ ಅಂದರೆ ಕಠಿಣ ಬೇಗೆ

ಪ್ರಕೃತಿಯನ್ನು ಗಮನಿಸಿದಾಗ ಬೇಸಿಗೆ ಕಾಲದ ಬದಲಾವಣೆಯನ್ನು ಅರ್ಥೈಸಬಹುದು. ಗಿಡಮರಗಳು ಇನ್ನೇನೋ ಸಾಯುವ ಸ್ಥಿತಿಯಲ್ಲಿದ್ದಂತೆ. ಗದ್ದೆ, ತೋಟ ಭೂಮಿ ಒಣಗಿ ಶುಷ್ಕ ವಾತಾವರಣ. ಒಂದು ನೋಟಕ್ಕೆ ಜೀವಕಳೆದು ಕೊಂಡಂತೆ ತೋಚುತ್ತಿದ್ದರೂ, ನಿಜ ಸ್ಥಿತಿ ಅದಲ್ಲ. ಹಾಗೆಯೇ ಮನುಷ್ಯ ಕೂಡಾ. ಮನುಷ್ಯ ಮನಸ್ಸುಗಳಿಗೂ ಕೆಲವೊಮ್ಮೆ ವಸಂತ, ಹೇಮಂತ. ಬೇಸಿಗೆಯ ಉಷ್ಣತೆಯಂತೆ ನಮ್ಮ ವಿಶ್ವಾಸ (ಈಮಾನ್) ದುರ್ಬಲವಾದಂತೆ ತೋಚುತ್ತಿರುವಾಗ ಇನ್ನೇನೋ ಸಾಯುವಂತಹ ಪರಿಸ್ಥಿತಿಯಲ್ಲಿರುವಾಗ ವಿಶ್ವಾಸವನ್ನು ಪುನಶ್ಚೇತನಗೊಳಿಸಲು ಬೇಸಿಗೆಯ ಶುಷ್ಕ ವಾತಾವರಣವನ್ನು ಬದಲಾಯಿಸಲು ಧರೆಗೆ ತಂಪನ್ನೀಯುವ …

Read More »

ಉಪವಾಸ: ಏನು ಎತ್ತ?

ಖಾಲಿದ್ ಮೂಸಾ ನದ್ವಿ ಆಧ್ಯಾತ್ಮಿಕ ಬೆಳವಣಿಗೆಗೆ ವ್ಯವಸ್ಥಿತ ಮಾರ್ಗವನ್ನು ನಿಶ್ಚಯಿಸಿದ ಜೀವನ ದರ್ಶನವೇ ಇಸ್ಲಾಮ್ ಧರ್ಮವಾಗಿದೆ. ಅದರಲ್ಲಿ ಮುಖ್ಯವಾದುದು ಐದು ಹೊತ್ತಿನ ನಮಾಝ್ ಆಗಿದೆ. ದಿನ ನಿತ್ಯದ ಜೀವನದಲ್ಲಿ ನಮಾಝ್ ನಿರ್ವಹಣೆ ಮೂಲಕ ಶಿಸ್ತನ್ನು ಕ್ರಮೀಕರಿಸುವುದು. ಅದೊಂದು ನಿರಂತರ ಭೇಟಿಯೂ ಆಗಿದೆ. ರಬ್ (ರಕ್ಷಕ) ಮಾಲಿಕ್ (ಆಡಳಿತಾಧಿಕಾರಿ) ಇಲಾಹ್ (ಆರಾಧ್ಯ) ಆದ (ಅನ್ನಾಸ್ 1-3) ಅಲ್ಲಾಹನನ್ನು ಭೇಟಿಯಾಗಿ ಅವನ ಪ್ರಜೆ ನಡೆಸುವ ಖಾಸಗಿ ಮಾತುಕತೆಯೇ ನಮಾಝ್ ಆಗಿದೆ. ಅದು ಸರ್ವ …

Read More »

ಝಕಾತ್ ಗೊತ್ತಿಲ್ಲದ ಭಾರತೀಯರಿಗೆ ತಲಾಕ್ ಯಾಕೆ ಗೊತ್ತಿದೆ?

✍️ ಏ.ಕೆ. ಕುಕ್ಕಿಲ ಪವಿತ್ರ ಕುರ್‌ಆನಿನ 2ನೇ ಅಧ್ಯಾಯವಾದ ಅಲ್ ಬಕರದ 43, 110 ಮತ್ತು 277ನೇ ಸೂಕ್ತಗಳು; 19ನೇ ಅಧ್ಯಾಯವಾದ ಮರ್ಯಮ್‌ನ 31 ಮತ್ತು 55ನೇ ಸೂಕ್ತಗಳು; 21ನೇ ಅಧ್ಯಾಯವಾದ ಅಲ್ ಅಂಬಿಯಾದ 73ನೇ ಸೂಕ್ತ; 23ನೇ ಅಧ್ಯಾಯವಾದ ಅಲ್ ಮೂಮಿನೂ ನ್‌ನ 4ನೇ ಸೂಕ್ತ; 27ನೇ ಅಧ್ಯಾಯವಾದ ಅನ್ನಮ್ಲ್ನ 3ನೇ ಸೂಕ್ತ; 31ನೇ ಅಧ್ಯಾಯವಾದ ಲುಕ್ಮಾನ್‌ನ 7ನೇ ಸೂಕ್ತಗಳೆಲ್ಲ ನಮಾಝ್ ಮತ್ತು ಝಕಾತನ್ನು ಜೊತೆ ಜೊತೆಯಾಗಿಯೇ ಉಲ್ಲೇಖಿಸಿವೆ. …

Read More »

ಆಯಿಷಾ(ರ)ರೊಂದಿಗೆ ಸಿಟ್ಟಾದ ಪ್ರವಾದಿ(ಸ)

✍️ ಅಬೂ ಝೀಶಾನ್ ಹ. ಅಲಿ(ರ) ಕೋಪದ ಬಗ್ಗೆ ಬಹಳ ಸುಂದರವಾದ ಮಾತನ್ನು ಹೇಳುತ್ತಾರೆ, “ಕೋಪದ ಆರಂಭವು ಹುಚ್ಚುತನ ಆಗಿದೆ ಹಾಗೂ ಅಂತ್ಯವು ಪಶ್ಚಾತ್ತಾಪ ಆಗಿದೆ.” ಒಬ್ಬ ವ್ಯಕ್ತಿ ಯಾವಾಗಲೂ ಕೋಪಗೊಳ್ಳುವ ಸ್ವಭಾವವನ್ನು ಹೊಂದಿದ್ದರೆ ಅದು ಆತನ ಅಭ್ಯಾಸ ಎಂದಾಗುತ್ತದೆ ಮತ್ತು ಆತನ ಕೋಪಕ್ಕೆ ಅಷ್ಟು ಬೆಲೆಯಿರುವುದಿಲ್ಲ. ಆದರೆ ಸದಾ ಹಸನ್ಮುಖಿಯಾಗಿರುವ ವ್ಯಕ್ತಿ ಕೋಪಗೊಂಡಾಗ ಆತನ ಕೋಪ ನಿಜವಾಗಿಯೂ ಯಾವುದೋ ಕಾರಣದಿಂದಾಗಿರುತ್ತದೆ ಹಾಗೂ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಪ್ರವಾದಿ(ಸ)ರಷ್ಟು …

Read More »

ಇಸ್ಲಾಮ್ ವೈಯಕ್ತಿಕ ಬದುಕಿನಲ್ಲಿ ಇದ್ದರಷ್ಟೇ ಸಾಕೇ?

✍️ ಯೂಸುಫ್ ಉಮರಿ ಲಾ ಇಲಾಹ ಇಲ್ಲಲ್ಲಾಹ್ ಎಂಬುದು ಬದುಕಿನ ತಳಹದಿಯಾಗಿದೆ ಎಂಬುದರಲ್ಲಿ ಜಗತ್ತಿನ ಮುಸ್ಲಿಮರಲ್ಲಿ ಯಾರಿಗೂ ಅಭಿಪ್ರಾಯ ಬೇಧವಿಲ್ಲ. ಲಾ ಇಲಾಹ ಇಲ್ಲಲ್ಲಾಹ್ ನಮ್ಮ ಬದುಕಿನ ಪವಿತ್ರ ಕ್ರಾಂತಿಕಾರೀ ಮೌಲ್ಯಯುತ ವಚನವಾಗಿದೆ. ಪ್ರವಾದಿ ಆದಮ್(ಅ)ರಿಂದ ಪ್ರಾರಂಭವಾಗಿ ಪ್ರವಾದಿ ಮುಹಮ್ಮದ್ ರವರ(ಸ) ವರೆಗಿನ ಎಲ್ಲಾ ಪ್ರವಾದಿಗಳಿಗೂ ಅವರ ಅನುಯಾಯಿಗಳಿಗೂ ಅಲ್ಲಾಹನು ನೀಡಿದ ಸಂದೇಶದ ಘೋಷವಾಕ್ಯವೂ ಲಾ ಇಲಾಹ ಇಲ್ಲಲ್ಲಾಹ್ ಆಗಿತ್ತು ಎಂಬುದನ್ನು ಕುರ್‌ಆನ್ ಸ್ಪಷ್ಟಪಡಿಸುತ್ತದೆ. ನಾವು ನಿಮಗಿಂತ ಮುಂಚೆ ಕಳುಹಿಸಿದ …

Read More »