Home / ಲೇಖನಗಳು (page 46)

ಲೇಖನಗಳು

ಕುರ್‍ಆನ್‍ನಲ್ಲಿ ಮಳೆ

 ಎಂ. ಮುಹಮ್ಮದ್ ಅಮೀನ್ ಮಳೆಯನ್ನು ಅನುಗ್ರಹವೆಂದು ಕುರ್‍ಆನ್ ವರ್ಣಿಸಿದೆ. ಯಾಕೆಂದರೆ ಮಳೆಯಿಂದಲೇ ಭೂಮಿಯಲ್ಲಿ ಜೀವಕಳೆ ಮಿಡಿಯುತ್ತದೆ. ಭೂಮಿಯಲ್ಲಿ ನೀರಿನ ಅಂಶವಿಲ್ಲದ ಯಾವೊಂದು ವಸ್ತುವೂ ಇಲ್ಲ. “ನಾವು ನೀರಿನಿಂದ ಎಲ್ಲ ಜೀವಿಗಳನ್ನು ಸೃಷ್ಟಿಸಿರುವೆವು” ಎಂದು ಕುರ್‍ಆನ್ ಸ್ಪಷ್ಟಪಡಿಸಿದೆ. ನೀರಿನ ಉದ್ಭವ ಭೂಮಿಯಲ್ಲಿ ನೀರಿನ ಉದ್ಭವದ ಕುರಿತು ಪ್ರಾಚೀನ ಕಾಲದಿಂದಲೇ ಜನರಲ್ಲಿ ವಿವಿಧ ಅಭಿಪ್ರಾಯಗಳಿವೆ. ಜಿ. ಗಸ್ಟನಿ (G. Gustany) ಮತ್ತು ಬಿ. ಬ್ಲವೋಕ್ಸ್ (B. Blavoux) ಬರೆದ ಯುನಿವರ್ಸಲಿಸ್ ಎನ್ಸೈಕ್ಲೋಪಿಡಿಯಾ …

Read More »

ದೇವಾಸ್ತಿತ್ವವನ್ನು ನಿರಾಕರಿಸಲಾದೀತೆ?

ದೇವವಿಶ್ವಾಸ ಮಾನವನ ನೈಸರ್ಗಿಕ ಬೇಡಿಕೆಯಾಗಿದೆ. ಈ ಕುರಿತು ನಮ್ಮ ದೇಶದ ಜನರು ವೈವಿಧ್ಯಮಯ ದೃಷ್ಟಿಕೋನವನ್ನು ಹೊಂದಿದವರಿದ್ದಾರೆ. ಆಸ್ತಿಕರೂ ಇದ್ದಾರೆ. ನಾಸ್ತಿಕರೂ ಇದ್ದಾರೆ. ಹಾಗಿದ್ದರೂ ಈ ಪ್ರಪಂಚವನ್ನು ಇಲ್ಲಿ ಇರುವಂತಹ ಸೃಷ್ಟಿ ಜಾಲಗಳನ್ನು ಅವುಗಳ ಪ್ರಕ್ರಿಯೆಯನ್ನು ವೀಕ್ಷಿಸಿದಾಗ ಒಂದು ಮಹಾಶಕ್ತಿಯು ಅದರ ಹಿಂದೆ ಸಕ್ರಿಯವಾಗಿರುವುದು ವ್ಯಕ್ತವಾಗುತ್ತದೆ. ಲೋಕಕ್ಕೆ ಬಂದ ಪ್ರವಾದಿಗಳೆಲ್ಲರೂ ದೇವಾಸ್ತಿತ್ವದ ಬಗ್ಗೆ ಜನರಿಗೆ ತಿಳಿಸಿ ಹೇಳಿದ್ದಾರೆ. ಪ್ರಾಚೀನ ಗ್ರಂಥಗಳೂ ಅದನ್ನು ಸಮರ್ಥಿಸುತ್ತವೆ. ದೇವನ ಕಲ್ಪನೆಯು ಮಾನವನ ಜನ್ಮ ಸಿದ್ಧ ಬೇಡಿಕೆಯೆಂದು …

Read More »

ನೊಣ: ಕುರ್‌ಆನ್ ನ ದೈವಿಕತೆಗೆ ಮತ್ತೊಂದು ಸಾಕ್ಷಿ!

ಕುರ್‌ಆನ್ ಒಂದು ದೈವಿಕ ಗ್ರಂಥವಾಗಿದೆ. 1400 ವರ್ಷಗಳ ಹಿಂದೆ ಅರಬ್ ದೇಶದ ಮುಹಮ್ಮದ್(ಸ) ಎಂಬ ನಿರಕ್ಷರಿಯನ್ನು ತನ್ನ ಪ್ರವಾದಿಯಾಗಿ ಆರಿಸಿಕೊಂಡ ಅಲ್ಲಾಹು ಅವರ ಮೂಲಕ ತನ್ನ ಸಂದೇಶವನ್ನು ಮನುಷ್ಯ ಕೋಟಿಗೆ ತಲಪಿಸಿದ್ದನು. ತನ್ನ ಅಧರಗಳಿಂದ ಹೊರಬರುವ ಸೂಕ್ತಗಳು ತನ್ನ ಮಾತಲ್ಲ; ಬದಲಾಗಿ ಅದು ಸರ್ವಲೋಕ ಸೃಷ್ಟಿಕರ್ತನಾದ ಅಲ್ಲಾಹನ ವಚನಗಳು ಎಂದು ಸ್ವತಃ ಪ್ರವಾದಿಯವರು ನುಡಿಯುತ್ತಿದ್ದರು. ಅದನ್ನು ಅವರು ಸ್ವಂತ ರಚನೆಯೆಂದು ಒಪ್ಪಿಕೊಂಡಿದ್ದಲ್ಲಿ ಅವರನ್ನು ತಮ್ಮ ಅಮೀರನನ್ನಾಗಿ ಸ್ವೀಕರಿಸಲು ಅವರ ಜನತೆಯು …

Read More »

ಕುರ್‍ಆನ್ ಮತ್ತು ಆಧುನಿಕ ವಿಜ್ಞಾನ: ಒಂದು ತುಲನಾತ್ಮಕ ಅಧ್ಯಯನ

ನಮ್ಮ ಸಮಾಜ ಬಹಳ ಮುಂದುವರಿದಿದೆ. ವಿಜ್ಞಾನವಂತೂ ದಿನ ಹೋದಂತೆ ಬೆಳೆಯುತ್ತಲೇ ಇದೆ. ಇಂದಿನ ಸಾಕಷ್ಟು ಮಂದಿ ದೇವರು, ಪವಾಡ, ಸ್ವರ್ಗ, ನರಕ ಮೊದಲಾದವುಗಳ ಮೇಲೆ ವಿಶ್ವಾಸವನ್ನಿಡದೆ, ವಿಜ್ಞಾನವೇ ಸರ್ವಸ್ವ ಎಂದು ನಂಬುತ್ತಾರೆ. ಇಂತಹ ಕಾಲದಲ್ಲಿ ನಾವು ಬದುಕುತ್ತಿರುವಾಗ ಒಂದು ಧರ್ಮದ ಬಗ್ಗೆ, ಅದರ ವಿಶೇಷತೆಯ ಬಗ್ಗೆ ವಿವರಿಸಬೇಕಾದರೆ ಆ ಧರ್ಮಗ್ರಂಥದಲ್ಲಿರುವ ವೈಜ್ಞಾನಿಕ ವಿಷಯಗಳು ಇವತ್ತಿನ ವಿಜ್ಞಾನಕ್ಕೆ ಪೂರಕವಾಗಿದೆಯೇ ಎಂಬುದಾಗಿ ಪರಿಶೀಲಿಸಬೇಕಾಗುತ್ತದೆ. ಏಕೆಂದರೆ, ಒಂದು ವೇಳೆ ಆ ಗ್ರಂಥ ನಮ್ಮ ನೈಜ …

Read More »

ನೆರೆಯವರೊಂದಿಗೆ ವರ್ತನೆ ಪ್ರವಾದಿ ಮುಹಮ್ಮದ್ (ಸ) ರ ಮಾತಿನಲ್ಲಿ…

ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಯಾವ ವ್ಯಕ್ತಿಯ ಉಪಟಳಗಳಿಂದಾಗಿ ಅವನ ನೆರೆಯವನಿಗೆ ಶಾಂತಿ ಭಂಗವಾಗುತ್ತದೋ ಆತ ಮುಸಲ್ಮಾನನಲ್ಲ”, “ಒಬ್ಬನು ಹೊಟ್ಟೆ ತುಂಬಾ ಉಣ್ಣುತ್ತಿದ್ದು, ಅದೇ ವೇಳೆ ಅವನ ನೆರೆಯವನು ಹೊಟ್ಟೆಗಿಲ್ಲದೆ ಉಪವಾಸ ಬಿದ್ದಿದ್ದರೆ ಅವನು ಸತ್ಯವಿಶ್ವಾಸಿಯಲ್ಲ.” – ಪ್ರವಾದಿ ಮುಹಮ್ಮದ್(ಸ) “ನಿಮ್ಮ ಮಕ್ಕಳಿಗಾಗಿ ನೀವು ಹಣ್ಣು ಹಂಪಲು ಏನಾದರೂ ತಂದರೆ ಅದರಲ್ಲಿ ಸ್ವಲ್ಪವನ್ನು ನಿಮ್ಮ ಅಕ್ಕಪಕ್ಕದ ಮನೆಗಳಿಗೂ ಕಳಿಸಿ ಕೊಡಿರಿ. ಹಾಗಲ್ಲದಿದ್ದರೆ ಕನಿಷ್ಠ ಪಕ್ಷ ಹಣ್ಣಿನ ಸಿಪ್ಪೆಗಳನ್ನು ಮನೆಯ ಹೊರಕ್ಕೆ ಎಸೆಯಬೇಡಿರಿ. …

Read More »