ನಮಾಝ್ ಮುಸ್ಲಿಮರು ದಿನಕ್ಕೆ ಐದು ಬಾರಿ ಮಸೀದಿಗೆ ಹೋಗಿ ಸಾಮೂಹಿಕವಾಗಿ ನಮಾಝ್ ಮಾಡುವುದು ಕಡ್ಡಾಯವಾಗಿದೆ. ನಮಾಝ್ ಎಂಬುದು ಇಸ್ಲಾಮ್ ಧರ್ಮದ ವಿಶಿಷ್ಟ ಪ್ರಾರ್ಥನೆ. ಅದನ್ನು ವಯಸ್ಕರಾದ ಸ್ತ್ರೀ-ಪುರುಷರೆಲ್ಲರೂ ಕಡ್ಡಾಯವಾಗಿ ನಿರ್ವಹಿಸಬೇಕು. ಪುರುಷರು ಅದನ್ನು ಮಸೀದಿಗಳಲ್ಲಿ ಸಂಘಟಿತವಾಗಿ ನೆರವೇರಿಸಬೇಕೆಂಬುದು ಇಸ್ಲಾಮಿನ ವಿಧಿ. ಮಸೀದಿಗಳಿಂದ ದಿನಕ್ಕೆ ಐದು ಬಾರಿ ಕೇಳಿ ಬರುವ ‘ಅದಾನ್’ ಅಥವಾ ಬಾಂಗ್ ಈ ನಮಾಝ್ನ ಕರೆಯಾಗಿದೆ. ಅನೇಕ ದೇಶ ಬಾಂಧವರು ಈ ‘ಅದಾನ್’ ಕರೆಯನ್ನೇ ಪ್ರಾರ್ಥನೆ ಎಂದು ಭಾವಿಸುವುದಿದೆ. …
Read More »ಪರಲೋಕ ವಿಶ್ವಾಸ
ಇಸ್ಲಾಮ್ ಧರ್ಮದ ದೃಷ್ಟಿಯಲ್ಲಿ ಮನುಷ್ಯನ ಈ ಲೌಕಿಕ ಜೀವನವು ಒಂದು ಶಿಕ್ಷೆಯಾಗಲೀ ಪುರಸ್ಕಾರವಾಗಲೀ ಅಲ್ಲ. ಇದು ಹಿಂದಿನ ಜನ್ಮದ ಪಾಪಗಳಿಗೆ ಸಿಕ್ಕಿದ ಶಿಕ್ಷೆಯೂ ಅಲ್ಲ. ಹಿಂದಿನ ಜನ್ಮದ ಪುಣ್ಯಗಳಿಗೆ ಸಿಕ್ಕಿದ ಪುರಸ್ಕಾರವೂ ಅಲ್ಲ. ವಾಸ್ತವದಲ್ಲಿ ಇದು ಮನುಷ್ಯನ ಪರೀಕ್ಷಾರ್ಥವಾಗಿ ಅವನಿಗೆ ಲಭಿಸಿದ ಜೀವನವಾಗಿದೆ. ಇಲ್ಲಿ ಅವನಿಗೆ ವಿಚಾರ-ಆಚಾರಗಳ ತಾತ್ಕಾಲಿಕ ಸ್ವಾತಂತ್ರ್ಯ ನೀಡಲಾಗಿದೆ. ಆತನು ತನ್ನ ನೈಜ ಸೃಷ್ಟಿಕರ್ತನನ್ನು ಯಥಾವತ್ತಾಗಿ ಗುರುತಿಸಿ ಅವನ ಆರಾಧನೆ, ದಾಸ್ಯ ಮತ್ತು ಅನುಸರಣೆ ಮಾಡಲು ಸಿದ್ಧನಾಗುತ್ತಾನೆಯೇ …
Read More »ಕುರ್ಆನ್ನಿಂದ ಜೀವನ ಸಾಫಲ್ಯ : ಡಾ| ಯೂಸುಫುಲ್ ಕರ್ಝಾವಿ
ಡಾ| ಯೂಸುಫುಲ್ ಕರ್ಝಾವಿ ಕಂಠಪಾಠ ಮಾಡಲು ಹೃದ್ಗತ ಮಾಡಿಕೊಳ್ಳುವ ರೀತಿಯಲ್ಲಿ ಕುರ್ಆನ್ ಅತ್ಯಂತ ಸರಳವಾದ ಗ್ರಂಥವಾಗಿದೆ. ಚಿಂತನೆ ನಡೆಸಲು, ಅರ್ಥೈಸಿಕೊಳ್ಳಲು ಸಾಧ್ಯವಿರುವ ಗ್ರಂಥ ಎಂಬುದು ಕುರ್ಆನ್ನ ಸವಿಶೇಷತೆಯಾಗಿದೆ. “ನಾವು ಈ ಕುರ್ಆನನ್ನು ಉಪದೇಶಕ್ಕಾಗಿ ಸುಲಭ ಸಾಧನವಾಗಿ ಮಾಡಿರುವೆವು. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?” (ಅಲ್ಕಮರ್: 17) ಕುರ್ಆನ್ನ ಪದಗಳು, ವಾಕ್ಯಗಳು, ಸೂಕ್ತಗಳು ಸುಲಭವೂ, ಸರಳವೂ, ಸುಂದರವೂ ಆಗಿದೆ. ಹೃದಯದಲ್ಲಿ ಕುರ್ಆನನ್ನು ತುಂಬಿಕೊಳ್ಳಲು, ಕಂಠಪಾಠ ಮಾಡಲು, ಹೃದಯವನ್ನು ಕುರ್ಆನ್ ನಂತೆ ರೂಪಿಸಿಕೊಳ್ಳಬಯಸುವವರಿಗೆ …
Read More »ಅವರ ಸಂಕಟ ನನಗೂ ಗೊತ್ತು, ನಾನೂ ಒಬ್ಬ ವಲಸೆ ಕಾರ್ಮಿಕ ಸೋನು: ಸೂದ್, ಚಿತ್ರ ನಟ
ಈ ಮುಂಬೈ ಮಹಾ ನಗರಕ್ಕೆ ನಾನು ಕೂಡಾ ವಲಸೆ ಕಾರ್ಮಿಕನಾಗಿ ಜೀವನ ದಡ ಸೇರಿಸಲು ಬಂದ ವ್ಯಕ್ತಿ. ಈಗ ಸಂಕಷ್ಟದ ಕಾಲದಲ್ಲಿ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ಕಳಿಸುವುದಕ್ಕೆ ನಾನು ನನ್ನಿಂದಾಗುವ ಸಹಾಯ ಮಾಡಲು ಮುಂದಾಗಿದ್ದು, ಅವರ ನೋವು ಅರಿವಿರುವವರಲ್ಲಿ ನಾನೂ ಒಬ್ಬ ಎಂದಾದ್ದರಿಂದ ರಾಜಕೀಯ ಸಹಿತ ಬೇರೆ ಯಾವ ಉದ್ದೇಶವೂ ಅದರ ಹಿಂದಿಲ್ಲ. ರಾಜಕೀಯದಲ್ಲಿ ಆಸಕ್ತಿಯಿಲ್ಲದವನು ನಾನು. ನಾನೇನು ಮಾಡಿದೆನೋ ಅದೆಲ್ಲವೂ ಅಂತರಾಜ್ಯ ವಲಸೆ ಕಾರ್ಮಿಕರ ಮೇಲಿನ ಪ್ರೀತಿಯಿಂದ …
Read More »ಪ್ರವಾದಿ ಮುಹಮ್ಮದ್ರ(ಸ) ವಿವಾಹಗಳು
ಪ್ರವಾದಿ ಮುಹಮ್ಮದ್ರವರ(ಸ) ವಿವಾಹಗಳು ಸಾಮಾನ್ಯವಾಗಿ ಮುಸ್ಲಿಮೇತರ ಬಂಧುಗಳಲ್ಲಿ ಗೊಂದಲಕ್ಕೆ ಕಾರಣವಾಗುವುದಿದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಒಂದನೆಯದಾಗಿ ಬಹುಪತ್ನಿತ್ವ ಸಂಪ್ರದಾಯವನ್ನು ಸಾಮಾನ್ಯವಾಗಿ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ. ಎರಡನೆಯದಾಗಿ ಪಾಶ್ಚಾತ್ಯ ಇಸ್ಲಾಮ್ ವಿರೋಧಿಗಳು ಮತ್ತು ಅವರ ಪೌರ್ವಾತ್ಯ ಅಂಧಾನುಯಾಯಿಗಳು ಇಸ್ಲಾಮಿನ ವಿರುದ್ಧ ನಡೆಸುವ ಯೋಜಿತ ಕುಪ್ರಚಾರಗಳಲ್ಲಿ ಬಹುಪತ್ನಿತ್ವ, ಅದರಲ್ಲೂ ವಿಶೇಷವಾಗಿ ಪ್ರವಾದಿ ಮುಹಮ್ಮದ್ರವರ(ಸ) ವಿವಾಹಗಳು ಪ್ರಮುಖ ವಿಷಯವಾಗಿವೆ. ಮೂರನೆಯದಾಗಿ ಪ್ರವಾದಿ ಮುಹಮ್ಮದ್ರವರ(ಸ) ವಿವಾಹಗಳ ಹಿನ್ನೆಲೆ ಮತ್ತು ಉದ್ದೇಶದ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ …
Read More »ಪ್ರವಾದಿ ಮುಹಮ್ಮದ್(ಸ)
ಈಗಾಗಲೇ ತಿಳಿಸಿರುವಂತೆ ಇಸ್ಲಾಮಿನ ಮೂಲ ವಚನವು “ಅಲ್ಲಾಹನ ಹೊರತು ಆರಾಧ್ಯನಿಲ್ಲ. ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬರ್ಥದ ಪವಿತ್ರ ವಚನವಾಗಿದೆ. ಈ ಪೈಕಿ “ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದವರು ಯಾರೂ ಇಲ್ಲ”ವೆಂಬ ವಿಶ್ವಾಸವನ್ನು ಪ್ರಥಮ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಈಗ ಅದರ ದ್ವಿತೀಯಾರ್ಧವನ್ನು ತೆಗೆದುಕೊಳ್ಳೋಣ. “ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬುದೇ ಆ ವಾಕ್ಯ. – ಪ್ರವಾದಿತ್ವ ಈ ಲೋಕದಲ್ಲಿ ಮಾನವನ ಮಾರ್ಗದರ್ಶನಕ್ಕಾಗಿ ಅಲ್ಲಾಹನು ಮಾಡಿರುವ ವ್ಯವಸ್ಥೆಯೇ ಪ್ರವಾದಿತ್ವ. ಭೂಮುಖದ ಮೇಲೆ ಮಾನವ …
Read More »ಇಸ್ಲಾಮೇತರ ಆಚಾರ-ಸಂಪ್ರದಾಯಗಳು
ಏಕದೇವ ವಿಶ್ವಾಸದ ಬಗ್ಗೆ ಮುಸ್ಲಿಮರು ಇಷ್ಟು ದೃಢ ನಿಲುಮೆಯವರಾಗಿರುವಾಗ ಇಂದು ನಮ್ಮ ಪರಿಸರದಲ್ಲಿ ಮುಸ್ಲಿಮ್ ಜನಸಾಮಾನ್ಯರಲ್ಲಿ ಕಂಡು ಬರುವಂತಹ ಏಕದೇವ ವಿಶ್ವಾಸಕ್ಕೆ ಹೊಂದಿಕೊಳ್ಳದ ಅನೇಕ ಆಚಾರ-ಸಂಪ್ರದಾಯಗಳು ಜನರನ್ನು ಗೊಂದಲಕ್ಕೀಡು ಮಾಡುವುದು ಸಹಜ. ಆದ್ದರಿಂದ ಆ ಬಗ್ಗೆ ಒಂದೆರಡು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯವೆನಿಸುತ್ತದೆ. ‘ಕಬರ್ ಝಿಯಾರತ್’ ಅಥವಾ ‘ಸಮಾಧಿ ಸಂದರ್ಶನ’ ‘ಕಬರ್ ಝಿಯಾರತ್’ ಅಥವಾ ‘ಸಮಾಧಿ ಸಂದರ್ಶನ’ ಒಳ್ಳೆಯದೆಂದು ಪ್ರವಾದಿ ಮುಹಮ್ಮದ್(ಸ) ತಮ್ಮ ಅನುಯಾಯಿಗಳಿಗೆ ಬೋಧಿಸಿದ್ದಾರೆ. ತನ್ನ ಮರಣವನ್ನು ಸ್ಮರಿಸುವುದು, …
Read More »ಪ್ರವಾದಿ ಲೂತ್ರ(ಅ) ಜನತೆಯಲ್ಲಿದ್ದ ಕೆಡುಕು
@ ಎಸ್ಸೆಮ್ಕೆ , ಅನುವಾದ: ಎ.ಎಂ. “ನಾವು ಲೂತರನ್ನು ಸಂದೇಶವಾಹಕರನ್ನಾಗಿ ಮಾಡಿ ಕಳುಹಿಸಿದೆವು. ಅವರು ತಮ್ಮ ಜನಾಂಗದವರನ್ನುದ್ದೇಶಿಸಿ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನೀವು ನಿಮಗಿಂತ ಮುಂಚೆ ಜಗತ್ತಿನಲ್ಲಿ ಇನ್ನಾರೂ ಮಾಡದಿರುವಂಥ ಅಶ್ಲೀಲ ಕಾರ್ಯವನ್ನೆಸಗುವ ಲಜ್ಜಾಹೀನರಾಗಿ ಬಿಟ್ಟಿರಾ? ನೀವು ಸ್ತ್ರೀಯರನ್ನು ಬಿಟ್ಟು ಪುರುಷರೊಂದಿಗೆ ನಿಮ್ಮ ಕಾಮಾಭಿಲಾಷೆಯನ್ನು ನೀಗಿಸಿಕೊಳ್ಳುವಿರಾ? ವಾಸ್ತವದಲ್ಲಿ ನೀವು ಸ್ಪಷ್ಟವಾಗಿ ಹದಮೀರುವವರಾಗಿರುತ್ತೀರಿ.” (7:80-81) “ನಾವು ಲೂತರನ್ನು ಕಳುಹಿಸಿದೆವು. ಅವರು ತಮ್ಮ ಜನಾಂಗದೊಡನೆ ಹೇಳಿದ ಆ ಸಂದರ್ಭವನ್ನು ಸ್ಮರಿಸಿರಿ; ಮುಂಚೆ …
Read More »ಕೊರೊನಾ ವೈರಸ್, ಲಾಕ್ ಡೌನ್ ಮತ್ತು ಮಸೀದಿಗಳ ಪುನಶ್ಚೇತನ- ಒಂದು ಅವಲೋಕನ
@ ಡಾ| ಬೆಳಗಾಮಿ ಮುಹಮ್ಮದ್ ಸಾದ್ ಕೊರೊನಾ ವೈರಸ್ ಎಂಬ ಮಹಾಮಾರಿ ಮತ್ತದರ ಪರಿಣಾಮದಿಂದ ಇಡೀ ಜಗತ್ತು ತತ್ತರಿಸಿ ಹೋಗಿದೆ. ನಮ್ಮ ದೇಶದಲ್ಲಿ ಲಾಕ್ ಡೌನ್ನ ನಾಲ್ಕನೆಯ ಕಂತು ಜಾರಿಯಲ್ಲಿದೆ. ಲಾಕ್ ಡೌನ್ನ ಪರಿಣಾಮವಾಗಿ ಬಡ ಮತ್ತು ಕಾರ್ಮಿಕ ವರ್ಗವು ಅತಿ ಹೆಚ್ಚು ಸಂಕಷ್ಟಗಳಿಗೆ ತುತ್ತಾಗಿರುವುದು ಜಗಜ್ಜಾಹೀರಾಗಿದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯೂ ಬಹಳ ಕೆಟ್ಟು ಹೋಗಿದೆ. ಮುಸ್ಲಿಮರಾದ ನಮ್ಮ ಮಟ್ಟಿಗೆ ಇನ್ನೂ ಹೆಚ್ಚಿನ ಕಳವಳಕಾರಿ ಸಂಗತಿಯೇನೆಂದರೆ, ಮಸೀದಿಗಳಿಂದ …
Read More »ಬಟಾಟೆ, ಮೊಟ್ಟೆ, ಕಾಫಿ ಬೀಜ ಮತ್ತು ನಮ್ಮ ಬದುಕು
ಏ.ಕೆ. ಕುಕ್ಕಿಲ ಒಂದು ದಿನ ತಂದೆಯ ಜೊತೆ ಮಗಳು ತನ್ನ ದುಃಖಮಯ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾಳೆ. ಇದರಿಂದ ತಾನು ಹೊರಬರಲು ಏನು ಮಾಡಬೇಕು ಎಂದು ಪ್ರಶ್ನಿಸುತ್ತಾಳೆ. ತನ್ನ ಸುತ್ತ ಅನೇಕಾರು ಸಮಸ್ಯೆಗಳಿವೆ. ಸಮಸ್ಯೆಗಳು ಹೇಗೆ ತನ್ನನ್ನು ಮುತ್ತಿಕೊಂಡಿವೆಯೆಂದರೆ, ಒಂದನ್ನು ಬಿಡಿಸಿದರೆ ಇನ್ನೊಂದು ಎದುರಾಗುತ್ತದೆ. ಸುಖ ಎಂಬುದೇ ನಾಪತ್ತೆಯಾಗಿದೆ. ತಾನು ಈ ಸಮಸ್ಯೆಗಳ ಸುಳಿಯಿಂದ ಹೊರಬಂದು ಸುಖಮಯ ಬದುಕನ್ನು ಕಂಡುಕೊಳ್ಳಲು ಏನು ಮಾಡಬೇಕು ಎಂದು ಕೇಳಿಕೊಳ್ಳುತ್ತಾಳೆ. ಮಗಳ ಮಾತುಗಳನ್ನೆಲ್ಲಾ ಅಪ್ಪ ತದೇಕಚಿತ್ತದಿಂದ …
Read More »
IslamKannada News Portal