Home / ಲೇಖನಗಳು (page 41)

ಲೇಖನಗಳು

ಆ ಬಾಲಕನನ್ನು ಕಂಡು ನಾನು ದಂಗಾದೆ

@ ಡಾ| ಅಬ್ದುರ್ರಹ್ಮಾನ್ ಅಸ್ಸುಮೈತ್ವು ಕುವೈಟ್ ಸಮಾಜ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಪ್ರಸಿದ್ಧ ಸಂದೇಶ ಪ್ರಚಾರಕರೂ ಆದ ಡಾ. ಅಬ್ದುರ್ರಹ್ಮಾನ್ ಅಸ್ಸುಮೈತ್ವ್ ತಮ್ಮ ಅನುಭವವನ್ನು ವಿವರಿಸುತ್ತಾರೆ. ಆಫ್ರಿಕಾ ದೇಶಗಳ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಓರ್ವ ಬಡ ಮಹಿಳೆಯ ದೀನರೋಧನ ಗಮನಕ್ಕೆ ಬಂತು. ನಮ್ಮ ತಂಡದಲ್ಲಿದ್ದ ವೈದ್ಯರೊಡನೆ ಅವರು ಸಹಾಯ ಯಾಚಿಸುತ್ತಿದ್ದರು. ತನ್ನ ಮಗನ  ವಿದ್ಯಾಭ್ಯಾಸದ ವೆಚ್ಚವನ್ನು ಯಾವುದಾದರೂ ದಾನಿಗಳು ಭರಿಸುವಂತೆ ಮಾಡಬೇಕು. ತನ್ನ ಮಗನನ್ನು ಅಂತಹ ಪಟ್ಟಿಯಲ್ಲಿ ಸೇರಿಸಬೇಕು ಎಂಬುದು ಆಕೆಯ …

Read More »

ಹಜ್ಜ್ ನ ಮೂಲ ಸ್ವರೂಪ

ಹಜ್ಜ್ ಇಸ್ಲಾಮಿನ 5 ಸ್ತಂಭಗಳಲ್ಲಿ ಕೊನೆಯದು. ಏಕದೇವತ್ವ (ಅಲ್ಲಾಹನೇ ಸೌರ ಮಂಡಲದ ಸಾರ್ವಭೌಮ ಹಾಗೂ ಪ್ರವಾದಿ ಮುಹಮ್ಮದ್(ಸ) ಅಲ್ಲಾಹನ ದೂತರು,  ನಮಾಝ್, ಉಪವಾಸ, ಝಕಾತ್ (ಸಂಪತ್ತಿನ ಸ್ವಲ್ಪ ಭಾಗವನ್ನು ಬಡವರಿಗೆ ಕೊಡುವುದು ಹಜ್ಜ್- ಇವು ಇನ್ನಿತರ ನಾಲ್ಕು ಸ್ತಂಭಗಳು. ಹಜ್ಜ್ ಎಂದರೆ ತೀರ್ಥಯಾತ್ರೆ  ಅರ್ಥಾತ್ ಪವಿತ್ರ ಸ್ಥಳಗಳ ಸಂದರ್ಶನ. ಇಸ್ಲಾಂ ಕ್ಯಾಲೆಂಡರಿನ ಕೊನೆಯದಾದ ದುಲ್ ಹಜ್ಜ್ ತಿಂಗಳ 8ನೇ ತಾರೀಖಿನಿಂದ 12ನೇ ತಾರೀಖಿನವರೆಗೆ 5 ದಿನಗಳ ಕಾಲ ಮಕ್ಕಾದಿಂದ ಹೊರಟು …

Read More »

ಹಜ್ಜ್ ಆತಿಥ್ಯ: ಹಿಂದಿನ ಕಾಲದಿಂದ…

@ ರಮ್ಲಾ ಖಾನ್ ಮಕ್ಕಾದಲ್ಲಿ ಕಅಬಾ ಭವನದ ಸುತ್ತಲೂ ಶಾಶ್ವತ ಮನೆಗಳನ್ನು ನಿರ್ಮಿಸಿಲಾಯಿತಾದರೂ ಅವುಗಳಿಗೆ ಬಾಗಿಲುಗಳಿರಲಿಲ್ಲ. ಬಾಗಿಲುಗಳಿಲ್ಲದ ಈ ಮನೆಗಳು ಹಜ್ಜ್ ಗೆ  ಆಗಮಿಸುವ ಯಾತ್ರಿಗಳ ಆತಿಥ್ಯಕ್ಕೆ ಸದಾ ತೆರೆದುಕೊಂಡವುಗಳಾಗಿದ್ದವು. ಮಕ್ಕಾದ ಜನರು ಯಾತ್ರಿಕರನ್ನು ಅರಬ್ ಶುಭಾಶಯ `ಅಹಲನ್ ವ ಸಹ್‍ಲನ್’ ಎನ್ನುವುದರ  ಮೂಲಕ ಸ್ವಾಗತಿಸುತ್ತಿದ್ದರು. ಆತಿಥ್ಯ ಪೂರ್ವ ಇಸ್ಲಾಮಿಕ್ ಕಾಲದಲ್ಲಿ ಪೂರ್ವ ಇಸ್ಲಾಮಿಕ್ ಕಾಲಘಟ್ಟದಲ್ಲಿ ಮಕ್ಕಾದ ಜನರಿಗೆ ಕಅಬಾ ಭವನ ಮತ್ತು ಅದರ ಸಂದರ್ಶನಕ್ಕೆ ಆಗಮಿಸುವ ನೆರೆಯ ದೇಶಗಳ …

Read More »

ಹಾಜಿ, ನೀವು ಮರಳುವಾಗ ಏನನ್ನು ತರುತ್ತೀರಿ?

@ ಕೆ.ಪಿ. ಪ್ರಸನ್ನನ್ ಕೆಲವು ಪದಗಳು, ವಾಕ್ಯಗಳು, ಸಂದರ್ಭಗಳು… ನಿಮ್ಮನ್ನು ಆ ಯಾತ್ರೆಗೆ ಪ್ರೇರೇಪಿಸುತ್ತದೆ. ಅದು ನನ್ನಲ್ಲಿ ಸಂಭವಿಸಲು `ಮೀಕಾತ್’ ಎಂಬ ಪದದ ವಿವರಣೆಯಿಂದಾಗಿತ್ತು.  ನನಗೆ ಅರಬಿಯಲ್ಲಿ ಅಷ್ಟೊಂದು ಹಿಡಿತವಿಲ್ಲ. ಆದ್ದರಿಂದ ಕೆಲವು ಅರ್ಥಗಳನ್ನು ನನ್ನದೇ ರೀತಿಯಲ್ಲಿ ವಿಕಸಿಸಿ ನಾನು ಒಂದು ನಿಲುವಿಗೆ ಬರುತ್ತೇನೆ. ಮನದಲ್ಲೇ ಅದನ್ನು ಜೋಪಾನವಾಗಿಸಿ ನನ್ನ ಸಮಾಧಾನದೊಂದಿಗೆ ಸೇರಿಸಿಕೊಳ್ಳುತ್ತೇನೆ. ಅದರ ಸರಿ-ತಪ್ಪುಗಳ ಕುರಿತು ತರ್ಕ ಮಾಡಲು ತಯಾರಿಲ್ಲ. ಏಕೆಂದರೆ ಅದು ನನ್ನದು ಮಾತ್ರ. ಕೆಲವು ಪ್ರೀತಿ …

Read More »

ಹಜ್ಜ್ ನ ಬಳಿಕ ಹೊಸ ಜೀವನ

ಸಂಗ್ರಹ: ಎನ್.ಎಂ. ಪಡೀಲ್ ಅಬೀ ಹುರೈರ(ರ): ಕಾ ಅನ್ನ ರಸೂಲುಲ್ಲಾಹಿ(ಸ) ಕಾಲ; ಅಲ್ ಉಮ್ರತು ಇಲಲ್ ಉಮ್ರತಿ ಕಫ್ಪಾರತುನ್ ಲಿಮಾ ಬೈನಹುಮಾ, ವಲ್‍ಹಜ್ಜುಲ್ ಮಬ್‍ರೂರು ಲೈಸ  ಲಹೂ ಜಝಾಉನ್ ಇಲ್ಲಲ್ ಜನ್ನತು. (ಮುತ್ತಫಕುನ್ ಅಲೈಹಿ) ಅಬೂ ಹುರೈರಾ(ರ) ವರದಿ ಹೀಗೆ ಮಾಡಿದ್ದಾರೆ- ಪ್ರವಾದಿ(ಸ) ಹೇಳುತ್ತಾರೆ, ಒಂದು ಉಮ್ರವು ಇನ್ನೊಂದು ಉಮ್ರದ ವರೆಗಿನ ಪಾಪಗಳನ್ನು ತೊಳೆಯುತ್ತದೆ. ಇನ್ನು ಸ್ವೀಕಾರಾರ್ಹ ಹಜ್ಜ್ ನ ಬದಲಿ ಸ್ವರ್ಗವಲ್ಲದೆ ಇನ್ನೇನೂ ಇಲ್ಲ. ಇಸ್ಲಾಮ್‍ನ ಐದು ಆಧಾರ …

Read More »

ಪ್ರವಾದಿ ಇಬ್ರಾಹೀಮ್‍ರ ಕಾಲದ ವಿಗ್ರಹಗಳು

ಟಿ. ಮುಹಮ್ಮದ್ ವೇಳಂ ಪ್ರವಾದಿ ಇಬ್ರಾಹೀಮ್(ಅ)ರ ಕಾರ್ಯಚಟುವಟಿಕೆಯ ಕೇಂದ್ರ ಬಿಂದು ವಿಗ್ರಹಗಳಾಗಿತ್ತು. ಇಬ್ರಾಹೀಮ್(ಅ)ರು ಇತಿಹಾಸದ ಅತ್ಯಂತ ದೊಡ್ಡ ವಿಗ್ರಹ ಆರಾಧನೆಯ ವಿರೋಧಿಯಾಗಿದ್ದರು. ಇಬ್ರಾಹೀಮರ ಈ ರೀತಿಯ ವಿಗ್ರಹ ವಿರೋಧಕ್ಕೆ ವಿಗ್ರಹಾರಾಧನೆಯ ವಿರುದ್ಧದ ಸಂದೇಶ ಪ್ರಚಾರದ ಹೊರತಾದ ಪ್ರಾಯೋಗಿಕ ವರ್ತನೆಗಳಿಗೆ ವಿವಿಧ ಕಾರಣಗಳಿವೆ. ಅವುಗಳಲ್ಲಿ ಒಂದನ್ನು ಅನಾವರಣಗೊಳಿಸುವುದು ಈ ಲೇಖನದ ಉದ್ದೇಶ. ವಿಗ್ರಹವು ಇಬ್ರಾಹೀಮ್(ಅ)ರ ಸಮೂಹದ ಅಡಿಪಾಯವಾಗಿತ್ತು. ಅಲ್ಲಾಹನು ಹೇಳುತ್ತಾನೆ: ಇಬ್ರಾಹೀಮ್ ಹೇಳಿದರು, “ನೀವು ಲೌಕಿಕ ಜೀವನದಲ್ಲಂತೂ ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು …

Read More »

ಮಹಿಳೆಯರು: ಮಸೀದಿ, ಹಜ್ಜ್,  ಧರ್ಮ ಯುದ್ಧ ಇತ್ಯಾದಿ…

ಮಹಿಳೆಯರ ನೈಸರ್ಗಿಕವಾದ ಕೆಲವು ಅಡೆ-ತಡೆ, ಇತಿ-ಮಿತಿಗಳು, ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳಿಂದಾಗಿ ಇಸ್ಲಾಮ್ ಆಕೆಗೆ ಅನೇಕ ಧಾರ್ಮಿಕ, ವಿಧಿ-ಕರ್ತವ್ಯಗಳಿಂದ ವಿನಾಯಿತಿ ನೀಡಿದೆ. ಮಹಿಳೆಯರಿಗೆ ಆಗುವ ಮಾಸಿಕ ಆರ್ತವ, ಪ್ರಸವಾನಂತರದ ರಕ್ತಸ್ರಾವಗಳ ವೇಳೆ ನಮಾಝ್ ಮತ್ತು ಉಪವಾಸ ವ್ರತಗಳಂತಹ ಕಡ್ಡಾಯ ಕರ್ತವ್ಯಗಳಿಂದ ಆಕೆಗೆ ವಿನಾಯಿತಿ ಇದೆ. ಆರ್ತವ ಕಾಲದಲ್ಲಿ ಆಕೆಯ ಮೇಲೆ ನಮಾಝ್ ಕಡ್ಡಾಯವಲ್ಲವೆಂಬುದು ಮಾತ್ರವಲ್ಲ, ಆ ಕಾಲಾವಧಿಯಲ್ಲಿ ಆಕೆ ನಮಾಝ್ ಮಾಡಬಾರದೆಂದೇ ವಿಧಿಸಲಾಗಿದೆ. ಹಾಗೆ ಬಿಟ್ಟು ಹೋದ ನಮಾಝ್‍ಗಳನ್ನು ಆಕೆ ಮತ್ತೆ …

Read More »

ವಿರೋಧಿಸುವ ಮೊದಲೊಮ್ಮೆ ಓದಿಕೊಳ್ಳಿ…

ಏ.ಕೆ. ಕುಕ್ಕಿಲ ಅಬೂತಾಲಿಬ್ ಇಸ್ಲಾಮನ್ನು ಅತ್ಯಂತ ಚೆನ್ನಾಗಿ ಮತ್ತು ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸುವ ಹೆಸರು ಇದು. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ ಎಂಬ ಪವಿತ್ರ ಕುರ್‍ಆನಿನ ಸಂದೇಶದ ಪ್ರಾಯೋಗಿಕ ನೆಲೆ-ಬೆಲೆಯ ಕುರಿತು ಯಾರಿಗಾದರೂ ಸಂದೇಹವಿದ್ದರೆ, ಅವರು ಅಬೂತಾಲಿಬ್‍ರ ಬದುಕನ್ನು ಅಧ್ಯಯನ ನಡೆಸಬೇಕು. ಉದಾರವಾದ ಮತ್ತು ಇಸ್ಲಾಮನ್ನು ಬೇರೆ ಬೇರೆ ತಟ್ಟೆಯಲ್ಲಿಟ್ಟು ತೂಗುವವರ ಪಾಲಿಗೆ ಅಬೂತಾಲಿಬ್  ಒಂದೊಳ್ಳೆಯ ಸರಕು. ಕುತೂಹಲಕಾರಿ ಹೆಸರು. ಇನ್ನೊಂದು ಐತಿಹಾಸಿಕ ಮದೀನ ಒಡಂಬಡಿಕೆ. ಪ್ರವಾದಿ ಮುಹಮ್ಮದ್‍ರು(ಸ) ಮಕ್ಕಾದಲ್ಲಿ 13 ವರ್ಷಗಳ …

Read More »

ಬಹುಪತ್ನಿತ್ವ

ಇಂದು ಬಹುಪತ್ನಿತ್ವವನ್ನು ಮಹಿಳೆಯ ಅಪಮಾನವೆಂದು ಪರಿಗಣಿಸಲಾಗುತ್ತದೆ. ಇಸ್ಲಾಮಿನ ವಿಧಿ ನಿಯಮಗಳ ಪೈಕಿ ಪುರುಷರಿಗೆ ನಾಲ್ಕು ವಿವಾಹವಾಗುವ ಅನುಮತಿಯು ಅತ್ಯಧಿಕ ಟೀಕೆಗೆ ಗುರಿಯಾಗಿದೆ. ಇದು ಮಹಿಳಾ ಸ್ವಾತಂತ್ರ್ಯ ಮತ್ತು ಸ್ತ್ರೀ-ಪುರುಷ ಸಮಾನತೆಗೆ ವಿರುದ್ಧವಾಗಿದೆಯೆಂದು ಹೇಳಲಾಗುತ್ತದೆ. ಇದರಿಂದ ಇಸ್ಲಾವಿೂ ಸಮಾಜದಲ್ಲಿ ಸ್ತ್ರೀಯನ್ನು ಕೇವಲ ಭೋಗ ವಸ್ತುವೆಂದು ಪರಿಗಣಿಸಲಾಗಿದೆಯೆಂದು ಸಾಬೀತು ಪಡಿಸಲು ಪ್ರಯತ್ನಿಸಲಾಗು ತ್ತದೆ. ಆದರೆ ವಸ್ತುಸ್ಥಿತಿಯು ಇದಕ್ಕೆ ತೀರಾ ಭಿನ್ನವಾಗಿದೆ. ಇಸ್ಲಾಮ್ ಸ್ತ್ರೀಯನ್ನು ತಾಯಿ, ಮಗಳು, ಸೋದರಿ, ಪತ್ನಿ ಮತ್ತು ಸೊಸೆಯ ರೂಪಗಳಲ್ಲಿ …

Read More »

ಹೆಚ್ಚು ಲಾಭದಾಯಕ ವ್ಯಾಪಾರ

  ಅಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿದ್ದ ಗುರು ನಾನಕರ ಗಮನವನ್ನು ಬೇರೆಡೆಗೆ ಹರಿಸಲಿಕ್ಕಾಗಿ ಅವರ ತಂದೆ ಅವರನ್ನು ವ್ಯಾಪಾರದಲ್ಲಿ ತೊಡಗಲು ಹೇಳಿದರು. ಹತ್ತಿರದ ಪೇಟೆಯಿಂದ ವಸ್ತುಗಳನ್ನು ಖರೀದಿಸಿ ತರಲು ಬೇಕಾದ ಹಣವನ್ನು ನೀಡಿದರು. ಪೇಟೆಗೆ ಹೋಗುವ ದಾರಿಯಲ್ಲಿ ಗುರು ನಾನಕ್ ಕೆಲವು ಮಂದಿ ಬಡವರನ್ನು ಭೇಟಿಯಾದರು. ನಾವು ಊಟ ಮಾಡಿ ಬಹಳ ದಿನವಾದುವು ಎಂದು ಅವರು ಗುರು ನಾನಕ್‍ರಿಗೆ ಹೇಳಿದರು. ಆಗ ತನ್ನ ಬಳಿಯಿದ್ದ ಹಣವನ್ನೆಲ್ಲಾ ಅವರಿಗೆ ನೀಡಿ ಗುರು ನಾನಕ್ …

Read More »