ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಸೃಷ್ಟಿಕರ್ತನು ಮನುಷ್ಯನಿಗೆ ಪಂಚೇಂದ್ರಿಯಗಳನ್ನು ದಯಪಾಲಿಸಿರುವನು. ಅವು ಪದಾರ್ಥಗಳನ್ನು ಅನುಭವಿಸುವ ಮಾಧ್ಯಮಗಳಾಗಿವೆ. ಇಂದ್ರಿಯ ಅನುಭವಗಳನ್ನು ವಿಶ್ಲೇಷಿಸಿ ಪದಾರ್ಥಗಳ ಹಿಂದಿರುವ ವಾಸ್ತವಿಕತೆಗಳನ್ನು ಕಂಡುಕೊಳ್ಳಲು ಬೇಕಾದ ಬುದ್ಧಿ ಶಕ್ತಿಯನ್ನೂ ದೇವನು ನಮಗೆ ನೀಡಿರುವನು. ಪಂಚೇಂದ್ರಿಯಗಳು ಮತ್ತು ಬುದ್ಧಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಮನುಷ್ಯನು ಭೌತಿಕವಾಗಿಯಾಗಲಿ, ಅಧ್ಯಾತ್ಮಿಕವಾಗಿಯಾಗಲಿ ದಾರಿ ತಪ್ಪಲಿಕ್ಕಿಲ್ಲ. ಅವನ ನಂಬಿಕೆ, ನಡವಳಿಕೆ, ಅನುಕರಣೆ ಮತ್ತು ಆವಿಷ್ಕಾರಗಳೆಲ್ಲವೂ ಸ್ಪಷ್ಟ ಜ್ಞಾನ ಮತ್ತು ಚಿಂತನೆಯ ಆಧಾರದಲ್ಲಿರುವುವು. ಅದು …
Read More »ದಾನವೇ ಧರ್ಮ – ಕುರ್ಆನಿನ ಸಾಮಾಜಿಕ ಚಿಂತನೆಗಳು
@ ಅಶೀರುದ್ದೀನ್ ಆಲಿಯಾ ಮಂಜನಾಡಿ “ನಾವೇನನ್ನು ಖರ್ಚು ಮಾಡಬೇಕೆಂದು ಜನರು ಕೇಳುತ್ತಾರೆ. ನೀವು ಏನು ಖರ್ಚು ಮಾಡುತ್ತೀರೋ ಅದನ್ನು ನಿಮ್ಮ ಮಾತಾಪಿತರ, ಸಂಬಂಧಿಕರ, ಅನಾಥರ, ಬಡವರ ಮತ್ತು ಪ್ರಯಾಣಿಕರ ಮೇಲೆ ಖರ್ಚು ಮಾಡಿರೆಂದೂ ನೀವು ಮಾಡುವ ಎಲ್ಲ ಒಳಿತುಗಳನ್ನು ಅಲ್ಲಾಹ್ ಚೆನ್ನಾಗಿ ಅರಿಯುವವನಾಗಿರುತ್ತಾನೆಂದೂ ಉತ್ತರ ಹೇಳಿರಿ.” (ಅಲ್ಬಕರ: 215) ಪರಿಶುದ್ಧತೆಯ ಪ್ರತೀಕವಾಗಿದೆ `ದಾನ’. ಕೊಡುವುದು, ಸಹಾಯ ಮಾಡುವುದು, ಉಪಕಾರ ಮಾಡುವುದು, ಸೇವೆ ಮಾಡುವುದು, ನೀಡುವುದು ಇತ್ಯಾದಿ ಸಮಾನಾರ್ಥ ಪದಗಳ ರೂಪವಾಗಿಯೂ …
Read More »ಪವಿತ್ರ ಕುರ್ಆನನ್ನು ಹೇಗೆ ತಿಳಿದುಕೊಳ್ಳಬೇಕು?
@ ಎಂ.ಎಸ್. ಶೈಜು ಈ ವಿಶ್ವದ ನಿಗೂಢತೆಗಳ ಹಿಂದೆ ಒಂದು ಮಹಾನ್ ಶಕ್ತಿಯಿದೆ ಎಂದು ಮನುಷ್ಯರಲ್ಲಿ ಬಹುಸಂಖ್ಯೆಯ ಜನರ ನಂಬಿಕೆಯಾಗಿದೆ. ಆ ಶಕ್ತಿಯೊಂದಿಗೆ ಮಾನವ ಕುಲದೊಂದಿಗೆ ಪ್ರತ್ಯಕ್ಷ ವಾದ ಸಂಬಂಧವನ್ನು ದೇವ ಗ್ರಂಥಗಳು ಪ್ರತಿನಿಧಿಸುತ್ತವೆ. ದೇವನ ಮಾರ್ಗದರ್ಶನವಾಗಿ ಮನುಷ್ಯರಿಗೆ ಲಭಿಸಿದ ಮಾರ್ಗದರ್ಶನವದು. ಅದರಲ್ಲಿ ಅಂತಿಮ ದೇವಗ್ರಂಥವೇ ಪವಿತ್ರ ಕುರ್ಆನ್. ಕುರ್ಆನ್ ತನ್ನನ್ನು ಆ ರೀತಿ ಪರಿಚಯಿಸುತ್ತದೆ. ಮಾನವನ ಜೀವನಕ್ಕೆ ಅಗತ್ಯವಾದ ಸೂಚನೆಗಳನ್ನು ಕುರ್ಆನ್ ಮುಂದಿರಿಸುತ್ತದೆ. `ನ್ಯಾಯ’ ಎಂಬ ಒಂದು ಅಳತೆಗೋಲಿನಿಂದ ಮಾನವ ಜೀವನವನ್ನೂ, …
Read More »ಸರಿಸಾಟಿಯಿಲ್ಲದ ವ್ಯಕ್ತಿತ್ವ…!!!
ತಮಿಳು ದೈನಿಕ ‘ನೀರೋಟ್ಟಮ್’ನ ಪತ್ರಿಕೆಯ ಸಂಪಾದಕ ‘ಅಡಿಯಾರ್’ ತಮ್ಮ ಪತ್ರಿಕೆಯಲ್ಲಿ ಬರೆದಿದ್ದ “ನಾನ್ ಕಾದಲಿಕ್ಕುಮ್ ಇಸ್ಲಾಮ್” ಎಂಬ ಲೇಖನ ಮಾಲೆಯ ಒಂದು ಪುಟ್ಟ ಲೇಖನ. ‘ಮುಸ್ಲಿಮರು’ ಆಜ್ಞಾನಿಗಳು,ಹಠವಾದಿಗಳು,ಕೋಪಿಷ್ಠರು, ಆಕ್ರಮಿಗಳು,ಅಹಂಭಾವಿಗಳು ಎಂದೆಲ್ಲಾ ಮುಸ್ಲಿಮೇತರ ಬಂಧುಗಳ ಮಧ್ಯೆ ಪ್ರಚಾರವಿದೆ. ಶೋಧ ನಡೆಸಿದರೆ ಮತ್ತು ಹತ್ತಿರ ಹೋಗಿ ನೋಡಿದರೆ ಬೇರೆಯೇ ಒಂದು ವಾಸ್ತವಿಕತೆ ಸೂರ್ಯನಿಗಿಂತ ಪ್ರಕಾಶಮಾನವಾಗಿ ಮುಂದೆ ಬರುತ್ತದೆ. ಇಸ್ಲಾಮ್ ಎಂದರೆ ಶಾಂತಿ ಮತ್ತು ರಕ್ಷಣೆಯೆಂದರ್ಥ. ನನ್ನ ತಿಳುವಳಿಕೆಯ ಮಟ್ಟಿಗೆ ಮೃದು ಸ್ವಭಾವ, ವಿಕಾರಗಳ …
Read More »ಸೃಷ್ಟಿಕರ್ತನೆಡೆಗೆ ಮರಳುವ ಕರೆ
@ ರೈಹಾನ್ ವಿ.ಕೆ., ಸಚೇರಿಪೇಟೆ ಈ ಪ್ರಪಂಚ ಒಂದು ನಿರ್ದಿಷ್ಟ ನಿಯಮಕ್ಕೆ ಬದ್ದವಾಗಿ ಚಲಿಸುತ್ತಿದೆ. ಸೂರ್ಯ ಚಂದ್ರ ನಕ್ಷತ್ರಗಳೆಲ್ಲವೂ ತನ್ನದೇ ಆದ ಕಕ್ಷೆಯಲ್ಲಿ ಚಲಿಸುತ್ತಿವೆ. ಹಾಗೆಯೇ ಮನುಷ್ಯನ ಅಂಗಾಂಗಗಳು ಕೂಡಾ ತನಗೇನು ಆಜ್ಞಾಪಿಸಲಾಗಿದೆಯೋ ಅದರಂತೆಯೇ ಕಾರ್ಯ ನಿರ್ವಹಿಸುತ್ತಿವೆ. ಮನುಷ್ಯನು ಇಲ್ಲಿ ನಿರ್ದಿಷ್ಟ ಜೀವನ ವ್ಯವಸ್ಥೆಗೆ ಬದ್ಧನಾಗಿದ್ದಾನೆ. ಯಾರು ತನಗೆ ಇಲ್ಲಿ ಜೀವಿಸಲು ಅವಕಾಶ ಮಾಡಿ ಕೊಟ್ಟಿರುವನೋ ಅವನ ಆದೇಶದಂತೆ ಜೀವಿಸುವುದರ ಮೂಲಕ ನಾವು ಅವನಿಗೆ ಕೃತಜ್ಞರಾಗಬೇಕಿದೆ. ನಾವೆಲ್ಲರೂ ಒಂದು ದಿನ …
Read More »ಮುಸ್ಲಿಮ್ ಸಮುದಾಯ ಹೇಗೆ ಪ್ರತಿಕ್ರಿಯಿಸಬೇಕಿತ್ತು?
ಎ. ಕೆ. ಕುಕ್ಕಿಲ ಬೆಂಗಳೂರು ಮತ್ತು ಶೃಂಗೇರಿಯಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಘಟನೆಗಳು ನಡೆದಿವೆ. ಈ ಎರಡೂ ಘಟನೆಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸಿದ ಪ್ರತಿಕ್ರಿಯೆ ಏಕಪ್ರಕಾರವಾಗಿರಲಿಲ್ಲ. ಬೆಂಗಳೂರು ಮತ್ತು ಶೃಂಗೇರಿ ಘಟನೆಗಳಿಗೆ ಮೂಲ ಕಾರಣ ನವೀನ್ ಮತ್ತು ಮಿಲಿಂದ್. ಪ್ರವಾದಿ ಮುಹಮ್ಮದ್ರನ್ನು(ಸ) ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ನವೀನ್ ಒಂದು ಪೋಸ್ಟ್ ಹಾಕುತ್ತಾನೆ. ನಡೆದಿರುವುದು ಇಷ್ಟೇ. ಆದರೆ ಆ ಬಳಿಕದಿಂದ ಇವತ್ತಿನವರೆಗೆ ಚರ್ಚೆಯಲ್ಲಿರುವುದು ನವೀನನಲ್ಲ, ಮುಸ್ಲಿಮ್ ಸಮುದಾಯ. ಪೊಲೀಸರು ಬಂಧಿಸುತ್ತಿರುವುದು …
Read More »ಆಯಿಶಾರ ಪ್ರಶ್ನೆ, ಪ್ರವಾದಿಯ ಉತ್ತರ
@ ಏ.ಕೆ. ಕುಕ್ಕಿಲ 1. ಉಹುದ್ 2. ತಾಯಿಫ್ ಮಕ್ಕಾದಲ್ಲಿ ಪ್ರವಾದಿ ಮುಹಮ್ಮದರ(ಸ) ಪಾಲಿಗೆ ದೊಡ್ಡ ಶಕ್ತಿಯಾಗಿದ್ದ ದೊಡ್ಡಪ್ಪ ಅಬೂತಾಲಿಬ್ ಮತ್ತು ಪತ್ನಿ ಖದೀಜಾ- ಇಬ್ಬರೂ ಬೆನ್ನು ಬೆನ್ನಿಗೇ ಮೃತಪಟ್ಟ ಬಳಿಕ ಪ್ರವಾದಿ ಅನಾಥತೆಯನ್ನು ಅನುಭವಿಸಿದರು. ಅಬೂತಾಲಿಬ್ ಜೀವಿಸಿರುವವರೆಗೆ ಅವರಿಗೆ ಅಸ್ತಿತ್ವದ ಸಮಸ್ಯೆ ಕಾಡಿರಲಿಲ್ಲ. ಅಬೂತಾಲಿಬ್ ಅಭಯ ನೀಡಿದ್ದರು. ಅಬೂತಾಲಿಬ್ರನ್ನು ಎದುರು ಹಾಕಿಕೊಂಡು ಪ್ರವಾದಿ ಮುಹಮ್ಮದ್ರೊಂದಿಗೆ ಜಗಳ ಕಾಯುವ ಮತ್ತು ಅವರನ್ನು ಮಕ್ಕಾದಿಂದ ಹೊರ ಹಾಕುವ ಧೈರ್ಯ ಯಾರಿಗೂ ಇರಲಿಲ್ಲ. …
Read More »ದುಃಖ, ನೋವನ್ನು ಇಳಿಸಿಬಿಡಿ
@ ಮುಹಮ್ಮದ್ ಯೂಸುಫ್ ಇಸ್ಲಾಹಿ ಆತ್ಮವಿಶ್ವಾಸ ಕುಂದಿ ಹೋಗದೆ, ಸಂದಿಗ್ಧ ಘಟ್ಟಗಳನ್ನು ಅತ್ಯಂತ ಶಾಂತಿಯಿಂದ ಎದುರಿಸಿ, ದುಃಖ ಹಾಗೂ ಸಂಕಟಗಳಲ್ಲಿ ಮಿತಿಯ ಪರಿಧಿಯನ್ನು ಮೀರದಂತೆ ನಾವು ಬದುಕಬೇಕು. ದುಃಖ, ದುರಂತ, ಪರೀಕ್ಷೆ, ಆಪತ್ತು ಇವುಗಳಿಂದೆಲ್ಲಾ ಮುಕ್ತನಾದ ಯಾರೂ ಈ ಲೋಕದಲ್ಲಿ ಇರಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸುವ ವಿಷಯದಲ್ಲಿ ಸತ್ಯವಿಶ್ವಾಸಿ ಮತ್ತು ಅವಿಶ್ವಾಸಿಯ ನಡುವೆ ಬಹಳ ವ್ಯತ್ಯಾಸವಿದೆ. ದುಃಖ ನೋವು ಸಂಕಟಗಳಿಂದ ಪರಿಭ್ರಾಂತವಾಗಿ ನಿರಾಶೆಯ ಕಡಲಲ್ಲಿ ಮುಳುಗಿ ಕೆಲವೊಮ್ಮೆ ಆತ್ಮಹತ್ಯೆಯಲ್ಲಿ ಅಭಯ …
Read More »ಮೂಸಾ(ಅ)ರ ಲಾಠಿ, ಕುರ್ಆನ್ ಮತ್ತು ಕಲಿಮತುತ್ವಯ್ಯಿಬ
@ ರೈಹಾನ ವಿ.ಕೆ ಹ. ಮೂಸಾ(ಅ)ರ ಊರುಗೋಲಿಗೆ ಅದ್ಭುತವಾದಂತಹ ಶಕ್ತಿಯಿತ್ತು. ಸಮುದ್ರಕ್ಕೆ ಅದರಿಂದ ಹೊಡೆದಾಗ; ಅದು ಅಲ್ಲಾಹನ ಆಜ್ಞೆಯಂತೆ ಸಮುದ್ರವನ್ನು ಇಬ್ಭಾಗವನ್ನಾಗಿಸಿ ಬಹಳ ಎತ್ತರವಾದಂತಹ ಪರ್ವತದಂತಾಗಿಸಿತು. ಸೂರಃ ತಾಹಾದಲ್ಲಿ ಅಲ್ಲಾಹನು ಹೇಳುತ್ತಾನೆ: “ಲಾಠಿಯಿಂದ ಹೊಡೆದಾಗ ಸಮುದ್ರದ ನೀರು ಇಬ್ಭಾಗವಾಗಿ ಮಹಾ ಪರ್ವತದಂತೆ ನಿಂತು ಬಿಟ್ಟಿತು. ಮಾತ್ರವಲ್ಲ ಆ ಬಳಿಕ ಗೋಚರವಾದ ದಾರಿಯು ಒಣಗಿತ್ತು.” ಇಂತಹ ಒಂದು ಅದ್ಭುತ ಪವಾಡವು ಮೂಸಾ(ಅ)ರ ಚಾಟಿಯಿಂದ ಸಂಭವಿಸುತ್ತದೆ. ಮಾತ್ರವಲ್ಲ; ಜನರು ಇಂದೂ ಸಹ ಅದನ್ನು …
Read More »ಕೊರೋನಾ ನೆನಪಿಸಿದ ಸತ್ಯ
ಮರಣದ ಕುರಿತು ನಮ್ಮ ನಿರ್ಲಕ್ಷ್ಯವು ಲೌಕಿಕ ಜೀವನದ ಸುಖಾಂಡಬರಗಳಲ್ಲೇ ಮುಳುಗಲು ಕಾರಣವಾಗುತ್ತದೆಂಬ ಕುರಿತು ಧಾರಾಳ ಉಪನ್ಯಾಸಗಳನ್ನು, ಭಾಷಣ, ಲೇಖನ ನಾವು ಆಲಿಸಿದ್ದೇವೆ. ಓದಿದ್ದೇವೆ. ಆದರೆ ಕೊರೋನಾ ಕಾಲದಲ್ಲಿ ನಾವು ಅರಿತುಕೊಂಡ ವಾಸ್ತವಿಕತೆಗಳಲ್ಲಿ ಅತ್ಯಂತ ಮುಖ್ಯವಾಗಿ ಮನುಷ್ಯ ತನ್ನ ಮರಣದ ಕುರಿತು ಧಾರಾಳವಾಗಿ ನೆನಪಿಸಿಕೊಂಡಿದ್ದಾನೆ. ಮರಣವು ನಿಷೇಧಿಸಲಾಗದ ಸತ್ಯವೆಂಬ ಅರಿವಿದ್ದೂ, ಅದು ತನ್ನ ಬಳಿಗೆ ತಲುಪಲು ಇನ್ನೂ ಸಮಯವಿದೆಯೆಂದೇ ಸಾಮಾನ್ಯವಾಗಿ ಹೆಚ್ಚಿನೆಲ್ಲರ ಭಾವನೆಯಾಗಿರುತ್ತದೆ. ಆದರೆ ಎಂಥ ಆರೋಗ್ಯವಂತನೂ ಕ್ಷಣಾರ್ದದಲ್ಲೇ ರೋಗಿಯಾಗಿ, ಕೆಲವೇ …
Read More »
IslamKannada News Portal