Home / ಲೇಖನಗಳು (page 20)

ಲೇಖನಗಳು

ಹಲಾಲ್- ಹರಾಮ್

ಅವರು ಪ್ರತಿದಿನ ಪ್ರಭಾತ ನಮಾಝ್ ಮಾಡಿದ ಕೂಡಲೇ ಮಸೀದಿಯಿಂದ ಗಡಿಬಿಡಿಯಲ್ಲಿ ಓಡಿ ಹೋಗುತ್ತಿದ್ದರು.ಇದನ್ನು ಗಮನಿಸುತ್ತಿದ್ದ ಪ್ರವಾದಿ(ಸ)ಯವರು ಒಂದು ದಿನ ಕೇಳಿದ್ರು. ನೀವು ನಮಾಝ್ ಆದ ಕೂಡಲೇ ಇಷ್ಟು ಅರ್ಜಂಟ್ ನಲ್ಲಿ ಯಾಕೆ ಹೋಗುವುದು. ಅದಕ್ಕವರು ಪ್ರವಾದಿವರ್ಯರೇ ಈಗ ಪ್ರಕೃತಿ ಫಲ ಕೊಡುವ ಸಮಯ. ನನ್ನ ಮನೆ ಪಕ್ಕದ ಮನೆಯವರ ಹಣ್ಣಿನ ಮರದಿಂದ ಹಣ್ಣು ನನ್ನ ಮನೆಯ ಅಂಗಳಕ್ಕೆ ಬಿದ್ದಿರುತ್ತವೆ. ಅದನ್ನು ನನ್ನ ಮಕ್ಕಳು‌ ತಿನ್ನುತ್ತಾರೋ ಎಂಬ ಹೆದರಿಕೆಯಿದೆ. ಅದು ಹಲಾಲ್ …

Read More »

ಅಮ್ಮ ಎಂಬ ಕರುಣೆಯ ಸಾಗರ

@ ಶೈಖ್ ಮುಹಮ್ಮದ್ ಕಾರಕುನ್ನು ಮರೆಯಲಾಗದ ಮಾತೆಯ ಅಸಾಮಾನ್ಯವಾದ ತ್ಯಾಗದ ಕುರಿತು ಸುಪ್ರಸಿದ್ಧವಾದ ಕತೆಯೊಂದಿದೆ. ಒಂದು ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರ ವಾಸವಾಗಿದ್ದರು. ದೇಹ ಎರಡಾದರೂ ಒಂದೇ ಜೀವ ಎಂಬಷ್ಟು ಪ್ರೀತಿ ಅನ್ಯೋನ್ಯತೆ  ಅವರಲ್ಲಿತ್ತು. ಅಂತಹ ಒಂದು ಪ್ರೀತಿ ವಾತ್ಸಲ್ಯದ ಬದುಕು ಅವರದ್ದಾಗಿತ್ತು. ಮಗನ ಮನದಲ್ಲಿ ಮಾತೆಯ ಚಿತ್ರ ಮಾತ್ರವಿತ್ತು. ಆ ತಾಯಿಯ  ಮನದಲ್ಲಿಯೂ ಆ ಏಕಮಾತ್ರ ಪುತ್ರನೇ ತುಂಬಿದ್ದನು. ಅವರು ಜೊತೆಯಾಗಿಯೇ ಆಹಾರ ಸೇವಿಸುತ್ತಿದ್ದರು. ಜೊತೆಯಾಗಿಯೇ ನಿದ್ದೆ …

Read More »

ಕುರ್ ಆನ್ ಮುಸ್ಲಿಮೇತರರನ್ನು ಕೊಲ್ಲುವಂತೆ ಆದೇಶಿಸುತ್ತದೆಯೇ?

ಕುರ್‌ಆನ್‌ನ ಸೂಕ್ತಗಳನ್ನು ಸಂದರ್ಭಗಳಿಂದ ಬೇರ್ಪಡಿಸಿ (out of context) ಜನರಲ್ಲಿ ಇಸ್ಲಾಮಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುವ ಕಾರ್ಯದಲ್ಲಿ ಒಂದು ವರ್ಗವು ಸದಾ ನಿರತವಾಗಿದೆ. ಕಾಫಿರರನ್ನು ಕಂಡಲ್ಲಿ ವಧಿಸಿರಿ ಎಂದು ಕುರ್ ಆನ್ ಹೇಳುತ್ತದೆ ಎಂಬುದಕ್ಕೆ ಪುರಾವೆಯಾಗಿ ಅವರು ಕುರ್‌ಆನಿನ 2ನೇ ಅಧ್ಯಾಯದ 190 ಮತ್ತು 9ನೇ ಅಧ್ಯಾಯದ 5ನೇ ಸೂಕ್ತಗಳನ್ನು ತಲೆಬಾಲ ಕತ್ತರಿಸಿ ತೋರಿಸುತ್ತಾರೆ. 2ನೇ ಅಧ್ಯಾಯದ 190-191ನೇ ಸೂಕ್ತಗಳು ಹೀಗಿವೆ: ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ನೀವೂ …

Read More »

ಹಾಗಾದರೆ ವರ್ಷದ ಬಳಿಕ ಬರುವ ಉಪವಾಸವನ್ನು ಹೇಗೆ ಕಾಣಬೇಕು?

ಸಿ.ಎಸ್. ಶಾಹಿನ್ ರಮಝಾನ್ ಒಂದು ಅದ್ಭುತವಾಗಿದೆ. ಹೀಗೆ ಆಲಂಕಾರಿಕವಾಗಿ ಹೇಳಿದ್ದಲ್ಲ. ನಿಜವಾಗಿಯೂ ಅದೊಂದು ಅದ್ಭುತವೇ ಆಗಿದೆ. ಅದಕ್ಕೆ ಹಲವು ಕಾರಣಗಳಿವೆ. ಒಂದು ಉದಾಹರಣೆ ಹೇಳುತ್ತೇನೆ, ಓರ್ವರು ಜೀವನವನ್ನು ಸಂಪೂರ್ಣ ಬದಲಾಯಿಸಲು ತೀರ್ಮಾನಿಸುತ್ತಾರೆ. ಹೊಸ ವ್ಯಕ್ತಿಯಾಗಲು ಬಯಸುತ್ತಾರೆ. ಇದು ಒಂದು ತಿಂಗಳಲ್ಲಿ ಸಾಧಿಸಲು ಸಾಧ್ಯವೇ? ಸಾಮಾನ್ಯವಾಗಿ ಯೋಚಿಸುವಾಗ ಅದರ ಸಾಧ್ಯತೆ ತೀರಾ ಕಡಿಮೆ. ಆ ವ್ಯಕ್ತಿ ಬದುಕಿರುವ ವಾತಾವರಣವು ಅದಕ್ಕೆ ಒಪ್ಪುವುದಿಲ್ಲ. ಮನಸ್ಸು ಕೂಡ ಅದಕ್ಕೆ ಬೇಗನೆ ಒಗ್ಗಬೇಕೆಂದಿಲ್ಲ. ಕೆಲವರು ಹೇಳುವುದನ್ನು …

Read More »

ಕಾರುಣ್ಯದ ಧರ್ಮ

ಕರುಣೆಯು ಮಾನವೀಯ ಸಂಬಂಧಗಳನ್ನು ಜೋಡಿಸುವ ಪ್ರಬಲ ಕೊಂಡಿಯಾಗಿದೆ. ಅದರ ಶಕ್ತಿಯು ಅಪಾರ ಮತ್ತು ಅಜೇಯವಾಗಿದೆ. ಕಠೋರ ಹೃದಯಿಗಳನ್ನೂ ಕರುಣೆಯಿಂದ ಮಣಿಸಲು ಸಾಧ್ಯವಿದೆ. ಮಾನವನ ಮುಚ್ಚಿದ ಬಾಗಿಲುಗಳನ್ನು ಅದು ದೂಡಿ ತೆರೆಯುತ್ತದೆ. ಅಗಲಿದವರನ್ನು ಪರಸ್ಪರ ಆಪ್ತರಾಗಿ, ವೈರಿಗಳನ್ನು ಪರಸ್ಪರ ಮಿತ್ರರಾಗಿ ಮಾಡುತ್ತದೆ. ಸಹಾನುಭೂತಿಯ ಮನಸ್ಸುಗಳೇ ನಿಸ್ವಾರ್ಥ ಕರ್ಮಗಳಿಗೆ ಪ್ರೇರಕವಾಗುತ್ತದೆ. ಅಂತರಿಕ ಪ್ರೇರಣೆಯಿಂದಲೇ ನಿಸ್ವಾರ್ಥ ಸೇವೆಗಳು ಚಿಗುರುತ್ತವೆ. ಅದು ಕರುಣೆಯಿಂದ ಹುಟ್ಟುತ್ತದೆ. ಆದ್ದರಿಂದಲೇ ಮನಸ್ಸನ್ನು ಕಾರುಣ್ಯಮಯಗೊಳಿಸಬೇಕೆಂದು ಧರ್ಮವು ಆಜ್ಞಾಪಿಸಿದೆ. ಅಲ್ಲಾಹನು ದಯಾಮಯನು, ಆತನ …

Read More »

ಸಂದೇಶ ಪ್ರಚಾರ ಮತ್ತು ಬಲಾತ್ಕಾರದ ಮತಾಂತರ

ಇಸ್ಲಾಮ್, ಮಾನವರ ಹಸ್ತಕ್ಷೇಪಗಳಿಂದ ವಿರೂಪಗೊಳ್ಳದ ಏಕೈಕ ದೇವದತ್ತ ಜೀವನ ಪದ್ಧತಿಯಾಗಿದೆ. ಅದು ಮಾನವನ ಉಭಯ ಲೋಕ ವಿಜಯವನ್ನು ಖಚಿತ ಪಡಿಸುತ್ತದೆ. ಪರಲೋಕ ಮೋಕ್ಷದ ವಾಗ್ದಾನ ನೀಡುವುದರೊಂದಿಗೆ ಭೂಮಿಯಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನವನ್ನೂ ನೀಡುತ್ತದೆ. ಗಾಳಿ, ನೀರು, ಸೂರ್ಯ, ಚಂದ್ರ ಎಲ್ಲವೂ ದೇವನದ್ದಾಗಿದೆ. ಸೃಷ್ಟಿಗಳು ಅವುಗಳ ಸಮಾನ ಹಕ್ಕುದಾರರಾಗಿದ್ದಾರೆ. ಇಸ್ಲಾಮ್ ಕೂಡಾ ಹಾಗೆಯೇ. ಅದು ಕೇವಲ ಮುಸ್ಲಿಮರದ್ದಲ್ಲ, ಎಲ್ಲ ಮಾನವರಿಗಾಗಿ ದೇವನು ಅವತೀರ್ಣಗೊಳಿಸಿದ್ದಾಗಿದೆ. ಪ್ರವಾದಿ ಮುಹಮ್ಮದ್(ಸ) ರನ್ನು ಇಡೀ …

Read More »

ಸಮಾನತೆಯ ಕೂಗು: ಮಹಿಳೆಯನ್ನು ಸಬಲೀಕರಣಗೊಳಿಸುವುದೇ ಅಥವಾ ಅಪಾಯಕ್ಕೆ ಸಿಲುಕಿಸುವುದೇ?

 ರಹ್ಮತುನ್ನಿಸಾ ರಾಷ್ಟ್ರೀಯ ಕಾರ್ಯದರ್ಶಿ, ಮಹಿಳಾ ವಿಭಾಗ, ಜಮಾಅತೆ ಇಸ್ಲಾಮೀ ಹಿಂದ್ ಮತ್ತೊಮ್ಮೆ ಮಹಿಳಾ ದಿನಾಚರಣೆಯ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಚರ್ಚೆಗಳು, ಘೋಷಣೆಗಳು, ಭರವಸೆಗಳು… ಇತ್ಯಾದಿಗಳು ಸಾಮಾನ್ಯ. ವಿಶ್ವಸಂಸ್ಥೆಯು ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲು ನಿಗದಿಪಡಿಸಿದೆ. ಪ್ರತೀ ವರ್ಷದಂತೆ 2021ರಲ್ಲಿ ‘ವಿಮೆನ್ ಇನ್ ಲೀಡರ್ ಶಿಪ್: ಎಚೀವಿಂಗ್ ಆ್ಯನ್ ಈಕ್ವಲ್ ಫ್ಯೂಚರ್ ಇನ್ ಎ ಕೋವಿಡ್- 19′ ಎಂಬ ವಿಷಯವನ್ನು ಆಯ್ದುಕೊಳ್ಳಲಾಗಿತ್ತು. ಈ ವರ್ಷ “ಸುಸ್ಥಿರ ನಾಳೆಗಾಗಿ …

Read More »

ಸ್ತ್ರೀಯರ ವಸ್ತ್ರಧಾರಣೆ: ಇಸ್ಲಾಮ್ ಏನು ಹೇಳುತ್ತದೆ?

 ಇಲ್ಯಾಸ್ ಮೌಲವಿ  ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಇತರರ ಮುಂದೆ ಪರಿಚಯಿಸುವ ಪ್ರಥಮ ಉಪಾಧಿ ವಸ್ತ್ರಧಾರಣೆಯಾಗಿದೆ. ಓರ್ವರು ಧರಿಸಿದ ವಸ್ತ್ರವನ್ನು ನೋಡಿ, ಆ ವ್ಯಕ್ತಿ ಎಂತಹವನೆಂದು ಅಂದಾಜಿಸಲು ಸಾಧ್ಯವಾಗುತ್ತದೆ. ರಾಜ, ನವಾಬರ ವಸ್ತ್ರ, ಧಾರ್ಮಿಕ ವಿದ್ವಾಂಸರುಗಳ ವಸ್ತ್ರ, ಅಹಂಕಾರಿಗಳ, ಆತ್ಮಪ್ರಶಂಸಕರ ವಸ್ತ್ರ, ಆಡಂಬರದ ವಸ್ತ್ರ, ಮೂರ್ಖರ ವಸ್ತ್ರ, ಅನಾಗರಿಕರ ವಸ್ತ್ರ… ಇವೆಲ್ಲವೂ ಅವರವರ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ಸತ್ಯ ವಿಶ್ವಾಸಿಗಳ ಹಾಗೂ ವಿಶ್ವಾಸಿನಿಯರ ವಸ್ತ್ರಧಾರಣೆಯಲ್ಲಿ ಇವೆಲ್ಲವುಗಳಿಗಿಂತ ಸಹಜವಾಗಿಯೇ ವ್ಯತ್ಯಾಸವಿರುತ್ತದೆ. ಆದ್ದರಿಂದಲೇ …

Read More »

ಕುರ್‌ಆನ್ ಬೈಬಲ್‌ನ ಪ್ರತಿರೂಪವೇ?

ಪ್ರವಾದಿ ಮುಹಮ್ಮದ್‌ರು(ಸ) ತಮ್ಮ ಕಾಲದ ಯಹೂದಿ-ಕ್ರೈಸ್ತ ಪಂಡಿತರೊಂದಿಗೆ ಕಲಿತ ವಿಚಾರಗಳನ್ನು ತನ್ನ ಸ್ವಂತ ಭಾಷೆಯಲ್ಲಿ ತನ್ನದೇ ಶೈಲಿಯಲ್ಲಿ ಪ್ರಕಟಿಸಿದ್ದಾರೆ. ಗತಸಮುದಾಯಕ್ಕೆ ಸಂಬಂಧಿಸಿ ಕುರ್‌ಆನ್ ಮತ್ತು ಬೈಬಲ್‌ನ ವಿವರಣೆಗಳು ಒಂದೇ ರೀತಿಯಾಗಲು ಇದೇ ಕಾರಣ. ಒಂದಕ್ಕಿಂತ ಹೆಚ್ಚು ಇಂಗ್ಲಿಷ್ ಪುಸ್ತಕಗಳಲ್ಲಿ ಇಂತಹ ವಿಮರ್ಶೆಗಳು ಕಂಡು ಬಂತು. ಇದಕ್ಕೇನು ಕಾರಣ ಹೇಳುವಿರಿ.? ಇಸ್ಲಾಮನ್ನು ಶತ್ರುವಿನಂತೆ ದ್ವೇಷಿಸುವ ಪಾಶ್ಚಾತ್ಯ ಬರಹಗಾರರು ಹುಟ್ಟು ಹಾಕಿದ ಸುಳ್ಳಾರೋಪವಿದು. ಈ ಆರೋಪದಲ್ಲಿ ಸ್ವಲ್ಪವೂ ಸತ್ಯಾಂಶವಿಲ್ಲವೆಂದು ಬೈಬಲ್ ಮತ್ತು ಕುರ್‌ಆನ್ …

Read More »

ವೇದ ಮತ್ತು ಗೀತೆ ದೈವಿಕವೇ?

ಭಾರತದ ಹಿಂದೂ ವೇದಗ್ರಂಥಗಳು ದೇವನಿಂದ ಅವತೀರ್ಣವಾದದ್ದೆಂದು ಅಂಗೀಕರಿಸುವಿರಾ? ವಿದ್ಯೆ, ಜ್ಞಾನ ಎಂಬುದು ವೇದ ಎಂಬ ಪದದ ಅರ್ಥ ಆಧ್ಯಾತ್ಮಿಕ ಜ್ಞಾನವೆಂದಾಗಿದೆ. ಅದು ದೇವದತ್ತವೆಂದು ಕೆಲವು ವೇದ ಪಂಡಿತರು ಹೇಳುತ್ತಾರೆ. ಆದರೆ ವೇದಗಳು ಸ್ವತಃ ಅದನ್ನು ಘೋಷಿಸಿಕೊಳ್ಳುವುದಿಲ್ಲ. ಇತಿಹಾಸದಲ್ಲಿ ಎಲ್ಲಾ ಜನಾಂಗಗಳಿಗೆ ದೇವಸಂದೇಶವಾಹಕರು ಬಂದಿದ್ದಾರೆಂದೂ ಅವರಿಗೆ ದೇವಸಂದೇಶಗಳು ಲಭಿಸಿದೆಯೆಂದೂ ಇಸ್ಲಾಮ್ ವಾದಿಸುತ್ತದೆ. ಆದ್ದರಿಂದ ವೇದಗಳು ಆರ್ಯರಿಗೆ ಅವತೀರ್ಣವಾದ ದಿವ್ಯ ಸಂದೇಶದ ಭಾಗವಾಗಿರುವ ಸಾಧ್ಯತೆಯನ್ನು ನಿರಾಕರಿಸುವುದು ಸರಿಯಲ್ಲ. ಅಂತಹ ಒಂದು ಸಾಧ್ಯತೆ ಖಂಡಿತವಾಗಿಯೂ …

Read More »