Home / ಲೇಖನಗಳು (page 18)

ಲೇಖನಗಳು

“ಮಕ್ಕಾ ಮದೀನ” ಜಲೀಲ್ ಮುಕ್ರಿ ಅವರ ಕವನ

– ಜಲೀಲ್ ಮುಕ್ರಿ ಪುಣ್ಯಗಳ ಬೀಡು ಒಮ್ಮೆ ಭೇಟಿ ಕೊಡು ಪುಣ್ಯ ಪಾದ ಸ್ಪರ್ಶಗೊಂಡ ಬೆಟ್ಟ ಗುಡ್ಡಗಳ ನಾಡು ಪುಣ್ಯ ಪಾದಗಳ ಹೆಜ್ಜೆ ಕುರುಹನ್ನೊಮ್ಮೆ ನೋಡು ಇಂದೇ ಹೊರಟು ಬಿಡು ಪುಣ್ಯ ಭೂಮಿಯ ನೋಡಿಬಿಡು.. ಪ್ರವಾದಿ ಹೆಜ್ಜೆಯ ಅರಿತುಬಿಡು.. ಪುಣ್ಯಪಾದದ ಹೆಜ್ಜೆಯೊಂದಿಗೆ ಹೆಜ್ಜೆಯನ್ನಿಡು ಮೆತ್ತನೆಯ ಮುಸಲ್ಲೆ, ಎ.ಸಿ.ಯ ತಂಪು ಇಲ್ಲದೆ ಬದುಕಿದ ಪುಣ್ಯದೇಹವ ಅರಿತುಬಿಡು ಇಂದೇ ಹೊರಟುಬಿಡು ಒಮ್ಮೆ ಕಣ್ಣಾರೆ ನೋಡಿಬಿಡು.. ನಾಳೆ ನಮ್ಮದಲ್ಲ ಕಲಿತುಬಿಡು… ಜೀವನದಿ ಕೆಲಸವೂ ನಿಲ್ಲದು, …

Read More »

ಟಿಪ್ಪು ಹಿರಿಮೆಗೆ ಮಸಿ ಬಳಿಯಲು ಸಾಧ್ಯವೇ? – ಟಿ.ಪಿ. ಸಾಯಿನಾಥ್ ಬರೆಯುತ್ತಾರೆ…

– ಟಿ ಪಿ. ಸಾಯಿನಾಥ್ ಟಿ ಹಿರಿಯ ಪತ್ರಕರ್ತ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ‘ಅಕ್ಟರ್, ದಾರಾ ಶಿಕೋ ಹಾಗೂ ಟಿಪ್ಪು ಸುಲ್ತಾನ್‌ನಂತಹವರು ಹೀರೊಗಳೆಂದು ಪರಿಗಣಿಸಲ್ಪಡಬೇಕೇ ವಿನಾ ಖಳನಾಯಕರಾಗಿ ಅಲ್ಲ ಎನ್ನುವುದು ನನ್ನ ಅಭಿಪ್ರಾಯ.’ ‘ಟಿಪ್ಪುವಿನ ಬಗ್ಗೆ ಹೆಚ್ಚೆಚ್ಚು ಓದಿದಷ್ಟೂ ನನಗೆ ಆತನ ವ್ಯಕ್ತಿತ್ವದ ಹಿರಿಮೆ ಮನವರಿಕೆಯಾಗಿದೆ.’ ‘…(ಟಿಪ್ಪು ಸುಲ್ತಾನ್) ಮಾತ್ರವೇ ಬ್ರಿಟಿಷರ ವಿರುದ್ಧ ಹೋರಾಡುತ್ತಾ ಮಡಿದ ರಾಜಕುಮಾರ’. ‘ಬ್ರಿಟಿಷರ ವಿರುದ್ಧ ಹೋರಾಡುವುದಷ್ಟಕ್ಕೇ ಟಿಪ್ಪು ತೃಪ್ತನಾಗಲಿಲ್ಲ, ಶಂಕಿತರಿಗೆ ಚಿತ್ರಹಿಂಸೆ ನೀಡುವುದನ್ನೂ ಸಾರ್ವಜನಿಕ …

Read More »

ಬಲವಂತದ ಮತಾಂತರ ಎಂಬ ಮಹಾ ಸುಳ್ಳು

ಮತಾಂತರಕ್ಕೆ ರಾಜಕೀಯ ಬಣ್ಣ ಬಳಿಯಬೇಕಾಗಿಲ್ಲವೆಂಬ ಸುಪ್ರೀಮ್ ಕೋರ್ಟಿನ ನಿಲುವು ಬಹಳ ಗಮನಾರ್ಹವಾದುದು. ಬೆದರಿಕೆ, ಹಣ ಅಥವಾ ಇತರ ವಸ್ತುಗಳ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂಬ ದೂರಿಗೆ ಸುಪ್ರೀಮ್ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕ್ರೈಸ್ತ ಮಿಶನರಿ ತಂಡವು ಬೈಬಲ್ ವಿತರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸಂಘಪರಿವಾರವು ಆಕ್ರಮಣ ಮಾಡಿತ್ತು. ಛತ್ತೀಸ್‌ಗಢ್‌ನ ಚರ್ಚ್‌ನ ಮೇಲೆ ಆಕ್ರಮಣವುಂಟಾಯಿತು. ಕಾನೂನು ವಿರುದ್ಧ ಮತಾಂತರವನ್ನು ನಾವು ತಡೆದಿದ್ದೇವೆಂದು ಅವರ ವ್ಯಾಖ್ಯಾನ. ಬಲಾತ್ಕಾರದ …

Read More »

ಮನುಷ್ಯ ನಾಗರಿಕತೆಯ ಉಗಮ

ಒಂದು ತಿಂಗಳ ಉಪವಾಸ ವ್ರತದ ಸಮಾರೋಪ ಈದುಲ್ ಫಿತ್ರ್. ಹಜ್ ಕರ್ಮದ ಸಮಾರೋಪ ಬಕ್ರೀದ್. ಹಜ್ ಕರ್ಮದಲ್ಲಿ ಉಪವಾಸ,ನಮಾಝ್, ದಾನಧರ್ಮ ಎಲ್ಲವೂ ಒಟ್ಟಾಗಿ ಇರುವುದು. ಮಕ್ಕಾ ಎಂಬುದು ಪ್ರಥಮ ಮಾನವ ಆದಮ್ (ಅ) ಮತ್ತು ಹವ್ವಾ ನೆಲೆಗೊಂಡಿದ್ದ ಸ್ಥಳ. ಮಕ್ಕಾ ನಗರಕ್ಕೆ ಉಮ್ಮುಲ್ ಕುರಾ ಎಂಬ ಹೆಸರಿದೆ. ನಗರಗಳ ಮಾತೆ. ಮನುಷ್ಯ ನಾಗರಿಕತೆಯ ಉಗಮದ ಸ್ಥಳ ಎಂದರ್ಥ. ಜಲಪ್ರಳಯದ ಬಳಿಕ ಬರಡಾಗಿದ್ದ ಮಕ್ಕಾದಲ್ಲಿ ಪ್ರವಾದಿ ಇಬ್ರಾಹೀಮ್ ಮತ್ತು ಮಗ ಇಸ್ಮಾಯೀಲರಿಗೆ …

Read More »

ಹಾಜಿ ಯಾರು?

ಎಲ್ಲ ಕಾಲಗಳಲ್ಲಿಯೂ ದೇವನನ್ನು,ಪರಲೋಕವನ್ನು ಪ್ರವಾದಿಗಳನ್ನು, ನಿರಾಕರಿಸುವವರು ಸಮಾಜದ ಗಣ್ಯರು, ಶ್ರೀಮಂತರು, ಸರದಾರರು ಎಂಬುದೇ ಸತ್ಯ. ಒಬ್ಬ ಮನುಷ್ಯನಿಗೆ ಆಧ್ಯಾತ್ಮಿಕ ಉನ್ನತಿ, ಆತ್ಮ ನಿಯಂತ್ರಣ, ಸಹನೆಯ ತರಬೇತಿ ಹಜ್ ಕರ್ಮದಲ್ಲಿ ಸಿಗುವಷ್ಟು ಬೇರೆ ಯಾವ ಆರಾಧನೆಯಲ್ಲಿಯೂ ಸಿಗಲಾರದು. ಅಲ್ಲಿಗೆ ಹೋದ ಬಳಿಕವೂ ಕುಲ ಪ್ರತಿಷ್ಠೆ, ಅಹಂಕಾರ, ಆತ್ಮಪ್ರಶಂಸೆ, ಲೋಕದ ವ್ಯಾಮೋಹ, ಸಂಪತ್ತು ಕೂಡಿಡುವ ಜಿಪುಣತೆ, ಕೆಡುಕುಗಳಿಗೆ ವಾಲುವ ಮನಸ್ಸು, ದೊಡ್ಡಸ್ತಿಕೆ ಇದೆ ಎಂದಾದರೆ ಬೇರೆ ಯಾವುದರಿಂದಲೂ ಅವನನ್ನು ಸರಿಪಡಿಸಲು ಸಾಧ್ಯವಾಗದು ಎಂಬುದು …

Read More »

ಬಹುಪತ್ನಿತ್ವ ಮುಸಲ್ಮಾನರಲ್ಲಿ ಮಾತ್ರವೇ..? ವಾಸ್ತವತೆ ಏನು ?

ಅನಸ್ ಕೊಡಿಪ್ಪಾಡಿ (ವಿದ್ಯಾರ್ಥಿ SUAC ತೋಡಾರು) ವಾರದ ಹಿಂದೆ ಮಾನ್ಯ ಸಂಸದರ ಅಮಾನ್ಯ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಗೃಹಲಕ್ಷ್ಮಿ ಯೋಜನೆಯ ಟೀಕಿಸುವ ಭರದಲ್ಲಿ ಹೇಳಿಕೆ ನೀಡುತ್ತಾ ” ಸಾಬರ ಮನೆಯಲ್ಲಿ 2-3 ಹೆಂಡತಿಗಳಿದ್ದಾರೆ..ಯಾರಿಗೆ ಗೃಹ ಲಕ್ಷ್ಮಿ ನೀಡೂದು” ಎಂದು ಕೆಣಕಿದ್ದರು. ಮೊದಲೇ ವಾಟ್ಸಪ್ ಯುನಿವರ್ಸಿಟಿಯ ಪಧವೀದರರಾದರಿಂದ ಇಂತಹ ಹೇಳಿಕೆಗಳು ನಿರೀಕ್ಷಣೀಯ. ಹಾಗಿದ್ದಲ್ಲಿ ಮುಸಲ್ಮಾನರು ಮಾತ್ರ ಬಹುಪತ್ನಿತ್ವ ಹೊಂದಿರುವವರಾ..? ಅನ್ಯ ಧರ್ಮೀಯರು ಬಹುಪತ್ನಿತ್ವದಿಂದ ಮುಕ್ತರಾಗಿದ್ದಾರೆಯೇ..? ಇಲ್ಲ…ಖಡಾಖಂಡಿತವಾಗಿಯೂ ಸರ್ವ ಧರ್ಮೀಯರಲ್ಲೂ ಬಹುಪತ್ನಿತ್ವ …

Read More »

ನಮಾಝ್ ದೇವ ವಿಶ್ವಾಸದ ಕ್ರಿಯಾರೂಪ

ಅಲ್ಲಾಹ್ ನಮಾಝ್ ಮಾಡುವವರೊಂದಿಗಿದ್ದಾನೆ ಎನ್ನಲಿಲ್ಲ. ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ ಎಂದಿದ್ದಾನೆ. ಐದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ನಿರ್ವಹಿಸುವ ನಮಾಝ್ (ಸಾಷ್ಟಾಂಗ) ದಿನದ ಎಲ್ಲ ಕೆಲಸಕ್ಕಿಂತಲೂ ಅತ್ಯಂತ ಕಷ್ಟಕರ ಕಾರ್ಯವಾಗಿ ಮಾರ್ಪಡುವುದು ಸಹನೆ ಇಲ್ಲದವನಿಗಾಗಿದೆ. ದೈನಂದಿನ ನಿಬಿಡತೆ, ಮನೋರಂಜನೆಯಲ್ಲಿ ಮುಳುಗುವ ಮನುಷ್ಯನಿಗೆ ಐದು ಸಲದ ನಮಾಝ್ ಸಹನೆಯ ಗುಣ ಬೆಳೆಯಲು, ಜೀವನ ಶಿಸ್ತು ಬದ್ಧವಾಗಲು ಸಹಕಾರಿ. ಸಹನೆಯಿಂದಲೇ ಸ್ವರ್ಗ, ದೇವಸಾಮಿಪ್ಯ ಲಭಿಸುವುದು. “ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ” “ಖಂಡಿತವಾಗಿಯೂ ನಮಾಝ್ ಅತ್ಯಂತ ಕಷ್ಟಕರ ಕಾರ್ಯ. ಆದರೆ …

Read More »

ಹಾಜಿರಾ-ಕಾಬಾ- ಅಬ್ದುಲ್ ಮುತ್ತಲಿಬ್

ನಾನೇ ಸಾರ್ವಭೌಮ, ಪೂರ್ವ ಪಶ್ಚಿಮಗಳು ನನ್ನ ಅಂಕೆಯಲ್ಲಿದೆ ಎನ್ನುತ್ತಿದ್ದ ಇರಾಕ್ ನ ರಾಜ ನಮ್ರೂದ್. ರಾಜನ ಆಸ್ಥಾನದಲ್ಲಿ ಅರ್ಚಕರಿಗೆ ವಿಶೇಷ ಸ್ಥಾನಮಾನವಿತ್ತು. ಅರ್ಚಕರ ಮಗನಾಗಿ ಇಬ್ರಾಹೀಮರು ಹುಟ್ಟಿದರು. ಯುವಕರಾದಾಗ ನಮ್ರೂದ್ ರಾಜನನ್ನೂ ತಂದೆಯನ್ನೂ ವಿರೋಧಿಸಿ ಇರಾಕ್ ನಿಂದ ವಲಸೆ ಹೋಗುತ್ತಾರೆ. ಭೂಮ್ಯಾಕಾಶಗಳ ಸೃಷ್ಟಿಕರ್ತನೇ ನನ್ನ ಪ್ರಭು ಎಂಬುದು ಇಬ್ರಾಹೀಮರ ಪ್ರಬಲ ಪ್ರತಿಪಾದನೆಯಾಗಿತ್ತು. ಮನುಷ್ಯರಲ್ಲಿ ಮೇಲು ಕೀಳು ಎಂಬುದು ಇಲ್ಲವೇ ಇಲ್ಲ. ಸೃಷ್ಟಿಕರ್ತನು ಮಾಡಿಲ್ಲ ಮನುಷ್ಯರೇ ಮಾಡಿದರು. ಆ ಕಾರಣಕ್ಕಾಗಿಯೇ ಧರ್ಮ …

Read More »

ಮಾರ್ಗದರ್ಶನದ ಅಗೋಚರ ವಿಧಾನಗಳು

ಮಾನವನಿಗೆ ವೀಕ್ಷಿಸುವ, ಆಲಿಸುವ ಶಕ್ತಿಯನ್ನು ದೇವನು ನೀಡಿದ್ದಾನೆ. ಅವುಗಳಿಂದ ಮಾನವನಿಗೆ ಜ್ಞಾನ-ಮಾಹಿತಿಗಳು ಲಭಿಸುತ್ತವೆ. ತಾನು ಗಳಿಸಿದ ಜ್ಞಾನದಿಂದ ಏನಾದರೊಂದು ತೀರ್ಮಾನ ಮಾಡಲು ಅವನು ಪ್ರಯತ್ನಿಸುತ್ತಾನೆ. ಒಂದು ವೇಳೆ ಆಳವಾಗಿ ದೃಷ್ಟಿ ಹಾಯಿಸುವುದಾದರೆ ಮಾನವನೊಳಗಿನ ಸಾಮರ್ಥ್ಯಗಳು ಜಾಗೃತ ಸ್ಥಿತಿಯಲ್ಲಿರುವುದು ಗೋಚರಿಸುತ್ತವೆ. ವ್ಯಕ್ತಿ ತನ್ನ ಶಕ್ತಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿನಿಯೋಗಿಸುವನು. ಕೆಲವೊಮ್ಮೆ ತನ್ನ ಬಂಡಾಯ ಉದ್ಧಟತನದಿಂದಾಗಿ ತನ್ನ ಅಂತರಾತ್ಮ ವಿರೋಧಿಸುವ ದಾರಿಯನ್ನು ಸ್ವೀಕರಿಸಿದಾಗ ಅವನ ಅಂತರಾತ್ಮವೇ ವಿರೋಧಿಸುವುದು. ಮಾನವನಲ್ಲಿ ಅಸ್ತಿತ್ವದಲ್ಲಿರುವ ಮಾರ್ಗದರ್ಶನಗಳನ್ನು ಸಾಮಾನ್ಯವಾಗಿ …

Read More »

ಮಾನವ-ಒಂದು ನಿಗೂಢ ಜೀವಿ

ಭೌತಿಕ ಜಗತ್ತಿನೊಂದಿಗೆ ಮಾನವನಿಗೆಷ್ಟು ಆಳವಾದ ಸಂಬಂಧವಿದೆಯೋ ಅಭೌತಿಕ ಜಗತ್ತಿನೊಂದಿಗೂ ಅವನು ಸಂಬಂಧವನ್ನು ಹೊಂದಿದ್ದಾನೆ. ಜೀವನದ ನಿಗೂಢತೆಯನ್ನು ಭೇದಿಸಲಾಗದ ಮಾನವನು ಅದೆಷ್ಟೋ ವಿಚಾರಗಳಲ್ಲಿ ಅಜ್ಞಾನಿಯಾಗಿದ್ದಾನೆ. ಅವನನ್ನು ಸಂದೇಹಗಳಾವರಿಸಿಕೊಂಡಿವೆ. ಆ ಅಂಧಕಾರದಿಂದ ಮುಕ್ತಿ ಹೊಂದುವುದು ಸುಲಭವಲ್ಲ. ಯಾಕೆಂದರೆ ಮಾನವನ ವ್ಯಕ್ತಿತ್ವ ಎಷ್ಟೇ ಸತ್ಯಸಂಧವೂ ಸರಳವೂ ಆಗಿದ್ದರೂ ಅದು ಸ್ವಲ್ಪಂಶ ಜಟಿಲವಾಗಿದೆ. ಆದ್ದರಿಂದಲೇ ಮಾನವನಿಗೆ ತನ್ನ ಜೀವನದ ರಹಸ್ಯ ಅರ್ಥವಾಗಿಲ್ಲ. ನೋಡಿ, ಬುದ್ದಿ ಮಾನವನ ಅನುಭವಕ್ಕೆ ವೇದ್ಯವಾಗುವಂತಹ ಅಮೂಲ್ಯ ವಸ್ತುವಾಗಿದೆ. ಬುದ್ಧಿ ರಹಿತ ಮಾನವನನ್ನು …

Read More »