ಎ.ಕೆ.ಕುಕ್ಕಿಲ ಪ್ರತಿ ಮನುಷ್ಯರೊಳಗೂ ಸ್ವಾಭಿಮಾನ ಜಾಗೃತವಾಗಿರುತ್ತದೆ. ಇತರರಿಗಿಂತ ಕೀಳಾಗಲು ಯಾರೂ ಬಯಸುವುದಿಲ್ಲ. ಧರ್ಮ-ಚರ್ಮ, ಭಾಷೆ, ಉದ್ಯೋಗದ ಕಾರಣಕ್ಕಾಗಿ ಕೀಳಾಗಿ ಗುರುತಿಸಿಕೊಳ್ಳುವುದಕ್ಕೆ ಯಾವ ಮನುಷ್ಯರೂ ಸಿದ್ಧರಿರುವುದಿಲ್ಲ. ಆದರೆ, ಆರ್ಥಿಕವಾಗಿ ಬಲಾಢ್ಯವಾಗಿರುವ ಒಂದು ಗುಂಪು ಆರ್ಥಿಕ ದುರ್ಬಲವಾಗಿರುವ ಗುಂಪಿನ ಸ್ವಾಭಿಮಾನಕ್ಕೆ ಧಕ್ಕೆ ತರುವ ಮತ್ತು ಅವರ ಬಣ್ಣ, ಬಡತನದ ಕಾರಣಕ್ಕಾಗಿಯೇ ಶೋಷಿಸುವ ಪ್ರಕ್ರಿಯೆಗಳು ನಿರಂತರ ನಡೆಯ ತೊಡಗಿದಾಗ ನಿಧಾನಕ್ಕೆ ಸ್ವಾಭಿಮಾನದ ಪ್ರಜ್ಞೆ ಶಕ್ತಿಯನ್ನು ಕಳಕೊಳ್ಳುತ್ತಾ ದುರ್ಬಲವಾಗ ತೊಡಗುತ್ತದೆ. ಮತ್ತು ಬರಬರುತ್ತಾ ಕೀಳರಿಮೆಯನ್ನೇ ಸ್ವಾಭಿಮಾನದಂತೆ …
Read More »ಸಂಬಂಧಗಳ ಶಿಥಿಲತೆ ನಾಶಕ್ಕೆ ಹೇತು – ಪ್ರವಾದಿ ಮುಹಮ್ಮದ್(ಸ )
ಪತಿ ಪತ್ನಿಯರ ಮಧ್ಯೆ ವೈಮನಸ್ಸು ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀಳುವುದು. ನೆರೆಹೊರೆಯವರ ನಡುವೆ ವೈಮನಸ್ಸು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀಳುವುದು. ಸಂಘಟನೆಗಳ ಮಧ್ಯೆ ವೈಮನಸ್ಸು ದೇಶದ ಮೇಲೆ ಕೆಟ್ಟ ಪ್ರಭಾವ ಬೀಳುವುದು. ರಾಷ್ಟ್ರ ನಾಯಕರ ನಡುವೆ ವೈಮನಸ್ಸು ಯುದ್ಧಗಳಿಗೆ ಪ್ರೇರಣೆಯಾಗುವುದು. ಒಟ್ಟಿನಲ್ಲಿ ಸಂಬಂಧಗಳು ದುರ್ಬಲವಾದರೆ ಭೂಮಿಯ ವ್ಯವಸ್ಥೆಯೇ ಕೆಟ್ಟು ಹೋಗುವುದು. ನಮಾಝ್, ಉಪವಾಸ, ದಾನ ಧರ್ಮಗಳಿಗಿಂತ ಶ್ರೇಷ್ಠ ಪುಣ್ಯ ಕಾರ್ಯ ಪರಸ್ಪರ ಸಂಬಂಧಗಳನ್ನು ಸರಿಪಡಿಸುವುದಾಗಿದೆ ಎಂದು ಪ್ರವಾದಿ …
Read More »‘ಅರಫಾ’ ಹೃದಯದ ಭಾಷೆಯಲ್ಲಿ ಮಾತಾಡುವ ದಿನ
✍️ ರೈಹಾನ್.ವಿಕೆ. ಅರಫಾ: ಶಬ್ದಾರ್ಥ.. ಅರಿತುಕೊಳ್ಳು. ಈ ಹೆಸರು ಬರಲು ಕಾರಣ: ಆದಿಪಿತ, ಪ್ರಥಮ ಮಾನವ ಆದಮ್(ಅ ) ಮತ್ತು ಪತ್ನಿ ಹ. ಹವ್ವಾ(ಅ) ರನ್ನು ಸ್ವರ್ಗ ವಾಸದ ಬಳಿಕ ಭೂಮಿಗೆ ಕಳುಹಿಸಲಾಗುತ್ತದೆ. ಈ ದಂಪತಿಗಳು ಪರಸ್ಪರರನ್ನು ಅರಿತುಕೊಂಡ ಅಥವಾ ಪರಸ್ಪರರು ಸಂಧಿಸಿದ ಸ್ಥಳವನ್ನು ಅರಫಾ ಎಂದು ಕರೆಯಲಾಗುತ್ತದೆ. ಮನುಷ್ಯ ತನ್ನನ್ನು ತಾನು ಅರಿತಾಗ ತನ್ನ ಪ್ರಭುವನ್ನು ಅವನು ಅರಿಯುವನು ಎಂಬುದಾಗಿ ಪ್ರವಾದಿ ವಚನವಿದೆ. ಮನ್ ಅರಫ ನಫ್ಸಹು ಅರಫ …
Read More »ಪವಾಡದಂತೆ ನಡೆದು ಹೋದ ಈಜಿಪ್ಟ್ ವೈದ್ಯರ ಹಜ್
ಕಳೆದ ವರ್ಷದ ಹಜ್ಜ್ ನ ಸಂದರ್ಭ. ಹಜ್ಜ್ ಕರ್ಮ ಮತ್ತು ಅದರ ವಿಧಿ ವಿಧಾನಗಳನ್ನು ಮುಗಿಸಿ ಊರಿಗೆ ಹಿಂತಿರುಗಲು ಆ ಇಬ್ಬರು ಹಾಜಿಗಳು ಜಿದ್ದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೆಯಿಟಿಂಗ್ ಹಾಲ್ನಲ್ಲಿ ಕುಳಿತಿದ್ದರು. ಓರ್ವ ಟುನೀಶ್ಯಾದ ಶ್ರೀಂಮತ ವ್ಯಕ್ತಿ ಅಬೂ ನಜೀಬ್. ಇನ್ನೋರ್ವ ಈಜಿಪ್ಟಿನ ಫಿಸಿಯೋಥೆರಪಿಸ್ಟ್ ಸಈದ್. ಈರ್ವರೂ ಪರಸ್ಪರ ವಿವರವಾಗಿ ಪರಿಚಯಪಟ್ಟುಕೊಂಡರು. ಧನಿಕ: ನಾನು ಸಂಧಾನಕಾರನಾಗಿ ಕೆಲಸ ಮಾಡುತ್ತೇನೆ. ಈ ವರ್ಷದ ಹಜ್ಜ್ ನನ್ನ 10ನೇ ಹಜ್ಜ್ ಆಗಿದೆ. …
Read More »ಹಜ್ಜ್ ನಿರ್ವಹಿಸಲು ವಿಳಂಬಗೊಳಿಸದಿರಿ
ಸಂಗ್ರಹ: ಎನ್.ಎಂ. ಪಡೀಲ್ ಇಬ್ನು ಅಬ್ಬಾಸ್(ರ)ರಿಂದ ವರದಿಯಾಗಿದೆ. ಅಲ್ಲಾಹನ ಪ್ರವಾದಿ(ಸ) ಹೇಳಿದರು: “ಯಾರಾದರೂ ಹಜ್ಜ್ ಕರ್ಮ ನಿರ್ವಹಿಸಲು ಬಯಸಿದರೆ ಅವನು ತಡಮಾಡದೆ ಅದನ್ನು ನಿರ್ವಹಿಸಲಿ! ಕೆಲವೊಮ್ಮೆ ಅವನು ರೋಗಿಯಾಗಬಹುದು ಅಥವಾ ಹಜ್ ಗೆ ಹೋಗುವ ದಾರಿಗಳು ಮುಚ್ಚಿಬಿಡಬಹುದು. ಇಲ್ಲದಿದ್ದರೆ ಅದರ ನಡುವೆ ಏನಾದರೂ ಅಗತ್ಯ ಬರಬಹುದು.” (ಅಬೂದಾವೂದ್, ಇಬ್ನು ಮಾಜಃ) ಇಮಾಮ್ ಅಹ್ಮದ್(ರ)ರಿಂದ ವರದಿಯಾದ ಇನ್ನೊಂದು ಹದೀಸ್ನಲ್ಲಿ ಹೀಗೆ ಕಾಣಬಹುದು: “ಕಡ್ಡಾಯ ಹಜ್ ನ್ನು ಆದಷ್ಟು ಬೇಗನೆ ನಿರ್ವಹಿಸಿ. ಅದಕ್ಕೆ …
Read More »ಜಝಾಕಲ್ಲಾಹು ಖೈರನ್ ಏನಿದರ ತಾತ್ಪರ್ಯ
ಜೀವನವು ಒಂದು ಪರೀಕ್ಷೆಯಾಗಿದೆ. ನಮ್ಮ ಸಮಯ, ಆರೋಗ್ಯ, ಯೌವ್ವನ, ನಮ್ಮ ಮಕ್ಕಳು, ನಮ್ಮ ಆಪ್ತರು, ನಮ್ಮ ಸಂಪತ್ತು, ಸುಖ, ಸಂತೋಷ, ನೋವು, ಪ್ರತಿಷ್ಟೆ, ಸ್ಥಾನಮಾನ ಹೀಗೆ…. ಇವೆಲ್ಲವುಗಳಿಂದ ನಾವು ಪರೀಕ್ಷಿಸಲ್ಪಡುತ್ತೇವೆ. ಇವುಗಳು ಯಾವ ಸಮಯದಲ್ಲೂ ನಮ್ಮಿಂದ ಕಸಿಯಲ್ಪಡಬಹುದು. ಈ ಬದಲಾಗುತ್ತಿರುವ ಹವಾಮಾನ ಕೂಡಾ ಅದನ್ನೇ ಸೂಚಿಸುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ನಮಗೆ ಅಲ್ಲಾಹನು ನೀಡಿದ ಅನುಗ್ರಹಗಳ ಮೇಲೆ ಅವಲಂಬಿತರಾಗದೆ ಆ ಅನುಗ್ರಹಗಳನ್ನು ನೀಡಿದ ಅಲ್ಲಾಹನಿಗೆ ಅವಲಂಬಿತರಾಗಬೇಕು. ಕೆಲವೊಮ್ಮೆ ಈ ಕಳೆದು …
Read More »ನಾನು, ನನಗೆ, ನನ್ನದು
– ಅಬೂ ಝೀಶಾನ್ ಸಂಜೆಯ ಹೊತ್ತಾಗಿತ್ತು. ಆ ಅಂಗಡಿಗೆ ಒಬ್ಬ ಯಹೂದಿ ಆಗಮಿಸಿದ. ಆತನಿಗೆ ದಿನಸಿ ಬೇಕಾಗಿತ್ತು. ಆ ಅಂಗಡಿಯವ ನಯವಾಗಿ ಹೇಳಿದ, “ನೋಡು, ನನಗೆ ಬೆಳಿಗ್ಗಿನಿಂದ ವ್ಯಾಪಾರ ಆಗಿದೆ. ಆದರೆ ಎದುರಿನ ಅಂಗಡಿಯವನಿಗೆ ಬೆಳಿಗ್ಗಿನಿಂದ ಯಾವುದೇ ವ್ಯಾಪಾರವೂ ಆಗಿಲ್ಲ. ನನ್ನ ಅಂಗಡಿಯಲ್ಲಿ ಸಿಗುವುದೆಲ್ಲವೂ ಅಲ್ಲಿಯೂ ಸಿಗುತ್ತದೆ. ತಾವು ದಯವಿಟ್ಟು ಆ ಅಂಗಡಿಯಿಂದ ಸಾಮಾನುಗಳನ್ನು ಖರೀದಿಸಿ.” ಇಂದು ಈ ಲೋಕವು “ನಾನು, ನನಗೆ, ನನ್ನದು” ಎಂಬ ಸಿದ್ಧಾಂತದೊಂದಿಗೆ ಜೀವಿಸುತ್ತಿದೆ. ಎಷ್ಟು …
Read More »ಹಜ್ :ಹೃದಯ ನಿಷ್ಕಳಂಕಗೊಳಿಸುವ ಆರಾಧನೆ
ಆರಾಧನೆಗಳಿಂದ ಮನುಷ್ಯನ ಜೀವನ ಶಿಸ್ತು ಬದ್ಧವಾಗುತ್ತದೆ. ಆರಾಧನೆಗಳು ಮನುಷ್ಯನನ್ನು ಬದುಕಿನ ಎಲ್ಲ ಜಂಜಡಗಳಿಂದ ಮುಕ್ತಗೊಳಿಸಿ ಒಂದು ಕ್ಷಣ ದೇವನ ಕಡೆಗೆ ಮುಖ ಮಾಡುವಂತೆ ಪ್ರೇರೇಪಿಸುತ್ತದೆ. ದಿನದ ಐದು ಹೊತ್ತಿನ ನಮಾಝ್ ಮನುಷ್ಯ ಜೀವನವನ್ನು ಶಿಸ್ತುಬದ್ಧಗೊಳಿಸುವ ಆರಾಧನೆ. ಅಂತರಂಗ ಬಹಿರಂಗವನ್ನು ನಿರ್ಮಲಗೊಳಿಸುತ್ತದೆ. ಉಪವಾಸವ್ರತ ಮನುಷ್ಯನನ್ನು ಕೆಡುಕುಗಳಿಂದ ಮುಕ್ತಗೊಳಿಸುವ ತರಬೇತಿಯಾಗಿದೆ. ದಾನ ಧರ್ಮಗಳಿಂದ ಹೃದಯ ವಿಶಾಲವಾಗುತ್ತದೆ. ಹಜ್ ಕರ್ಮದಲ್ಲಿ ನಮಾಝ್ ,ಉಪವಾಸ ದಾನಧರ್ಮಗಳು ಜೊತೆಯಾಗಿರುತ್ತದೆ. ಮಾತ್ರವಲ್ಲ ಶ್ರೀಮಂತನು ಎಲ್ಲವನ್ನೂ ಬಿಟ್ಟು ಎರಡು ತುಂಡು …
Read More »ವಿವಿಧತೆಯಲ್ಲಿ ಏಕತೆಯನ್ನು ಸಾರುವ ಇಸ್ಲಾಮಿನ ಐದನೇ ಸ್ಥಂಭ ಹಜ್ಜ್
ಜನರಲ್ಲಿ, ವಿವಿಧ ಜಂತುಗಳಲ್ಲಿ ಮತ್ತು ಜಾನುವಾರುಗಳಲ್ಲಿ ಅನೇಕರ ಬಣ್ಣಗಳು ಭಿನ್ನವಾಗಿರುತ್ತವೆ. ದಾಸರ ಪೈಕಿ ಜ್ಞಾನವುಳ್ಳವರು ಮಾತ್ರ ಅಲ್ಲಾಹನಿಗೆ ಅಂಜುತ್ತಾರೆ. ಅಲ್ಲಾಹನು ಖಂಡಿತ ಪ್ರಚಂಡನೂ ಕ್ಷಮಿಸುವವನೂ ಆಗಿದ್ದಾನೆ. (ಕುರ್ ಆನ್, ಅಧ್ಯಾಯ ಫಾತಿರ್:28) ಪ್ರಕೃತಿಯೆಡೆಗೆ ನಾವು ದೃಷ್ಟಿ ಹಾಯಿಸಿದಾಗ ವೈವಿಧ್ಯಮಯ ಬಣ್ಣಗಳೇ ಅದರ ಆಕರ್ಷಣೆ. ಅಲ್ಲಾಹನು ಹೇಳುತ್ತಾನೆ, ನಾವು ಮನುಷ್ಯರನ್ನೂ ಪ್ರಾಣಿಗಳನ್ನೂ ಜಂತುಗಳನ್ನೂ ವಿವಿಧತರ ಬಣ್ಣಗಳಿಂದ ಸೃಷ್ಟಿರುವೆವು… ಹೀಗೆ ಸೃಷ್ಟಿಸಿರುವುದು ಮಾತ್ರವಲ್ಲ. ನಾನು ಈ ರೀತಿ ಸೃಷ್ಟಿರುವೆನೆಂದು ಅವನ ಗ್ರಂಥದಲ್ಲಿ ವ್ಯಕ್ತಪಡಿಸುತ್ತಾನೆ. …
Read More »ದುಲ್ ಹಜ್ಜ್ ತಿಂಗಳ ಶ್ರೇಷ್ಠ ದಿನಗಳು
ಪವಿತ್ರ ದುಲ್ ಹಜ್ಜ್ ಇಸ್ಲಾಮಿ ಕ್ಯಾಲೆಂಡರ್ ನಲ್ಲಿ ಮಹತ್ವವಿರುವ ತಿಂಗಳಾಗಿರುತ್ತದೆ. ನಮಾಝ್, ದಾನ ಧರ್ಮ, ಉಪವಾಸ, ಹಜ್ಜ್ ಹೀಗೆ ಇಸ್ಲಾಮಿನ ಎಲ್ಲ ಕಡ್ಡಾಯ ಆರಾಧನೆಗಳು ನಡೆಯುವ ಏಕೈಕ ತಿಂಗಳಾಗಿರುತ್ತದೆ. ಸಮಯವನ್ನು ಸೃಷ್ಟಿಸಿದ ಅಲ್ಲಾಹನು ಕೆಲವು ಸಮಯವನ್ನು, ಕೆಲವು ದಿನ, ರಾತ್ರಿ ಹಾಗೂ ತಿಂಗಳನ್ನು ಇತರ ದಿನ, ರಾತ್ರಿ, ತಿಂಗಳಿಗಿಂತ ಶ್ರೇಷ್ಠವನ್ನಾಗಿ ಮಾಡಿರುವನು. ಇದು ದಾಸರಿಗೆ ಆರಾಧನೆಗಳಲ್ಲಿ ಉತ್ಸುಕರಾಗಲು, ಹೆಚ್ಚು ಸತ್ಕರ್ಮಗಳನ್ನು ಮಾಡಲು, ಅಲ್ಲಾಹನೊಂದಿಗೆ ನಿಕಟರಾಗಲು, ಪ್ರಾರ್ಥಿಸಲು, ತಮ್ಮ ತಪ್ಪುಗಳಿಗೆ ಪಶ್ಚಾತ್ತಾಪಡಲು, …
Read More »
IslamKannada News Portal