ಒಮ್ಮೆ ಇಬ್ನು ತೈಮೀಯ(ರ) ಹೀಗೆಂದರು: ಒಂದು ವೇಳೆ ಈ ಜೈಲಿನಲ್ಲಿ ನಾನು ಅನುಭವಿಸುವ ಮಾನಸಿಕ ನೆಮ್ಮದಿಯನ್ನು ನನ್ನನ್ನು ಜೈಲಿಗಟ್ಟಿಸಿದವರು ತಿಳಿದಿರುತ್ತಿದ್ದರೆ ನನ್ನ ಹೃದಯವನ್ನು ತೆರೆದು ಆ ಸಮಾಧಾನಕ್ಕಾಗಿ ಅವರು ಜಗಳವಾಡುತ್ತಿದ್ದರು. ಆತ್ಮೀಯರೇ… ಇದು ಬಹಳ ಅರ್ಥಗರ್ಭಿತವಾದ ಮಾತು. ಈ ಮಾತಿನಲ್ಲಿ ಎರಡು ವಿಷಯಗಳನ್ನು ನಮಗೆ ಅರ್ಥೈಸಬಹುದು. ಒಬ್ಬ ವಿಶ್ವಾಸಿಯ ಜೀವನದ ಸೌಭಾಗ್ಯ ಅವನ ವಿಶ್ವಾಸದ ಮೇಲೆ ಅಡಕವಾಗಿದೆ. ಅವನ ಅಚಲವಾದ ವಿಶ್ವಾಸ ಅವನಿಗೆ ಎಲ್ಲಾ ಪರಿಸ್ಥಿತಿಯಲ್ಲೂ ಸಮಾಧಾನವನ್ನು ನೀಡುತ್ತದೆ. ಕುರ್’ಆನ್ …
Read More »ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ಚರ್ಚಿಸಲ್ಪಟ್ಟಿದೆ. ಹಾಗಾದರೆ ಮುಹಮ್ಮದ್ ರ ಅಜ್ಜ, ತಂದೆಯ ಧರ್ಮ ಯಾವುದು?
ಪ್ರಶ್ನೆ: ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ವಿಷಯಗಳು ಚರ್ಚಿಸಲ್ಪಟ್ಟಿದೆ. ಕಾಬಾದಲ್ಲಿ ಮೊದಲೇ ವಿಗ್ರಹಗಳಿದ್ದಾಗ ಮುಹಮ್ಮದರ ಅಜ್ಜ, ತಂದೆ ಅವರ ಧರ್ಮ ಯಾವುದು ಎಂಬ ಬಗ್ಗೆ ಕೆಲವರಲ್ಲಿ ಪ್ರಶ್ನೆ ಮೂಡಿದೆ. ಉತ್ತರಿಸಬಹುದೇ? ಪ್ರಥಮ ಮಾನವ, ಪ್ರಥಮ ಪ್ರವಾದಿ ಆದಮ್(ಅ)ರ ಬಳಿಕ ಭೂಮುಖದ ಪ್ರಥಮ ಐತಿಹಾಸಿಕ ಜನಾಂಗ ನೂಹರ ಜನಾಂಗವಾಗಿತ್ತು. ಮಹಾ ಪುರುಷರನ್ನು, ಸಜ್ಜನರನ್ನು ದೇವರ ಸ್ಥಾನಕ್ಕೇರಿಸಿ ಪ್ರತಿಮೆಗಳನ್ನು ಸ್ಥಾಪಿಸಿದ ಮೊದಲ ಜನಾಂಗ ನೂಹರ ಜನಾಂಗ. ಸಮಾಜದಲ್ಲಿ ಅತಿಕ್ರಮವನ್ನು ಅನುಸರಿಸಿದ ಈ …
Read More »ಏನಿದು ತಲಾಕ್? ಒಂದು ವಿಶ್ಲೇಷಣೆ..
ಹೆಸರು ಬೇಡ. ಊರು ಬೇಡ. ಜಾತಿ ಬೇಡ. ಕೆಳಗಿನ ಎರಡೂ ಘಟನೆಗಳನ್ನು ಗಮನವಿಟ್ಟು ಓದಿನೋಡಿ. ➡️ ಘಟನೆ 1. ಆಕೆಗೆ ಮದುವೆ ಆಗಿ ನಾಲ್ಕು ವರ್ಷವಾಯಿತು. ಎರಡು ಮಕ್ಕಳ ತಾಯಿ. ಆಕೆಯ ಪತಿ, ಮನೆಯ ಜವಾಬ್ದಾರಿಕೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮನೆಯ ಖರ್ಚಿಗೂ ಕೊಡುತ್ತಿಲ್ಲ. ಆತ ಗಾಂಜಾದ ಗುಲಾಮ. ದುಡಿದ ಹಣವನ್ನೆಲ್ಲಾ ಕುಡಿತಕ್ಕೇ ಮುಗಿಸುತ್ತಾನೆ. ಕಾಸಿಲ್ಲದಾಗ ಪತ್ನಿಯೊಂದಿಗೆ ಯಾಚುತ್ತಾನೆ, ಕೊಡದಿದ್ದಲ್ಲಿ ರೇಗುತ್ತಾನೆ. ಜಗಳಕ್ಕಿಳಿಯುತ್ತಾನೆ. ಕೆಟ್ಟು ಹೋದ ಆತನ ಚಾರಿತ್ರ್ಯದಿಂದಾಗಿ ಆಕೆ ರೋಸಿ …
Read More »ನಿಖಾ ಹಲಾಲ ಸುತ್ತಲಿನ ವಿಕೃತ ವಿಶ್ಲೇಷಣೆ ಮತ್ತು ವಾಸ್ತವ..
✍️ಮುಷ್ತಾಕ್ ಹೆನ್ನಾಬೈಲ್ ನಿಖಾ ಹಲಾಲ ಎಂಬುದು ಮದುವೆಯಾದ ಸ್ತ್ರೀಯರ ಶೋಷಣೆ ತಪ್ಪಿಸಲು ಇರುವ ಅನುಗ್ರಹ ಸ್ವರೂಪದ ಒಂದು ದೇವ ನಿಯಮ. ಸ್ತ್ರೀಗೆ ಇಸ್ಲಾಮ್, ಮದುವೆ ಮತ್ತು ದಾಂಪತ್ಯದ ವಿಚಾರಗಳಲ್ಲಿ ಪುರುಷನಿಗಿಂತ ಹೆಚ್ಚಿನ ಅಧಿಕಾರ ಮತ್ತು ಸವಲತ್ತು ನೀಡಿದೆ. ಜಗತ್ತಿನ ಎಲ್ಲ ಸಮುದಾಯಗಳಲ್ಲಿ ವರದಕ್ಷಿಣೆ ನೀಡಿ ಹೆಣ್ಣು ಮಕ್ಕಳು ಮದುವೆಯಾಗಬೇಕು. ಆದರೆ ಇಸ್ಲಾಮಿನಲ್ಲಿ ಮಾತ್ರ ಮಹಿಳೆಯರು ವಧುಧನ ಪಡೆದು ಮದುವೆಯಾಗುತ್ತಾರೆ. ಮದುವೆಯ ಧಾರ್ಮಿಕ ವಿಧಿವಿಧಾನಗಳು ನಡೆಯುವ ಸಂದರ್ಭದಲ್ಲಿ ಇಬ್ಬರು ಸಮಾಜ ಸಾಕ್ಷಿಗಳ …
Read More »ಯುದ್ಧ ವಿರೋಧಿ ಪ್ರವಾದಿ(ಸ); ಪ್ರತೀಕಾರವೆಸಗುವೆ ಎಂದ ದಂಡನಾಯಕನನ್ನೇ ಬದಲಾಯಿಸಿದ ಪ್ರವಾದಿ
✍️ ಶೈಖ್ ಮುಹಮ್ಮದ್ ಕಾರಕ್ಕುನ್ನು ಮಕ್ಕಾವನ್ನು ವಿಮೋಚನೆಗೊಳಿಸಲು ಹೊರಟ ಹತ್ತು ಸಾವಿರಕ್ಕೂ ಅಧಿಕ ಸೈನಿಕರನ್ನು ಪ್ರವಾದಿ(ಸ)ರು ನಾಲ್ಕು ಗುಂಪುಗಳಾಗಿ ವಿಂಗಡಿಸಿದರು. ಅವುಗಳಿಗೆ ನೇತೃತ್ವ ನೀಡಿದ ಝುಬೈರ್ ಬಿನ್ ಅವ್ವಾಮ್, ಖಾಲಿದ್ ಬಿನ್ ವಲೀದ್, ಅಬೂ ಉಬೈದ, ಸಅದ್ ಇಬ್ನು ಉಬಾದರೊಂದಿಗೆ ಯುದ್ಧ ಮಾಡಬಾರದೆಂದು ವಿಶೇಷವಾಗಿ ಸೂಚನೆ ನೀಡಿದರು. ಆದರೆ ಸಅದ್ ಇಬ್ನು ಉಬಾದ ಇದನ್ನು ಪರಿಗಣಿಸದೆ ಅತ್ಯಂತ ಆವೇಶದಿಂದ ಹೇಳಿದರು, “ಇಂದು ಕಅಬಾದ ಪಾವಿತ್ರ್ಯ ಪರಿಗಣಿಸಲ್ಪಡುವುದಿಲ್ಲ.” ವಿಷಯವನ್ನು ತಿಳಿದ ಪ್ರವಾದಿಯವರು(ಸ) …
Read More »ನ್ಯಾಯಸಮ್ಮತ ಶರೀಅತ್; ದುರುದ್ಧೇಶಪೂರಿತ ಸಿವಿಲ್ ಕೋಡ್
✍️ ಎ.ಆರ್ ಸೂಕ್ಮವಾಗಿ ಕಲಿತು, ನಿಷ್ಪಕ್ಷವಾಗಿ ಮತ್ತು ಸತ್ಯಸಂಧವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸುವ ಪ್ರತಿಯೊಬ್ಬರಿಗೂ ಇಸ್ಲಾಮೀ ಶರೀಅತ್ನ ಕೌಟುಂಬಿಕ ಕಾನೂನುಗಳು ಅತ್ಯಂತ ಸರಳ ಮತ್ತು ನ್ಯಾಯಪರ ಹಾಗೂ ನೆಮ್ಮದಿದಾಯಕ ಕುಟುಂಬ ಜೀವನವನ್ನು ಖಾತ್ರಿ ಪಡಿಸುತ್ತದೆಂದು ತಿಳಿದು ಕೊಳ್ಳಲು ಕಷ್ಟವೇನಿಲ್ಲ. ಇಸ್ಲಾಮಿನಲ್ಲಿ ವಿವಾಹವೆಂದರೆ, ಪ್ರಾಯಪೂರ್ತಿಯಾದ ಗಂಡೂ ಹೆಣ್ಣೂ ಪರಸ್ಪರ ಅರಿತು, ಇಷ್ಟಪಟ್ಟು, ತಿಳಿದುಕೊಂಡು ಇಬ್ಬರು ಸಾಕ್ಷಿಗಳ ಮುಖಾಂತರ ನಿರ್ವಹಿಸಲ್ಪಡುವ ಅತ್ಯಂತ ಸರಳ ಕರ್ಮವಾಗಿದೆ. ಹೆಣ್ಣಿನ ಪೋಷಕರಾಗಿ ಅವಳ ತಂದೆಯೋ ಸಹೋದರರೋ, ಅವರಿಲ್ಲದಿದ್ದರೆ ಪಿತೃ …
Read More »ಎಲ್ಲರನ್ನು ಪರಿಗಣಿಸಿ, ಯಾರನ್ನೂ ಕಡೆಗಣಿಸದಿರಿ..
✍️ ರೈಹಾನ್.ವಿ.ಕೆ. ಸಚೇರಿಪೇಟ ಶಾಲೆ ಬಿಟ್ಟು ಬಂದ ಮಗಳು :- ಅಮ್ಮ ಇಂದು ಏನು ಮಾಡಿರುವೆ. ಅಮ್ಮ ಏನು ಮಾಡಬೇಕು ಎಂದು ಕೇಳಿದಾಗ ತುಸು ಮುನಿಸು. ನಾನು ಬಂದ ನಂತರ ಮಾಡಿಕೊಡುವುದು ಬೇಡ ಅಂದಳು. ನಿಜವಾಗಿ ಅವಳಿಗೆ ತಿನ್ನುವುದರಲ್ಲಿ ಆಸಕ್ತಿ ಇಲ್ಲ. ಬದಲಾಗಿ ಅವಳನ್ನು ನಾನು ಪರಿಗಣಿಸುತ್ತೇನೋ ಇಲ್ಲವೋ ಎಂಬುದು ಅವಳಿಗೆ ಮುಖ್ಯ. ನಾನು ಶಾಲೆಯಿಂದ ಬಂದ ನಂತರ ಮಾಡುವುದು ಬೇಡ . ಪ್ರತಿ ದಿನ ಶಾಲೆಗೆ ಹೋಗುವಾಗ ಅಮ್ಮ …
Read More »ನಮ್ಮ ಜೀವನದ ಬೆಲೆ
✍️ ರೈಹಾನ ವಿ.ಕೆ. ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನೊಂದಿಗೆ ತನ್ನ ಜೀವನದ ಬಗ್ಗೆ ಪ್ರಶ್ನಿಸುತ್ತಾ ತನ್ನ ಜೀವನದ ಬೆಲೆ ಎಷ್ಟಿರಬಹುದು ಎಂದು ಕೇಳುತ್ತಾರೆ. ಆಗ ಆತನ ಗುರು ಒಂದು ಕಲ್ಲನ್ನು ಅವನ ಕೈಗೆ ಕೊಟ್ಟು ಇದರ ನಿಜವಾದ ಬೆಲೆಯನ್ನು ತಿಳಿದುಕೊಳ್ಳು ಅನ್ನುತ್ತಾರೆ. ಆದರೆ ಯಾರಿಗೂ ಇದನ್ನು ಮಾರಾಟ ಮಾಡಬಾರದು ಅನ್ನುತ್ತಾರೆ. ಹಾಗೆ ಆ ಶಿಷ್ಯ ಮುಂದಕ್ಕೆ ಪೇಟೆಗೆ ಹೋಗಿ ಒಬ್ಬ ತರಕಾರಿ ವ್ಯಾಪಾರಿಯನ್ನು ಭೇಟಿಯಾಗುತ್ತಾರೆ ಮತ್ತು ಕೈಯಲ್ಲಿದ್ದ ಕಲ್ಲನ್ನು ತೋರಿಸಿ …
Read More »ಮುಹರ್ರಮ್ ತಿಂಗಳ ಉಪವಾಸದ ಮಹತ್ವ
✍️ ಇಲ್ಯಾಸ್ ಮೌಲವಿ ಖಂಡಿತವಾಗಿಯೂ ಮುಹರ್ರಮ್ ತಿಂಗಳಿಗೆ ವಿಶೇಷ ಮಹತ್ವವಿದೆ. ಎಂಬುದನ್ನು ಗ್ರಂಥಗಳನ್ನು ಅಧ್ಯಯನ ಮಾಡಿದಾಗ ತಿಳಿಯುತ್ತದೆ. ರಮಝಾನಿನ ನಂತರ ಪ್ರವಾದಿವರ್ಯರು(ಸ) ಅತ್ಯಂತ ಹೆಚ್ಚು ಮಹತ್ವವನ್ನು ಕಲ್ಪಿಸಿರುವುದು ಅಶೂರಾ ಉಪವಾಸದ ಬಗ್ಗೆ ಎಂಬುದು ಆಧಾರ ಪ್ರಮಾಣಗಳಿಂದ ಅರಿಯಬಹುದು. ಪ್ರವಾದಿವರ್ಯರು ಹಿಜಿರಾ ಯಾತ್ರೆಗಿಂತ ಮೊದಲೂ ಆ ನಂತರವೂ ನಿರಂತರ ಅಶೂರಾ (ಮುಹರ್ರಮ್ 10) ಉಪವಾಸದ ವ್ರತ ಆಚರಿಸುತ್ತಿದ್ದರು. ಯಹೂದಿಗಳು ಕೂಡಾ ಅದೇ ದಿನ ಉಪವಾಸ ಆಚರಿಸುತ್ತಾರೆಂದೂ ಪ್ರವಾದಿ ಮೂಸಾ(ಅ)ರ ಚರ್ಯೆಯನ್ನು ಅನುಸರಿಸುತ್ತಾರೆಂದೂ …
Read More »ಮಳೆಯ ನೀರು ಅದ್ಭುತ
ಒಣಗಿದ ಭೂಮಿ ಮಳೆಗಾಲದಲ್ಲಿ ಜೀವಕಳೆಯಿಂದ ಕಂಗೊಳಿಸುತ್ತದೆ. ಒಣಗಿ ಬೇರು ಸಹಿತ ನಿರ್ನಾಮವಾದ ಸಸ್ಯಗಳು ಒಂದು ವರ್ಷದ ಬಳಿಕ ಸುಂದರವಾಗಿ ಎದ್ದು ನಿಲ್ಲುತ್ತದೆ. ಒಂದು ಮಳೆಗಾಲದಲ್ಲಿ ಗೋಡೆಯಲ್ಲಿ ಕಂಡು ಬರುವ ವಿವಿಧ ಬಣ್ಣದ ಕೀಟಗಳು ಮಳೆಗಾಲ ಮುಗಿದೊಡನೆ ಕಣ್ಮರೆಯಾಗಿರುತ್ತವೆ.ಮತ್ತೆ ಮಳೆಗಾಲ ದಲ್ಲಿ ಅದೇ ರೀತಿಯ ಕೀಟಗಳು ಪ್ರತ್ಯಕ್ಷವಾಗುತ್ತವೆ. ಸಮುದ್ರದಲ್ಲಿ ಮೀನುಗಳು ಹೆಚ್ಚಾಗುತ್ತದೆ. ನೀರಿನ ಸಾಮರ್ಥ್ಯ ಅಪಾರ. H2O ಜಲಜನಕ ಮತ್ತು ಆಮ್ಲಜನಕ ಬೇರೆಯಾದರೆ ದಹನ ಕ್ರಿಯೆ ಉಂಟಾಗುತ್ತದೆ. ನೀರಿನಿಂದ ವಿದ್ಯುಚ್ಛಕ್ತಿ ಉಂಟಾಗುತ್ತದೆ. …
Read More »
IslamKannada News Portal