ಒಣಗಿದ ಭೂಮಿ ಮಳೆಗಾಲದಲ್ಲಿ ಜೀವಕಳೆಯಿಂದ ಕಂಗೊಳಿಸುತ್ತದೆ. ಒಣಗಿ ಬೇರು ಸಹಿತ ನಿರ್ನಾಮವಾದ ಸಸ್ಯಗಳು ಒಂದು ವರ್ಷದ ಬಳಿಕ ಸುಂದರವಾಗಿ ಎದ್ದು ನಿಲ್ಲುತ್ತದೆ. ಒಂದು ಮಳೆಗಾಲದಲ್ಲಿ ಗೋಡೆಯಲ್ಲಿ ಕಂಡು ಬರುವ ವಿವಿಧ ಬಣ್ಣದ ಕೀಟಗಳು ಮಳೆಗಾಲ ಮುಗಿದೊಡನೆ ಕಣ್ಮರೆಯಾಗಿರುತ್ತವೆ.ಮತ್ತೆ ಮಳೆಗಾಲ ದಲ್ಲಿ ಅದೇ ರೀತಿಯ ಕೀಟಗಳು ಪ್ರತ್ಯಕ್ಷವಾಗುತ್ತವೆ. ಸಮುದ್ರದಲ್ಲಿ ಮೀನುಗಳು ಹೆಚ್ಚಾಗುತ್ತದೆ. ನೀರಿನ ಸಾಮರ್ಥ್ಯ ಅಪಾರ. H2O ಜಲಜನಕ ಮತ್ತು ಆಮ್ಲಜನಕ ಬೇರೆಯಾದರೆ ದಹನ ಕ್ರಿಯೆ ಉಂಟಾಗುತ್ತದೆ. ನೀರಿನಿಂದ ವಿದ್ಯುಚ್ಛಕ್ತಿ ಉಂಟಾಗುತ್ತದೆ. ಸಮುದ್ರದ ನೀರು ಆವಿಯಾಗಿ ಮೋಡಗಳಾಗಿ ಘನೀಕೃತಗೊಂಡು ಮಳೆಯಾಗಿ ಸುರಿಯುತ್ತದೆ. ಮಳೆಗಾಲದ ಘನೀಕೃತ ಮೋಡಗಳಿಂದ ಮಿಂಚು ,ವಿದ್ಯುಚ್ಛಕ್ತಿ ಯನ್ನು ವಿಜ್ಞಾನಿ ಕಂಡುಹಿಡಿದಿದ್ದಾರೆ. ಒಟ್ಟಿನಲ್ಲಿ ನೀರು ಜೀವ ಜಲ. ಒಂದು ವಿಧದ ನೀರಿನಿಂದಲೇ ಮನುಷ್ಯನ ಸೃಷ್ಟಿಯಾಗಿದೆ.
ಸೂಕ್ತ : 57
“ತನ್ನ ಕೃಪೆಗಿಂತ ಮುಂಚಿತವಾಗಿ ಸುವಾರ್ತೆಯೊಂದಿಗೆ ಮಾರುತಗಳನ್ನು ಕಳುಹಿಸುವವನು ಅಲ್ಲಾಹನೇ ಆಗಿರುತ್ತಾನೆ.ಅನಂತರ ಅವು ನೀರನ್ನು ಹೊತ್ತ ಮೋಡಗಳನ್ನು ಎತ್ತಿಕೊಂಡಾಗ ಅವುಗಳಿಗೆ ಯಾವುದಾದರೂ ನಿರ್ಜೀವ ಭೂಭಾಗದ ಕಡೆಗೆ ಚಲನೆ ಕೊಡುತ್ತಾ ನೆ ಮತ್ತು ಮಳೆಗರೆದು ಆ ನಿರ್ಜೀವ ಭೂಭಾಗದಿಂದ ತರತರದಫಲಗಳನ್ನು ಹೊರ ತರುತ್ತಾನೆ.ನೋಡಿರಿ ಹೀಗೆಯೇ ನಾವು ಮೃತರನ್ನು ಮರಣಾವಸ್ಥೆಯಿಂದ ಹೊರ ತರುತ್ತೇವೆ. ಇದು ನೀವು ಈ ಪ್ರತ್ಯಕ್ಷ ದರ್ಶನದಿಂದ ಪಾಠಕಲಿಯುವಿರೆಂಬ ನಿರೀಕ್ಷೆಯಿಂದಾಗಿದೆ.”
(ದಿವ್ಯ ಕುರ್‍ಆನ್)
✍️ಶಮೀರ ಜಹಾನ್
IslamKannada News Portal
