Home / ಲೇಖನಗಳು / ಇಬ್ನು ತೈಮೀಯರಿಗೆ ಲಭಿಸಿದ ಆತ್ಮ ಸಂತೃಪ್ತಿ .

ಇಬ್ನು ತೈಮೀಯರಿಗೆ ಲಭಿಸಿದ ಆತ್ಮ ಸಂತೃಪ್ತಿ .

ಒಮ್ಮೆ ಇಬ್ನು ತೈಮೀಯ(ರ) ಹೀಗೆಂದರು:
ಒಂದು ವೇಳೆ ಈ ಜೈಲಿನಲ್ಲಿ ನಾನು ಅನುಭವಿಸುವ ಮಾನಸಿಕ ನೆಮ್ಮದಿಯನ್ನು ನನ್ನನ್ನು ಜೈಲಿಗಟ್ಟಿಸಿದವರು ತಿಳಿದಿರುತ್ತಿದ್ದರೆ ನನ್ನ ಹೃದಯವನ್ನು ತೆರೆದು ಆ ಸಮಾಧಾನಕ್ಕಾಗಿ ಅವರು ಜಗಳವಾಡುತ್ತಿದ್ದರು.

ಆತ್ಮೀಯರೇ…
ಇದು ಬಹಳ ಅರ್ಥಗರ್ಭಿತವಾದ ಮಾತು.
ಈ ಮಾತಿನಲ್ಲಿ ಎರಡು ವಿಷಯಗಳನ್ನು ನಮಗೆ ಅರ್ಥೈಸಬಹುದು.

ಒಬ್ಬ ವಿಶ್ವಾಸಿಯ ಜೀವನದ ಸೌಭಾಗ್ಯ ಅವನ ವಿಶ್ವಾಸದ ಮೇಲೆ ಅಡಕವಾಗಿದೆ.

ಅವನ ಅಚಲವಾದ ವಿಶ್ವಾಸ ಅವನಿಗೆ ಎಲ್ಲಾ ಪರಿಸ್ಥಿತಿಯಲ್ಲೂ ಸಮಾಧಾನವನ್ನು ನೀಡುತ್ತದೆ. ಕುರ್’ಆನ್ ಅವನಿಗೆ ನೀಡಿದ ಕೊಡುಗೆ ಇದು. ಅಲ್ಲಾಹನ ಮೇಲೆ ದೃಢವಾಗಿ ವಿಶ್ವಾಸವಿರಿಸಿದವನಿಗೆ ಯಾವುದೇ ಗೊಂದಲವಿಲ್ಲ.

ಅವರ ಮನಸ್ಸು ಎಲ್ಲಾ ಕಷ್ಟಕರ ಪರಿಸ್ಥಿತಿಯಲ್ಲೂ ಶಾಂತ ಚಿತ್ತದಿಂದಿರುತ್ತದೆ.

ಎರಡನೆಯದಾಗಿ ನಾವು ಎಲ್ಲಿರುತ್ತೇವೆಯೋ ಅಲ್ಲಿ, ಹೇಗೆ ಇರುತ್ತೇವೆಯೋ ಹಾಗೆ ನಮ್ಮನ್ನು ನಾವು ಒಪ್ಪಿಕೊಳ್ಳಬೇಕು.
ಅಲ್ಲಿ ನನಗೆ ಯಾವ ರೀತಿಯ ಸಮಾಧಾನವನ್ನು ಪಡೆಯಬಹುದೆಂದು ಆಲೋಚಿಸಬೇಕು.

ಕಂಪ್ಲೇಂಟ್ (ದೂರು)ಗಳಿಂದ ನಾವು ಮುಕ್ತರಾಗಬೇಕು. ಹಾಗಿದ್ದರೆ ಮಾತ್ರ ಇಬ್ನ್ ತೈಮೀಯರಿಗೆ ಜೈಲಿನಲ್ಲೂ ಸಿಕ್ಕಿದಂತಹ ಮಾನಸಿಕ ನೆಮ್ಮದಿ ನಮಗೂ ಪಡೆಯಲು ಸಾಧ್ಯ.

ರೈಹಾನ್.ವಿ.ಕೆ.✍️

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *