Home / ಲೇಖನಗಳು / ನಮ್ಮ ಜೀವನದ ಬೆಲೆ

ನಮ್ಮ ಜೀವನದ ಬೆಲೆ

✍️ ರೈಹಾನ ವಿ.ಕೆ.

ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನೊಂದಿಗೆ ತನ್ನ ಜೀವನದ ಬಗ್ಗೆ ಪ್ರಶ್ನಿಸುತ್ತಾ ತನ್ನ ಜೀವನದ ಬೆಲೆ ಎಷ್ಟಿರಬಹುದು ಎಂದು ಕೇಳುತ್ತಾರೆ. ಆಗ ಆತನ ಗುರು ಒಂದು ಕಲ್ಲನ್ನು ಅವನ ಕೈಗೆ ಕೊಟ್ಟು ಇದರ ನಿಜವಾದ ಬೆಲೆಯನ್ನು ತಿಳಿದುಕೊಳ್ಳು ಅನ್ನುತ್ತಾರೆ. ಆದರೆ ಯಾರಿಗೂ ಇದನ್ನು ಮಾರಾಟ ಮಾಡಬಾರದು ಅನ್ನುತ್ತಾರೆ. ಹಾಗೆ ಆ ಶಿಷ್ಯ ಮುಂದಕ್ಕೆ ಪೇಟೆಗೆ ಹೋಗಿ ಒಬ್ಬ ತರಕಾರಿ ವ್ಯಾಪಾರಿಯನ್ನು ಭೇಟಿಯಾಗುತ್ತಾರೆ ಮತ್ತು ಕೈಯಲ್ಲಿದ್ದ ಕಲ್ಲನ್ನು ತೋರಿಸಿ ಅದರ ಬೆಲೆಯನ್ನು ವಿಚಾರಿಸುತ್ತಾರೆ. ಆಗ ಆ ವ್ಯಾಪಾರಿ ಹೇಳುತ್ತಾರೆ ನೀನು ಈ ಕಲ್ಲನ್ನು ನನಗೆ ನೀಡುವುದಾದರೆ ನಿನಗೆ ನಾನು ನಾಲ್ಕೈದು ಕೆಜಿ ತರಕಾರಿಗಳನ್ನು ನೀಡಬಲ್ಲೆ.

ಶಿಷ್ಯ ಮುಂದಕ್ಕೆ ಹೋಗುತ್ತಾನೆ. ಅಲ್ಲಿ ಫಲಗಳು ಮಾರುವ ವ್ಯಾಪಾರಿಯೊಂದಿಗೆ ತನ್ನ ಕೈಯಲ್ಲಿದ್ದ ಕಲ್ಲನ್ನು ತೋರಿಸಿ ಬೆಲೆ ಕೇಳಿದಾಗ ಈ ನನ್ನ ಅಂಗಡಿಯಲ್ಲಿರುವ ಎಲ್ಲಾ ಫಲಗಳು ನಿನಗೆ ಈ ಕಲ್ಲಿನ ಬದಲಿಗೆ ಕೊಡಲು ನಾನು ಸಿದ್ದ ಅನ್ನುತ್ತಾರೆ. ಹಾಗೆ ಶಿಷ್ಯ ಇನ್ನೂ ಮುಂದೆ ನಡೆದಂತೆ ಒಬ್ಬ ಸ್ವರ್ಣದ ಮಳಿಗೆಗೆ ಹೋಗುತ್ತಾನೆ. ಅಲ್ಲಿ ಈ ಮೊದಲಿನಂತೆ ಕಲ್ಲಿನ ಬೆಲೆಯನ್ನು ವಿಚಾರಿಸಿದಾಗ ನನ್ನ ಈ ಮಳಿಗೆಯಲ್ಲಿರುವ ಎಲ್ಲಾ ಆಭರಣಗಳನ್ನು ನಿನಗೆ ಈ ಕಲ್ಲಿನ ಬದಲಿಗೆ ನೀಡುವೆ ಎನ್ನುತ್ತಾನೆ.

ಮತ್ತೂ ಮುಂದಕ್ಕೆ ಸಾಗಿ ಮುತ್ತು ರತ್ನಗಳ ವ್ಯಾಪಾರಿಯೊಂದಿಗೆ ಕೇಳಿದಾಗ ಆತನೂ ಮೊದಲಿಗನಂತೆ ಈ ಕಲ್ಲಿನ ಬೆಲೆ ಈ ಎಲ್ಲಾ ಮುತ್ತುರತ್ನಗಳಿಗಿಂತಲೂ ಅಪಾರವಾಗಿದೆ ಎನ್ನುತ್ತಾರೆ ಮತ್ತು ಒಂದು ಕೆಂಪು ಬಣ್ಣದ ರೇಷ್ಮೆ ಬಟ್ಟೆಯನ್ನು ಅವನ ಕೈಗೆ ಕೊಟ್ಟು ಈ ಕಲ್ಲನ್ನು ಇದರಲ್ಲಿ ಜೋಪಾನವಾಗಿಡು. ಈ ಕಲ್ಲಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅಷ್ಟು ಬೆಲೆ ಬಾಳುವಂತದ್ದು ಅಂದಾಗ

ಗುರುವಿನ ಬಳಿಗೆ ಹೋಗಿ ಆ ಕಲ್ಲನ್ನು ಅವರಿಗೆ ಮರಳಿ ಒಪ್ಪಿಸಿ ನಡೆದ ವಿಚಾರವನ್ನೆಲ್ಲ ಗುರುವಿನೊಡನೆ ಈ ಶಿಷ್ಯ ಹಂಚಿಕೊಳ್ಳುತ್ತಾರೆ. ಆವಾಗ ಗುರು ಹೇಳುತ್ತಾರೆ, ನಾವು ಪ್ರತಿಯೊಬ್ಬರೂ ಈ ಕಲ್ಲಿನ ತರಹವೇ! ಆದುದರಿಂದ ಜನರು ಅವರವರ ವಿಚಾರಕ್ಕನುಸಾರವಾಗಿ ಅವರವರ ವಿಚಾರ ಮತ್ತು ಸಂದರ್ಭಕ್ಕನುಸಾರವಾಗಿ ನಮಗೆ ಬೆಲೆ ಕಟ್ಟುತ್ತಾರೆ.
ಆದುದರಿಂದ ನಿಜವಾಗಿ ನಮ್ಮನ್ನು ಅರ್ಥ ಮಾಡಿಕೊಂಡವರ ಜೊತೆ ನಾವು ಯಾವತ್ತೂ ಅಮೂಲ್ಯವಾಗಿರುತ್ತೇವೆ.ಆದ್ದರಿಂದ ನಮ್ಮ ನಿಜವಾದ ಬೆಲೆ ಅರಿಯಬೇಕಾದರೆ ನಮ್ಮನ್ನು ಅರ್ಥ ಮಾಡಿಕೊಂಡವರ ಜೊತೆ ನಮ್ಮ ಸಮಯವನ್ನು ಕಳೆಯಬೇಕೆ ವಿನಃ ನಮಗೆ ಬೆಲೆ ಗೌರವ ನೀಡದವರ ಜೊತೆಯಿಂದ ನಾವು ದೂರವಾಗಬೇಕು ಎಂಬುದನ್ನು ಗುರು ಶಿಷ್ಯನಿಗೆ ಒಂದು ಕಥೆಯ ಮೂಲಕ ಮನವರಿಕೆ ಮಾಡಿಸುತ್ತಾರೆ.

ನಾನು ಹೇಳುತ್ತಿರುವುದೇನಂದರೆ ನಾವು ಪ್ರತಿಯೊಬ್ಬ ರೂ ಅಮೂಲ್ಯ (precious) ಆಗಿದ್ದೇವೆ. ನಮಗೆ ನಮ್ಮದೇ ಆದ ಬೆಲೆ ಇದೆ. ಮೊದಲನೆಯದಾಗಿ ನಮ್ಮ ಬೆಲೆಯನ್ನು ನಾವು ಅರಿತು ಕೊಂಡಾಗ ಮಾತ್ರ ಇತರರೊಂದಿಗೆ ನಾವು ಹೇಗಿರಬೇಕು, ನಾವು ಯಾರು ಎಲ್ಲಿ ನಮಗೆ ಬೆಲೆ ಇಲ್ಲ ಅಥವಾ ಯಾರಿಗೆ ನಾನು ಬೆಲೆಯುಳ್ಳವನಾಗಿ ಇರುವೆನೋ ಅಲ್ಲಿ ಮಾತ್ರ ನಾವು ಇರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ಹೀಗೆ ಅರ್ಥಪೂರ್ಣ ಜೀವನ ನಮ್ಮದಾಗಿರಲಿ. ತುಚ್ಚ ಬೆಲೆಗೆ ನಾವು ಮಾರಲ್ಪಡಬಾರದು ಅಥವಾ ಗೌರವ ಇಲ್ಲದ ಕಡೆ ನಾವು ನಿಲ್ಲಬಾರದು.

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …