Home / ಲೇಖನಗಳು (page 10)

ಲೇಖನಗಳು

ನಮಾಝ್ ದೇವ ವಿಶ್ವಾಸದ ಕ್ರಿಯಾರೂಪ

ಅಲ್ಲಾಹ್ ನಮಾಝ್ ಮಾಡುವವರೊಂದಿಗಿದ್ದಾನೆ ಎನ್ನಲಿಲ್ಲ. ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ ಎಂದಿದ್ದಾನೆ. ಐದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ನಿರ್ವಹಿಸುವ ನಮಾಝ್ (ಸಾಷ್ಟಾಂಗ) ದಿನದ ಎಲ್ಲ ಕೆಲಸಕ್ಕಿಂತಲೂ ಅತ್ಯಂತ ಕಷ್ಟಕರ ಕಾರ್ಯವಾಗಿ ಮಾರ್ಪಡುವುದು ಸಹನೆ ಇಲ್ಲದವನಿಗಾಗಿದೆ. ದೈನಂದಿನ ನಿಬಿಡತೆ, ಮನೋರಂಜನೆಯಲ್ಲಿ ಮುಳುಗುವ ಮನುಷ್ಯನಿಗೆ ಐದು ಸಲದ ನಮಾಝ್ ಸಹನೆಯ ಗುಣ ಬೆಳೆಯಲು, ಜೀವನ ಶಿಸ್ತು ಬದ್ಧವಾಗಲು ಸಹಕಾರಿ. ಸಹನೆಯಿಂದಲೇ ಸ್ವರ್ಗ, ದೇವಸಾಮಿಪ್ಯ ಲಭಿಸುವುದು. “ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ” “ಖಂಡಿತವಾಗಿಯೂ ನಮಾಝ್ ಅತ್ಯಂತ ಕಷ್ಟಕರ ಕಾರ್ಯ. ಆದರೆ …

Read More »

ಹಾಜಿರಾ-ಕಾಬಾ- ಅಬ್ದುಲ್ ಮುತ್ತಲಿಬ್

ನಾನೇ ಸಾರ್ವಭೌಮ, ಪೂರ್ವ ಪಶ್ಚಿಮಗಳು ನನ್ನ ಅಂಕೆಯಲ್ಲಿದೆ ಎನ್ನುತ್ತಿದ್ದ ಇರಾಕ್ ನ ರಾಜ ನಮ್ರೂದ್. ರಾಜನ ಆಸ್ಥಾನದಲ್ಲಿ ಅರ್ಚಕರಿಗೆ ವಿಶೇಷ ಸ್ಥಾನಮಾನವಿತ್ತು. ಅರ್ಚಕರ ಮಗನಾಗಿ ಇಬ್ರಾಹೀಮರು ಹುಟ್ಟಿದರು. ಯುವಕರಾದಾಗ ನಮ್ರೂದ್ ರಾಜನನ್ನೂ ತಂದೆಯನ್ನೂ ವಿರೋಧಿಸಿ ಇರಾಕ್ ನಿಂದ ವಲಸೆ ಹೋಗುತ್ತಾರೆ. ಭೂಮ್ಯಾಕಾಶಗಳ ಸೃಷ್ಟಿಕರ್ತನೇ ನನ್ನ ಪ್ರಭು ಎಂಬುದು ಇಬ್ರಾಹೀಮರ ಪ್ರಬಲ ಪ್ರತಿಪಾದನೆಯಾಗಿತ್ತು. ಮನುಷ್ಯರಲ್ಲಿ ಮೇಲು ಕೀಳು ಎಂಬುದು ಇಲ್ಲವೇ ಇಲ್ಲ. ಸೃಷ್ಟಿಕರ್ತನು ಮಾಡಿಲ್ಲ ಮನುಷ್ಯರೇ ಮಾಡಿದರು. ಆ ಕಾರಣಕ್ಕಾಗಿಯೇ ಧರ್ಮ …

Read More »

ಮಾರ್ಗದರ್ಶನದ ಅಗೋಚರ ವಿಧಾನಗಳು

ಮಾನವನಿಗೆ ವೀಕ್ಷಿಸುವ, ಆಲಿಸುವ ಶಕ್ತಿಯನ್ನು ದೇವನು ನೀಡಿದ್ದಾನೆ. ಅವುಗಳಿಂದ ಮಾನವನಿಗೆ ಜ್ಞಾನ-ಮಾಹಿತಿಗಳು ಲಭಿಸುತ್ತವೆ. ತಾನು ಗಳಿಸಿದ ಜ್ಞಾನದಿಂದ ಏನಾದರೊಂದು ತೀರ್ಮಾನ ಮಾಡಲು ಅವನು ಪ್ರಯತ್ನಿಸುತ್ತಾನೆ. ಒಂದು ವೇಳೆ ಆಳವಾಗಿ ದೃಷ್ಟಿ ಹಾಯಿಸುವುದಾದರೆ ಮಾನವನೊಳಗಿನ ಸಾಮರ್ಥ್ಯಗಳು ಜಾಗೃತ ಸ್ಥಿತಿಯಲ್ಲಿರುವುದು ಗೋಚರಿಸುತ್ತವೆ. ವ್ಯಕ್ತಿ ತನ್ನ ಶಕ್ತಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿನಿಯೋಗಿಸುವನು. ಕೆಲವೊಮ್ಮೆ ತನ್ನ ಬಂಡಾಯ ಉದ್ಧಟತನದಿಂದಾಗಿ ತನ್ನ ಅಂತರಾತ್ಮ ವಿರೋಧಿಸುವ ದಾರಿಯನ್ನು ಸ್ವೀಕರಿಸಿದಾಗ ಅವನ ಅಂತರಾತ್ಮವೇ ವಿರೋಧಿಸುವುದು. ಮಾನವನಲ್ಲಿ ಅಸ್ತಿತ್ವದಲ್ಲಿರುವ ಮಾರ್ಗದರ್ಶನಗಳನ್ನು ಸಾಮಾನ್ಯವಾಗಿ …

Read More »

ಮಾನವ-ಒಂದು ನಿಗೂಢ ಜೀವಿ

ಭೌತಿಕ ಜಗತ್ತಿನೊಂದಿಗೆ ಮಾನವನಿಗೆಷ್ಟು ಆಳವಾದ ಸಂಬಂಧವಿದೆಯೋ ಅಭೌತಿಕ ಜಗತ್ತಿನೊಂದಿಗೂ ಅವನು ಸಂಬಂಧವನ್ನು ಹೊಂದಿದ್ದಾನೆ. ಜೀವನದ ನಿಗೂಢತೆಯನ್ನು ಭೇದಿಸಲಾಗದ ಮಾನವನು ಅದೆಷ್ಟೋ ವಿಚಾರಗಳಲ್ಲಿ ಅಜ್ಞಾನಿಯಾಗಿದ್ದಾನೆ. ಅವನನ್ನು ಸಂದೇಹಗಳಾವರಿಸಿಕೊಂಡಿವೆ. ಆ ಅಂಧಕಾರದಿಂದ ಮುಕ್ತಿ ಹೊಂದುವುದು ಸುಲಭವಲ್ಲ. ಯಾಕೆಂದರೆ ಮಾನವನ ವ್ಯಕ್ತಿತ್ವ ಎಷ್ಟೇ ಸತ್ಯಸಂಧವೂ ಸರಳವೂ ಆಗಿದ್ದರೂ ಅದು ಸ್ವಲ್ಪಂಶ ಜಟಿಲವಾಗಿದೆ. ಆದ್ದರಿಂದಲೇ ಮಾನವನಿಗೆ ತನ್ನ ಜೀವನದ ರಹಸ್ಯ ಅರ್ಥವಾಗಿಲ್ಲ. ನೋಡಿ, ಬುದ್ದಿ ಮಾನವನ ಅನುಭವಕ್ಕೆ ವೇದ್ಯವಾಗುವಂತಹ ಅಮೂಲ್ಯ ವಸ್ತುವಾಗಿದೆ. ಬುದ್ಧಿ ರಹಿತ ಮಾನವನನ್ನು …

Read More »

ಶಿಕ್ಷಣ ಮತ್ತು ಅರಿವು: ಎರಡು ಭಿನ್ನ ಮುಖಗಳು

ಜಿ.ಕೆ. ಎಡತ್ತನಾಟ್ಟುಕರ ಇಂದಿನವರೆಗೆ ಮಾನವಕುಲ ಸಾಧಿಸಿದ ಪ್ರಗತಿಯಲ್ಲಿ ಜ್ಞಾನದ ಪಾತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ. ಮನುಷ್ಯನು ಭೂಮಿಯ ಮೇಲೆ ಹೀರೋ ಆಗಲು ಅವನ ಜ್ಞಾನದ ಶಕ್ತಿಯೇ ಕಾರಣ. ಆದ್ದರಿಂದ ಮನುಷ್ಯನಾಗಿ ಬಾಳಲು ಕೇವಲ ಜ್ಞಾನ ಅಥವಾ ಅರಿವು ಇದ್ದರೆ ಸಾಕು ಎಂದು ಚಿಂತಿಸುತ್ತಿದ್ದ ಕಾಲವಿತ್ತು. ಭೌತಿಕವಾದವು ಆ ರೀತಿ ಆಲೋಚಿಸಲು ಕಲಿಸುತ್ತದೆ. ಆದರೆ ಮನುಷ್ಯನನ್ನು ನೈಜ ಮನುಷ್ಯನಾಗಿ ಮಾಡುವಲ್ಲಿ ಅರಿವಿಗಿಂತ ಸ್ವಯಂ ಗುರುತಿಸಿಕೊಳ್ಳುವಿಕೆ ಎಂಬ ಪಾಠವನ್ನು ಪವಿತ್ರ ಕುರ್‌ಆನ್ ಮತ್ತು ಪ್ರವಾದಿವರ್ಯರು(ಸ) …

Read More »

ಬುದ್ಧಿ ವಿವೇಕಗಳ ಸೀಮೆಗಳು

ಮಾನವರ ಬುದ್ಧಿ ಮತ್ತು ವಿವೇಕಗಳಿಗೆ ಒಂದು ಸೀಮೆಯಿದೆ. ಮೆದುಳು ಮಾನವನಿಗೆ ದೊರೆತ ಅಮೂಲ್ಯ ಅನುಗ್ರಹವಾಗಿದೆ. ಮಾನವನು ಪ್ರತಿಯೊಂದು ಕಾರ್ಯವನ್ನು ಆಲೋಚಿಸಿ ಬುದ್ಧಿ ಪೂರ್ವಕವಾಗಿ ಮಾಡಬೇಕು. ಆದರೆ ಬುದ್ದಿಯ ಬಳಕೆಯಲ್ಲಿ ಅದರ ಇತಿಮಿತಿಯ ಅರಿವನ್ನು ಹೊಂದಿರುವುದು ಅವಶ್ಯಕ. ಅದರ ಸಾಮರ್ಥ್ಯವನ್ನು ಮೀರುವ ಕೆಲಸವನ್ನು ಅದರ ಮೇಲೆ ಹೇರಬಾರದು. ಅಂತಹವರು ಖಂಡಿತವಾಗಿಯೂ ವಿಫಲರಾಗುತ್ತಾರೆ. ಬುದ್ಧಿ ಶಕ್ತಿಗೆ ಒತ್ತಡ ಹಾಕುವುದೆಂದರೆ ಒಂದರ್ಥದಲ್ಲಿ ದೌರ್ಜನ್ಯವೇ ಆಗುವುದು. ವಿಜ್ಞಾನ ಬುದ್ಧಿಯ ಕೊಡುಗೆಯಲ್ಲವೇ? ಆದರೆ ಕಾಂಟೆ ಕೇವಲ ಬುದ್ಧಿಯಿಂದ …

Read More »

ಜಗತ್ತು ಮತ್ತು ಮಾನವ

ಈ ಜಗತ್ತಿನಲ್ಲಿ ಮಾನವನಿಗೆ ಹಲವಾರು ವಸ್ತುಗಳು ಗೋಚರಿಸುತ್ತವೆ. ಅವನ ಕಣ್ಣೆದುರಿನಿಂದ ಹಲವಾರು ವಸ್ತುಗಳು ಹಾದು ಹೋಗುತ್ತಿವೆ. ಇವಿಷ್ಟು ಸಾಲದು. ಹೆಚ್ಚು ಹೆಚ್ಚು ಅರಿತುಕೊಳ್ಳಬೇಕೆಂದು ಅವನು ಬಯಸುತ್ತಾನೆ. ಅದು ಪ್ರಕೃತಿ ಸಹಜ ಬೇಡಿಕೆಯೂ ಹೌದು. ಒಂದು ಶಬ್ದ ಕೇಳಿಸಿದರೆ ಇಂಪಾದ ಹಾಡಾಗಲೆಂದು ಬಯಸುವಂತೆ ಜಗತ್ತಿನ ನೈಜ ಮತ್ತು ಪರಿಪೂರ್ಣ ಸೌದರ್ಯದವರೆಗೂ ಅವನು ತಲುಪಬೇಕು. ಆದರ ಪರಿಚಯ ಅವನಿಗಿರಬೇಕು. ಮಾನವನಿಗೆ ಜಗತ್ತನ್ನು ಸರಿಯಾದ ದೃಷ್ಟಿಯಿಂದ ನೋಡಲು ಸಾಧ್ಯ ವಾದಂದು, ಜಗತ್ತಿನ ಅಸ್ತಿತ್ವ ಗೋಚರಿಸುತ್ತದೆ. …

Read More »

ಪ್ರವಾದಿ ಮುಹಮ್ಮದ್(ಸ)ರ ಬಾಲ್ಯ ಕಾಲದ ಸದ್ವರ್ತನೆಗಳು

@ ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ ಪ್ರವಾದಿ ಮುಹಮ್ಮದ್(ಸ)ರು ಹುಟ್ಟುವ ಮುಂಚೆ, ತಂದೆ ಅಬ್ದುಲ್ಲಾರು ಸಿರಿಯಾದಿಂದ ವ್ಯಾಪಾರಿ ತಂಡದೊಂದಿಗೆ ಮರಳುವಾಗ ದಾರಿ ಮಧ್ಯದಲ್ಲಿ ತೀರಿ ಹೋಗಿದ್ದರು. ಅನಾಥರಾಗಿ ಹುಟ್ಟಿದ ಮುಹಮ್ಮದ್‌ರ, ದಾದಿ ಅಲೀಮಾ ಸಅದಿಯ್ಯಾರ ಆಸರೆಯಲ್ಲಿ ಮಕ್ಕಾದ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ಜೀವನ ಆರಂಭವಾಗುತ್ತದೆ. ಗ್ರಾಮೀಣ ಸೊಗಡು, ಪ್ರಾಕೃತಿಕ ವಾತಾವರಣ. ಸುಂದರ ಭಾಷಾ ಶೈಲಿ ಮತ್ತು  ಉತ್ತಮ ಗುಣ ನಡತೆ ಅವರಲ್ಲಿ ಬೆಳೆಯುತ್ತದೆ. ಆರನೇ ವರ್ಷದಲ್ಲಿ ತಾಯಿ ಆಮಿನಾ ಇಹಲೋಕ ತ್ಯಜಿಸಿದರು. ನಂತರ ತಾತ …

Read More »

ಭಾರತೀಯ ಮುಸ್ಲಿಮರು ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆಯೇ?

ಎಜಾಝ್ ಅಹ್ಮದ್ ಅಸ್ಲಂ ರೇಡಿಯನ್ಸ್ ವೀವ್ಸ್ ವೀಕ್ಲಿ ಅನು: ಮುಹಮ್ಮದ್ ಮರಕಡ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರದ ಹಿಂದೆ ಅಮೆರಿಕ ಪ್ರವಾಸದಲ್ಲಿದ್ದರು. ಭಾರತೀಯ ಮುಸ್ಲಿಮರು ಸುರಕ್ಷಿತವಾಗಿರುವುದು ಮಾತ್ರವಲ್ಲದೆ ಭಾರತದ ನಾಗರಿಕರಾಗಿ ಸಮಾನ ಹಕ್ಕುಗಳನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಅವರು ಕಠಿಣ ಪರಿಶ್ರಮಪಡಬೇಕಾಯಿತು. ಭಾರತದ ಹೊರಗಿನ ಜನರು ನಕಾರಾತ್ಮಕ ಪ್ರಚಾರದಿಂದ ಪ್ರಭಾವಿತರಾಗಬಾರದು ಬದಲಿಗೆ ಅವರು ಭಾರತಕ್ಕೆ ಭೇಟಿ ನೀಡಬೇಕು ಮತ್ತು ಭಾರತೀಯ ಮುಸ್ಲಿಮರ ಸ್ಥಾನಮಾನ …

Read More »

ಶವ ಭಕ್ಷಕರು

ಸಂಗ್ರಹ: ಎನ್.ಎಂ. ಪಡೀಲ್ ಅಬೂ ಹುರೈರ(ರ)ರಿಂದ ವರದಿಯಾಗಿದೆ. “ಪರದೂಷಣೆ ಎಂದರೆ ಏನೆಂದು ನಿಮಗೆ ತಿಳಿದಿದೆಯೇ?” ಎಂದು ಪ್ರವಾದಿ(ಸ) ಕೇಳಿದರು. ಅಲ್ಲಾಹ್ ಮತ್ತು ಅವನ ಸಂದೇಶವಾಹಕರಿಗೆ ಮಾತ್ರ ಚೆನ್ನಾಗಿ ತಿಳಿದಿರುವುದೆಂದು ಅವರು ಉತ್ತರಿಸಿದರು. “ನಿನ್ನ ಸಹೋದರನ ಬಗ್ಗೆ ಅವನಿಗಿಷ್ಟವಿಲ್ಲದ್ದನ್ನು ಹೇಳುವುದಾಗಿದೆ” ಎಂದು ತಿಳಿಸಿದರು. ಆಗ ಓರ್ವ ವ್ಯಕ್ತಿ ಪ್ರವಾದಿಯೊಂದಿಗೆ, “ನಾನು ಹೇಳುವ ವಿಷಯ ಸಹೋದರನಲ್ಲಿದ್ದರೆ ಕೂಡಾ ಅದು ಪರದೂಷಣೆಯಾಗುತ್ತದೆಯಾ?” ಎಂದು ಪ್ರಶ್ನಿಸಿದರು. ಆ ಸ್ವಭಾವ ಅವನಲ್ಲಿದ್ದರೆ ಅದು ಪರದೂಷಣೆಗೆ ಸೇರುತ್ತದೆ. ಇಲ್ಲದಿದ್ದರೆ …

Read More »