✍️ಖದೀಜ ನುಸ್ರತ್ ಜೀವಮಾನದಲ್ಲಿ ಮಕ್ಕಾ ನಗರಕ್ಕೆ ತೆರಳಿ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಬೇಕೆಂಬುದು ಪ್ರತಿಯೊಬ್ಬ ಮುಸ್ಲಿಮನ ಕನಸಾಗಿರುತ್ತದೆ. ಆರೋಗ್ಯ, ಸಂಪತ್ತು, ಯಾತ್ರಾ ಸೌಕರ್ಯವಿರುವ ಎಲ್ಲಾ ಸ್ತ್ರೀ-ಪುರುಷರಿಗೆ ಇದು ಕಡ್ಡಾಯವಾಗಿದೆ. ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದರೂ ಮುಸ್ಲಿಮರೆಲ್ಲರೂ ತಮ್ಮ ಆದಾಯದ ಉಳಿತಾಯದ ಹಣದಲ್ಲಿ ಚಿಕ್ಕ ಪಾಲನ್ನು ಈ ಪವಿತ್ರ ಯಾತ್ರೆಗಾಗಿ ಜೋಪಾನವಾಗಿಡುತ್ತಾರೆ. ಈ ಯಾತ್ರೆಯು ಅಲ್ಲಾಹನ ಕರೆಗೆ ಓಗೊಟ್ಟು ನಮ್ಮ ಮನೆಯಿಂದ ಆರಂಭವಾಗಿ ಅಲ್ಲಾಹನ ಅತಿಥಿಗಳಾಗಿ ಅವನ ಭವನದೆಡೆಗೆ ಮಾಡುವಂತಹ ಪವಿತ್ರ ಯಾತ್ರೆಯಾಗಿದೆ. …
Read More »ಸಹನೆ, ತ್ಯಾಗ, ಬಲಿದಾನದ ಸಂಕೇತ
@ ನಝೀರ್ ಅಹ್ಮದ್ ಖಾಜಿ, ವಿಜಯಪುರ ವಿಶ್ವದ ಎಲ್ಲಾ ಧರ್ಮೀಯರಲ್ಲಿಯೂ ಹಬ್ಬಾಚಾರಣೆ ಇದೆ. ಮುಸಲ್ಮಾನರಲ್ಲಿ ಎರಡು ಹಬ್ಬಗಳಿವೆ. ಒಂದು ರಮಝಾನ್ ಮತ್ತೊಂದು ಬಕ್ರೀದ್ (ಈದುಲ್ ಅಝ್ಹಾ). ರಮಝಾನ್ ತಿಂಗಳು ಸಂಪೂರ್ಣವಾಗಿ ಉಪವಾಸ ಆಚರಿಸಿದ ಬಳಿಕ ಮುಸ್ಲಿಮರು ಈದುಲ್ ಫಿತರ್ ಹಬ್ಬವನ್ನು ಆಚರಿಸುತ್ತಾರೆ. ಇನ್ನೊಂದು ಬಕ್ರೀದ್ ಹಬ್ಬ. ಈ ಎರಡು ಹಬ್ಬಗಳಲ್ಲಿ ಮುಸ್ಲಿಮರು ಪ್ರವಾದಿಗಳ ಮಾದರಿಯನ್ನು ಅನುಸರಿಸುತ್ತಾರೆ. ಅದರಲ್ಲಿ ಓರ್ವರು ಅಂತ್ಯ ಪ್ರವಾದಿ ಮುಹ್ಮಮದ್(ಸ) ಆದರೆ ಇನ್ನೊಬ್ಬರು ಪ್ರವಾದಿ ಹ. ಇಬ್ರಾಹೀಮ್(ಅ) …
Read More »ಹಜ್ಜ್ ಎಂದರೆ ಅರಫಾ
ಸಈದ್ ಇಬ್ನುಲ್ ಮುಸಯ್ಯಿಬ್(ರ) ರಿಂದ ವರದಿ: ಆಯಿಶಾ(ರ) ಹೇಳಿದರು: ಅಲ್ಲಾಹನ ಪ್ರವಾದಿ ಹೇಳಿದ್ದಾರೆ- “ಅಲ್ಲಾಹನು ಅತೀ ಹೆಚ್ಚು ಜನರನ್ನು ನರಕದಿಂದ ಮುಕ್ತಿಗೊಳಿಸಲು ಅರಫಾ ದಿನದಂತೆ ಬೇರೆ ದಿನ ಇಲ್ಲ. ಅಂದು ಅಲ್ಲಾಹನು ಸಮೀಪಕ್ಕೆ ಬರುತ್ತಾನೆ. ನಂತರ ಅವರ ಕುರಿತು ಅಭಿಮಾನದಿಂದ ದೇವ ಚರರೊಂದಿಗೆ ಮಾತನಾಡುತ್ತಾನೆ. ಬಳಿಕ ಕೇಳುತ್ತಾನೆ: ಅವರು ಏನನ್ನು ಬಯಸಿ ದ್ದಾರೆ?” (ಮುಸ್ಲಿಮ್) ಇದು ಅರಫಾ ದಿನದ ಮಹತ್ವ ಮತ್ತು ಪ್ರಾಧಾನ್ಯತೆಯನ್ನು ವಿವರಿಸುವ ಪ್ರವಾದಿ ವಚನವಾಗಿದೆ. ಈ ಹದೀಸ್ನ …
Read More »ಹಜ್ಜ್ ವಿಧಿ-ವಿಧಾನಗಳ ಸಮಗ್ರ ಮಾಹಿತಿ
✍️ ಡಾ| ಕೆ. ಇಲ್ಯಾಸ್ ಮೌಲವಿ ಜೀವನದಲ್ಲಿ ಹಜ್ಜ್ ಕರ್ಮವನ್ನು ನಿರ್ವಹಿಸುವ ಅವಕಾಶವು ಬಹಳ ಅಪರೂಪವಾಗಿ ಲಭಿಸುತ್ತದೆ. ಆದ್ದರಿಂದ ಹಜ್ಜ್ ಮತ್ತು ಉಮ್ರಾಕ್ಕೆ ಹೊರಡುವ ಮುನ್ನ ಅವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಸರಿಯಾಗಿ ಅರಿತುಕೊಳ್ಳುವುದು, ಗ್ರಹಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮಾಡುವ ಕರ್ಮಗಳು ತಖ್ವಾ ಇಲ್ಲದ ಕರ್ಮಗಳಂತೆ ನಿಷ್ಫಲವಾಗಿದೆ. ಸಾಮಾನ್ಯವಾಗಿ ಜೀವನದಲ್ಲಿ ಒಂದು ಬಾರಿ ಲಭಿಸುವ ಈ ಅವಕಾಶವನ್ನು ನಿಷ್ಫಲಗೊಳಿಸುವುದು. ನಮ್ಮ ಕಠಿಣ ಪರಿಶ್ರಮ, ಸಂಪತ್ತು, ಪರಲೋಕದ ಪ್ರತಿಫಲ …
Read More »ಯಾರು ಹಾಜಿ?
ಅಮೀನುಲ್ ಹಸನ್ (ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ) ಅನು: ಮುಖ್ತಾರ್ ಅಹ್ಮದ್, ಪಾಣೆಮಂಗಳೂರು ಜಗತ್ತಿನ ದಶದಿಕ್ಕುಗಳಿಂದ ಹಾಜಿಗಳು ಮಕ್ಕಾದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ತಂಡೋಪತಂಡವಾಗಿ ಅಲ್ಲಿಗೆ ತಲುಪುತ್ತಾರೆ. ವಾಸ್ತವದಲ್ಲಿ ಇದು ಅಲ್ಲಾಹನು ಹ. ಇಬ್ರಾಹೀಮ್(ಅ)ರಿಗೆ ಕೊಟ್ಟ ಆಜ್ಞೆಯ ಕರೆಯಾಗಿದೆ. “ಮತ್ತು ಜನರಿಗೆ ಹಜ್ಜ್ ಯಾತ್ರೆಗಾಗಿ ಸಾರ್ವತ್ರಿಕ ಕರೆ ನೀಡಿರಿ. ಅವರು ದೂರ ದೂರದ ಪ್ರದೇಶಗಳಿಂದೆಲ್ಲ ಕಾಲ್ನಡಿಗೆಯಲ್ಲೂ ಒಂಟೆಗಳ ಮೇಲೆ ಸವಾರಿ ಮಾಡಿಕೊಂಡೂ ನಿಮ್ಮ ಬಳಿಗೆ ಬರುವಂತಾಗಲಿ.” (ಅಲ್ ಹಜ್ಜ್: …
Read More »ಹೊಣೆಗಾರರೇ, ನೀವು ಪ್ರಶ್ನಾರ್ಹರಾಗಿದ್ದೀರಿ…
–ಫಾತಿಮಾ ಕೆ. (ನಾವು ಅವರೊಡನೆ ಹೀಗೆಂದೆವು): “ದಾವೂದ್, ನಾವು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಯಾಗಿ ಮಾಡಿದ್ದೇವೆ. ಆದುದರಿಂದ ನೀವು ಜನರ ನಡುವೆ ಸತ್ಯದೊಂದಿಗೆ ಆಳ್ವಿಕೆ ನಡೆಸಿರಿ. ಸ್ವೇಚ್ಛೆಯನ್ನು ಅನುಸರಿಸಬೇಡಿರಿ. ಅದು ನಿಮ್ಮನ್ನು ಅಲ್ಲಾಹನ ಅಲ್ಲಾಹನ ಮಾರ್ಗದಿಂದ ತಪ್ಪಿಸಿಬಿಡುವುದು. ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುವವರಿಗೆ, ಲೆಕ್ಕಾಚಾರ ನಡೆಯಲಿರುವ ದಿನವನ್ನು ಮರೆತು ಬಿಟ್ಟಿದ್ದಕ್ಕಾಗಿ ಖಂಡಿತವಾಗಿಯೂ ಕಠಿಣ ಯಾತನೆ ಇದೆ.” (ಸ್ವಾದ್: 26) ಪ್ರವಾದಿ ದಾವೂದ್(ಅ)ರನ್ನು ಸಂಭೋಧಿಸಿ ಅಲ್ಲಾಹನು ಈ ಸೂಕ್ತದಲ್ಲಿ ಈ ಮಾತನ್ನು ಹೇಳಿರುತ್ತಾನೆ. …
Read More »ಮುಸ್ಲಿಮ್ ಜನಸಂಖ್ಯೆ: ಪ್ರಧಾನಿಯ ಹೇಳಿಕೆ ಮತ್ತು ವಾಸ್ತವ
✍️ ಏ.ಕೆ. ಕುಕ್ಕಿಲ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜಸ್ತಾನದ ಚುನಾವಣಾ ಭಾಷಣದಲ್ಲಿ ಅವರು ಹೇಳಿರುವ ಈ ಮಾತು ನಿಜವೇ? ಸರ್ಕಾರವೇ ಒದಗಿಸಿರುವ ಮಾಹಿತಿಗಳು ಏನನ್ನುತ್ತವೆ? ಈ ಅಭಿಪ್ರಾಯವನ್ನು ವಿಶ್ಲೇಷಣೆಗೆ ಒಳಪಡಿಸುವುದಕ್ಕಿಂತ ಮೊದಲು, ಈ ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾದಲ್ಲಿ 2021 ಅಕ್ಟೋಬರ್ 16ರಂದು ಪ್ರಕಟವಾದ ಬರಹವನ್ನು ಓದುವುದು ಉತ್ತಮ. ಅಂಕಿ-ಅಂಶಗಳ ಆಧಾರಿತವಾಗಿ ಬರೆಯಲಾದ ಆ ಬರಹದ …
Read More »ಮಗಳು ಫಾತಿಮಾರ(ರ) ಬಗ್ಗೆ ಪ್ರವಾದಿಯ(ಸ) ನಿಲುವು ಮತ್ತು ವರ್ತಮಾನ
✍️ ಇಲ್ಯಾಸ್ ಮೌಲವಿ ಪ್ರವಾದಿ ಮುಹಮ್ಮದ್(ಸ) ಮತ್ತು ಖದೀಜಾ ದಂಪತಿಗಳ ಪುತ್ರಿ ಫಾತಿಮಾ(ರ) ಇತಿಹಾಸದ ಪ್ರಮುಖ ಮಾದರೀ ಮಹಿಳೆಯಾಗಿದ್ದಾರೆ. ಪ್ರವಾದಿವರ್ಯರಿಂದ(ಸ) ತರಬೇತಿಯ ಅನುಗ್ರಹ ಪಡೆದ ಮಾದರೀ ಮಹಿಳೆ. ಇಸ್ಲಾಮನ್ನು ಅಪ್ಪಿ ಹಿಡಿದ ಶ್ರೇಷ್ಟ ಮಾತೆ ಖದೀಜಾ(ರ)ರ ಮಾದರೀ ಪುತ್ರಿ. ತನ್ನ ಮಾತೆಯಿಂದ ಶೈಶವಾವಸ್ಥೆಯಿಂದ ಹಿಡಿದು ಬಾಲ್ಯ ಎಲ್ಲವನ್ನೂ ಅನುಭವಿಸಿದರು. ಅದರ ಪ್ರತೀ ನಾಡಿ ಮಿಡಿತವನ್ನು ಆವಾಹಿಸಿಕೊಂಡ ಮಹಿಳೆ. ಮಾತೆಯ ಮರಣದ ಬಳಿಕ ಹಲವು ಕಹಿ ಅನುಭವಗಳಿಗೆ ಗುರಿಯಾಗಬೇಕಾಯಿತು. ತಂದೆಯಾದ ಪ್ರವಾದಿವರ್ಯರು(ಸ) …
Read More »ವಿವಾಹ ವಿಚ್ಛೇದನಕ್ಕೂ ಇಸ್ಲಾಮ್ ಗೌರವ ನೀಡಿದೆ
✍️ ಪಿ. ರುಕ್ಸಾನಾ ಮಗಳೇ, “ಆತ ತಲಾಕ್ ಹೇಳಿದನಲ್ಲವೇ? ಆಕೆ ಈಗ ಎಲ್ಲಿದ್ದಾಳೆ?” ಈ ಪ್ರಶ್ನೆಗೆ ಆಕೆಯ ಎಂದಿನ ಸಾಮಾನ್ಯ ಉತ್ತರ ಹೀಗಿತ್ತು. “ಆಕೆ ತನ್ನ ಮನೆಯಲ್ಲಿದ್ದಾಳೆ. ಆತ ತನ್ನ ಮನೆಯಲ್ಲಿದ್ದಾನೆ.” ವಿವಾಹವೆಂಬ ದೃಢವಾದ ಬಿಡಿಸಲಾಗದ ಬಂಧವೆಂಬಂತೆ ವಿವಾಹ ವಿಚ್ಚೇದನಕ್ಕೂ ಇಸ್ಲಾಮ್ ಬಹಳ ಗೌರವ ನೀಡಿದೆ. ತಲಾಕ್ ಹೇಳಲ್ಪಟ್ಟ ಮಹಿಳೆಯನ್ನು ಮನೆಯಿಂದ ಹೊರ ಹಾಕಬಾರದು ಅಥವಾ ಆಕೆಯೇ ಸ್ವತಃ ಹೊರ ಹೋಗದೆ ಸಂಗಾತಿಯ ಜೊತೆ ಇರಬೇಕು. ಇದು ಇಸ್ಲಾಮ್ `ಇದ್ದತ್’ …
Read More »ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?
✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ ವಿಧಿಗಳನ್ನು ಫತ್ವಾ ಎನ್ನಲಾಗುತ್ತದೆ. ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿ ಸ್ಪಷ್ಟವಾದ ಉತ್ತರ ಅಥವಾ ಅಭಿಪ್ರಾಯ ಇಲ್ಲದಿರುವ ಸಂದರ್ಭದಲ್ಲಿ ಫತ್ವಾಗಳ ಅನಿವಾರ್ಯತೆ ಎದುರಾಗುತ್ತದೆ. ಫತ್ವಾವನ್ನು ನೀಡುವುದು’ಎಂಬುದು ಬಹಳ ಜವಾಬ್ದಾರಿಯುತವಾಗಿ ಮಾಡಬೇಕಾದ ಗೌರವಾರ್ಹವಾದ ಕರ್ತವ್ಯವೆಂದು ಮುಸ್ಲಿಮ್ ಜಗತ್ತು ಪರಿಗಣಿಸುತ್ತದೆ. ಪಾಶಾತ್ಯ ಜಗತ್ತು ‘ಫತ್ವಾ’ ಎಂಬ ಪದವನ್ನು ಮಾಧ್ಯಮಗಳಲ್ಲಿ ಉಪಯೋಗಿಸಲಾರಂಭಿಸಿದ್ದು ಮತ್ತು …
Read More »
IslamKannada News Portal