Home / ಲೇಖನಗಳು / ನಮಾಝ್ ದೇವ ವಿಶ್ವಾಸದ ಕ್ರಿಯಾರೂಪ

ನಮಾಝ್ ದೇವ ವಿಶ್ವಾಸದ ಕ್ರಿಯಾರೂಪ

ಅಲ್ಲಾಹ್ ನಮಾಝ್ ಮಾಡುವವರೊಂದಿಗಿದ್ದಾನೆ ಎನ್ನಲಿಲ್ಲ.
ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ ಎಂದಿದ್ದಾನೆ.

ಐದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ನಿರ್ವಹಿಸುವ ನಮಾಝ್ (ಸಾಷ್ಟಾಂಗ) ದಿನದ ಎಲ್ಲ ಕೆಲಸಕ್ಕಿಂತಲೂ ಅತ್ಯಂತ ಕಷ್ಟಕರ ಕಾರ್ಯವಾಗಿ ಮಾರ್ಪಡುವುದು ಸಹನೆ ಇಲ್ಲದವನಿಗಾಗಿದೆ.

ದೈನಂದಿನ ನಿಬಿಡತೆ, ಮನೋರಂಜನೆಯಲ್ಲಿ ಮುಳುಗುವ ಮನುಷ್ಯನಿಗೆ ಐದು ಸಲದ ನಮಾಝ್ ಸಹನೆಯ ಗುಣ ಬೆಳೆಯಲು, ಜೀವನ ಶಿಸ್ತು ಬದ್ಧವಾಗಲು ಸಹಕಾರಿ. ಸಹನೆಯಿಂದಲೇ ಸ್ವರ್ಗ, ದೇವಸಾಮಿಪ್ಯ ಲಭಿಸುವುದು.

“ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ”

“ಖಂಡಿತವಾಗಿಯೂ ನಮಾಝ್ ಅತ್ಯಂತ ಕಷ್ಟಕರ ಕಾರ್ಯ. ಆದರೆ ಕಟ್ಟಕಡೆಗೆ ತಮ್ಮ ಪ್ರಭುವನ್ನು ಸಂಧಿಸಬೇಕೆಂದೂ ಆತನೆಡೆಗೇ ಮರಳಬೇಕೆಂದೂ ನಂಬಿರುವ ಆಜ್ಞಾಪಾಲಕ ದಾಸರಿಗೆ ಅದು ಕಷ್ಟಕರವಲ್ಲ.” (ಅಧ್ಯಾಯ ಅಲ್ ಬಕರ)

“ಭೂಲೋಕದಲ್ಲಿ ಸಹನೆವಹಿಸಿದ ಪರಿಣಾಮ ಇಂದು ಸ್ವರ್ಗಕ್ಕೆ ಅರ್ಹರಾಗಿದ್ದೀರಿ” (ಅಧ್ಯಾಯ ಅರ್ರ ಅದ್)

– ಶಮೀರ ಜಹಾನ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …