ಜಿ.ಕೆ. ಎಡತ್ತನಾಟ್ಟುಕರ ಇಂದಿನವರೆಗೆ ಮಾನವಕುಲ ಸಾಧಿಸಿದ ಪ್ರಗತಿಯಲ್ಲಿ ಜ್ಞಾನದ ಪಾತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ. ಮನುಷ್ಯನು ಭೂಮಿಯ ಮೇಲೆ ಹೀರೋ ಆಗಲು ಅವನ ಜ್ಞಾನದ ಶಕ್ತಿಯೇ ಕಾರಣ. ಆದ್ದರಿಂದ ಮನುಷ್ಯನಾಗಿ ಬಾಳಲು ಕೇವಲ ಜ್ಞಾನ ಅಥವಾ ಅರಿವು ಇದ್ದರೆ ಸಾಕು ಎಂದು ಚಿಂತಿಸುತ್ತಿದ್ದ ಕಾಲವಿತ್ತು. ಭೌತಿಕವಾದವು ಆ ರೀತಿ ಆಲೋಚಿಸಲು ಕಲಿಸುತ್ತದೆ. ಆದರೆ ಮನುಷ್ಯನನ್ನು ನೈಜ ಮನುಷ್ಯನಾಗಿ ಮಾಡುವಲ್ಲಿ ಅರಿವಿಗಿಂತ ಸ್ವಯಂ ಗುರುತಿಸಿಕೊಳ್ಳುವಿಕೆ ಎಂಬ ಪಾಠವನ್ನು ಪವಿತ್ರ ಕುರ್ಆನ್ ಮತ್ತು ಪ್ರವಾದಿವರ್ಯರು(ಸ) …
Read More »ಬುದ್ಧಿ ವಿವೇಕಗಳ ಸೀಮೆಗಳು
ಮಾನವರ ಬುದ್ಧಿ ಮತ್ತು ವಿವೇಕಗಳಿಗೆ ಒಂದು ಸೀಮೆಯಿದೆ. ಮೆದುಳು ಮಾನವನಿಗೆ ದೊರೆತ ಅಮೂಲ್ಯ ಅನುಗ್ರಹವಾಗಿದೆ. ಮಾನವನು ಪ್ರತಿಯೊಂದು ಕಾರ್ಯವನ್ನು ಆಲೋಚಿಸಿ ಬುದ್ಧಿ ಪೂರ್ವಕವಾಗಿ ಮಾಡಬೇಕು. ಆದರೆ ಬುದ್ದಿಯ ಬಳಕೆಯಲ್ಲಿ ಅದರ ಇತಿಮಿತಿಯ ಅರಿವನ್ನು ಹೊಂದಿರುವುದು ಅವಶ್ಯಕ. ಅದರ ಸಾಮರ್ಥ್ಯವನ್ನು ಮೀರುವ ಕೆಲಸವನ್ನು ಅದರ ಮೇಲೆ ಹೇರಬಾರದು. ಅಂತಹವರು ಖಂಡಿತವಾಗಿಯೂ ವಿಫಲರಾಗುತ್ತಾರೆ. ಬುದ್ಧಿ ಶಕ್ತಿಗೆ ಒತ್ತಡ ಹಾಕುವುದೆಂದರೆ ಒಂದರ್ಥದಲ್ಲಿ ದೌರ್ಜನ್ಯವೇ ಆಗುವುದು. ವಿಜ್ಞಾನ ಬುದ್ಧಿಯ ಕೊಡುಗೆಯಲ್ಲವೇ? ಆದರೆ ಕಾಂಟೆ ಕೇವಲ ಬುದ್ಧಿಯಿಂದ …
Read More »ಜಗತ್ತು ಮತ್ತು ಮಾನವ
ಈ ಜಗತ್ತಿನಲ್ಲಿ ಮಾನವನಿಗೆ ಹಲವಾರು ವಸ್ತುಗಳು ಗೋಚರಿಸುತ್ತವೆ. ಅವನ ಕಣ್ಣೆದುರಿನಿಂದ ಹಲವಾರು ವಸ್ತುಗಳು ಹಾದು ಹೋಗುತ್ತಿವೆ. ಇವಿಷ್ಟು ಸಾಲದು. ಹೆಚ್ಚು ಹೆಚ್ಚು ಅರಿತುಕೊಳ್ಳಬೇಕೆಂದು ಅವನು ಬಯಸುತ್ತಾನೆ. ಅದು ಪ್ರಕೃತಿ ಸಹಜ ಬೇಡಿಕೆಯೂ ಹೌದು. ಒಂದು ಶಬ್ದ ಕೇಳಿಸಿದರೆ ಇಂಪಾದ ಹಾಡಾಗಲೆಂದು ಬಯಸುವಂತೆ ಜಗತ್ತಿನ ನೈಜ ಮತ್ತು ಪರಿಪೂರ್ಣ ಸೌದರ್ಯದವರೆಗೂ ಅವನು ತಲುಪಬೇಕು. ಆದರ ಪರಿಚಯ ಅವನಿಗಿರಬೇಕು. ಮಾನವನಿಗೆ ಜಗತ್ತನ್ನು ಸರಿಯಾದ ದೃಷ್ಟಿಯಿಂದ ನೋಡಲು ಸಾಧ್ಯ ವಾದಂದು, ಜಗತ್ತಿನ ಅಸ್ತಿತ್ವ ಗೋಚರಿಸುತ್ತದೆ. …
Read More »ಪ್ರವಾದಿ ಮುಹಮ್ಮದ್(ಸ)ರ ಬಾಲ್ಯ ಕಾಲದ ಸದ್ವರ್ತನೆಗಳು
@ ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ ಪ್ರವಾದಿ ಮುಹಮ್ಮದ್(ಸ)ರು ಹುಟ್ಟುವ ಮುಂಚೆ, ತಂದೆ ಅಬ್ದುಲ್ಲಾರು ಸಿರಿಯಾದಿಂದ ವ್ಯಾಪಾರಿ ತಂಡದೊಂದಿಗೆ ಮರಳುವಾಗ ದಾರಿ ಮಧ್ಯದಲ್ಲಿ ತೀರಿ ಹೋಗಿದ್ದರು. ಅನಾಥರಾಗಿ ಹುಟ್ಟಿದ ಮುಹಮ್ಮದ್ರ, ದಾದಿ ಅಲೀಮಾ ಸಅದಿಯ್ಯಾರ ಆಸರೆಯಲ್ಲಿ ಮಕ್ಕಾದ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ಜೀವನ ಆರಂಭವಾಗುತ್ತದೆ. ಗ್ರಾಮೀಣ ಸೊಗಡು, ಪ್ರಾಕೃತಿಕ ವಾತಾವರಣ. ಸುಂದರ ಭಾಷಾ ಶೈಲಿ ಮತ್ತು ಉತ್ತಮ ಗುಣ ನಡತೆ ಅವರಲ್ಲಿ ಬೆಳೆಯುತ್ತದೆ. ಆರನೇ ವರ್ಷದಲ್ಲಿ ತಾಯಿ ಆಮಿನಾ ಇಹಲೋಕ ತ್ಯಜಿಸಿದರು. ನಂತರ ತಾತ …
Read More »ಭಾರತೀಯ ಮುಸ್ಲಿಮರು ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆಯೇ?
ಎಜಾಝ್ ಅಹ್ಮದ್ ಅಸ್ಲಂ ರೇಡಿಯನ್ಸ್ ವೀವ್ಸ್ ವೀಕ್ಲಿ ಅನು: ಮುಹಮ್ಮದ್ ಮರಕಡ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರದ ಹಿಂದೆ ಅಮೆರಿಕ ಪ್ರವಾಸದಲ್ಲಿದ್ದರು. ಭಾರತೀಯ ಮುಸ್ಲಿಮರು ಸುರಕ್ಷಿತವಾಗಿರುವುದು ಮಾತ್ರವಲ್ಲದೆ ಭಾರತದ ನಾಗರಿಕರಾಗಿ ಸಮಾನ ಹಕ್ಕುಗಳನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಅವರು ಕಠಿಣ ಪರಿಶ್ರಮಪಡಬೇಕಾಯಿತು. ಭಾರತದ ಹೊರಗಿನ ಜನರು ನಕಾರಾತ್ಮಕ ಪ್ರಚಾರದಿಂದ ಪ್ರಭಾವಿತರಾಗಬಾರದು ಬದಲಿಗೆ ಅವರು ಭಾರತಕ್ಕೆ ಭೇಟಿ ನೀಡಬೇಕು ಮತ್ತು ಭಾರತೀಯ ಮುಸ್ಲಿಮರ ಸ್ಥಾನಮಾನ …
Read More »ಶವ ಭಕ್ಷಕರು
ಸಂಗ್ರಹ: ಎನ್.ಎಂ. ಪಡೀಲ್ ಅಬೂ ಹುರೈರ(ರ)ರಿಂದ ವರದಿಯಾಗಿದೆ. “ಪರದೂಷಣೆ ಎಂದರೆ ಏನೆಂದು ನಿಮಗೆ ತಿಳಿದಿದೆಯೇ?” ಎಂದು ಪ್ರವಾದಿ(ಸ) ಕೇಳಿದರು. ಅಲ್ಲಾಹ್ ಮತ್ತು ಅವನ ಸಂದೇಶವಾಹಕರಿಗೆ ಮಾತ್ರ ಚೆನ್ನಾಗಿ ತಿಳಿದಿರುವುದೆಂದು ಅವರು ಉತ್ತರಿಸಿದರು. “ನಿನ್ನ ಸಹೋದರನ ಬಗ್ಗೆ ಅವನಿಗಿಷ್ಟವಿಲ್ಲದ್ದನ್ನು ಹೇಳುವುದಾಗಿದೆ” ಎಂದು ತಿಳಿಸಿದರು. ಆಗ ಓರ್ವ ವ್ಯಕ್ತಿ ಪ್ರವಾದಿಯೊಂದಿಗೆ, “ನಾನು ಹೇಳುವ ವಿಷಯ ಸಹೋದರನಲ್ಲಿದ್ದರೆ ಕೂಡಾ ಅದು ಪರದೂಷಣೆಯಾಗುತ್ತದೆಯಾ?” ಎಂದು ಪ್ರಶ್ನಿಸಿದರು. ಆ ಸ್ವಭಾವ ಅವನಲ್ಲಿದ್ದರೆ ಅದು ಪರದೂಷಣೆಗೆ ಸೇರುತ್ತದೆ. ಇಲ್ಲದಿದ್ದರೆ …
Read More »ಮಾದಕ ವ್ಯಸನದಿದ ರಕ್ಷಿಸಿಕೊಳ್ಳಲು 10 ಸೂತ್ರಗಳು
– ಶೈಖ್ ಮುಹಮ್ಮದ್ ಕಾರಕುನ್ನು ನಮ್ಮ ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಮಾದಕ ವ್ಯಸನಿಗಳ ಬಗ್ಗೆ ಎಲ್ಲರೂ ಪ್ರಜ್ಞಾವಂತರಾಗಬೇಕಾಗಿದೆ. ಶಿಕ್ಷಣ ಕೇಂದ್ರಗಳಲ್ಲಿ ಹುಡುಗರು ಹುಡುಗಿಯರು ಹಾಗೂ ಸಮಾಜದ ಯುವ ಜನಾಂಗವು ಈ ಮಾದಕ ಪಿಡುಗಿನ ದಾಸರಾಗುತ್ತಿದ್ದಾರೆ. ಆದರೂ ಈ ಬಗ್ಗೆ ಸಮಾಜವು ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ ಎಂಬುದು ಕಳವಳಕಾರಿ ಹಾಗೂ ಅಪಾಯಕಾರಿಯಾಗಿದೆ. ಸಮಾಜದಲ್ಲಿರುವ ಎಲ್ಲಾ ಜನರೂ ಒಂದಾಗಿ ಈ ಪಿಡುಗಿನ ವಿರುದ್ದ ಹೋರಾಡಿದರೆ ಮಾತ್ರ ಯಶಸ್ಸು ಕಾಣಬಹುದು. ಮಾದಕ ವಸ್ತುಗಳು ವ್ಯಾಪಕವಾಗುವುದನ್ನು ತಡೆಯಲು ಕೆಲವೊಂದು …
Read More »ನಿಮ್ಮಲ್ಲಿಲ್ಲದ ಒಳಿತುಗಳನ್ನು ಮಕ್ಕಳಿಂದ ನಿರೀಕ್ಷಿಸುತ್ತೀರಾ?
@ ಖದೀಜ ನುಸ್ರತ್ ಮನೆಯಲ್ಲಿ ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಸುದೃಢವಾದ ಸಂಬಂಧವು ಸುಭಧ್ರ ಕುಟುಂಬದ ಅಡಿಪಾಯವಾಗಿರುತ್ತದೆ. ಪೋಷಕರು ಮಕ್ಕಳೊಂದಿಗೆ ವರ್ತಿಸುವ ರೀತಿ ಅವರ ಸ್ವಭಾವ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಮಕ್ಕಳು ಹೆತ್ತವರು ಹೇಳಿದ ಮಾತನ್ನು ಕೇಳುವುದಿಲ್ಲ, ಹಠ ಸ್ವಭಾವ, ಕಲಿಕೆಯಲ್ಲಿ ಏಕಾಗ್ರತೆ ಇಲ್ಲ, ಅಕ್ರಮ ಮನೋಭಾವ, ಪ್ರೇಮಜಾಲದಲ್ಲಿ ಸಿಲುಕುವುದು, ಹೆತ್ತವರನ್ನು ಗೌರವಿಸುವುದಿಲ್ಲ ಎಂಬುದು ಹೆಚ್ಚಿನ ಹೆತ್ತವರಿಂದ ಕೇಳಿ ಬರುವ ದೂರು ಆಗಿರುತ್ತದೆ. …
Read More »ಹಾಸ್ಯವನ್ನು ಅನುಭವಿಸುತ್ತಿದ್ದ ಪ್ರವಾದಿ(ಸ)
@ ಶಹೀದ್ ಪ್ರವಾದಿ ಮುಹಮ್ಮದ್(ಸ) ನಗುತ್ತಿದ್ದರು. ಈ ಜಗತ್ತಿಗೆ ಬಂದ ಎಲ್ಲಾ ಪ್ರವಾದಿಗಳೂ ನಗುತ್ತಿದ್ದರು. ಅವರ ನಗು ಮತ್ತು ಅಳುವಿನಲ್ಲಿ ಪಾಠವಿರುತಿತ್ತು. ಪ್ರವಾದಿವರ್ಯರ(ಸ) ಪಾವನ ಬದುಕಿನಲ್ಲಿ ಒಳಿತಿನ ಬೆಳದಿಂಗಳ ಹಲವಾರು ಘಟನೆಗಳನ್ನು ಕಾಣಬಹುದು. ಪ್ರವಾದಿವರ್ಯರು(ಸ) ಯಾವಾಗಲೂ ಪ್ರಸನ್ನವದನರಾಗಿರುತ್ತಿದ್ದರು. ತನ್ನನ್ನು ಸಮೀಪಿಸುವ ಎಲ್ಲರಿಗೂ ಅದನ್ನು ಪಸರಿಸುತ್ತಿದ್ದರು. ಪ್ರವಾದಿವರ್ಯರ(ಸ) ಸನ್ನಿಧಿಯಲ್ಲಿ ತಮ್ಮ ಎಲ್ಲಾ ದುಖ ದುಮ್ಮಾನಗಳನ್ನು ಮರೆತು ಉಲ್ಲಾಸಭರಿತರಾಗಿ ಆ ರಸನಿಮಿಷಗಳನ್ನು ಜನರು ಕಳೆಯುತ್ತಿದ್ದರು. ಪ್ರವಾದಿವರ್ಯರು(ಸ) ಹಾಸ್ಯ ಮಾತನ್ನಾಡುವಾಗ ಒಮ್ಮೆ ಅಬೂ ಹುರೈರಾ …
Read More »ಸಮಯವನ್ನು ಹಾಳು ಮಾಡಬೇಡಿರಿ
@ ಅಬೂ ಝೀಶಾನ್ ಹ. ಹಸನ್ ಬಸರಿ(ರ) ಒಮ್ಮೆ ಒಂದು ಜನಾಝಾದೊಂದಿಗೆ ಹೋಗುತ್ತಿರುವಾಗ ತನ್ನ ಪಕ್ಕದಲ್ಲಿದ್ದ ಒಬ್ಬನೊಂದಿಗೆ ಕೇಳಿದರು, “ಈ ಮರಣ ಹೊಂದಿದವನ ಸ್ಥಳದಲ್ಲಿ ನೀನು ಮಲಗಿದ್ದಿದ್ದರೆ ಏನನ್ನು ಇಚ್ಛಿಸುತ್ತಿದ್ದೆ.” ಆತ, “ಒಳ್ಳೆಯ ಕಾರ್ಯಗಳನ್ನು ಮಾಡಲು ಇನ್ನೂ ಸ್ವಲ್ಪ ಸಮಯ ಸಿಕ್ಕಿದ್ದರೆ ಒಳ್ಳೆಯದಿತ್ತು ಎಂದು ಇಚ್ಛಿಸುತ್ತಿದ್ದೆ” ಎಂದು ಉತ್ತರಿಸುತ್ತಾನೆ. ಆಗ ಹಸನ್ ಬಸರಿ(ರ) ಹೇಳುತ್ತಾರೆ, “ಹಾಗಾದರೆ ನೀನು ಮರಣ ಹೊಂದಿ ಅಲ್ಲಿ ಮಲಗಿದ್ದೆ ಹಾಗೂ ಅಲ್ಲಾಹನು ನಿನಗೆ ಸ್ವಲ್ಪ ಕಾಲಾವಕಾಶ …
Read More »
IslamKannada News Portal