Home / ಲೇಖನಗಳು / ಸಂಬಂಧಗಳ ಶಿಥಿಲತೆ ನಾಶಕ್ಕೆ ಹೇತು – ಪ್ರವಾದಿ ಮುಹಮ್ಮದ್(ಸ )

ಸಂಬಂಧಗಳ ಶಿಥಿಲತೆ ನಾಶಕ್ಕೆ ಹೇತು – ಪ್ರವಾದಿ ಮುಹಮ್ಮದ್(ಸ )

ಪತಿ ಪತ್ನಿಯರ ಮಧ್ಯೆ ವೈಮನಸ್ಸು ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀಳುವುದು. ನೆರೆಹೊರೆಯವರ ನಡುವೆ ವೈಮನಸ್ಸು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀಳುವುದು. ಸಂಘಟನೆಗಳ ಮಧ್ಯೆ ವೈಮನಸ್ಸು ದೇಶದ ಮೇಲೆ ಕೆಟ್ಟ ಪ್ರಭಾವ ಬೀಳುವುದು. ರಾಷ್ಟ್ರ ನಾಯಕರ ನಡುವೆ ವೈಮನಸ್ಸು ಯುದ್ಧಗಳಿಗೆ ಪ್ರೇರಣೆಯಾಗುವುದು. ಒಟ್ಟಿನಲ್ಲಿ ಸಂಬಂಧಗಳು ದುರ್ಬಲವಾದರೆ ಭೂಮಿಯ ವ್ಯವಸ್ಥೆಯೇ ಕೆಟ್ಟು ಹೋಗುವುದು.

ನಮಾಝ್, ಉಪವಾಸ, ದಾನ ಧರ್ಮಗಳಿಗಿಂತ ಶ್ರೇಷ್ಠ ಪುಣ್ಯ ಕಾರ್ಯ ಪರಸ್ಪರ ಸಂಬಂಧಗಳನ್ನು ಸರಿಪಡಿಸುವುದಾಗಿದೆ ಎಂದು ಪ್ರವಾದಿ ಮುಹಮ್ಮದ್ (ಸ) ಉಪದೇಶಿಸಿದ್ದಾರೆ.

ಹಬ್ಬದ ದಿನಗಳಲ್ಲಿ ಪತಿ ಪತ್ನಿಗೆ, ಮಕ್ಕಳು ತಂದೆ ತಾಯಿಗೆ, ತಂದೆ ತಾಯಿ ಮಕ್ಕಳಿಗೆ, ನೆರೆಹೊರೆ, ಕುಟುಂಬ, ಸಂಗಾತಿಗಳಿಗೆ, ಮುಸ್ಲಿಮರು ಮುಸ್ಲಿಮೇತರರಿಗೆ ಉಡುಗೊರೆಗಳನ್ನು ಹಂಚುವ ಮೂಲಕ ಎಲ್ಲ ರೀತಿಯ ವೈಮನಸ್ಸುಗಳಿಂದ ಮುಕ್ತರಾಗಿ ಪರಸ್ಪರ ಪ್ರೀತಿಯ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡುವುದು ಶ್ರೇಷ್ಟವಾದ ಪುಣ್ಯಕರ್ಮ ಎಂಬುದರಲ್ಲಿ ಸಂದೇಹವಿಲ್ಲ.

ಮುಸ್ಲಿಮೇತರರೊಂದಿಗೆ ಮುಹಮ್ಮದ್(ಸ)ರ ಸಂಬಂಧ ಮತ್ತು ಮುಸ್ಲಿಮೇತರರಿಗೆ ಪ್ರವಾದಿಯೊಂದಿಗಿನ ಸಂಬಂಧ ಆತ್ಮೀಯವಾಗಿತ್ತು ಎಂಬುದಕ್ಕೆ ಇತಿಹಾಸ ಸಾಕ್ಷಿ.

✍️ ಶಮೀರ ಜಹಾನ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …