– ಜಲೀಲ್ ಮುಕ್ರಿ
ಪುಣ್ಯಗಳ ಬೀಡು
ಒಮ್ಮೆ ಭೇಟಿ ಕೊಡು
ಪುಣ್ಯ ಪಾದ ಸ್ಪರ್ಶಗೊಂಡ
ಬೆಟ್ಟ ಗುಡ್ಡಗಳ ನಾಡು
ಪುಣ್ಯ ಪಾದಗಳ ಹೆಜ್ಜೆ ಕುರುಹನ್ನೊಮ್ಮೆ ನೋಡು
ಇಂದೇ ಹೊರಟು ಬಿಡು
ಪುಣ್ಯ ಭೂಮಿಯ ನೋಡಿಬಿಡು..
ಪ್ರವಾದಿ ಹೆಜ್ಜೆಯ
ಅರಿತುಬಿಡು..
ಪುಣ್ಯಪಾದದ ಹೆಜ್ಜೆಯೊಂದಿಗೆ ಹೆಜ್ಜೆಯನ್ನಿಡು
ಮೆತ್ತನೆಯ ಮುಸಲ್ಲೆ, ಎ.ಸಿ.ಯ ತಂಪು ಇಲ್ಲದೆ
ಬದುಕಿದ ಪುಣ್ಯದೇಹವ ಅರಿತುಬಿಡು
ಇಂದೇ ಹೊರಟುಬಿಡು
ಒಮ್ಮೆ ಕಣ್ಣಾರೆ ನೋಡಿಬಿಡು..
ನಾಳೆ ನಮ್ಮದಲ್ಲ
ಕಲಿತುಬಿಡು…
ಜೀವನದಿ ಕೆಲಸವೂ ನಿಲ್ಲದು,
ವಹಿವಾಟೂ ನಿಲ್ಲದು
ಉಸಿರು ನಿಲ್ಲುವುದು ನೋಡು
ಪುಣ್ಯ ಭೂಮಿಯ ನೋಡಿಬಿಡು
ಒಮ್ಮೆ ಹೊರಟುಬಿಡು..
ಇಂದಿದೆ ಕೈಯಲ್ಲಿ ಆರೋಗ್ಯ, ಸಂಪತ್ತು, ಅನುಮತಿ
ನಾಳೆ ಯಾರು ಬಲ್ಲರು
ನಮ್ಮ ಪರಿಸ್ಥಿತಿ
ಆರೋಗ್ಯವೂ ನಮ್ಮದಲ್ಲ
ಸಂಪತ್ತೂ ನಮ್ಮದಲ್ಲ
ಆಯುಷ್ಯ ಕೂಡ ನಮ್ಮದಲ್ಲ
ಒಮ್ಮೆ ಹೊರಟುಬಿಡು…
ಪುಣ್ಯಭೂಮಿಯ ನೋಡಿಬಿಡು
ಪುಣ್ಯ ದೇಹಕ್ಕೆ ಮುಖತಃ ಸಲಾಮ್ ಹೇಳಿಬಿಡು
ಕಪ್ಪು ಶಿಲೆಯ ಚುಂಬಿಸಿಬಿಡು
ಹಿರಾ ಗುಹೆಯ ಏರಿಬಿಡು
ಸಫಾ ಮರ್ವಾ ದಲ್ಲಿ
ಹಾಜಿರಾ ಇಸ್ಮಾಯಿಲ್ ನೋಡಿ ಬಿಡು
ಝಮ್ ಝಮ್ ಕುಡಿದು ಬಿಡು
ವಿಶ್ವ ಭ್ರಾತೃತ್ವ ಕಂಡು ಬಿಡು
ಲಬ್ಬೈಕಲ್ಲಾಹುಮ್ಮ ಲಬ್ಬೈಕ್ ಹೇಳಿಬಿಡು
ಒಮ್ಮೆ ಹೊರಟುಬಿಡು..
ಒಮ್ಮೆ ಹೊರಟು ಬಿಡು….
°°°°°°°°°°°°°°°°°°°°°°°°°°°°°°°°°°°°°°°°
IslamKannada News Portal
