Home / ಲೇಖನಗಳು / ಮನುಷ್ಯ ನಾಗರಿಕತೆಯ ಉಗಮ

ಮನುಷ್ಯ ನಾಗರಿಕತೆಯ ಉಗಮ

ಒಂದು ತಿಂಗಳ ಉಪವಾಸ ವ್ರತದ ಸಮಾರೋಪ ಈದುಲ್ ಫಿತ್ರ್.

ಹಜ್ ಕರ್ಮದ ಸಮಾರೋಪ ಬಕ್ರೀದ್.

ಹಜ್ ಕರ್ಮದಲ್ಲಿ ಉಪವಾಸ,ನಮಾಝ್, ದಾನಧರ್ಮ ಎಲ್ಲವೂ ಒಟ್ಟಾಗಿ ಇರುವುದು.

ಮಕ್ಕಾ ಎಂಬುದು ಪ್ರಥಮ ಮಾನವ ಆದಮ್ (ಅ) ಮತ್ತು ಹವ್ವಾ ನೆಲೆಗೊಂಡಿದ್ದ ಸ್ಥಳ. ಮಕ್ಕಾ ನಗರಕ್ಕೆ ಉಮ್ಮುಲ್ ಕುರಾ ಎಂಬ ಹೆಸರಿದೆ. ನಗರಗಳ ಮಾತೆ. ಮನುಷ್ಯ ನಾಗರಿಕತೆಯ ಉಗಮದ ಸ್ಥಳ ಎಂದರ್ಥ.

ಜಲಪ್ರಳಯದ ಬಳಿಕ ಬರಡಾಗಿದ್ದ ಮಕ್ಕಾದಲ್ಲಿ ಪ್ರವಾದಿ ಇಬ್ರಾಹೀಮ್ ಮತ್ತು ಮಗ ಇಸ್ಮಾಯೀಲರಿಗೆ ಅಲ್ಲಾಹನು ಸ್ಥಳ ಗೊತ್ತುಪಡಿಸಿ ಕಾಬಾ ಪುನರ್ ನಿರ್ಮಾಣ ಮಾಡಿಸಿರುವುದಾಗಿ ಕುರ್ ಆನ್ ನಲ್ಲಿ ಇದೆ.

ಇಬ್ರಾಹೀಮ್ ರು ಕಾಬಾದ ಗೋಡೆ ಕಟ್ಟುವಾಗ ನಿಂತ ಪಾದ ಗುರುತು ಇದೆ. ಹಾಜಿರಾ(ಅ)ರ ಓಡಾಟದ ಬಳಿಕ ಸಿಕ್ಕಿದ ಝಮ್ ಝಮ್ ನೀರಿನ ಆಸ್ವಾದವಿದೆ. ಹಜ್ ಗೆ ಹೋಗುವವರಿಗೆ ಮನುಷ್ಯ ನಾಗರಿಕತೆಯ ಕೇಂದ್ರ ಸ್ಥಾನಕ್ಕೆ ಹೋಗಿ ಬಂದ ಅನುಭವ ಆಗದೇ ಇರಲಾರದು.

“ನಾವು ಇಬ್ರಾಹೀಮರಿಗೆ ಈ ಭವನ(ಕಅಬಾ)ದ ಸ್ಥಳವನ್ನು ಗೊತ್ತುಪಡಿಸಿ ಕೊಟ್ಟ ಸಂದರ್ಭವನ್ನು ಸ್ಮರಿಸಿರಿ.”
(ದಿವ್ಯ ಕುರ್‍ಆನ್)

“ನಿಶ್ಚಯವಾಗಿಯೂ ಮಾನವರಿಗಾಗಿ ನಿರ್ಮಿಸಲ್ಪಟ್ಟ ಪ್ರಥಮ ಆರಾಧನಾಲಯವು ಮಕ್ಕಾದಲ್ಲಿರುವುದೇ ಆಗಿರುತ್ತದೆ.”
(ದಿವ್ಯ ಕುರ್‍ಆನ್)

– ಶಮೀರ ಜಹಾನ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …