ಜಿದ್ದಾದ ವಿಮಾನ ನಿಲ್ದಾಣದಲ್ಲಿ ಇಳಿಯುವ ಹಜ್ ಯಾತ್ರಾರ್ಥಿಗಳು ಇನ್ನು ಮುಂದೆ ತಮ್ಮ ಲಗೇಜ್ ಗಳನ್ನು ತಾವೇ ಕೊಂಡು ಹೋಗಬೇಕಿಲ್ಲ. ಹಜ್ ಮತ್ತು ಉಮ್ರಾ ಸಚಿವಾಲಯ ಮತ್ತು ಝಕಾತ್, ಟ್ಯಾಕ್ಸ್ ಅಂಡ್ ಕಸ್ಟಮ್ಸ್ ಅಥಾರಿಟಿಯ ನಡುವೆ ನಡೆದ ಒಪ್ಪಂದದ ಪ್ರಕಾರ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಜಿದ್ದ ಏರ್ಪೋರ್ಟ್ ನ ಮೂಲಕ ಬರುವ ವಿದೇಶಿ ಹಾಜಿಗಳ ಲಗೇಜ್ ಗಳನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಹಾಜಿಗಳು ತಂಗುವಲ್ಲಿಗೆ ತಲುಪಿಸಲಾಗುತ್ತಿದೆ.
ಜಿದ್ದ ವಿಮಾನ ನಿಲ್ದಾಣದ ಇಂಟರ್ನ್ಯಾಷನಲ್ ಟರ್ಮಿನಲ್ ನಿಂದ ಯಾತ್ರಿಕರ ಲಗೇಜ್ ಗಳನ್ನು ಕಸ್ಟಮ್ಸ್ ವಿಭಾಗವು ನೇರವಾಗಿ ಪಡೆದುಕೊಳ್ಳುತ್ತದೆ. ಕಸ್ಟಮ್ಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮಕ್ಕಾದಲ್ಲಿ ಯಾತ್ರಿಕರು ತಂಗುವ ಸ್ಥಳಗಳಿಗೆ ಈ ಲಗೇಜ್ ಗಳನ್ನು ತಲುಪಿಸುತ್ತದೆ. ಆದ್ದರಿಂದ ವಿಮಾನ ನಿಲ್ದಾಣದಲ್ಲಿ ಇಳಿದ ಯಾತ್ರಾರ್ಥಿಗಳು ಲಗೇಜ್ಗಾಗಿ ಕಾಯಬೇಕಿಲ್ಲ.
ಆದರೆ ಈ ಬಾರಿ ಕೆಲವು ನಿರ್ದಿಷ್ಟ ರಾಷ್ಟ್ರಗಳಿಗೆ ಮಾತ್ರ ಈ ಸೇವೆ ಲಭ್ಯವಾಗಲಿದೆ.
IslamKannada News Portal
