Home / ವಾರ್ತೆಗಳು / ಪ್ರವಾದಿ ಮುಹಮ್ಮದ್‌ರ ಮಾತುಗಳನ್ನು ಅರೇಬಿಕ್‌ನಲ್ಲೇ ಉಲ್ಲೇಖಿಸಿದ ಕಿಂಗ್ ಚಾರ್ಲ್ಸ್; ವಿಂಡ್ಸರ್ ಕ್ಯಾಸಲ್‌ನಲ್ಲಿ ಅಪರೂಪದ ಕ್ಷಣ!

ಪ್ರವಾದಿ ಮುಹಮ್ಮದ್‌ರ ಮಾತುಗಳನ್ನು ಅರೇಬಿಕ್‌ನಲ್ಲೇ ಉಲ್ಲೇಖಿಸಿದ ಕಿಂಗ್ ಚಾರ್ಲ್ಸ್; ವಿಂಡ್ಸರ್ ಕ್ಯಾಸಲ್‌ನಲ್ಲಿ ಅಪರೂಪದ ಕ್ಷಣ!

ಮಸ್ಕತ್/ಲಂಡನ್: ಒಮಾನ್ ಜನರ ಉದಾತ್ತ ಗುಣ ಮತ್ತು ಶಾಂತಿಯುತ ವಾತಾವರಣವನ್ನು ಶ್ಲಾಘಿಸಲು ಬ್ರಿಟನ್ ರಾಜ ಚಾರ್ಲ್ಸ್ ಅವರು ಪ್ರವಾದಿ ಮುಹಮ್ಮದ್ ಅವರ ವಚನವನ್ನು ಉಲ್ಲೇಖಿಸಿದ್ದಾರೆ. ಯುುಕೆಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಒಮಾನ್ ದೊರೆ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರು ವಿಂಡ್ಸರ್ ಕ್ಯಾಸಲ್‌ನಲ್ಲಿ ಆಯೋಜಿಸಿದ್ದ ಅಧಿಕೃತ ಔತಣಕೂಟದಲ್ಲಿ ರಾಜ ಚಾರ್ಲ್ಸ್ ಅಪರೂಪದ ಭಾಷಣ ಮಾಡಿದರು.

ತಮ್ಮ ಭಾಷಣದಲ್ಲಿ, ರಾಜ ಚಾರ್ಲ್ಸ್ ಪ್ರವಾದಿ ಮುಹಮ್ಮದ್ ಅವರ ನುಡಿಗಳನ್ನು ಅರೇಬಿಕ್ ಭಾಷೆಯಲ್ಲೇ ಉಲ್ಲೇಖಿಸಿದರು. ಒಮಾನ್ ಜನರ ಸಹಿಷ್ಣುತೆ ಮತ್ತು ಉದಾರತೆಯನ್ನು ಗುರುತಿಸಲು, ರಾಜ ಚಾರ್ಲ್ಸ್ ಅವರು “ನೀವು ಒಮಾನ್ ಜನ ಬಳಿಗೆ ಹೋಗಿದ್ದರೆ, ಅವರು ನಿಮ್ಮನ್ನು ಶಪಿಸುತ್ತಿರಲಿಲ್ಲ ಅಥವಾ ಹೊಡೆಯುತ್ತಿರಲಿಲ್ಲ” ಎಂಬ ಪ್ರವಾದಿಯವರ ನುಡಿಯನ್ನು ಉಲ್ಲೇಖಿಸಿದರು.

ತಮ್ಮ ಭಾಷಣದಲ್ಲಿ ಅವರು ಒಮಾನ್‌ನ ರಾಜತಾಂತ್ರಿಕ ನಿಲುವು ಹಾಗೂ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ಮಧ್ಯಸ್ಥಿಕೆ ಪ್ರಯತ್ನಗಳನ್ನು ಶ್ಲಾಘಿಸಿದರು. ಬ್ರಿಟನ್ ಮತ್ತು ಒಮಾನ್ ನಡುವಿನ ದೀರ್ಘಕಾಲೀನ ಸ್ನೇಹವು ಪರಸ್ಪರ ನಂಬಿಕೆ ಮತ್ತು ರಾಜತಾಂತ್ರಿಕ ತತ್ವಗಳ ಮೇಲೆ ಆಧಾರಿತವಾಗಿದೆ ಎಂದು ಅವರು ಹೇಳಿದರು.

ಒಮಾನ್ ಜನರನ್ನು ಶ್ಲಾಘಿಸುವ ಪ್ರವಾದಿ ಮುಹಮ್ಮದ್ ಅವರ ಮಾತುಗಳು ಪ್ರವಾದಿಯವರ ಇತಿಹಾಸದಲ್ಲಿ ದಾಖಲಾದ ಒಂದು ಘಟನೆಯನ್ನು ಆಧರಿಸಿವೆ. ಪ್ರವಾದಿ ಮುಹಮ್ಮದ್ ಅವರು ಒಂದು ಬುಡಕಟ್ಟಿಗೆ ರಾಯಭಾರಿಯನ್ನು ಕಳುಹಿಸಿದ್ದರು. ಆದಾಗ್ಯೂ, ಬುಡಕಟ್ಟು ಜನರು ರಾಯಭಾರಿಯೊಂದಿಗೆ ಬಹಳ ಕ್ರೂರವಾಗಿ ವರ್ತಿಸಿದರು. ಅವರು ಅವರನ್ನು ಅವಮಾನಿಸಿದರು ಮತ್ತು ಕ್ರೂರವಾಗಿ ಹೊಡೆದರು.

ಹೊಡೆತ ತಿಂದ ರಾಯಭಾರಿ ದುಃಖದಿಂದ ಪ್ರವಾದಿಯ ಬಳಿಗೆ ಹಿಂತಿರುಗಿ ತನ್ನ ಗೋಳನ್ನು ವಿವರಿಸಿದರು. ರಾಯಭಾರಿಯ ದುಃಖವನ್ನು ಕೇಳಿದ ಪ್ರವಾದಿ, ಒಮಾನ್ ಜನರ ಐತಿಹಾಸಿಕ ಉತ್ತಮ ಸ್ವಭಾವಕ್ಕೆ ಸಾಕ್ಷಿಯಾದ ಮಾತುಗಳಿಂದ ಅವರನ್ನು ಸಮಾಧಾನಪಡಿಸಿದರು. ‘ನೀವು ಒಮಾನ್ ಜನರ ಬಳಿಗೆ ಹೋಗಿದ್ದರೆ, ಅವರು ನಿಮ್ಮನ್ನು ಶಪಿಸುತ್ತಿರಲಿಲ್ಲ ಅಥವಾ ಹೊಡೆಯುತ್ತಿರಲಿಲ್ಲ.’ ಎಂದರು.

ಅರೇಬಿಯನ್ ದ್ವೀಪದ ಇತರ ಅನೇಕ ಬುಡಕಟ್ಟು ಜನಾಂಗದವರು ಅಪರಿಚಿತರು ಮತ್ತು ರಾಯಭಾರಿಗಳನ್ನು ಕಠಿಣವಾಗಿ ನಡೆಸಿಕೊಂಡರೆ, ಒಮಾನ್ ಜನರು ಶತಶತಮಾನಗಳಿಂದ ಶಾಂತಿಪ್ರಿಯರು ಮತ್ತು ಅತಿಥಿಗಳನ್ನು ಗೌರವಿಸುವವರಾಗಿದ್ದಾರೆ ಎಂಬುದಕ್ಕೆ ಪ್ರವಾದಿಯವರ ಮಾತುಗಳು ಸಾಕ್ಷಿಯಾಗಿದೆ. ಒಮಾನ್ ಜನರ ಸಹಿಷ್ಣುತೆ ಮತ್ತು ಸೌಜನ್ಯವನ್ನು ವಿವರಿಸುವ ಪ್ರವಾದಿಯವರ ಈ ನುಡಿಯು ಪ್ರವಾಸಿಗರನ್ನು ಸ್ವಾಗತಿಸಲು ಮಸ್ಕತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ಅಕ್ಷರಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.

ಒಮಾನ್ ಸುಲ್ತಾನ್ ಆಯೋಜಿಸಿದ್ದ ಔತಣಕೂಟದಲ್ಲಿ ರಾಜ ಚಾರ್ಲ್ಸ್ ಈ ನುಡಿಯನ್ನು ಉಲ್ಲೇಖಿಸಿದ್ದಾರೆ. ಅರೇಬಿಯನ್ ದ್ವೀಪದಲ್ಲಿ ಸಂಘರ್ಷದ ಮಧ್ಯೆ ಶಾಂತಿಗಾಗಿ ಮಧ್ಯಸ್ಥಿಕೆ ವಹಿಸಲು ಒಮಾನ್ ಮುಂದುವರಿದ ಪ್ರಯತ್ನಗಳು ಈ ಪರಂಪರೆಯ ಮುಂದುವರಿಕೆಯಾಗಿದೆ. ಫೆಲೆಸ್ತೀನ್ ಸಮಸ್ಯೆಯ ಮೇಲಿನ ಒಮಾನ್‌ನ ರಾಜತಾಂತ್ರಿಕ ನಿಲುವುಗಳು ಮತ್ತು ಯುಎಸ್-ಇರಾನ್ ಸಮಸ್ಯೆಯನ್ನು ನಿಭಾಯಿಸಿದ ರೀತಿಗೆ ಹೆಚ್ಚು ಪ್ರಶಂಸಿಸಲಾಗಿದೆ

SHARE THIS POST VIA

About editor

Check Also

ಇಸ್ಲಾಂ ಶಾಂತಿ ಮತ್ತು ಸಾಮರಸ್ಯದ ಧರ್ಮ; ಹಿಂದೂ ಆಧ್ಯಾತ್ಮಿಕ ಗುರು ಸ್ವಾಮಿ ವಿಶ್ವಾಸಾನಂದ್

ನವದೆಹಲಿ: ಇಸ್ಲಾಂ ಧರ್ಮವು ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುವ ಧರ್ಮವಾಗಿದೆ ಎಂದು ನೇಪಾಳದ ಹಿಂದೂ ಆಧ್ಯಾತ್ಮಿಕ ಗುರು ಶ್ರೀ …