ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಕರಿಯ ಜನಾಂಗದವರಾದ ಖ್ಯಾತ ಬರಹಗಾರ ಮತ್ತು ಇತಿಹಾಸಕಾರರಾದ ಆರ್ತುರೋ ಶೋoಬಬರ್ಗ್ ಅವರ ವಶದಲ್ಲಿದ್ದ ಕುರ್ ಆನಿನ ಮೇಲೆ ಕೈ ಇಟ್ಟು ಮಮ್ದಾನಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ನ್ಯೂಯಾರ್ಕಿನ ಸಾರ್ವಜನಿಕ ಲೈಬ್ರೆರಿಯಿಂದ ಇದನ್ನು ಈ ಸಮಾರಂಭಕ್ಕಾಗಿ ತರಲಾಗಿತ್ತು.
ಇದೇ ವೇಳೆ ಜನವರಿ 6ರಂದು ಸಾರ್ವಜನಿಕರಿಗಾಗಿ ಈ ಕುರ್ಆನನ್ನು ಪ್ರದರ್ಶಿಸಲು ನ್ಯೂಯಾರ್ಕ್ ಪಬ್ಲಿಕ್ ಲೈಬ್ರೆರಿ ತೀರ್ಮಾನಿಸಿದೆ. ಈ ಲೈಬ್ರೆರಿಯು ತನ್ನ 100 ವರ್ಷಗಳ ಸಂಭ್ರಮದಲ್ಲಿದ್ದು ಇದೇ ಸಂದರ್ಭದಲ್ಲಿ ಈ ಲೈಬ್ರರಿಯಿಂದ ಮಮ್ದಾನಿ ಕುರ್ಆನ್ ತರಿಸಿ ಅದರ ಮೇಲೆ ಪ್ರತಿಜ್ಞಾವಿಧಿ ಕೈಗೊಂಡಿದ್ದಾರೆ.
ಆಫ್ರಿಕನ್ ಲ್ಯಾಟಿನ್ ಮೂಲದವರಾದ ಶೋoಬರ್ಗ್ ಅವರು ಮುಸ್ಲಿಮ್ ಆಗಿರಲಿಲ್ಲ. ಆದರೆ ಕಪ್ಪು ವರ್ಣಿಯರ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಅವರು ತನ್ನ ಸಂಗ್ರಹಾಗಾರದಲ್ಲಿ ಕುರ್ಆನನ್ನು ಕೂಡ ಇಟ್ಟುಕೊಂಡಿದ್ದರು. 18 ಅಥವಾ 19ನೇ ಶತಮಾನದಲ್ಲಿ ಈ ಕುರ್ಆನನ್ನು ಅಚ್ಚು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಕಪ್ಪು ಮತ್ತು ಕೆಂಪು ಮಸಿಯಿಂದ ಈ ಕುರ್ಆನನ್ನು ಬರೆಯಲಾಗಿದೆ ಎಂಬುದಕ್ಕೆ ಪೂರಕ ಆಧಾರಗಳು ಕಾಣಿಸುತ್ತಿವೆ. ಆದರೆ ಈ ಕುರ್ಆನ್ ಶಂಬರ್ಗ್ ಅವರಿಗೆ ಹೇಗೆ ತಲುಪಿತು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.
ನ್ಯೂಯಾರ್ಕ್ ನಗರದ ಅತಿ ಪ್ರಮುಖ ಸಾರ್ವಜನಿಕ ಲೈಬ್ರೆರಿಯ ಕುರ್ಆನನ್ನು ಉಪಯೋಗಿಸಿ ಮೇಯರ್ ಮಮ್ದಾನಿ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿರುವುದು ನಮಗೆ ಅತಿವ ಸಂತಸವನ್ನು ತಂದಿದೆ ಎಂದು ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿಯ ಅಧ್ಯಕ್ಷ ಮತ್ತು ಸಿಇಒ ಆಗಿರುವ ಆಂಟನಿ ಡಬ್ಲ್ಯೂ ಮಾರ್ಕ್ಸ್ ಹೇಳಿದ್ದಾರೆ.
IslamKannada News Portal
