Home / ಲೇಖನಗಳು (page 22)

ಲೇಖನಗಳು

ಇಸ್ಲಾಮೀ ರಾಷ್ಟ್ರದ ಪ್ರಥಮ ಸಂವಿಧಾನ

ಅನುಬಂಧ-1 ಪ್ರವಾದಿ ಮುಹಮ್ಮದ್‌ರು(ಸ) ತಮ್ಮ ಹುಟ್ಟೂರಾದ ಮಕ್ಕಾದಿಂದ ಮದೀನಕ್ಕೆ ವಲಸೆ ಹೋದರು. ಇದು ಇಸ್ಲಾಮಿನ ಸಂದೇಶ ಪ್ರಚಾರ ಇತಿಹಾಸದ ಸುಪ್ರಧಾನ ಘಟನೆಯಾಗಿತ್ತು. ಮಕ್ಕಾದ ಮಣ್ಣು, ಒಳಿತಿನ ಚಿಗುರುಗಳು ಸುಲಭದಲ್ಲಿ ಸಮೃದ್ಧವಾಗಿ ಬೆಳೆಯುವುದಕ್ಕೆ ಯೋಗ್ಯವಾಗಿರಲಿಲ್ಲ. ಆದರೆ, ಯಸ್ರಿಬ್‌ನ ಹಿನ್ನೆಲೆಯು ಸತ್ಯದ ಪ್ರಚಾರಕ್ಕೆ ತುಂಬಾ ಅನುಕೂಲವಾಗಿತ್ತು. ಪ್ರವಾದಿಯವರು ಅಲ್ಲಿಗೆ ತಲಪಿದ ಬಳಿಕ ಆ ನಗರದ ಹೆಸರನ್ನೂ ಬದಲಾಯಿಸಿದರು. ಅದು ‘ಮದೀನತ್ತುನ್ನಬಿ’ ಅರ್ಥಾತ್ ಪ್ರವಾದಿಯ ನಗರವಾಯಿತು. ಮದೀನದಲ್ಲಿ ವಿವಿಧ ಧರ್ಮ ವಿಶ್ವಾಸಿಗಳಿದ್ದರು. ಪ್ರವಾದಿಯವರ ಆಗಮನದಿಂದ …

Read More »

ಇಸ್ಲಾಮ್ ಮತ್ತು ಮುಸ್ಲಿಮರ ಹಿಂದುಳಿಯುವಿಕೆ

ಜಾಗತಿಕ ಮಟ್ಟದಲ್ಲಿ ನೋಡುವಾಗ ಹಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ಮುಸ್ಲಿಮರು ಬಹಳ ಹಿಂದುಳಿದಿದ್ದಾರೆ. ಭಾರತದ ಮುಸ್ಲಿಮರೂ ಇತರ ಧರ್ಮೀಯರಿಗಿಂತ ಬಹಳ ಹಿಂದುಳಿದ ಅವಸ್ಥೆಯಲ್ಲಿದ್ದಾರೆ. ಇಸ್ಲಾಮ್ ಪ್ರಗತಿಗೆ ಅಡ್ಡಿಯಾಗಿರುವುದೇ ಇದಕ್ಕೆ ಕಾರಣವೆಂಬುದನ್ನು ಸೂಚಿಸುತ್ತದೆಯಲ್ಲವೇ.? ಮಾನವ ಜಗತ್ತಿನ ಪ್ರಗತಿ ಹಾಗೂ ಅಭಿವೃದ್ಧಿಯಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಪಾತ್ರ ಹೇಳಬೇಕಾದ ಅಗತ್ಯವಿಲ್ಲದಷ್ಟು ಸ್ಪಷ್ಟವೂ, ವಿವಾದಾತೀತವೂ ಆಗಿದೆ. ಗಾಢ ನಿದ್ರೆಯಲ್ಲಿದ್ದ ಅರೇಬಿಯನ್ ಜನತೆಯನ್ನು ಇಸ್ಲಾಮ್ ಬಡಿದೆಬ್ಬಿಸಿತು. ಅವರ ಅಜ್ಞಾನ, ಅಂಧ ವಿಶ್ವಾಸವನ್ನು ಹೋಗಲಾಡಿಸಿತು. ಜೀವನದ ಎಲ್ಲಾ ರಂಗಗಳಲ್ಲೂ …

Read More »

ಇಸ್ಲಾಮ್ ಸ್ವೀಕಾರಾರ್ಹವಾಗದಿರಲು ಕಾರಣವೇನು?

ಇಸ್ಲಾಮ್ ಧರ್ಮವು ಅತ್ಯುತ್ತಮ ಹಾಗೂ ಫಲಪ್ರದವೆಂದಾದರೆ ವಿಶ್ವದಲ್ಲಿ ನೂರು ಕೋಟಿ ಮುಸ್ಲಿಮರೂ, ಐವತ್ತಕ್ಕಿಂತ ಹೆಚ್ಚು ಮುಸ್ಲಿಮ್ ರಾಷ್ಟ್ರಗಳಿದ್ದೂ ಅದೇಕೆ ಫಲಪ್ರದವಾಗುತ್ತಿಲ್ಲ? ಅದರ ಸತ್ಪಲಗಳು ಗೋಚರಿಸದಿರಲು ಕಾರಣವೇನು.? ಇಸ್ಲಾಮ್ ವೈಯಕ್ತಿಕ, ಸಾಮಾಜಿಕ, ರಾಜಕೀಯ ಯಶಸ್ಸಿನೊಂದಿಗೆ ಮರಣಾನಂತರದ ವಿಜಯವನ್ನು ಖಾತ್ರಿಗೊಳಿಸುವ ಜೀವನ ವ್ಯವಸ್ಥೆಯಾಗಿದೆ. ಅದು ವ್ಯಕ್ತಿ ಜೀವನದ ತೀವ್ರ ಶಾಖಕ್ಕೆ ನೆರಳು ನೀಡುವ ಕೊಡೆಯಾಗಿ, ಕಗ್ಗತ್ತಲೆಯಲ್ಲಿ ಬೆಳಕನ್ನು ನೀಡುವ ನಂದಾದೀಪವಾಗಿ, ವಿಜಯದ ಸಂದರ್ಭದಲ್ಲಿ ನಿಯಂತ್ರಿಸುವ ಕಡಿವಾಣವಾಗಿ, ದುಃಖದ ಸಂದರ್ಭದಲ್ಲಿ ಸಾಂತ್ವನದ ಸಂದೇಶವಾಗಿ, ನೋವಿನಲ್ಲಿ …

Read More »

ಇಸ್ಲಾಮ್ ಮತ್ತು ಭಯೋತ್ಪಾದನೆ

ವಿಶ್ವದಲ್ಲಿರುವ ಮುಸ್ಲಿಮರು ಭಯೋತ್ಪಾದಕರೂ, ಉಗ್ರಗಾಮಿಗಳು ಆಗಲು ಇಸ್ಲಾಮ್ ಕಾರಣವಲ್ಲವೇ? ಇದು ಸ್ವಲ್ಪ ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. ಕ್ರಿ.ಶ. 1492 ಮಾನವ ಇತಿಹಾಸದ ಭಯಾನಕರವಾದ ಮಹಾ ದುರಂತ ನಡೆದ ವರ್ಷವಾಗಿತ್ತು. ಸುದೀರ್ಘ ಕಾಲದ ತನಕ ವೈಜ್ಞಾನಿಕ-ತಂತ್ವಜ್ಞಾನ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ನಾಗರಿಕತೆಯ ಎಲ್ಲಾ ರಂಗಗಳಲ್ಲಿಯೂ ವಿಶ್ವದ ನೇತೃತ್ವವನ್ನು ವಹಿಸಿದ್ದ ಮುಸ್ಲಿಮ್ ಸ್ಪೇಯಿನ್ ನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು. ಗ್ರಾನಡೆ ನಗರವು ಮಾತ್ರ ಆತನ ಅಧೀನದಲ್ಲಿತ್ತು. 1492 ಜನವರಿ …

Read More »

ಪ್ರಾಣಿ ಬಲಿ ಮತ್ತು ದಯೆ

ದಯೆಯ ಕುರಿತು ಬಹಳವಾಗಿ ಮಾತನಾಡುವ ಇಸ್ಲಾಮ್ ಪ್ರಾಣಿ ಹಾಗೂ ಇತರ ಜೀವಿಗಳೊಂದಿಗೆ ಕ್ರೂರವಾಗಿ ವರ್ತಿಸುತ್ತಿದೆಯಲ್ಲಾ? ಅವುಗಳನ್ನು ಕೊಲ್ಲವುದು ಎಷ್ಟು ಸರಿ.? ಭೂಮಿಯಲ್ಲಿರುವ ಎಲ್ಲ ಜೀವಜಾಲಗಳ ಮೇಲೆ ದಯೆ ತೋರಬೇಕೆಂದು ಇಸ್ಲಾಮ್ ಆದೇಶಿಸುತ್ತದೆ. ಪ್ರವಾದಿ(ಸ)ರು ಹೇಳಿದರು: ‘ಭೂಮಿಯಲ್ಲಿರುವವರಿಗೆ ಕರುಣೆ ತೋರಿಸಿರಿ, ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು.’ (ತಬ್ರಾನಿ) ‘ಕರುಣೆಯಿಲ್ಲದವನಿಗೆ ಕಾರುಣ್ಯ ಲಭಿಸುವುದಿಲ್ಲ’ (ಬುಖಾರಿ, ಮುಸ್ಲಿಮ್) ‘ದೌರ್ಭಾಗ್ಯ ಶಾಲಿಯ ಹೊರತು ಯಾರೂ ಕರುಣೆಯಿಲ್ಲದವರಾಗಲಾರರು.’ (ಅಬೂದಾವೂದ್) ಇಸ್ಲಾಮ್ ಭೂಮಿಯಲ್ಲಿರುವ ಜೀವಜಾಲಗಳನ್ನೆಲ್ಲಾ ಮನುಷ್ಯರಂತಹ ಸಮೂಹವೆಂದು …

Read More »

 ಅನಾಥ ಮೊಮ್ಮಕ್ಕಳ ವಾರೀಸು ಹಕ್ಕು

ಮೃತ ವ್ಯಕ್ತಿಗೆ ಮಕ್ಕಳಿದ್ದರೆ ಅನಾಥ ಮಕ್ಕಳಿಗೆ ವಾರೀಸು ಸೊತ್ತಿನಲ್ಲಿ ಅವಕಾಶವಿಲ್ಲವೆಂಬ ನಿಯಮವು ಅನ್ಯಾಯವಲ್ಲವೇ? ಅನಾಥರ ಸಂರಕ್ಷಣೆಗೆ ಹೆಚ್ಚು ಮಹತ್ವ ನೀಡಿರುವ ಇಸ್ಲಾಮಿನ ಈ ನಿಲುವು ಸರಿಯೇ? ಈ ನಿಯಮಗಳು ಅನಿಸ್ಲಾಮಿಕ ಮತ್ತು ಕುರ್‌ಆನ್ ವಿರುದ್ಧವೆನಿಸುವುದಿಲ್ಲವೇ? ಇಸ್ಲಾಮ್ ಅನಾಥರ ಸಂರಕ್ಷಣೆಗೆ ಬಹಳ ಒತ್ತು ನೀಡಿದೆ. ಅವರೊಂದಿಗಿನ ನಿರ್ಲಕ್ಷ್ಯ ಧರ್ಮಧಿಕ್ಕಾರವಾಗಿದೆ. ಅಲ್ಲಾಹನು ಹೇಳುತ್ತಾನೆ: “ನೀವು ಕಂಡಿರಾ? ಪರಲೋಕದ ಕರ್ಮಫಲ ವನ್ನು ನಿರಾಕರಿಸುವವನನ್ನು. ಅವನೇ ತಾನೇ ಅನಾಥನನ್ನು ದೂರದಬ್ಬುವವನು.’ (ಪವಿತ್ರ ಕುರ್‌ಆನ್ 107:1-2) ಅನಾಥರೊಂದಿಗೆ …

Read More »

ಸಾರ್ವಜನಿಕ ರಂಗದಲ್ಲಿ ಮಹಿಳೆ

ಇಸ್ಲಾಮ್ ಮಹಿಳೆಯನ್ನು ಸಾರ್ವಜನಿಕ ರಂಗಗಳಿಂದ ದೂರವಿರಿಸಿ, ಅಡುಗೆ ಮನೆಯಲ್ಲಿ ಬಂಧಿಸಿಡುವ ಕೆಲಸ ಮಾಡುತ್ತಿದೆಯಲ್ಲವೇ? ಪ್ರಕೃತಿ ದತ್ತವಾದ ವಿಶೇಷತೆಗಳನ್ನು ಗಮನಿಸುವಾಗ ಮಹಿಳೆಯ ಮುಖ್ಯ ಕಾರ್ಯಕ್ಷೇತ್ರ ಮನೆಯಾಗಿದೆ. ಆಕೆಯ ಮಹತ್ವದ ಹೊಣೆಗಾರಿಕೆ ತಾಯ್ತನವಾಗಿದೆ. ಆದರೆ ಮಹಿಳೆ ಸಾರ್ವಜನಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳವುದನ್ನು ಇಸ್ಲಾಮ್ ನಿಷೇಧಿಸಿಲ್ಲ, ಮಾತ್ರವಲ್ಲ, ಅದಕ್ಕೆ ಅನುಮತಿ ನೀಡಿದೆಯಲ್ಲದೇ ಅನಿವಾರ್ಯ ಸಂದರ್ಭಗಳಲ್ಲಿ ಪ್ರೋತ್ಸಾಹವನ್ನೂ ನೀಡಿದೆ. ಶಿಕ್ಷಣ ಪಡೆಯುವುದರಲ್ಲಿ ಹಾಗೂ ನೀಡುವುದರಲ್ಲಿ ಪ್ರವಾದಿಯವರ ಕಾಲದಲ್ಲಿಯೇ ಪುರುಷರಂತೆ ಸ್ತ್ರೀಯರು ಕ್ರಿಯಾಶೀಲರಾಗಿದ್ದರು. ಪ್ರವಾದಿಯವರ ಬಳಿ ಬಂದು ವಿಷಯಗಳನ್ನು …

Read More »

ಪರ್ದಾದಿಂದ ಸಾಕ್ಷಿಯವರೆಗೆ

ಪರ್ದಾವನ್ನು ಕಡ್ಡಾಯಗೊಳಿಸುವ ಮೂಲಕ ಇಸ್ಲಾಮ್ ಮಹಿಳೆಯರನ್ನು ಶೋಷಣೆಗೊಳಪಡಿಸಿದೆಯಲ್ಲವೇ? ಮುಸ್ಲಿಮ್ ಮಹಿಳೆಯರ ಹಿಂದುಳಿಯುವಿಕೆಗೆ ಪರ್ದಾವೂ ಕಾರಣವಲ್ಲವೇ? ಮಹಿಳೆಯು ಮುಖ ಮತ್ತು ಮುಂಗೈಯ ಹೊರತುಪಡಿಸಿ ದೇಹದ ಉಳಿದ ಭಾಗಗಳನ್ನು ಮರೆಸಬೇಕೆಂದು ಇಸ್ಲಾಮ್ ಹೇಳುತ್ತದೆ. ಇದು ಮಹಿಳೆಯರ ಏಳಿಗೆಗೆ ಅಡ್ಡಿಯಲ್ಲ. ಸಹಾಯಕವಾಗಿದೆ. ಮಹಿಳೆಗೆ ಪರ್ದಾ ಹಿಂಸೆಯಲ್ಲ, ಆಕೆಯ ರಕ್ಷಾ ಕವಚವಾಗಿದೆ. ಇಂದು ವಿಶ್ವದ ಹಲವು ಭಾಗಗಳಲ್ಲಿ ಪರ್ದಾಧಾರಿಣಿ ಮಹಿಳೆಯರು ವೈಜ್ಞಾನಿಕ, ವೈಮಾನಿಕ, ಸಾಹಿತ್ಯ, ಮಾಧ್ಯಮ ರಂಗಗಳು ಹಾಗೂ ಪಾರ್ಲಿಮೆಂಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇರಾನಿನ ಐದು …

Read More »

ಇಸ್ಲಾಮ್‌ ಪುರುಷ ಪ್ರಧಾನ ಧರ್ಮವೇ?

ಇಸ್ಲಾಮ್ ಪುರುಷ ಪ್ರಧಾನ ಧರ್ಮವಲ್ಲವೇ? ಕುರ್‌ಆನ್ ನ 4ನೇ ಅಧ್ಯಾಯದ 34ನೇ ಸೂಕ್ತವು ಇದಕ್ಕೆ ಆಧಾರವಲ್ಲವೇ? ಪವಿತ್ರ ಕುರ್‌ಆನ್ ನ ನಾಲ್ಕನೇ ಅಧ್ಯಾಯದ 34ನೇ ವಾಕ್ಯವು ಕುಟುಂಬ ವ್ಯವಸ್ಥೆಗೆ ಸಂಬಂಧಿಸಿದ ದೇವಾದೇಶವಾಗಿದೆ. ಅದು ಹೀಗಿದೆ: ‘ಪುರುಷರು ಸ್ತ್ರೀಯರ ಮೇಲೆ ‘ಮೇಲ್ವಿಚಾರಕ’ ಆಗಿರುತ್ತಾರೆ. ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಠತೆ ಪ್ರದಾನ ಮಾಡಿದುದರಿಂದ ಮತ್ತು ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದ ಆಗಿದೆ.’ ಇಲ್ಲಿ ಪುರುಷರಿಗೆ ಕುರ್‌ಆನ್ ‘ಕವ್ವಾಮ್’ ಎಂಬ …

Read More »

ಇಸ್ಲಾಮಿನಲ್ಲಿ ಮಹಿಳೆಯ ಸ್ಥಾನಮಾನ

ಇಸ್ಲಾಮಿನಲ್ಲಿ ಸ್ತ್ರೀ-ಪುರುಷ ಸಮಾನತೆಯಿದೆಯೇ? ಸ್ತ್ರೀಯರ ಸ್ಥಾನ ಪುರುಷರಿಗಿಂತ ಬಹಳ ಕೆಳಗಿದೆಯಲ್ಲವೇ? ಮನುಷ್ಯರು ಹಲವು ರೀತಿಯಲ್ಲಿದ್ದಾರೆ. ಮಾನವನ ಗತಿಗನುಗುಣವಾಗಿ ಅವರ ಸ್ಥಾನಮಾನಗಳಲ್ಲೂ, ಹಕ್ಕುಬಾಧ್ಯತೆಯಲ್ಲೂ ವ್ಯತ್ಯಾಸವಿರಿಸುವುದು ಸ್ವಾಭಾವಿಕ ಮಾತ್ರವಲ್ಲ ಅನಿವಾರ್ಯವೂ ಹೌದು. ಅದೇ ರೀತಿ ಸ್ತ್ರೀ-ಪುರುಷರ ನಡುವೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಹಳ ಅಂತರವಿದೆ. ಪುರುಷರು ಎಷ್ಟೇ ಶ್ರಮಿಸಿದರೂ ಗರ್ಭಧರಿಸಲು, ಹೆರಲು, ಎದೆ ಹಾಲುಣಿಸಲು ಸಾಧ್ಯವಿಲ್ಲವಲ್ಲಾ? ಮಹಿಳೆ ಪುರುಷರಿಗಿಂತ ಭಿನ್ನವಾಗಿ ತಿಂಗಳ ನಿಶ್ಚಿತ ದಿನಗಳಲ್ಲಿ ಆರ್ತವ ಹಾಗೂ ಅದರ ದೈಹಿಕ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾಳೆ. …

Read More »